ಉಕ್ರೇನ್ ಯುದ್ಧದಿಂದ ಭಾರತದ ಕೃಷಿ ಆದಾಯ ಹೆಚ್ಚಳ: ಟ್ರ್ಯಾಕ್ಟರ್‌ಗಳಿಗೆ ಭಾರೀ ಬೇಡಿಕೆ

By Suvarna News  |  First Published May 7, 2022, 4:52 PM IST

ಗೋಧಿ ರಫ್ತು (Wheat export) ಏರಿಕೆ ಮತ್ತು  ಮತ್ತು ದೇಶೀಯ ಮಾರುಕಟ್ಟೆಯಲ್ಲಿ ತೈಲಬೀಜಗಳಿಗೆ (oil Seeds) ಹೆಚ್ಚಿನ ಬೆಲೆಯ ಕಾರಣದಿಂದ ಟ್ರ್ಯಾಕ್ಟರ್‌ ಬೇಡಿಕೆ ಹೆಚ್ಚಳವಾಗಿದೆ.


ರಷ್ಯಾ- ಉಕ್ರೇನ್ ಯುದ್ಧದ ಬಿಕ್ಕಟ್ಟು ಭಾರತೀಯ ಆಟೊಮೊಬೈಲ್ (Indian Automobile) ಮಾರುಕಟ್ಟೆಯ ಮೇಲೆ ಕೂಡ ಪರಿಣಾಮ ಬೀರಿದೆ. ಇದರಿಂದ  ಟ್ರಾಕ್ಟರ್(Tractor) ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಗೋಧಿ ರಫ್ತು (Wheat export) ಏರಿಕೆ ಮತ್ತು  ಮತ್ತು ದೇಶೀಯ ಮಾರುಕಟ್ಟೆಯಲ್ಲಿ ತೈಲಬೀಜಗಳಿಗೆ (oil Seeds) ಹೆಚ್ಚಿನ ಬೆಲೆಯ ಕಾರಣದಿಂದ ಟ್ರ್ಯಾಕ್ಟರ್ ಬೇಡಿಕೆ ಹೆಚ್ಚಳವಾಗಿದೆ.

ಟ್ರ್ಯಾಕ್ಟರ್ ಕಂಪನಿಗಳ ಪ್ರಕಾರ, ಏಪ್ರಿಲ್ ದೇಶೀಯ ಮಾರಾಟವು 89,200 ವಾಹನಗಳಷ್ಟಿದ್ದು, ಇದು ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.41ರಷ್ಟಿದೆ.  ಕಳೆದ ಏಪ್ರಿಲ್ನಲ್ಲಿ 63,422 ವಾಹನಗಳ ಮಾರಾಟವಾಗಿದ್ದವು.

Tap to resize

Latest Videos

ಒಟ್ಟಾರೆಯಾಗಿ, ಟ್ರಾಕ್ಟರ್ ನ ದೇಶೀಯ ಮತ್ತು ರಫ್ತು ಬೇಡಿಕೆ ಆರು ತಿಂಗಳಲ್ಲಿ ಮೊದಲ ಬಾರಿಗೆ ಸುಮಾರು ಒಂದು ಲಕ್ಷ ದಾಟಿದೆ. 2021ರ ನವೆಂಬರ್ 2021 ರಲ್ಲಿ ಟ್ರಾಕ್ಟರ್ ಮಾರಾಟವು ಕೊನೆಯ ಬಾರಿಗೆ ಒಂದು ಲಕ್ಷದ ಗಡಿ ತಲುಪಿತ್ತು. ಅದು ಗರಿಷ್ಠ 127,809 ದೇಶೀಯ ಮಾರಾಟ (Domestic Sale) ಮತ್ತು 12,194 ರಫ್ತುಗಳನ್ನು (Export) ದಾಖಲಿಸಿತ್ತು.

ಇದನ್ನೂ ಓದಿ: Tata Nexon EV Max ಮೇ 11 ರಂದು ಖರೀದಿಗೆ ಲಭ್ಯ:‌ ಬೆಲೆ ಎಷ್ಟು? ವಿನ್ಯಾಸ ಹೇಗಿದೆ?

ಜಾಗತಿಕ ಪರಿಸ್ಥಿತಿ ಮತ್ತು ಭಾರತದಿಂದ ಗೋಧಿಯ ಹೆಚ್ಚಿನ ರಫ್ತುಗಳ ನಡುವೆ, ಭಾರತೀಯ ಗೋಧಿ ಬೆಳೆಗೆ ಬೇಡಿಕೆ ಹೆಚ್ಚಿದ್ದು, ರೈತರು ತಮ್ಮ ಉತ್ಪನ್ನಗಳಿಗೆ ಎಂಎಸ್ಪಿ (Minimum Support price-MSP)ಗಿಂತ ಹೆಚ್ಚಿನ ಬೆಲೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಪಡೆಯಲು ಕಾರಣವಾಗಿದೆ. ತೈಲಬೀಜಗಳು ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರುಕಟ್ಟೆ ಬೆಲೆ ಪಡೆಯುತ್ತಿವೆ ಎಂದು ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ನ (Mahindra and Mahindra Limited) ಕೃಷಿ ಸಲಕರಣೆ ವಲಯದ ಅಧ್ಯಕ್ಷ ಹೇಮಂತ್ ಸಿಕ್ಕಾ ಹೇಳಿದ್ದಾರೆ.

ಸ್ವಯಂ ಇಂಧನವಾಗಿ ಎಥೆನಾಲ್ (Ethenol) ಉತ್ಪಾದನೆಯಿಂದಾಗಿ, ಸಕ್ಕರೆಗೆ ಉತ್ತಮ ಬೆಲೆ ಬಂದಿದೆ ಎಂದು ಇತರ ಟ್ರ್ಯಾಕ್ಟರ್  ಮಾರಾಟಗಾರರು ಹೇಳುತ್ತಾರೆ. ಜನವರಿ-ಮಾರ್ಚ್ 2022 ಅವಧಿಯಲ್ಲಿ ಟ್ರ್ಯಾಕ್ಟರ್ ಮಾರಾಟವು ಇಳಿಮುಖವಾಗಿತ್ತು. ಜನವರಿಯಲ್ಲಿ ಉದ್ಯಮದಿಂದ 63,257 ವಾಹನಗಳು ಮಾರಾಟವಾಗಿದ್ದವು, ಈ ಪೈಕಿ 40,490 ವಾಹನಗಳು ರಫ್ತಾಗಿದ್ದವು. ಫೆಬ್ರವರಿಯಲ್ಲಿ 10,385 ವಾಹನಗಳ ರಫ್ತು ಸೇರಿ 62,338 ವಾಹನಗಳ ಮಾರಾಟ ಮಾಡಿತ್ತು. ಮತ್ತು ಮಾರ್ಚ್ನಲ್ಲಿ ಒಟ್ಟು 84,182 ವಾಹನಗಳ ಮಾರಾಟ ದಾಖಲಾಗಿತ್ತು.

ಇದನ್ನೂ ಓದಿ: ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ 50 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್!

ಇದಕ್ಕೆ ತದ್ವಿರುದ್ಧವಾಗಿ ಏಪ್ರಿಲ್ನಲ್ಲಿ ಪ್ರಮುಖ ಟ್ರ್ಯಾಕ್ಟರ್ ಕಂಪನಿಗಳು ಅತ್ಯುತ್ತಮ ಎರಡು ಅಂಕಿಯ ಪ್ರಗತಿ ದಾಖಲಿಸಿವೆ. ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಮಹೀಂದ್ರಾ ಆ್ಯಂಡ್ ಮಹೀಂದ್ರಾದ ದೇಶೀಯ ಮಾರುಕಟ್ಟೆ ಶೇ.51ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿ ಈ ಏಪ್ರಿಲ್ನಲ್ಲಿ 27,253 ವಾಹನಗಳನ್ನು ಮಾರಾಟ ಮಾಡಿದೆ. 

ಎಸ್ಕೋರ್ಟ್(Escort) ಕಂಪನಿಯ ದೇಶೀಯ ಮಾರಾಟದಲ್ಲಿ ಶೇ.20ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಕಂಪನಿ 8,325 ವಾಹನಗಳನ್ನು ಮಾರಾಟ ಮಾಡಿತ್ತು. ಈ ವರ್ಷ ಇದು 6,979 ವಾಹನಗಳ ಮಾರಾಟ ದಾಖಲಿಸಿದೆ.

click me!