‘ಬಿಜೆಪಿ ನೈತಿಕ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ’

By Web DeskFirst Published Nov 8, 2019, 3:03 PM IST
Highlights

ಯಡಿಯೂರಪ್ಪ ಆಡಿಯೋ ರೆಕಾರ್ಡ್ ಬಗ್ಗೆ ಬಿಜೆಪಿ ಸಂಪೂರ್ಣ ಬೇಜವಾಬ್ದಾರಿಯಾಗಿ ಹೇಳಿಕೆ ನೀಡುತ್ತಿದೆ|ಆಡಿಯೋ ರೆಕಾರ್ಡ್ ಅನ್ನು ಯಡಿಯೂರಪ್ಪ ಅವರು ನಾವು ಮಾಡಿಲ್ಲ ಅಂತಾ ಮೊದಲು ಹೇಳಿದ್ದರು| ಇದೀಗ ನಾವೇ ಮಾಡಿದ್ದೇವೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ|ಪ್ರಾಮಾಣಿಕವಾಗಿ ಒಪ್ಪಬೇಕು| ಒಪ್ಪದೇ ಇದ್ದರೇ ಆ ಸ್ಥಾನದಿಂದ ಕೆಳಗಿಳಿಯಬೇಕು|

ಧಾರವಾಡ[ನ.8]: ಸಿಎಂ ಯಡಿಯೂರಪ್ಪ ಆಡಿಯೋ ರೆಕಾರ್ಡ್ ಬಗ್ಗೆ ಬಿಜೆಪಿ ಸಂಪೂರ್ಣ ಬೇಜವಾಬ್ದಾರಿಯಾಗಿ ಹೇಳಿಕೆ ನೀಡುತ್ತಿದೆ ಎಂದು ಮಾಜಿ ಸಚಿವ ಹೆಚ್. ಕೆ. ಪಾಟೀಲ ಅವರು ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಆಡಿಯೋ ರೆಕಾರ್ಡ್ ಅನ್ನು ಯಡಿಯೂರಪ್ಪ ಅವರು ನಾವು ಮಾಡಿಲ್ಲ ಅಂತಾ ಮೊದಲು ಹೇಳಿದ್ದರು. ಇದೀಗ ನಾವೇ ಮಾಡಿದ್ದೇವೆ ಅಂತಾ ಯಡಿಯೂರಪ್ಪ ಅವರು ಹೇಳಿದ್ದಾರೆ. ತಾವಷ್ಟೇ ಅಲ್ಲ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡ ಅದರ ಹಿನ್ನೆಲೆಯಲ್ಲಿಯೇ ಮಾತನಾಡಿದ್ದಾರೆ. ಈ ಆರೋಪವನ್ನು ಸಿದ್ದರಾಮಯ್ಯ, ಎಚ್.ಕೆ ಪಾಟೀಲ, ಗುಂಡೂರಾವ್ ಮಾಡಿದ್ದಲ್ಲ, ಅವರೇ ಮಾಡಿದ ಭಾಷಣ, ಅದು ಅವರ ನಾಯಕರೇ ಬಿಡುಗಡೆ ಮಾಡಿದ ಕ್ಲಿಪಿಂಗ್, ಅದನ್ನು ಪ್ರಾಮಾಣಿಕವಾಗಿ ಒಪ್ಪಬೇಕು, ಒಪ್ಪದೇ ಇದ್ದರೇ ಆ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಿಮಗೆ ಅಧಿಕಾರ ನಡೆಸಬೇಕಾದರೆ, ಕೇವಲ ನಂಬರ್ ಅಲ್ಲ, ರಾಜಕೀಯ ನೈತಿಕ ಶಕ್ತಿ ಇರಬೇಕು. ನೈತಿಕ ಶಕ್ತಿಯನ್ನು ಬಿಜೆಪಿ ಸಂಪೂರ್ಣವಾಗಿ ಕಳೆದುಕೊಂಡಿದೆ. ಆದ್ದರಿಂದ ಬಿಜೆಪಿಗೆ ಅಧಿಕಾರದಲ್ಲಿರೋ ನೈತಿಕ ಅಧಿಕಾರ ಬರ್ಕಾಸ್ತಾಗಿದೆ ಎಂದಿದ್ದಾರೆ. 

ಕಾಂಗ್ರೆಸ್ ಅದೋಗತಿಗೆ ಬಂದಿದೆ ಎಂದು ಹೇಳಿದ್ದ ಸಚಿವ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಎಚ್.ಕೆ ಪಾಟೀಲ ಅವರು, ಜನರು ಅದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ. ಯಡಿಯೂರಪ್ಪ ಅವರು ನೀಡಿರೋ ಹೇಳಿಕೆಯ ಮೇಲೆ ತನಿಖೆ ನಡೆಯಲಿ. ನಾವು ತನಿಖೆ ಮಾಡಿ ಅಂತಾ ನಾವು ಕೇಳಿದ್ದೇವು. ಈಗಾಗಲೇ ತನಿಖೆ ನಡೆದಿದೆ, ನಾವು ಹೇಳಿದ್ದನ್ನು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಯಡಿಯೂರಪ್ಪ ಅವರು ಏನು ಹೇಳಿದ್ದಾರೆ ಅನ್ನೋದು ಮುಖ್ಯ ಆಗುತ್ತದೆ. ಪ್ರಜಾಪ್ರಭುತ್ವವನ್ನು ಅಶಕ್ತಮಾಡುವ ಕೆಲಸ ಬಿಜೆಪಿ ಮಾಡಿದೆ. ಈ ಸಂದರ್ಭದಲ್ಲಿ  ಮೊದಲು ಗೃಹ ಸಚಿವರು ನಿರ್ಗಮಿಸಬೇಕಾದದ್ದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. 
 

click me!