ಗಣರಾಜ್ಯೋತ್ಸವ ಪರೇಡ್ ಕಾರಣ ಸಂಚಾರ ಮಾರ್ಗದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದೆ. ಇದೀಗ ಗಣಣರಾಜ್ಯೋತ್ಸವ ದಿನ ಎಲ್ಲೆಲ್ಲಿ ಟ್ರಾಫಿಕ್ ಡೈವರ್ಶನ್ ಮಾಡಲಾಗಿದೆ. ಇಲ್ಲಿದೆ ಮಾಹಿತಿ
ದೆಹಲಿ(ಜ.25): ಗಣರಾಜ್ಯೋತ್ಸವ ದಿನಾಚರಣೆ ಕಾರಣ ನಾಳೆ(ಜ.26)ರಂದು ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಗಣರಾಜ್ಯೋತ್ಸವ ಪರೇಡ್ ಸಾಗುವ ದಾರಿಗಳು ಹಾಗು ಭದ್ರತೆ ಕಾರಣ ಸುತ್ತಮುತ್ತಿಲಿನ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ದೆಹಲಿ ಪೊಲೀಸರು ಸಾರ್ವಜನಿಕರು ಬದಲಿ ಮಾರ್ಗ ಬಳಸಿಕೊಳ್ಳಲು ಸೂಚಿಸಲಾಗಿದೆ.
ನಿಯಮ ಎಲ್ಲರಿಗೂ ಒಂದೇ; ಸಚಿವರ ಕಾರಿನ ಟಿಂಟೆಡ್ ಗ್ಲಾಸ್, ಕರ್ಟೈನ್ ತೆಗೆಯಲು ಸೂಚನೆ!..
ಗಣರಾಜ್ಯೋತ್ಸವ ಪರೇಡ್ ದೆಹಲಿಯ ವಿಜಯ ಚೌಕ್‌ನಿಂದ ರಾಜಪಥದತ್ತ ಸಾಗಲಿದೆ. ಹೀಗಾಗಿ ಈ ರಸ್ತೆ ಸಂಪೂರ್ಣ ಬಂದ್ ಆಗಲಿದೆ. ವಿಜಯ್ ಚೌಕ್‌ನಿಂದ ಆರಂಭಗೊಳ್ಳುವ ಪರೇಡ್, ಇಂಡಿಯಾ ಗೇಟ್ ಅಮರ್ ಜವಾನ್ ಜ್ಯೋತಿ, ಪ್ರಿನ್ಸಸ್ ಪ್ಯಾಲೇಸ್, ತಿಲಕ್ ಮಾರ್ಗ್ ಬಳಿಕ ಬಲಕ್ಕೆ ತಿರುಗಲಿರುವ ಪರೇಡ್, ಸಿ ಹೆಕ್ಸಾನ್ ಬಳಿಕ ಎಡಕ್ಕೆ ತಿರುವು ಪಡೆದುಕೊಳ್ಳಲಿದೆ. ಬಳಿಕ ರಾಷ್ಟ್ರೀಯ ಕ್ರೀಡಾಂಗಣ ಗೇಟ್ ನಂ.1 ಮೂಲಕ ಪ್ರವೇಶ ಪಡೆಯಲಿದೆ.
ಸಂಜೆ 6 ಗಂಟೆ ಬಳಿಕ ಈ ಮಾರ್ಗಗಳಲ್ಲಿ ಸಂಚಾರಕ್ಕೆ ಅವಕಾಶವಿದೆ. ಇದರೊಂದಿಗೆ ಪ್ರತಿಭಟನಾ ನಿರತ ರೈತ ಸಂಘಟನೆಗಳು ಅತೀ ದೊಡ್ಡ ಟ್ರಾಕ್ಟರ್ ರ್ಯಾಲಿ ಆಯೋಜಿಸಿದೆ. ದೆಹಲಿಯ ಸಿಂಗು ಘಡಿಯಿಂದ 67 ಕಿಲೋಮೀಟರ್ ಟ್ರಾಕ್ಟರ್ ರ್ಯಾಲಿ ನಡೆಯಲಿದೆ. ಸಂಜಯ್ ಗಾಂಧಿ ಟ್ರಾನ್ಸ್‌ಪೋರ್ಟ್ ನಗರ್,ಖಂಜನವಾಲ, ಭಾವನ ಹಾಗೂ ಕೆಎಂಪಿ ಎಕ್ಸ್‌ಪ್ರೆಸ್ ವೇ ಮೂಲಕ ಸಾಗಲಿದೆ. ಹೀಗಾಗಿ ಈ ಮಾರ್ಗಗಳು ಟ್ರಾಫಿಕ್ ಜಾಮ್ ಆಗಲಿದೆ.