ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ನಗರದ ಶಿರೂರು ಪಾರ್ಕ್ನ ಹರ್ಷ ಹೊಟೇಲ್ ಬಳಿ ಬರೋಬ್ಬರಿ 17,500 ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿರುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಿರಂತರ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ಬೈಕ್ ಸವಾರನಿಗೆ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ನಗರದ ಶಿರೂರು ಪಾರ್ಕ್ನ ಹರ್ಷ ಹೊಟೇಲ್ ಬಳಿ ಬರೋಬ್ಬರಿ 17,500 ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತಿರುಗಾಡುತ್ತಿರುವವರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.
ಶಿರೂರು ಪಾರ್ಕ್ ಬಳಿಯ ಹರ್ಷ ಹೋಟೆಲ್ ಹತ್ತಿರ ಟ್ರಾಫಿಕ್ ಎಎಸ್‌ಐ ರಮಜಾನಬಿ ಅಳಗವಾಡಿ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಸಂತೋಷ ಚವ್ಹಾಣ ಕರ್ತವ್ಯ ನಿರ್ವಹಿಸುತ್ತಿರುವಾಗ ಪಲ್ಸರ್ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ ಬಂದ ವ್ಯಕ್ತಿಯನ್ನು ಗಮನಿಸಿದ್ದಾರೆ. ಬೈಕ್ ನಿಲ್ಲಿಸಿ ದಂಡವನ್ನು ಪರಿಶೀಲಿಸಲು ಸಿಬ್ಬಂದಿ ವಾಹನದ ಸಂಖ್ಯೆ ನಮೂದಿಸಿದಾಗ ಅವರು ಅನೇಕ ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದು, ಈ ವರೆಗೆ ಯಾವುದೇ ದಂಡ ಪಾವತಿಸದಿರುವುದು ಕಂಡು ಬಂದಿದ್ದರಿಂದ ಸ್ಥಳದಲ್ಲಿಯೇ ಪೊಲೀಸರು ಆತನ ಕೈಗೆ .17,500 ದಂಡದ ಪಟ್ಟಿನೀಡಿದ್ದಾರೆ.
ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿದ್ದ ಈತ ಮೊದಲ ಬಾರಿ 2017ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಇಲ್ಲಿಯ ವರೆಗೆ 23 ಬಾರಿ ಸಂಚಾರ ನಿಯಮ ಉಲ್ಲಂಘಿಘಿಸಿದ್ದಾರೆ. ದ್ವಿಚಕ್ರ ವಾಹನವನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಬೈಕ್ ಚಾಲಕನಿಗೆ ದಂಡ ಪಾವತಿಸುವಂತೆ ಸಂಚಾರ ಇನ್‌ಸ್ಪೆಕ್ಟರ್ ಸೂಚಿಸಿದ್ದಾರೆ.
ಸಂಚಾರ ವಿಭಾಗದ ಪೊಲೀಸರು ಮಾರುದ್ದ ಇರುವ ದಂಡದ ಪಟ್ಟಿಯನ್ನು ಪ್ರದರ್ಶಿಸಿದರು.