Dharwad : ಕೆಐಎಡಿಬಿ ಬಹುಕೋಟಿ ಹಗರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

By Sathish Kumar KHFirst Published Dec 7, 2022, 1:45 PM IST
Highlights

10 ಜನ‌ರ ಅಧಿಕಾರಿಗಳ ತಂಡದಿಂದ ಧಾರವಾಡದ ಕೆಐಎಡಿಬಿ ನೂರಾರು ಕೋಟಿ ಅಕ್ರಮ ತನಿಖೆ
ಕಳೆದ ಎರಡು ದಿನಗಳಿಂದ ಭೂಸ್ವಾಧೀನದ ಕುರಿತ ಕಡತಗಳ ಪರಿಶೀಲನೆ
ನಿಷ್ಪಕ್ಷಪಾತ ತನಿಖೆ ನಡೆಸುವಂತೆ ದೂರುದಾರ ಬಸವರಾಜ ಕೊರವರ ಒತ್ತಾಯ 

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಧಾರವಾಡ (ಡಿ.7) : ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಈ ಹಿಂದಿನ ವಿಶೇಷ ಭೂಸ್ವಾಧೀನಾಧಿಕಾರಿ ವಿ.ಡಿ. ಸಜ್ಜನ ಅವಧಿಯಲ್ಲಿ ರೈತರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆ ತೆಗೆದು ಎರಡನೇ ಬಾರಿ ಕೋಟ್ಯಾಂತರ ರೂಪಾಯಿ ಪರಿಹಾರ ಪಡೆದ ಕುರಿತು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ದಾಖಲೆ ಬಿಡುಗಡೆ ಮಾಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕೆಐಎಡಿಬಿ ಹಿರಿಯ ಅಧಿಕಾರಿಗಳು ಈ ಕುರಿತು ತನಿಖೆ ಆರಂಭಿಸಿದ್ದಾರೆ.

ಸೋಮವಾರ ಹಾಗೂ ಮಂಗಳವಾರ ಧಾರವಾಡ ಕಚೇರಿಗೆ ಆಗಮಿಸಿದ ಭೂಸ್ವಾಧೀನ ವಿಶೇಷ ಜಿಲ್ಲಾಧಿಕಾರಿ ಮಂಜುನಾಥ ನೇತೃತ್ವದಲ್ಲಿ 10 ಜನ ಅಧಿಕಾರಿಗಳು ಕಡತಗಳನ್ನು ತೆಗೆದುಕೊಂಡು ಕೂಲಂಕುಷವಾಗಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ. ಇಂದು ಕೂಡ ತನಿಖೆ ಮುಂದುವರೆಯಲಿದ್ದು, ದಾಖಲೆ ಪರಿಶೀಲನೆ ನಡೆಸಿ ಅದರಲ್ಲಿ ಕಂಡು ಬರುವ ಲೋಪದೋಷಗಳನ್ನು ಅಕ್ರಮ, ಅವ್ಯವಹಾರ ನಡೆಸಿದ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

Dharwad KIADB: ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ

ಭ್ರಷ್ಟರಿಂದಲೇ ನಷ್ಟ ವಸೂಲಿ ಮಾಡಿ: ಆ ಬಳಿಕ ಸರ್ಕಾರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಜರುಗಿಸುತ್ತದೆ ಎಂಬುದು ಕಾದುನೋಡಬೇಕಿದೆ. ಈ ಕುರಿತು ಮಂಗಳವಾರ ಧಾರವಾಡದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ, ರೈತರ ಹೆಸರಿನ ನಕಲಿ ಬ್ಯಾಂಕ್ ಖಾತೆಗೆ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ನಡೆಸಿದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಬೇಕು ಕೆಐಎಡಿಬಿಯ ಭ್ರಷ್ಟ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಬಚಾವ್ ಮಾಡುವ ಕೆಲಸ ಆಗಬಾರದು. ತಪ್ಪು ಮಾಡಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಸರಕಾರದ ಬೊಕ್ಕಸಕ್ಕೆ ಆದ ನಷ್ಟ ವಸೂಲಿ ಮಾಡುವ ಮೂಲಕ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯ ಮಾಡಿದರು. ಅವರ ತನಿಖೆ ವರದಿಯನ್ನು ನೋಡಿ ನಾವು ಮುಂದಿನ ಕಾನೂನು ಹೋರಾಟ ನಡೆಸುತ್ತೇವೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಆಗ್ರಹಿಸಿದ್ದಾರೆ.

ಇನ್ನು ಮ್ಯಾನೇಜರ್ ಸಿಂಪಿ, ವಿಡಿ ಸಜ್ಜನ್, ಸಿಇಓ ಶಿವಶಂಕರ್, ದಯಾನಂದ ಭಂಡಾರಿ, ಶಂಕರ ತಳವಾರ, ಎಫ್‌ಡಿಸಿ ಅಮಿತಗ ಮುದ್ದಿ ಅವರನ್ನ ಕಚೇರಿಯಲ್ಲಿ ಕರೆಸಿ ಅವರಿಂದ ಮಾಹಿತಿಗಳನ್ನ ಕಲೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..ಇಂದು ಮತ್ತು ನಾಳೆ  ಎರಡು ದಿನ ದಾಖಲೆಗಳನ್ನ ಪರಿಶಿಲನೆ ಮಾಡುತ್ತೆವೆ ಎಂದು ಸ್ಪೆಷಲ್ ಡಿಸಿ ಮಂಜುನಾಥ್ ಅವರು ಸುವರ್ಣ ನ್ಯೂಸ್ ಗೆ ಮಾಹಿತಿಯನ್ನ ನೀಡಿದ್ದಾರೆ.

ಧಾರವಾಡ ಐಐಟಿ ಭೂಸ್ವಾಧೀನದಲ್ಲಿ ಕೋಟ್ಯಂತರ ರೂ. ಅವ್ಯವಹಾರ?

ಸುಳ್ಳು ದಾಖಲೆ ಸೃಷ್ಟಿದ್ದಕ್ಕೆ ಕೇಸ್‌ ದಾಖಲು: ನಮಗೆ ಲಭಿಸಿರುವ ದಾಖಲಾತಿ ಮಾಹಿತಿಗಳ ಪ್ರಕಾರ ಧಾರವಾಡದ ವಿಶೇಷ ಭೂ ಸ್ವಾಧೀನಧಿಕಾರಿ ವಿ.ಡಿ. ಸಜ್ಜನ ಅವರ ವಿರುದ್ದ ಅಕ್ಕಮ್ಮ ಪೂಜಾರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿದಕ್ಕಾಗಿ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.  ಸರ್ಕಾರದ ಹಣವನ್ನು ದೋಚಿರುವ ಹಿಂದೆ  ಐಡಿಬಿಐ ಬ್ಯಾಂಕ್, ಹುಬ್ಬಳ್ಳಿ ಶಾಖೆ ಹಾಗೂ ಬ್ಯಾಂಕ್ ಆಫ್ ಬರೋಡಾ ಕೋಟುರ ಶಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹ ಈ ಒಂದು ಅವ್ಯವಹಾರದಲ್ಲಿ ಭಾಗಿಯಾಗಿರುವ ಶಂಕೆ ಇದೆ.  ಕೂಡಲೇ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ಅವರು ದೂರು ಸಲ್ಲಿಸಿದ್ದ ಬಗ್ಗೆ ತಿಳಿಸಿದ್ದರು.

click me!