ಡ್ರೈವರ್, ಸಹ ಪ್ರಯಾಣಿಕ ಸೀಟ್‌ಗೆ ಏರ್‌ಬ್ಯಾಗ್ ಕಡ್ಡಾಯ; ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದ ಕೇಂದ್ರ!

By Suvarna News  |  First Published Dec 29, 2020, 8:17 PM IST

ಭಾರತದಲ್ಲಿ ವಾಹನ ನಿಯಮಗಳು ಸಾಕಷ್ಟು ಬದಲಾಗಿದೆ. ಕ್ರಾಶ್ ಟೆಸ್ಟ್‌ನಲ್ಲಿ ಕನಿಷ್ಠ ಸುರಕ್ಷತೆ, ಎಬಿಎಸ್ ಬ್ರೇಕ್ ಸೇರಿದಂತೆ ಹಲವು ನಿಮಯಗಳನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ಇಷ್ಟೇ ಅಲ್ಲ ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದಿದ್ದಾರೆ.


ನವದೆಹಲಿ(ಡಿ.29): ಭಾರತದಲ್ಲಿ ಹೊಸ ವಾಹನ ಮಾರಾಟಕ್ಕೆ ಹಲವು ನಿಯಮಗಳನ್ನು ಪಾಲಿಸಲೇಬೇಕು. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಸುರಕ್ಷತಾ ನಿಯಮ ಜಾರಿಗೊಳಿಸುತ್ತಿದೆ. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾಹನ ಸುರಕ್ಷತೆಗೆ ಮತ್ತಷ್ಟು ಕಠಿಣ ನಿಯಮ ಜಾರಿಗೊಳಿಸಲು ಮುಂದಾಗಿದೆ. 

2021ರಲ್ಲಿ ಜನಸಾಮಾನ್ಯರು- ಶ್ರೀಮಂತರು ಆಯ್ಕೆ ಮಾಡುವ ಸಾರಿಗೆ ಯಾವುದು? ಸಮೀಕ್ಷಾ ವರದಿ ಪ್ರಕಟ!..

Tap to resize

Latest Videos

ಸದ್ಯ ಬೇಸ್ ಮಾಡೆಲ್‌‍ನಿಂದ ಟಾಪ್ ಮಾಡೆಲ್ ಕಾರುಗಳ ವರೆಗೆ ಡ್ರೈವರ್ ಏರ್‌ಬ್ಯಾಗ್ ಕಡ್ಡಯವಾಗಿತ್ತು. ಆದರೆ ಇನ್ನುಮುಂದೆ ಡ್ರವರ್ ಹಾಗೂ ಮುಂಭಾಗದ ಸಹ ಪ್ರಯಾಣಿಕ ಏರ್‌ಬ್ಯಾಗ್ ಕಡ್ಡಾಯವಾಗಿದೆ. ಅಂದರೆ ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್ ಕಡ್ಡಾಯ ಮಾಡಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಕರಡು ರೂಪಾಸಿದೆ.

ವಾಹನ ಮಾಲೀಕರಿಗೆ ಗುಡ್ ನ್ಯೂಸ್; ದಾಖಲೆ ಪತ್ರ ವ್ಯಾಲಿಡಿಟಿ ವಿಸ್ತರಿಸಿದ ಕೇಂದ್ರ!..

ಎಪ್ರಿಲ್ 1, 2021ರಿಂದ ಈ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಭಾರತದಲ್ಲಿ ವಾಹನ ಕನಿಷ್ಠ ಸುರಕ್ಷತೆ ನೀಡಲೇಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಪಘಾತದ ಸಂದರ್ಭದಲ್ಲಿ ಏರ್‌ಬ್ಯಾಗ್ ಪ್ರಯಾಣಿಕ, ಡ್ರೈವರ್ ಮೇಲೆ ಅಪಘಾತದ ತೀವ್ರತೆಯನ್ನು ಕಡಿಮೆ ಮಾಡಲಿದೆ. ಇಷ್ಟೇ ಅಲ್ಲ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಸಲಿದೆ.

click me!