ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಹೊಸ ಸ್ಪರ್ಶ ನೀಡಲು ಸರ್ಕಾರ ಮುಂದಾಗಿದೆ. ಮಾಲಿನ್ಯದಿಂದ ಮುಕ್ತಿಗೊಳಿಸಲು ಇದೀಗ ಬಿಎಂಟಿಸಿ ಬಸ್‌ಗಳನ್ನು ಎಲೆಕ್ಟ್ರಿಕ್ ವಾಹನಗಳನ್ನಾಗಿ ಪರಿವರ್ತಿಸುತ್ತಿದೆ. ಇದರ ಭಾಗವಾಗಿ ಟಾಟಾ ಮೋಟಾರ್ಸ್‌ನಿಂದ 921 ಎಲೆಕ್ಟ್ರಿಕ್ ಬಸ್ ಆರ್ಡರ್ ಮಾಡಿದೆ.
ಬೆಂಗಳೂರು(ಆ.19) ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ತಯಾರಕರಾದ ಟಾಟಾ ಮೋಟರ್ಸ್, ಬೆಂಗಳೂರು ಬಿಎಮ್‌ಟಿಸಿಯಿಂದ 921 ಎಲೆಕ್ಟ್ರಿಕ್ ಬಸ್‍ಗಳ ಆರ್ಡರ್ ಪಡೆದುಕೊಂಡಿದೆ. ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL) ಅವರಿಂದ ಇನ್ನೂ ಹೆಚ್ಚಿನ ಟೆಂಡ್ ಭಾಗವಾಗಿ 12 ವರ್ಷಗಳವರೆಗೆ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು ಮಾಡುವ ಹಾಗೂ ನಿರ್ವಹಣೆ ಮಾಡುವ ಜಾಬ್ದಾರಿಯನ್ನು ಟಾಟಾ ಮೋಟಾರ್ಸ್‌ಗೆ ವಹಿಸಲಾಗಿದೆ. ಉತ್ಕೃಷ್ಟ ವಿನ್ಯಾಸ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವರ್ಗದಲ್ಲೇ ಶ್ರೇಷ್ಟವಾದ ವಿಶಿಷ್ಟ ಗುಣಲಕ್ಷಣಗಳೊಂದಿಗೆ ತಯಾರಾದ ಟಾಟಾ ಸ್ಟಾರ್ ಬಸ್, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ವಾಹನವಾಗಿದೆ.
ಟಾಟಾ ಮೋಟರ್ಸ್ ಅವರಿಗೆ 921 ಎಲೆಕ್ಟ್ರಿಕ್ ಬಸ್‍ಗಳ ಪೂರೈಕೆಗೆ ಬೇಡಿಕೆಯನ್ನು ದೃಢಪಡಿಸಲು ನಮಗೆ ಹರ್ಷವಾಗಿದೆ. ಸ್ವಚ್ಛತೆ, ಸುಸ್ಥಿರವಾದ ನಗರ ಜನರ ಸಂಚಾರದ ಅವಶ್ಯಕತೆ ಬೆಂಗಳೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆ ಬಹಳ ಮುಖ್ಯವಾಗುತ್ತದೆ. ಪರಿಸರ ಸ್ನೇಹಿಸಾರ್ವಜನಿಕ ಸಾರಿಗೆಗೆ ಗರಿಷ್ಟ ಪ್ರಮಾಣದ ಜನರನ್ನು ಆಕರ್ಷಿಸುವ ಆಧುನಿಕ ಎಲೆಕ್ಟ್ರಿಕ್ ಬಸ್‍ಗಳನ್ನು ತನ್ನ ಪಡೆಗೆ ಸೇರಿಸಿಕೊಳ್ಳಲು ಬಿ ಎಮ್ ಟಿ ಸಿ ಸಂತೋಷಪಡುತ್ತದೆ ಎಂದು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‍ಪೋರ್ಟ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ಶ್ರೀಮತಿ ಜಿ. ಸತ್ಯವತಿ ಹೇಳಿದ್ದಾರೆ.
ಜುಲೈನಲ್ಲಿ ಶೇ.51ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಟಾಟಾ ಮೋಟಾರ್ಸ್
ಸಿ ಇ ಎಸ್ ಎಲ್ ನ ಗ್ರ್ಯಾಂಡ್ ಚಾಲೆಂಜ್ ಅಡಿ ಎಲೆಕ್ಟ್ರಿಕ್ ಬಸ್‍ಗಳಿಗೆ ಬಿ ಎಮ್ ಟಿ ಸಿ ತನ್ನ ಬೇಡಿಕೆಯನ್ನು ಇರಿಸಿರುವುದು ನಮಗೆ ಅತ್ಯಂತ ಸಂತೋಷವಾಗಿದೆ. ನಾವು ಕೈಗೊಂಡಿರುವ ಎಲೆಕ್ಟ್ರಿಕ್ ಬಸ್ ಪಯಣದಲ್ಲಿ ಇದು ಗಮನಾರ್ಹವಾದ ಮೈಲಿಗಲ್ಲು.ಕರ್ನಾಟಕ ಸರ್ಕಾರ ಮತ್ತು ಬಿ ಎಮ್ ಟಿ ಸಿ ಅವರ ಬದ್ಧತೆಗೆ ಮತ್ತು ಸಹಯೋಗ ನೀಡುತ್ತಿರುವ ಟಾಟಾ ಮೋಟರ್ಸ್‍ಗೆ ನಾವು ನಮ್ಮ ಹೃತ್ಪೂರಕ ಅಭಿನಂದನೆ ಸಲ್ಲಿಸುತ್ತೇವೆ ಎಂದು ಕನ್ವರ್ಜೆನ್ಸ್ ಎನರ್ಜಿ ಸರ್ವಿಸಸ್ ಲಿಮಿಟೆಡ್ (CESL)ಸಿಇಓ ಶ್ರೀಮತಿ ಮಹುವಾ ಆಚಾರ್ಯ ಹೇಳಿದ್ದಾರೆ.
ಭಾರತದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್‍ನ ಬದ್ಧತೆ, ಈಗ ಬಿ ಎಮ್ ಟಿ ಸಿ ಯಿಂದ ಎಲೆಕ್ಟ್ರಿಕ್ ಬಸ್‍ಗಳ ಪ್ರತಿಷ್ಠಿತ ಬೇಡಿಕೆ ಈಗ ಇನ್ನಷ್ಟು ಗಟ್ಟಿಯಾಗಿದೆ. ಚತುರವಾದ, ಆಧುನಿಕವಾದ ಮತ್ತು ವಿದ್ಯುಚ್ಛಕ್ತಿ ಸಮರ್ಥ ಪ್ರಯಾಣಿಕ ವಾಣಿಜ್ಯ ವಾಹನಗಳನ್ನು ಅಭಿವñದ್ಧಿಪಡಿಸಿ ಭವಿಷ್ಯದ ಸಂಚಾರದ ಅವಶ್ಯಕತೆಗಳಿಗೆ ಮುಂಚಿತವಾಗಿ ತಯಾರಿಸುವಲ್ಲಿ ಮೋಟರ್ಸ್ ಮುಂಚೂಣಿಯಲ್ಲಿದೆ.ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‍ಗಳು ಬೆಂಗಳೂರಿನ ನಿವಾಸಿಗಳಿಗೆ ಅನುಕೂಲಕರವಾಗಿರುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಟಾಟಾ ಮೋಟರ್ಸ್‍ನ ಬಸ್ ವಿಭಾಗದ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಹೇಳಿದ್ದಾರೆ.
ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್ ದಾಖಲೆ, ಸರ್ಕಾರದಿಂದ 1,500 EV ಬಸ್ ಆರ್ಡರ್!
ಈಗಾಗಲೇ ಟಾಟಾ ಮೋಟರ್ಸ್ ಕಂಪನಿಯು ದೆಹಲಿ ಸಾರಿಗೆ ನಿಗಮದಿಂದ 1500 ಇ-ಬಸ್‍ಗಳು ಹಾಗೂ ಪಶ್ಚಿಮ ಬಂಗಾಳ ಸಾರಿಗೆ ನಿಗಮದಿಂದ 1180 ಇ-ಬಸ್‍ಗಳ ಬೇಡಿಕೆಯನ್ನು ಕಳೆದ 30 ದಿನಗಳೊಳಗೆ ಪಡೆದಿದೆ. ಟಾಟಾ ಮೋಟರ್ಸ್‍ನ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸೌಕರ್ಯಗಳು, ಬ್ಯಾಟರಿ-ಎಲೆಕ್ಟ್ರಿಕ್, ಮಿಶ್ರತಳಿ, ಸಿಎನ್‍ಜಿ,ಎಲ್‍ಎನ್‍ಜಿ ಮತ್ತು ಸಾರಜನಕ ಇಂಧನ ಸೆಲ್ ತಂತ್ರಜ್ಞಾನ ಸೇರಿದಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ಚಾಲಿತವಾದ ವಿನೂತನ ಸಂಚಾರ ಪರಿಹಾರಗಳನ್ನು ಹೊರತರುವ ನಿಟ್ಟಿನಲ್ಲಿ ನಿರಂತರ ಕಾರ್ಯತತ್ಪರವಾಗಿದೆ.ಇಂದಿನವರೆಗೆ ಟಾಟಾ ಮೋಟರ್ಸ್, ಭಾರತದಲ್ಲಿ ವಿವಿಧ ನಗರಗಳಿಗೆ 715 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳನ್ನು ಸರಬರಾಜು ಮಾಡಿದ್ದು, ಸಂಚಿತವಾಗಿ ಈ ಬಸ್‍ಗಳು 40 ದಶಲಕ್ಷಕ್ಕೂ ಹೆಚ್ಚು ಕಿಲೋಮೀಟರ್ ಗಳನ್ನು ಸಂಚರಿಸಿವೆ.