ನಾವೆಲ್ಲರು ಸುಪ್ರೀಂ ತೀರ್ಪು ಗೌರವಿಸೋಣ ಎಂದ ರಾಜಯೋಗೀಂದ್ರ ಶ್ರೀ

By Web Desk  |  First Published Nov 9, 2019, 12:44 PM IST

ಮುಸ್ಲಿಂ ಬಾಂಧವರು ಇದನ್ನು ಸೋಲು ಎಂದು ಭಾವಿಸಬೇಕಿಲ್ಲ| ನಾವೆಲ್ಲ ಒಂದು, ಒಟ್ಟಾಗಿ ತೀರ್ಪು ಗೌರವಿಸೋಣ| ಯಾವುದೇ ಕಾರಣಕ್ಕು ವಿಜಯೋತ್ಸವದ ಮಾಡೋದು ಬೇಡ| ಈ ತೀರ್ಪಿನಿಂದ ನಿಮಗೆ ಖುಷಿಯಾದ್ರೆ ಮನೆಯಲ್ಲಿ ದೀಪ ಬೆಳಗಿ| ಮತ್ತೊಬ್ಬರ ಮನಸ್ಸು ನೋಯಿಸೋದು ಬೇಡ| 


"

ಹುಬ್ಬಳ್ಳಿ/ಚಿತ್ರದುರ್ಗ(ನ.9): ಅಯೋಧ್ಯೆ ರಾಮಜನ್ಮ ಭೂಮಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ನ್ಯಾಯ ಸಮ್ಮತವಾಗಿದೆ. ತೀರ್ಪು ಯಾರ ಪರ-ಯಾರ ವಿರುದ್ಧ ಅನ್ನೊದು ಬೇಡ. ನಾವೆಲ್ಲರು ಸುಪ್ರೀಂ ತೀರ್ಪು ಗೌರವಿಸೋಣ. ಮುಸ್ಲಿಂ ಬಾಂಧವರು ಇದನ್ನು ಸೋಲು ಎಂದು ಭಾವಿಸಬೇಕಿಲ್ಲ. ನಾವೆಲ್ಲ ಒಂದು, ಒಟ್ಟಾಗಿ ತೀರ್ಪು ಗೌರವಿಸೋಣ. ಯಾವುದೇ ಕಾರಣಕ್ಕು ವಿಜಯೋತ್ಸವದ ಮಾಡೋದು ಬೇಡ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಹೇಳಿದ್ದಾರೆ. 

Latest Videos

undefined

ಶನಿವಾರ ಪ್ರಕಟವಾದ ಸುಪ್ರೀಂ ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತೀರ್ಪಿನಿಂದ ನಿಮಗೆ ಖುಷಿಯಾದ್ರೆ ಮನೆಯಲ್ಲಿ ದೀಪ ಬೆಳಗಿ, ಮತ್ತೊಬ್ಬರ ಮನಸ್ಸು ನೋಯಿಸೋದು ಬೇಡ. ಸುಪ್ರೀಂ ಗಡುವಿನಂತೆ ಕೇಂದ್ರ ಸರ್ಕಾರ ಟ್ರಸ್ಟ್‌ ರಚಿಸಿ, ಮಂದಿರ ನಿರ್ಮಾಣ ಆರಂಭಿಸಿಲಿ ಎಂದು ಹೇಳಿದ್ದಾರೆ. 

ಅಯೋಧ್ಯೆ ತೀರ್ಪು ಪ್ರಕಟಿಸಲಿರುವ ಐವರು ನ್ಯಾಯಾಧೀಶರಿವರು...

ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಸಂಗ್ರಹಿಸಲಾಗಿದೆ. ಹೊಸ ವಿನ್ಯಾಸದನಾದ್ರು ಮಾಡಲಿ, ಅಥವಾ ಹಳೆಯ ವಿನ್ಯಾಸದಲ್ಲಾದ್ರು ಮಂದಿರ ನಿರ್ಮಾಣವಾಗಲಿ. ಒಟ್ಟಾರೆ ಸಪ್ರೀಂ ಕೋರ್ಟ್ ಸೂಚನೆ ಪಾಲಿಸಿ ಮಂದಿರ‌ ನಿರ್ಮಿಸಿ ಎಂದು ಸಲಹೆ ನೀಡಿದ್ದಾರೆ. 

ಯಾರೂ ಗೆಲ್ಲಲ್ಲ, ಯಾರೂ ಸೋಲಲ್ಲ: ಸಾಮರಸ್ಯ ಕಾಪಾಡೋಣ ಎಂದ ಮೋದಿ!

ಇನ್ನು ಈ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಚಿತ್ರದುರ್ಗದ ಸಾಣೇಹಳ್ಳಿಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಶ್ರೀಗಳು, ಎಲ್ಲರೂ ಒಪ್ಪಬಹುದಾದ ಐತಿಹಾಸಿಕ ನಿರ್ಣಯವನ್ನ ಸುಪ್ರೀಂಕೋರ್ಟ್ ನೀಡಿದೆ. ಈ ನಿರ್ಣಯ ತುಂಬಾ ಸಮತೋಲನವನ್ನ ಕಾಣುವಂತದ್ದು. ಯಾರ ಮನಸ್ಸಿಗೂ ಆಘಾತವಾಗದ ರೀತಿಯಲ್ಲಿ ಸಮಾಧಾನವಾದ ತೀರ್ಪನ್ನು ನೀಡಿದ್ದು ಅಭಿನಂದನಾರ್ಹವಾಗಿದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಭಾರೀ ಕಟ್ಟೆಚ್ಚರ : ಜನರಿಗೆ ಪೊಲೀಸರ ಸೂಚನೆಗಳೇನು?

ಮುಂದಿನ ಹೊಣೆಗಾರಿಗೆ ಸರ್ಕಾರದ ಮೇಲೆ ಅವಲಂಬಿಸಿದೆ. ಸರ್ಕಾರ ನ್ಯಾಯಾಲಯದ ಆದೇಶದಂತೆ ಕೆಲಸಗಳನ್ನು ತುರ್ತಾಗಿ ಮಾಡಬೇಕಿದೆ. ಇದ್ರಿಂದ ಭಾರತದಲ್ಲಿರುವ ಎಲ್ಲರೂ ಭಾವೈಕ್ಯದಿಂದ ಇರಲು ಸಾಧ್ಯವಾಗುತ್ತದೆ.ಈ ದೇಶದಲ್ಲಿ ಒಂದು ವರ್ಗ, ಒಂದು ಜಾತಿ, ಜನಾಂಗದವರಿಲ್ಲ. ಯಾರು ಎಷ್ಟೇ ಜನ ಇದ್ದರೂ ಮೊದಲಿನಿಂದ ಭಾವೈಕ್ಯತೆಯನ್ನು ಕಾಪಾಡಿಕೊಂಡು ಬಂದಿರುವಂತಹ ಜನ ನಾವು. ಹಿಂದೂ ಮುಸ್ಲಿಂರ ನಡುವೆ ಗೋಡೆ ಕಟ್ಟುವ ಬದಲಾಗಿ ಇದು ಭಾವೈಕತೆಯ ಆಧಾರ ಎಂದು ಭಾವಿಸಬೇಕಿದೆ. ಇದನ್ನ ಸರ್ಕಾರ ಹಾಗೂ ಸಾರ್ವಜನಿಕರು ಗಮನದಲ್ಲಿಟ್ಟುಕೊಂಡು ಶಾಂತಿ ಕಾಪಾಡಬೇಕಿದೆ.ಯಾವುದೇ ಗಲಭೆಗಳು ಆಗದ ಹಾಗೆ ಎಚ್ಚರಿಕೆ ವಹಿಸಬೇಕಾದ ಎಲ್ಲರ ಹೊಣೆಗಾರಿಕೆಯಾಗಿದೆ. ಎಲ್ಲರ ಭಾವನೆಗಳನ್ನು ಗೌರವಿಸುವ ಪ್ರಯತ್ನ ಸುಪ್ರೀಂಕೋರ್ಟ್ ಮಾಡಿದೆ ಎಂದು ತಿಳಿಸಿದ್ದಾರೆ.

ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೋಚಿಸಿದೆ. ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟವಾಗಿ ನಿರ್ದೇಶಿಸಿದೆ.

click me!