ಜುಲೈ1 ರಿಂದ 15ವರೆಗಿನ CBSE ಪರೀಕ್ಷೆ ರದ್ದು!

By Suvarna NewsFirst Published Jun 25, 2020, 3:13 PM IST
Highlights

ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಸಿಬಿಎಸ್ ಇ ಪರೀಕ್ಷೆ ರದ್ದು| ಸುಪ್ರೀಂ ಕೋರ್ಟಿನಲ್ಲಿ ಕೇಂದ್ರ ಹೇಳಿಕೆ| ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಗೆ ಹೇಳಿಕೆ

ನವದೆಗಹಲಿ(ಜೂ.25): ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಸಿಬಿಎಸ್‌ಇಯ ಹತ್ತನೇ ಹಾಗೂ ಹನ್ನೆರಡನೇ ತರಗತಿಯ ಬಾಕಿ ಉಳಿದಿರುವ ಪರೀಕ್ಷಗಳನ್ನು ರದ್ದುಗೊಳಿಸುತ್ತಿರುವುದಾಗಿ ಸಿಬಿಎಸ್‌ಇ ಮಂಡಳಿ ಸಪ್ರೀಂಕೋರ್ಟ್‌ಗೆ ತಿಳಿಸಿದೆ. 

ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಈ ನಿಟ್ಟಿನಲ್ಲಿ ಜುಲೈ1 ರಿಂದ 15 ರವರೆಗೆ ತನಕ ನಡೆಯಬೇಕಿದ್ದ ಪರೀಕ್ಷೆಗಳನ್ನು ಸದ್ಯಕ್ಕೆ ರದ್ದುಗೊಳಿಸುತ್ತಿರುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳೇ ಗಮನಿಸಿ: ಪದವಿ ಪರೀಕ್ಷೆ ನಡೆಯೋದು ಫಿಕ್ಸ್, ಯಾವಾಗ...?

ವಿದ್ಯಾರ್ಥಿಗಳಿಗೆ ಒಂದು ಅವಕಾಶ ನೀಡಲಾಗುತ್ತದೆ. ಮುಂದಿನ ದಿನಾಂಕದಂದು ನಡೆಯುವ ಪರೀಕ್ಷೆಗೆ ಹಾಜರಾಗುವುದು ಅಥವಾ ಅಂತರೀಕ ಮೌಲ್ಯಮಾಪನ ಮೂಲಕ ಬಡ್ತಿ ಪಡೆಯುವ ಅವಕಾಶ ನೀಡಲಾಗುತ್ತದೆ. ಹೊಸ ವೇಳಾಪಟ್ಟಿಯ ನೋಟಿಫಿಕೇಶನ್ ಶುಕ್ರವಾರದ ಹೊತ್ತಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

click me!