ಕೊರೋನಾ ಲಸಿಕೆ ಸಾಗಾಣಿಕೆಗೆ ರೆಫ‍್ರಿಜರೇಟ್ ಟ್ರಕ್ ಒದಗಿಸಿದ ಟಾಟಾ ಮೋಟಾರ್ಸ್!

By Suvarna NewsFirst Published Jan 23, 2021, 9:57 PM IST
Highlights

ಕೊರೋನಾ ಲಸಿಕೆ ಘಟದಿಂದ ದೇಶದ ಮೂಲೆ ಮೂಲೆಗೂ ಕೊರೋನಾ ಲಸಿಕೆ ರವಾನೆ ಸವಾಲೇ ಸರಿ. ಲಸಿಕೆಯನ್ನು ಇಂತಿಷ್ಟೆ ಕೂಲ್ಡ್ ಸ್ಟೋರೇಜ್‌ನಲ್ಲಿಡಬೇಕು. ವಿಮಾನ ನಿಲ್ದಾಣದಿಂದ ಹಳ್ಳಿ ಹಳ್ಳಿಗೆ ಲಸಿಕೆ ಸಾಗಿಸಲು ಟಾಟಾ ಮೋಟಾರ್ಸ್ ಅತ್ಯಾಧುನಿಕ ರೆಫ್ರಿಜರೇಟ್ ಟ್ರಕ ಒದಗಿಸುವ ಮೂಲಕ ದೇಶ ಸೇವೆ ಬದ್ಧತೆಯನ್ನು ಮತ್ತೆ ಎತ್ತಿ ತೋರಿಸಿದೆ.

ಬೆಂಗಳೂರು(ಜ.23): COVID-19 ಲಸಿಕೆ ಅಭಿಯಾನದ ಸುಗಮ ಸಂಚಾರಕ್ಕೆ ರೆಫ್ರಿಜರೇಟೆಡ್ ಟ್ರಕ್ ಗಳನ್ನು ಒದಗಿಸುವ ಮೂಲಕ ದೇಶದ  ಅತಿದೊಡ್ಡ ವಾಣಿಜ್ಯ ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟಾರ್ಸ್ ತನ್ನ ಪ್ರಾಮಾಣಿಕ ಬದ್ಧತೆಯನ್ನು ಘೋಷಿಸಿದೆ. ಅತ್ಯುತ್ತಮ ತಂತ್ರಜ್ಞಾನ ಮತ್ತು ಅತ್ಯಂತ ವಿಶೇಷ ಸಾರಿಗೆ ಅಗತ್ಯವನ್ನು ಹೊಂದಿರುವ ಟಾಟಾ ಮೋಟಾರ್ಸ್, ಲಸಿಕೆಯ ಅಂತಿಮ ಸಾಗಣೆಗಾಗಿ ವ್ಯಾಪಕ ಶ್ರೇಣಿಯ ಟ್ರಕ್ ಗಳನ್ನು ಒದಗಿಸುತ್ತದೆ. ಈ ಲಸಿಕೆ ಟ್ರಕ್ ಗಳು ಮತ್ತು ವ್ಯಾನ್ ಗಳು ಖರೀದಿಗಾಗಿ ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) ಪೋರ್ಟಲ್ ನಲ್ಲಿ ಲಭ್ಯವಿದೆ.

ಟಾಟಾದಿಂದ ಮತ್ತೊಂದು ಕೊಡುಗೆ, ವಾಹನ ಖರೀದಿ ಮತ್ತಷ್ಟು ಸುಲಭ!.

ವ್ಯಾಕ್ಸಿನ್ ಗಳ ವಿಶ್ವಾಸಾರ್ಹ, ಸುರಕ್ಷಿತ ಮತ್ತು ತ್ವರಿತ ಸಾಗಣೆಯನ್ನು ಖಚಿತಪಡಿಸಿಕೊಳ್ಳಲು, ಹೊಸ ಶ್ರೇಣಿಯ ವಾಹನಗಳನ್ನು ವಿನ್ಯಾಸಗೊಳಿಸಲಾಗಿದೆ. ತಾಪಮಾನ, ಪರಿಮಾಣ ಮತ್ತು ತೂಕದ ಅಗತ್ಯಗಳಿಗೆ ಅನುಗುಣವಾಗಿ ಇವುಗಳನ್ನು ತಾಂತ್ರಿಕವಾಗಿ ವಿನ್ಯಾಸಗೊಳಿಸಲಾಗಿದೆ. ವಿವಿಧ ಅಗತ್ಯಗಳಿಗೆ ತಕ್ಕಂತೆ ವಿವಿಧ ಸಾಮರ್ಥ್ಯಗಳು ಮತ್ತು ಟೋನೇಜ್ ಪಾಯಿಂಟ್ ಗಳಲ್ಲಿ ಈ ವಾಹನಗಳು ಲಭ್ಯವಿರುತ್ತವೆ. ಮಧ್ಯಮ ವಾಣಿಜ್ಯ ವಾಹನ (ಐಸಿವಿ) ಮತ್ತು ಮಧ್ಯಮ ವಾಣಿಜ್ಯ ವಾಹನ (ಎಂಸಿವಿ) ವಿಭಾಗಗಳಲ್ಲಿ ಕ್ರಮವಾಗಿ 20 ಮತ್ತು 32 cuM ರೆಫ್ರಿಜರೇಟೆಡ್ ಟ್ರಕ್ ಗಳು ಐಸಿವಿ ಮತ್ತು ಎಂಸಿವಿ ವಿಭಾಗದಲ್ಲಿ ಇನ್ಸುಲೇಟೆಡ್ ವ್ಯಾನ್ ಗಳು ಲಭ್ಯವಿರುತ್ತವೆ. ಸಣ್ಣ ವಾಣಿಜ್ಯ ವಾಹನ (SCV) ಮತ್ತು ಪಿಕಪ್ (PU) ಶ್ರೇಣಿಯಲ್ಲಿ ಇನ್ಸುಲೇಟೆಡ್ ವ್ಯಾಕ್ಸಿನ್  ವ್ಯಾನ್ ಗಳು ಸಹ ಲಭ್ಯವಿದೆ. , ಲಸಿಕೆಗಳನ್ನು ಸಾಗಿಸಲು ಮತ್ತು ಗ್ರಾಮೀಣ ಸಾರಿಗೆಗೆ ಅನುಕೂಲ ಮಾಡಿಕೊಡಲು ಇದು ನೆರವಾಗಲಿದೆ.

ಅಪಘಾತದಲ್ಲಿ ಕಾರು 4 ಪಲ್ಟಿಯಾದರೂ ಪ್ರಯಾಣಿಕರು ಸೇಫ್; ಟಾಟಾಗೆ ಸಲಾಂ ಹೇಳಿದ ಮಾಲೀಕ !.

ಟಾಟಾ ಮೋಟಾರ್ಸ್ ದೇಶದ ಪ್ರಮುಖ ರೀಫರ್ (ರೆಫ್ರಿಜರೇಟೆಡ್ ಲೋಡ್ ಬಾಡಿ) ತಯಾರಕರೊಂದಿಗೆ ಸಂಬಂಧ ಹೊಂದಿದ್ದು, ಸಿದ್ಧ ರೀಫರ್ ಗಳು ಮತ್ತು ಇನ್ಸುಲೇಟೆಡ್ ವ್ಯಾಕ್ಸಿಂಗ್ ವ್ಯಾನ್ ಗಳನ್ನು ನೀಡಲು ಸಿದ್ಧತೆ ಯನ್ನು ಮಾಡುತ್ತಿದೆ. ಹಲವು ವರ್ಷಗಳಿಂದ, ಟಾಟಾ ಮೋಟಾರ್ಸ್ ಹಲವಾರು ಶೀತಲ ಸರಪಳಿ ಗ್ರಾಹಕರಿಗೆ ಗಣನೀಯ ಸಂಖ್ಯೆಯ ರೀಫರ್ ಗಳನ್ನು ಮಾರಾಟ ಮಾಡಿದೆ. ಮುಖ್ಯವಾಗಿ ಫಾರ್ಮಾ ಕಂಪನಿಗಳಿಗಾಗಿ ಇವುಗಳನ್ನು ರಚಿಸಲಾಗುತ್ತದೆ.  ಲಸಿಕೆ ವಿತರಣೆಗೆ ಸಂಬಂಧಿಸಿದ ಅಪ್ಲಿಕೇಶನ್ ಗಳ ಮೇಲೆ ತಮ್ಮ ವಿಶೇಷ ಗಮನವನ್ನು ಕೇಂದ್ರೀಕರಿಸಿ, ಈ ವಾಹನಗಳು ಹೆಚ್ಚಿನ ಅಪ್ ಟೈಮ್, ತ್ವರಿತ ತಿರುವು ಸಮಯ ಮತ್ತು ಕನಿಷ್ಠ ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚಗಳನ್ನು ಒದಗಿಸುತ್ತದೆ. ಅವರು 'ಫ್ಲೀಟ್ ಎಡ್ಜ್' ಎಂಬ ಅತ್ಯಾಧುನಿಕ ಟೆಲಿಮ್ಯಾಟಿಕ್ ವ್ಯವಸ್ಥೆಯನ್ನೂ ಹೊಂದಿದ್ದು, ಅದರ ಮಾಲೀಕರು ತಮ್ಮ ವಾಹನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು  ಸಹಾಯ ಮಾಡಿಕೊಡುತ್ತವೆ.

ವಾಹನ ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಯಾವಾಗಲೂ ಸಮಕಾಲೀನ ಬೇಡಿಕೆಗಳಿಗೆ ಬೆಲೆ ಕೊಟ್ಟು, ಅತ್ಯುತ್ತಮ ದಕ್ಷತೆ ಮತ್ತು ಕನಿಷ್ಠ ವೆಚ್ಚದ ಉತ್ಪನ್ನಗಳನ್ನು ನೀಡುತ್ತಿದೆ. ಲಸಿಕೆಯ ಮೊದಲ ಹಂತವನ್ನು ದೇಶಾದ್ಯಂತ ಸುರಕ್ಷಿತ ಮತ್ತು ತ್ವರಿತ ವಿತರಣೆಗೆ ಕೊಡುಗೆ ನೀಡುವ ಮೂಲಕ ದೇಶವು ಲಸಿಕೆಯನ್ನು ಜಾರಿಗೆ ತರಲು ಸಿದ್ಧವಾಗಿರುವಂತೆ ನಾವು ಬೆಂಬಲವನ್ನು ನೀಡಲು ಸಂತೋಷಪಡುತ್ತೇವೆ. ಭಾರತದ ನಿಯಮಗಳು ಮತ್ತು ಲಸಿಕೆ ತಯಾರಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಶ್ರೇಣಿಯ ಉತ್ಕೃಷ್ಟ ಉತ್ಪನ್ನಗಳು ನಮ್ಮ ದೇಶದ ಅತ್ಮನಿರ್ಭರ್ ಭಾರತ್ ನ ವಿಷನ್ ಗೆ ಕೊಡುಗೆ ನೀಡಲು ಪ್ರಯತ್ನಪಡುತ್ತವೆ ಎಂದು  ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನ ವ್ಯಾಪಾರ ವಿಭಾಗದ ಅಧ್ಯಕ್ಷ ಗಿರೀಶ್ ವಾಘ್  ಹೇಳಿದರು.

click me!