ಬರೋಬ್ಬರಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಟೊಯೋಟಾ ಕಿರ್ಲೋಸ್ಕರ್ ಮುಂದಾಗಿದೆ. 120,000ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ಸೇವೆ ಸಿಗಲಿರುವ ಈ ಕೇಂದ್ರದ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಬಿಡದಿ(ಜ.25): ಸ್ಥಳೀಯ ಸಮುದಾಯಗಳ ಆರೋಗ್ಯ ಸೇವೆಗಳ ಅಗತ್ಯಗಳನ್ನು ಪೂರೈಸಲು ಬದ್ಧವಾಗಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಬೆಂಗಳೂರು ಸಮೀಪದ ಬಿಡದಿಯಲ್ಲಿ ನೂತನ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ ಸಿ) ಶಂಕುಸ್ಥಾಪನಾ ಸಮಾರಂಭವನ್ನು ನೆರವೇರಿಸಿತು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮತ್ತು ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್, ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಟಿಕೆಎಂ ಹಿರಿಯ ಅಧಿಕಾರಿ ಕೆ.ವಿ.ರಾಜೇಂದ್ರ ಹೆಗ್ಡೆ, ಜನರಲ್ ಮ್ಯಾನೇಜರ್, ಇಎ(ರಾಜ್ಯ), ಸಿಎಸ್ ಆರ್, ಬಿ.ಐ.ಎ., ಮತ್ತು ಪಿಆರ್ ಅವರು ಭಾಗವಹಿಸಿದ್ದರು.
ಸುಲಭ ಸಾಲ, ಕಡಿಮೆ EMI; ಬರೋಡಾ ಬ್ಯಾಂಕ್ ಜೊತೆ ಟೊಯೋಟಾ ಕಿರ್ಲೋಸ್ಕರ್ ಒಪ್ಪಂದ !.
undefined
ಗುಣಮಟ್ಟದ ಆರೋಗ್ಯ ಸೇವೆಗೆ ಸ್ಥಳೀಯ ಬೇಡಿಕೆಯನ್ನು ಪೂರೈಸಲು ಆರೋಗ್ಯ ಸೇವೆಯ ಮೂಲಸೌಕರ್ಯಗಳನ್ನು ನಿರ್ಮಿಸುವಂತೆ ರಾಮನಗರ ಜಿಲ್ಲಾ ಆರೋಗ್ಯ ಕಚೇರಿ ಕಾರ್ಪೊರೇಟ್ ಗಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ ಆರ್) ಈ ಯೋಜನೆ ರೂಪಿಸಲಾಯಿತು. ಸಿಎಚ್ ಸಿಗಳು ಕರ್ನಾಟಕ ಸರ್ಕಾರ ನಡೆಸುವ ಸೌಲಭ್ಯವಾಗಿದ್ದು, ಇದು ಕೈಗೆಟುಕುವ ಮತ್ತು ಸಮಗ್ರ ಪ್ರಾಥಮಿಕ ಮತ್ತು ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಮಾನಸಿಕ ಆರೋಗ್ಯ ಆರೈಕೆಯನ್ನು ಒದಗಿಸುತ್ತದೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಬಿಡದಿಯಲ್ಲಿರುವ ಈಗಿರುವ ಸಿಎಚ್ ಸಿ ಆವರಣದಲ್ಲಿ ನೂತನ ಎರಡು ಬಹುಮಹಡಿ ಕಟ್ಟಡ ನಿರ್ಮಿಸಲು ಟಿಕೆಎಂ 120 ಮಿಲಿಯನ್ ರೂ. ವೆಚ್ಚ ಮಾಡುತ್ತಿದ್ದು, ಮುಂದಿನ 24 ರಿಂದ 30 ತಿಂಗಳಲ್ಲಿ ನೂತನ ಸಿಎಚ್ ಸಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಹೊಸ ಸಿಎಚ್ ಸಿ ಸೌಲಭ್ಯ ಸಿದ್ಧವಾದ ನಂತರ, ಹೆದ್ದಾರಿ ಅಪಘಾತ ಸಂತ್ರಸ್ತರಲ್ಲದೆ ಸ್ಥಳೀಯ ಸಮುದಾಯ ಸೇರಿದಂತೆ 120,000ಕ್ಕೂ ಹೆಚ್ಚು ಜನರಿಗೆ ಇದರ ಪ್ರಯೋಜನವಾಗಲಿದೆ.
ಹೊಸ ಸಮುದಾಯ ಆರೋಗ್ಯ ಸೌಲಭ್ಯದ ನಿರ್ಮಾಣದ ಜೊತೆಗೆ, ಮಕ್ಕಳ ಆಸ್ಪತ್ರೆ, ಒಬಿಜಿ, ಅರಿವಳಿಕೆ ಮತ್ತು ದಂತ ವೈದ್ಯಕೀಯ ವಿಶೇಷಗಳ ಹೊರರೋಗಿಗಳ ಕೊಠಡಿಗಳನ್ನು ನಿರ್ಮಿಸಲು ಟಿಕೆಎಂ ಬಂಡವಾಳ ಹೂಡುತ್ತಿದೆ. ಸಿಎಸ್ ಆರ್ ಯೋಜನೆಯಲ್ಲಿ ಚುಚ್ಚುಮದ್ದು, ಆಪ್ಟೋಮೆಟರ್, ಎಕ್ಸ್-ರೇ, ರಿಕವರಿ ಮತ್ತು ಲಸಿಕೆ ಕೊಠಡಿಗಳು, ವಾರ್ಡ್ ಗಳು, ವಿವಿಧ ಪ್ರಯೋಗಾಲಯಗಳು, ಫಾರ್ಮಸಿ, ಸ್ಟಾಫ್ ರೂಂಗಳು, ಮೀಟಿಂಗ್ ಹಾಲ್ ಮತ್ತು ಒಪಿಡಿ ನೋಂದಣಿ ಕೌಂಟರ್ ಗಳನ್ನು ಸ್ಥಾಪಿಸಲಾಗುತ್ತದೆ. ಟಿಕೆಎಂ ಉದ್ದೇಶಿತ ಸಿಎಚ್ ಸಿಗಾಗಿ ಪೀಠೋಪಕರಣಗಳು, ಫಿಕ್ಸರ್ ಗಳು ಮತ್ತು ವಿದ್ಯುತ್ ವ್ಯವಸ್ಥೆಗಳನ್ನು ಸಹ ಒದಗಿಸಲಿದೆ. ಟಿಕೆಎಂ ಈ ಹೊಸ ಘಟಕವನ್ನು ಅಭಿವೃದ್ಧಿಪಡಿಸಲಿದ್ದು, ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಟಿಕೆಎಂ ನಿಂದ ನಿರ್ವಹಣೆಯಾಗಲಿದೆ.
ಟೊಯೋಟಾ ಕಿರ್ಲೋಸ್ಕರ್ ಆಫರ್: ಸ್ಯಾಲರಿ ಪಡೆಯುವರಿಗೆ ಕಾರು ಖರೀದಿ ಈಗ ಸುಲಭ!
ಸಮಾಜದ ಏಳಿಗೆಗಾಗಿ ಅವಿರತ ಶ್ರಮ ಪಟ್ಟ ಟಿಕೆಎಂ ಅನ್ನು ಶ್ಲಾಘಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರು, ಎಲ್ಲ ವಯೋಮಾನದ ವ್ಯಕ್ತಿಗಳಿಗೆ ಈ ಸೌಲಭ್ಯಗಳು ಅಗತ್ಯವಾಗಿದ್ದು, ಆರೋಗ್ಯ ಸೇವೆ ಸೌಲಭ್ಯಗಳು ಅತ್ಯಂತ ಮಹತ್ವಪೂರ್ಣವಾಗಿವೆ. ಕರ್ನಾಟಕ ಸರ್ಕಾರ ನಾಗರಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ಒದಗಿಸಲು ಆದ್ಯತೆ ನೀಡಿದೆ. ಟೊಯೋಟಾದಂತಹ ಜವಾಬ್ದಾರಿಯುತ ಕಾರ್ಪೊರೇಟ್ ಗಳು ಗ್ರಾಮೀಣ ಕರ್ನಾಟಕದಲ್ಲಿ ಸಮುದಾಯಕ್ಕೆ ಸೇವೆ ನೀಡಲು ಗುಣಮಟ್ಟದ ಆರೋಗ್ಯ ಆರೈಕೆ ಮೂಲಸೌಕರ್ಯಗಳನ್ನು ನಿರ್ಮಿಸಲು ನಿರಂತರವಾಗಿ ಬೆಂಬಲಿಸುತ್ತಿರುವುದು ನಮಗೆ ಸಂತೋಷ ತಂದಿದೆ. ಇಂತಹ ಪ್ರಯತ್ನಗಳು ಆರೋಗ್ಯ ಆರೈಕೆ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದರಿಂದ ದೀರ್ಘಕಾಲೀನ ಕಾಯಿಲೆಗಳನ್ನು ತಡೆಗಟ್ಟಬಹುದು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಉತ್ತೇಜಿಸಬಹುದು ಎಂದರು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು, "ನಮ್ಮ ಎಲ್ಲ ನಾಗರಿಕರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ . ಕಮ್ಯುನಿಟಿ ಹೆಲ್ತ್ ಕೇರ್ ಸೆಂಟರ್ ನ ಪ್ರಾಥಮಿಕ ಕೊಡುಗೆಯು ಗ್ರಾಮೀಣ ಕರ್ನಾಟಕದಲ್ಲಿ ಕೈಗೆಟುಕುವ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೇಂದ್ರಗಳು, ಔಷಧಗಳು, ಮೆಡಿಕೇರ್ ನಂತಹ ಅವಾಸ್ಟ್ ಶ್ರೇಣಿಯ ವೈದ್ಯಕೀಯ ಸೇವೆಗಳನ್ನು ಸುಲಭವಾಗಿ ಪ್ರವೇಶಿಸುತ್ತದೆ. ಆರೋಗ್ಯಕರ ಜೀವನಶೈಲಿಯಿಂದ ಆರೋಗ್ಯಯುತ ವಾದ ಸಮುದಾಯ, ಪರಿಸರ ಮತ್ತು ಪರಿಸರವು ಉಂಟಾಗುತ್ತದೆ. ಈ ಮೂಲಕ ರಾಮನಗರದ ಸ್ಥಳೀಯ ಸಮುದಾಯಕ್ಕೆ ಬೆಂಬಲ ನೀಡಲು ಟಿಕೆಎಂ ಮಾಡಿದ ಪ್ರಯತ್ನಕ್ಕೆ ನಾನು ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್ ಅವರು, ಸಮಾಜದ ಎಲ್ಲ ಸ್ತರಗಳಲ್ಲಿ ವೈದ್ಯಕೀಯ ಸೇವೆ ಗಳನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ ಮತ್ತು ಹೊಸ ಸಿಎಚ್ ಸಿ ಯು ಸಮುದಾಯದ ಒಟ್ಟಾರೆ ಆರೋಗ್ಯ ಸುಧಾರಣೆಯನ್ನು ಉತ್ತಮಗೊಳಿಸಲಿದೆ ಎಂದು ಆಶಿಸುತ್ತೇನೆ. ಇದಲ್ಲದೆ, ಟಿಕೆಎಂನಂತಹ ಕಾರ್ಪೊರೇಟ್ ಗಳು ಆರೋಗ್ಯ, ಶಿಕ್ಷಣ, ಪರಿಸರ ಮತ್ತು ರಸ್ತೆ ಸುರಕ್ಷತೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಯೋಜನೆಗಳನ್ನು ನಿರಂತರವಾಗಿ ಮತ್ತು ಪೂರ್ಣಗೊಳಿಸುತ್ತಿರುವುದ ಬಗ್ಗೆ ನಮಗೆ ಸಂತೋಷವಿದೆ. ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಈ ಕ್ರಮಗಳು ಅಗತ್ಯವಾಗಿವೆ, ಇದರಿಂದ ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದರು.
ಈ ಯೋಜನೆಯ ಬಗ್ಗೆ ಮಾತನಾಡಿದ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತಗಳ ಹಿರಿಯ ಉಪಾಧ್ಯಕ್ಷ ಶ್ರೀ ವಿಕ್ರಮ್ ಗುಲಾಟಿ, ಅವರು, "ಈ ಉಪಕ್ರಮವು ಸರ್ಕಾರ, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ಸಮುದಾಯಗಳ ಪ್ರಮುಖ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪೂರೈಸುವಲ್ಲಿ ಒಂದು ಉತ್ತಮ ಉದಾಹರಣೆಯಾಗಿದೆ. ಸ್ವಾವಲಂಬಿ ಮತ್ತು ಸುಸ್ಥಿರ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಲು ಟಿಕೆಎಂನ ಹೆಚ್ಚಿನ ಆದ್ಯತೆ ನೀಡಲಿದೆ. ಈ ಗುರಿಯನ್ನು ಸಾಧಿಸಲು ಆರೋಗ್ಯ ಮತ್ತು ನೈರ್ಮಲ್ಯ ಎರಡು ಪ್ರಮುಖ ಕ್ಷೇತ್ರಗಳು ಎಂದು ನಾವು ನಂಬುತ್ತೇವೆ. ಆದ್ದರಿಂದ, ನಾವು ನಮ್ಮ ಗಮನವನ್ನು ಈ ಎರಡು ಕ್ಷೇತ್ರಗಳಲ್ಲಿ ಹರಿಸಿದ್ದೇವೆ . 2001ರಿಂದ ಈಚೆಗೆ TKM ನ ಸಿಎಸ್ ಆರ್ ನೇತೃತ್ವದ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮಗಳಿಂದ 800,000 ಕ್ಕೂ ಹೆಚ್ಚು ಜನರು ಪ್ರಯೋಜನವನ್ನು ಪಡೆದಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದರು.