ಕಿಮ್ಸ್‌ಗೆ SDP ಯಂತ್ರ ತಂದು 9 ವರ್ಷವಾದ್ರೂ ಒಮ್ಮೆಯೂ ಬಳಕೆಯಾಗಿಲ್ಲ..!

By Kannadaprabha NewsFirst Published Oct 12, 2019, 2:45 PM IST
Highlights

ಕಿಮ್ಸ್ ಆಸ್ಪತ್ರೆಗಳಲ್ಲಿ ಸೌಲಭ್ಯ ಕೊರತೆ ಇರೋದು ಒಂದು ಆರೋಪವಾದ್ರೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಸೌಲಭ್ಯ ಕೊಟ್ಟಿದ್ರೂ ಅಲ್ಲಿನ ವೈದ್ಯರು ಅದನ್ನು ಬಳಸಿಕೊಳ್ಳೋಕೆ ಆಸಕ್ತಿ ತೋರಿಸ್ತಿಲ್ಲ. ಲಕ್ಷಾಂತರ ರುಪಾಯಿ ವ್ಯಯಿಸಿ ಖರೀದಿ ಮಾಡಿದ ಈ ಯಂತ್ರವನ್ನು ಬರೋಬ್ಬರಿ 9 ವರ್ಷದಲ್ಲಿ ಕಿಮ್ಸ್‌ ಒಮ್ಮೆಯೂ ಬಳಸಿಲ್ಲ.

ಹುಬ್ಬಳ್ಳಿ(ಅ.12): ಲಕ್ಷಾಂತರ ರುಪಾಯಿ ವ್ಯಯಿಸಿ ಖರೀದಿ ಮಾಡಿದ ಈ ಯಂತ್ರವನ್ನು ಬರೋಬ್ಬರಿ 9 ವರ್ಷದಲ್ಲಿ ಕಿಮ್ಸ್‌ ಒಮ್ಮೆಯೂ ಬಳಸಿಲ್ಲ. ನಿರ್ವಹಣೆ ಮಾಡುವ ತಾಂತ್ರಿಕ ಸಿಬ್ಬಂದಿ ಇಲ್ಲದೆ, ಯಂತ್ರ ಬಳಕೆಗೆ ಪರವಾನಗಿ ಪಡೆಯದೆ ಧೂಳು ತಿನ್ನುತ್ತಿದ್ದು, ಬಳಕೆಗಿಲ್ಲದಂತಾಗಿದೆ.

ಎಸ್‌ಡಿಪಿ (ಸಿಂಗಲ್‌ ಡೋನರ್‌ ಪ್ಲೇಟ್ಲೆಟ್‌) ರಕ್ತ ವಿಭಜಕ ಯಂತ್ರ. ಇದು ನೇರವಾಗಿ ರಕ್ತದಲ್ಲಿನ ಪ್ಲೆಟ್ಲೇಟ್‌ ಕಣವನ್ನು ಮಾತ್ರ ಪಡೆದು ಉಳಿದ ಅಂಶವನ್ನು ದಾನಿಯ ದೇಹಕ್ಕೆ ಮರಳಿಸುತ್ತದೆ. ಡೆಂಘೀ ಜ್ವರ ಬಂದಾಗ ಪ್ಲೇಟ್ಲೆಟ್‌ ಪ್ರಮಾಣ ಏಕಾಏಕಿ ಕುಗ್ಗಿದಲ್ಲಿ ಈ ಕಣವನ್ನು ಮಾತ್ರ ತುರ್ತಾಗಿ ಪಡೆಯಲು ಎಸ್‌ಡಿಪಿ ಸಹಕಾರಿ. ಬಡ ರೋಗಿಗಳಿಗೆ ಶೀಘ್ರ ಸ್ಪಂದಿಸಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಈ ಯಂತ್ರವನ್ನು ಕಿಮ್ಸ್‌ 2010ರಲ್ಲಿ .27ಲಕ್ಷ ವ್ಯಯಿಸಿ ಖರೀದಿಸಿತ್ತು.

ಶಾಲೆಯಲ್ಲಿಯೇ ಆತ್ಮಹತ್ಯೆಗೆ ಶರಣಾದ ಪ್ರಾಂಶುಪಾಲ: ಕಾರಣ ನಿಗೂಢ

ಸದ್ಯ ಕಿಮ್ಸ್‌ನಲ್ಲಿ ರಕ್ತ ವಿಭಜಕ ಅಗತ್ಯಕ್ಕಾಗಿ ಆರ್‌ಡಿಪಿ ಯಂತ್ರವನ್ನು ಮಾತ್ರ ಬಳಸಲಾಗುತ್ತಿದೆ. ಖರೀದಿ ಮಾಡಿದ ಬಳಿಕ ಒಮ್ಮೆಯೂ ಎಸ್‌ಡಿಪಿಯನ್ನು ಬಳಸಿಯೇ ಇಲ್ಲ. ನುರಿತ ತಜ್ಞರು ಇಲ್ಲದಿರುವುದು ಒಂದು ಕಡೆಯಾದರೆ, ಪರವಾನಗಿ ಪಡೆಯಲು ಮುಂದಾಗದಿರುವುದು ಇನ್ನೊಂದು ಕಾರಣ. ಕರ್ನಾಟಕ ಔಷಧ ನಿಯಂತ್ರಣ ಮಂಡಳಿಯಿಂದ ರಕ್ತ ವಿಭಜಕ ಯಂತ್ರದ ಬಳಕೆಗೆ ಪರವಾನಗಿಯೇ ಪಡೆದಿರಲಿಲ್ಲ.

ಪರವಾನಗಿಯನ್ನೇ ಪಡೆದಿಲ್ಲ:

ಆರ್‌ಡಿಪಿ ಯಂತ್ರಕ್ಕೆ ಮಾತ್ರ 2013-17ರ ವರೆಗೆ ಅಂದರೆ ಐದು ವರ್ಷ ಅವಧಿಗೆ ಪರವಾನಗಿ ಪಡೆದುಕೊಂಡಿತ್ತು. 2017 ಡಿಸೆಂಬರ್‌ಗೆ ಪರವಾನಗಿ ಅವಧಿ ಮುಗಿದಿದೆ. ಬಳಿಕ ಅದನ್ನು ನವೀಕರಣ ಮಾಡಿಸಲಾಗಿದೆ. ಆದರೆ, ಎಸ್‌ಡಿಪಿ ಯಂತ್ರದ ಬಳಕೆಗೆ ಪರವಾನಗಿಯನ್ನೇ ಪಡೆದಿಲ್ಲ. ಇದಕ್ಕೆ ಕಾರಣವೂ ಗೊತ್ತಿಲ್ಲ. ಈ ಬಗ್ಗೆ ಆಡಳಿತ ಮಂಡಳಿಯನ್ನು ಕೇಳಿದರೆ ಸಮರ್ಪಕ ಉತ್ತರವನ್ನೂ ನೀಡುವುದಿಲ್ಲ. ಹೀಗಾಗಿ ಇಂದಿನವರೆಗೂ ಕೂಡ ಈ ಯಂತ್ರದ ಬಳಕೆ ಇಲ್ಲದೆ ಬಡವರಿಗೆ ಇದರ ಸೌಲಭ್ಯ ದೊರಕುತ್ತಿಲ್ಲ.

ಖಾಸಗಿ ದುಬಾರಿ:

ಇಲ್ಲಿನ ಲೈಫ್‌ಲೈನ್‌ ಸೇರಿ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಎಸ್‌ಡಿಪಿ ಯಂತ್ರವಿದೆ. ಇಲ್ಲಿ ಈ ಸೌಲಭ್ಯ ಪಡೆಯಬೇಕಿದ್ದಲ್ಲಿ ಗರಿಷ್ಠ . 15 ಸಾವಿರ ವ್ಯಯಿಸಬೇಕಿದೆ. ಅದೇ ಕಿಮ್ಸ್‌ನಲ್ಲಿ ಬಡವರಿಗೆ ಈ ಸೇವೆ ಉಚಿತವಾಗಿದೆ. ಇನ್ನೊಂದು ವಿಶೇಷವೆಂದರೆ, ಈ ಯಂತ್ರವನ್ನು ಈವರೆಗೆ ಬಳಕೆಯೇ ಮಾಡಿರದ ಕಾರಣ ಬಿಪಿಎಲ್‌ ಹೊರತುಪಡಿಸಿ ಉಳಿದವರಿಂದ ಎಷ್ಟುಹಣ ಪಡೆಯಬೇಕು ಎಂಬುದನ್ನು ನಿಗದಿಯೇ ಮಾಡಿಲ್ಲ. ಕಿಮ್ಸ್‌ನಲ್ಲಿ ಎಸ್‌ಡಿಪಿ ಸೌಲಭ್ಯ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯತ್ತ ಹೊರಳಿದರೆ ದುಬಾರಿ ಹಣ ತೆರುವುದು ಅನಿವಾರ್ಯ.

ಆರ್‌ಡಿಪಿಯದ್ದೂ ಇದೇ ಕತೆ ಇನ್ನು . 10 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿರುವ ಆರ್‌ಡಿಪಿ (ರಾರ‍ಯಂಡಮ್‌ ಡೋನರ್‌ ಪ್ಲೇಟ್ಲೆಟ್‌) ರಕ್ತ ವಿಭಜಕ ಯಂತ್ರದ್ದೂ ಇದೇ ಕತೆ. ರಕ್ತದಲ್ಲಿನ ಕೆಂಪು, ಬಿಳಿ ರಕ್ತ ಕಣ ಬೇರ್ಪಡಿಸುವ ಹಾಗೂ ಪ್ಲಾಸ್ಮಾ ಹಾಗೂ ಪ್ಲೇಟ್ಲೆಟ್‌ ಕಣವನ್ನು ವಿಗಂಡಿಸುವ ಸಾಮರ್ಥ್ಯದ ಯಂತ್ರವಿದು.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಪದವೀಧರರ ನಿರಾಸಕ್ತಿ

ಒಂದೆರಡು ತಿಂಗಳಿಗೊಮ್ಮೆ ಇದು ಕೆಟ್ಟು ನಿಲ್ಲುವುದು, ದುರಸ್ತಿ ಮಾಡಿಸುವುದು ನಡೆದೆ ಇದೆ. ನುರಿತ ತಜ್ಞರು ಇಲ್ಲದೆ ನಿರ್ವಹಣೆ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಬ್ಲಡ್‌ ಬ್ಯಾಗ್‌ ಹಾಗೂ ಅಗತ್ಯ ಪರಿಕರ ಇಲ್ಲದ ಕಾರಣದಿಂದ ಇದು ಆಗಾಗ ದುರಸ್ತಿಗೆ ಬರುತ್ತಿದೆ. ಇದಕ್ಕೆ ಕಿಮ್ಸ್‌ನಲ್ಲಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದವರಿಗೆ . 200, ಉಳಿದವರಿಗೆ . 400 ಶುಲ್ಕ ನಿಗದಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಈ ಸೌಲಭ್ಯಕ್ಕೆ . 4 ಸಾವಿರ ವರೆಗೆ ಹಣ ತೆರಬೇಕಿದೆ.

ಕಲಾಪಕ್ಕೆ ಮಾಧ್ಯಮಗಳಿಗೆ ನಿರ್ಬಂಧ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ

ಕಿಮ್ಸ್‌ ಎಸ್‌ಡಿಪಿ ಖರೀದಿಸಿ ಹತ್ತು ವರ್ಷವಾಗಿದೆ. ಆದರೆ, ಸಂಸ್ಥೆಯಿಂದ ಯಂತ್ರಕ್ಕೆ ಪರವಾನಗಿ ಪಡೆಯಬೇಕಿದೆ. ಸದ್ಯ ಆರ್‌ಡಿಪಿ ಯಂತ್ರವನ್ನು ಬಳಸಲಾಗುತ್ತಿದೆ. ಶೀಘ್ರದಲ್ಲೇ ಪರವಾನಗಿ ಪಡೆಯಲಾಗುವುದು ಎಂದು ಪೆಥೋಲಜಿ ವಿಭಾಗದ ಎಚ್‌ಒಡಿ ಡಾ. ಪುರುಷೋತ್ತಮ ರೆಡ್ಡಿ ಹೇಳಿದ್ದಾರೆ.

-ಮಯೂರ ಹೆಗಡೆ

click me!