EV charging ಬೆಂಗಳೂರಲ್ಲಿ ಆರಂಭಗೊಳ್ಳುತ್ತಿದೆ 50 ಎಲೆಕ್ಟ್ರಿಕ್ ವಾಹನ ಚಾರ್ಚಿಂಗ್ ಪಾಯಿಂಟ್!

By Suvarna News  |  First Published May 5, 2022, 7:34 PM IST
  • ಫೋರ್ಟಮ್‌ ಚಾರ್ಜ್ ಮತ್ತು ಡ್ರೈವ್‌ ಇಂಡಿಯಾ ಸಹಯೋಗ
  • ಫೋರಂ ಮಾಲ್‌ನಲ್ಲಿ 50 ಚಾರ್ಜಿಂಗ್‌ ಪಾಯಿಂಟ್‌
  • ಎಲ್ಲಾ ಇವಿಗಳಿಗೆ ಚಾರ್ಜಿಂಗ್ ಮಾಡಲು ಸುಲಭ ಸೌಲಭ್ಯ
     

ಬೆಂಗಳೂರು(ಮೇ.05): ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನ (ಇವಿ) ಅಳವಡಿಕೆಯನ್ನು ಉತ್ತೇಜಿಸುವ ಹಾಗೂ ಚಾರ್ಜಿಂಗ್‌ ಸೌಲಭ್ಯವನ್ನು ಲಭ್ಯವಾಗಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ.  ಫೋರ್ಟಮ್ ಚಾರ್ಜ್‌ ಮತ್ತು ಡ್ರೈವ್‌ ಇಂಡಿಯಾ, ಬೆಂಗಳೂರಿನ ಫೋರಂ ನೈಬರ್‌ಹುಡ್ ಮಾಲ್‌ನಲ್ಲಿ 50 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಆರಂಭಿಸುವ ಮೂಲಕ ಇವಿ- ಸಾರ್ವಜನಿಕ ಹಬ್‌ ಆರಂಭಿಸಲು ಮುಂದಾಗಿದೆ.

ಈ ಚಾರ್ಜಿಂಗ್‌ ಹಬ್‌ ಎಲ್ಲಾ ಬಗೆಯ ಕಾರುಗಳ ಜೊತೆಗೆ, ತ್ರಿಚಕ್ರ ಹಾಗೂ ದ್ವಿಚಕ್ರ ವಾಹನಗಳಿಗೆ ಚಾರ್ಜಿಂಗ್‌ ಸೌಲಭ್ಯ ಒದಗಿಸುತ್ತದೆ. ಈ ಕೇಂದ್ರ 10(ಹತ್ತು) 60 ಕೆಡಬ್ಲ್ಯು ಸಿಸಿಎಸ್‌ ಚಾರ್ಜಿಂಗ್‌ ಪಾಯಿಂಟ್‌ಗಳು, 4(ನಾಲ್ಕು) 15 ಕೆಡಬ್ಲ್ಯು ಡಿಸಿ001 ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 36 (ಮೂವತ್ತಾರು) 7.4 ಕೆಡಬ್ಲ್ಯು ಟೈಪ್-2 ಎಸಿ ಚಾರ್ಜಿಂಗ್ ಪಾಯಿಂಟ್‌ಗಳು ಒಂದು ಸಮಯದಲ್ಲಿ 50 ಕಾರುಗಳನ್ನು ಚಾರ್ಜ್ ಮಾಡಲು ಅವಕಾಶ ಕಲ್ಪಿಸುತ್ತದೆ.

Tap to resize

Latest Videos

ನಾಳೆ ಟಾಟಾ ಮೋಟಾರ್ಸ್ ಹೊಸ ಎಲೆಕ್ಟ್ರಿಕ್‌ ಕಾರು ಅನಾವರಣ: ನಿರೀಕ್ಷೆಗಳೇನು?

ಈ ಸೌಲಭ್ಯವು ಇವಿ ಮಾಲೀಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಗ್ರಾಹಕರು ತಮ್ಮ ವಾಹನ ಚಾರ್ಜ್‌ ಆಗುತ್ತಿರುವಾಗ ಮಾಲ್‌ನಲ್ಲಿ ತಮ್ಮ ಸಮಯವನ್ನು ಆನಂದಿಸಬಹುದು. ಇವಿ ಬಳಕೆದಾರರು ಫೋರ್ಟಂ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಇವಿ-ಚಾರ್ಜಿಂಗ್ ಕೇಂದ್ರಗಳನ್ನು ಪತ್ತೆ ಮಾಡಬಹುದು ಮತ್ತು ಅವರ ಇವಿ ಅನ್ನು ಚಾರ್ಜ್ ಮಾಡಲು ಮತ್ತು ಡಿಜಿಟಲ್ ಆಗಿ ಪಾವತಿಸಲು ಅಪ್ಲಿಕೇಶನ್ ಅನ್ನು ಬಳಸಬಹುದು. ಈ ಅಪ್ಲಿಕೇಶನ್ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

ಮಹದೇವಪುರ ಕ್ಷೇತ್ರದ ಶಾಸಕರಾದ ಅರವಿಂದ ಲಿಂಬಾವಳಿ ಅವರು ಹಬ್ ಅನ್ನು ಉದ್ಘಾಟಿಸಿದರು ಮತ್ತು ಫೋರ್ಟಂ ಚಾರ್ಜ್ ಮತ್ತು ಡ್ರೈವ್ ಇಂಡಿಯಾದ ವಕ್ತಾರರೊಂದಿಗೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಉದ್ಘಾಟನಾ ಭಾಷಣ ಮಾಡಿದ ಅರವಿಂದ ಲಿಂಬಾವಳಿ, ಬೆಂಗಳೂರು ನಗರವು 45,000 ಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಬಳಕೆದಾರರನ್ನು ಹೊಂದಿದೆ, ಇದು ಇವಿಗಳ (ಎಲೆಕ್ಟ್ರಿಕ್ ವಾಹನಗಳು) ಬೇಡಿಕೆ ಹೆಚ್ಚುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದರು.

CURVV Electric SUV ಹೊಚ್ಚ ಹೊಸ ಎಲೆಕ್ಟ್ರಿಕ್ SUV ಕಾನ್ಸೆಪ್ಟ್ ಕಾರು ಪ್ರದರ್ಶಿಸಿದ ಟಾಟಾ ಮೋಟಾರ್ಸ್!

ಆಟೋಮೊಬೈಲ್‌ಗಳ ನಿರ್ವಹಣಾ ವೆಚ್ಚ, ದರಗಳ ಹೆಚ್ಚಳ ಐಸ್‌ (ಇಂಧನದ ಎಂಜಿನ್) ವಾಹನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಕರ್ನಾಟಕ ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಹೆಚ್ಚು ಅವಕಾಶ ದೊರೆಯುತ್ತಿದೆ. ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ಸ್ಥಾಪಿಸಿದ ಚಾರ್ಜಿಂಗ್ ಸ್ಟೇಷನ್ ನಗರದ ಇವಿ ಡ್ರೈವರ್‌ಗಳಿಗೆ ಪ್ರಯೋಜನ ನೀಡುತ್ತದೆ ಮತ್ತು ಮುಂಬರುವ ವರ್ಷಗಳಲ್ಲಿ ನಿರ್ಮಿಸಲಾಗುವ ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್‌ಗಳಲ್ಲಿ ಇದು ಮೊದಲನೆಯದು ಎಂದು ನಾನು ನಂಬುತ್ತೇನೆ" ಎಂದರು.

2017 ರಲ್ಲಿ ಹೈದರಾಬಾದ್‌ನಲ್ಲಿ ಕಾರ್ಯಾಚರಣೆಯೊಂದಿಗೆ ನಮ್ಮ ಕಂಪನಿ ಭಾರತದಲ್ಲಿ  ಪ್ರಯಾಣ ಪ್ರಾರಂಭಿಸಿದೆ ಮತ್ತು ನಂತರ ಇತರ ನಗರಗಳಿಗೆ ವಿಸ್ತರಿಸಿದೆ. ಬೆಂಗಳೂರು ನಮ್ಮ ಪ್ರಮುಖ ನಗರಗಳಲ್ಲಿ ಒಂದಾಗಿದೆ. 2022 ರ ಅಂತ್ಯದ ವೇಳೆಗೆ ನಗರದಲ್ಲಿ 200 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ. ಇದು ಸುಸ್ಥಿರ ಸಾರಿಗೆಯತ್ತ ಸಾಗುವ ಪ್ರಯಾಣದಲ್ಲಿ ಬೆಂಗಳೂರಿನ ಪ್ರಮುಖ ಮೈಲಿಗಲ್ಲಾಗಲಿದೆ” ಎಂದು  ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಧೇಶ್ ಝಾ ಹೇಳಿದ್ದಾರೆ.

ಫೋರಮ್ ನೈಬರ್‌ಹುಡ್ ಮಾಲ್‌ನ ಕೇಂದ್ರದ ಮುಖ್ಯಸ್ಥರಾದ ಅನಂತ್ ಪಾಟೀಲ್ ಮಾತನಾಡಿ, “ನೆಕ್ಸಸ್ ಮಾಲ್‌ಗಳಲ್ಲಿ ನಮ್ಮ ವ್ಯಾವಹಾರಿಕ ಮಾದರಿಯನ್ನು ಪರಿಸರ, ಸಾಮಾಜಿಕ ಮತ್ತು ಆಡಳಿತದ ಅಂಶಗಳೊದಿಗೆ ಪರಿಚಯಿಸುವ ಗುರಿ ಹೊಂದಿದ್ದೇವೆ” ಎಂದರು.

ಫೋರಮ್ ನೈಬರ್‌ಹುಡ್ ಮಾಲ್ ಸಾರ್ವಜನಿಕ ಸ್ಥಳಗಳನ್ನು ಇವಿ-ಚಾರ್ಜಿಂಗ್ ಸ್ಥಾಪನೆಗಳಿಗೆ ಹೇಗೆ ಬಳಸಬಹುದು ಎಂಬುದಕ್ಕೆ ಉದಾಹರಣೆಯಾಗಿ ಕಾರ್ಯನಿರ್ವಹಿಸುತ್ತದೆ. ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಇಂಡಿಯಾ ದೇಶದಲ್ಲಿ ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದೆ. ಫೋರ್ಟಮ್‌ 188 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. 8 ರಾಜ್ಯಗಳು ಮತ್ತು 13 ನಗರಗಳಲ್ಲಿ ಮತ್ತು ಯಾವುದೇ ಇವಿ ಬಳಕೆದಾರರಿಗೆ ಲಭ್ಯವಿರಲಿದೆ.

click me!