Dharwad ಅಕ್ರಮ ಅಕ್ಕಿ ದಂಧೆಕೋರರ ಹೆಡೆಮುರಿ ಕಟ್ಟಿದ ಖಡಕ್ ಎಸಿ

By Suvarna News  |  First Published Apr 19, 2022, 2:52 PM IST
  • ಧಾರವಾಡ ಜಿಲ್ಲೆಯಲ್ಲಿ  ಮತ್ತೆ ಬಾಲ ಬಿಚ್ಚಿದ  ಅಕ್ರಮ ಅಕ್ಕಿ ದಂಧೆಕೋರರು 
  • ಅಕ್ಕಿ ಗೋಡಾನ್ ಮೆಲೆ ರೆಡ್ ಮಾಡಿದ ಪ್ರೋಬೇಷನರ್ ಎಸಿ ಮಾಧವರಾವ್ ಗಿತ್ತೆ
  • ಅನಾಮಧೇಯ ಕರೆ ಬಂದು ರೇಡ್ ಮಾಡಿದ ಎಸಿ

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಏ.19): ಧಾರವಾಡ (Dharwad ) ಜಿಲ್ಲೆಯಲ್ಲಿ ಅಕ್ರಮ ಅಕ್ಕಿ (Illegal rice) ದಂಧೆಕೋರರು ಮತ್ತೆ ಬಾಲ ಬಿಚ್ಚಿದ್ದಾರೆ. ಅನ್ನಭಾಗ್ಯದ ಅಕ್ಕಿ, ಮತ್ತು ರೇಶನ್ ಅಂಗಡಿಗಳಿಂದ ಕಡಿಮೆ ದರದಲ್ಲಿ ಅಕ್ಕಿ ಖರೀದಿ ಮಾಡಿ ಅಕ್ರಮವಾಗಿ ಬೇರೆ ಬೇರೆ ರಾಜ್ಯಗಳಿಗೆ ಅಕ್ಕಿ ಸಾಗಾಟ ಮಾಡುವ ದಂದೆಕೋರರಿಗೆ ನಿನ್ನೆ ರಾತ್ರಿ ಧಾರವಾಡದ ಪ್ರೋಬೇಷನರ್ ಎಸಿ ಮಾಧವರಾವ್ ಗಿತ್ತೆ (Gitte Madhav Vitthalrao) ಅವರು ಹೆಡೆಮೂರಿ ಕಟ್ಟಿದ್ದಾರೆ.

Tap to resize

Latest Videos

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಡಣದ ಗೋಡಾನ್‌ವೊಂದರಲ್ಲಿ ಅಕ್ರಮವಾಗಿ ಸುಮಾರು 300 ಕ್ವಿಂಟಾಲ್ ಅಕ್ಕಿಯನ್ನ ಲಾರಿಗೆ ಲೋಡ್ ಮಾಡಿ ಸಾಗಾಟ ಮಾಡುವಾಗ ಮಾಲ್ ಸಮೇತ ದಂಧೆಕೋರರು ಸಿಕ್ಕಿಬಿದ್ದಿದ್ದಾರೆ‌. ಎಸಿ ಅವರಿಗೆ ಅನಾಮಧೇಯ ಕರೆ ಬಂದಾಗ ಎಚ್ಚೆತ್ತುಕ್ಕೊಂಡ ಉಪವಿಭಾಗಾಧಿಕಾರಿ ಮಾಧವರಾವ್ ಗಿತ್ತೆ ಅವರು ರಾತ್ರಿ 9 ಘಂಟೆಗೆ ಸ್ಥಳಕ್ಕೆ ಬೇಟಿ ಕೊಟ್ಟಾಗ ಅಕ್ರಮವಾಗಿ ಅಕ್ಕಿ ಸಾಗಾಟ ಮಾಡಲು ಸಜ್ಜಾಗಿರುವ ಒಂದು ಲಾರಿ ಇನ್ನೊಂದು ಮಿನಿ ಟಂಟಂ ಸಮೇತ 300 ಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿಯನ್ನ ವಶಕ್ಕೆ ಪಡೆದುಕ್ಕೊಂಡಿದ್ದಾರೆ.

Karaga Festival ಆನೇಕಲ್ ಪಟ್ಟಣದ ಕರಗ ಉತ್ಸವದ ಎರಡನೇ ದಿನ ಕೋಟೆ ಜಗಳ

ಲಾರಿ ಚಾಲಕನನ್ನ ವಶಕ್ಕೆ ಪಡೆದುಕ್ಕೊಂಡು ಅಣ್ಣಿಗೇರಿ ಪೋಲಿಸ್ ಠಾಣೆಯಲ್ಲಿ ರೇಡ್ ಮಾಡಿದ ಅಕ್ಕಿಯ ಲಾರಿ ಮತ್ತು ಚಾಲಕನನ್ನ ಒಪ್ಪಿಸಿದ್ದಾರೆ‌‌‌.   ಇಂದು ಹುಬ್ಬಳ್ಳಿಯ  ಎಪಿಎಂಸಿ ಗೋಡಾನ್ ನಲ್ಲಿ ತೂಕ ಮಾಡಿ ಬಳಿಕ ಪ್ರಕರಣವನ್ನ ದಾಖಲಿಸಲಾಗುವುದು , ಇದಕ್ಕೆ ಸಂಬಂಧಪಟ್ಟವರ ಮೆಲೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಮಾಹಿತಿಯನ್ನ ನಿಡಿದ್ದಾರೆ. 

 ಇನ್ನು ಅಕ್ಕಿ ಮಾರಾಟ ದಂದೇಕೋರರ ಜೊತೆ ಆಹಾರ ಇಲಾಖೆಯ ಹಿರಿಯ  ಅಧಿಕಾರಿಗಳು ಕೂಡಾ ಶಾಮಿಲಾವಿದ್ದಾರೆ  ಅನ್ನು ಮಾತುಗಳು ಕೇಳಿ ಬರುತ್ತಿವೆ. ಪ್ರಕರಣವನ್ನ ದಾಖಲಿಸಿಕ್ಕೊಂಡ ಅಣ್ಣಿಗೇರಿ ಪೋಲಿಸರು ಅಕ್ಕಿಯ ಮೂಲ ಮಾಲಿಕರು ಯಾರು, ವಾಹನಗಳ ಮಾಲಿಕರು ಯಾರು, ಎಲ್ಲಿಂದ ಎಲ್ಲಿಗೆ ಅಕ್ಕಿಯನ್ನು ಸ್ಥಳಾಂತರಿಸುತ್ತಿದ್ದಾರೆ ಎಂಬ  ಬಗ್ಗೆ  ತನಿಖೆ ಕೈಗೊಂಡಿದ್ದಾರೆ. ಧಾರವಾಡದಲ್ಲಿ ಎಲ್ಲೆಂದರಲ್ಲಿ ಅಕ್ರಮ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ. ಈ ಹಿಂದೆ ಕೂಡ ಜಿಲ್ಲೆಯಲ್ಲಿ ಅಕ್ರಮ ಅಕ್ಕಿ ದಾಸ್ತಾನು ಮಳಿಗೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.

AIATSL Recruitment 2022 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

click me!