ಮೊದಲ ಬಾರಿಗೆ ಬೆಂಗಳೂರು ನಗರದ ಸ್ವಿಚ್ ಇಐವಿ 12 ಬಸ್‌ಗಳು ರಸ್ತೆಗಳಿಗೆ ಇಳಿಯಲಿವೆ. ವಿಧಾನಸೌದ ಮುಂದೆ ಸ್ವಿಚ್ ಎಲೆಕ್ಟ್ರಿಕ್ ಬಸ್‌ಗಳಿಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ ತೋರಿದ್ದಾರೆ.
ಬೆಂಗಳೂರು(ಏ.14): ಹೊಸ ತಲೆಮಾರಿನ ವಿದ್ಯುತ್‌ಚಾಲಿತ ಬಸ್ ಮತ್ತು ಲಘು ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾಗಿರುವ ಸ್ವಿಚ್ ಮೊಬಿಲಿಟಿ ‘75 ಸ್ವಿಚ್ ಇಐವಿ 12’ ಬೆಂಗಳೂರಿಗೆ ಮೊದಲ ಕಂತಿನ ಎಲೆಕ್ಟ್ರಿಕ್ ಬಸ್ ಪೂರೈಕೆ ಮಾಡಿದೆ. ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿದರು. ತಾಂತ್ರಿಕವಾಗಿ ಸುಧಾರಿತ ಈ ಹೊಸ ವಿದ್ಯುತ್‌ಚಾಲಿತ ಬಸ್‌ಗಳು, 300 ವಿದ್ಯುತ್‌ಚಾಲಿತ ಬಸ್‌ಗಳಿಗೆ ಸಲ್ಲಿಸಿದ ಬೇಡಿಕೆಯ ಭಾಗವಾಗಿವೆ. ಬೆಂಗಳೂರಿನ ಜನರಿಗೆ ಸೇವೆ ಸಲ್ಲಿಸಲು ಈ ಬಸ್‌ಗಳು ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಸೇವೆಗೆ ಸೇರ್ಪಡೆಗೊಳ್ಳಲಿವೆ. ಸ್ವಿಚ್ ಮೊಬಿಲಿಟಿಯು, ‘ಸ್ವಿಚ್ ಇಐವಿ 12’ ಗುಣಮಟ್ಟದ ವಿದ್ಯುತ್‌ಚಾಲಿತ 300 ಬಸ್‌ಗಳ ಪೂರೈಕೆ, ಕಾರ್ಯಾಚರಣೆ ಮತ್ತು ನಿರ್ವಹಣೆ ನೋಡಿಕೊಳ್ಳಲಿದೆ.
ಸ್ವಿಚ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಸ್ವಿಚ್ ಮೊಬಿಲಿಟಿ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಬಾಬು ಅವರು ಮಾತನಾಡಿ, ‘ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆಯ ವಿದ್ಯುದ್ದೀಕರಣದ ಮೇಲೆ ಹೆಚ್ಚಿನ ಗಮನಹರಿಸುವುದರೊಂದಿಗೆ, ವಾಹನಗಳ ವಾಯು ಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ಇಳಿಸಲು ಸ್ವಿಚ್ ಇಂಡಿಯಾ ಬದ್ಧವಾಗಿದೆ. ಈ ಅಗತ್ಯ ಪೂರೈಸಲು ಸ್ವಿಚ್ ಇಂಡಿಯಾ, 2022ರ ಜೂನ್‌ನಲ್ಲಿ ‘ಸ್ವಿಚ್ ಇಐವಿ 12’ ಬಸ್‌ಗಳನ್ನು ಪರಿಚಯಿಸಿತು. ‘ಬಿಎಂಟಿಸಿ’ಯ 300 ಬಸ್‌ಗಳ ಬೇಡಿಕೆ ಈಡೇರಿಕೆಯ ಭಾಗವಾಗಿ ಮೊದಲ ಕಂತಿನ ಬಸ್‌ಗಳ ಪೂರೈಕೆ ಆರಂಭಿಸಲು ನಮಗೆ ಸಂತಸವಾಗುತ್ತಿದೆ. ಈ ವಿದ್ಯುತ್‌ಚಾಲಿತ ಬಸ್‌ಗಳು ಬೆಂಗಳೂರು ನಗರದಲ್ಲಿ ಹೊಗೆ ಮಾಲಿನ್ಯ ಹೊರಸೂಸುವಿಕೆಯ ಪ್ರಮಾಣ ತಗ್ಗಿಸಲು ಪ್ರಮುಖ ಪಾತ್ರ ನಿರ್ವಹಿಸಲಿವೆ. 87,000 ಮರಗಳನ್ನು ನೆಡುವುದಕ್ಕೆ ಸಮಾನವಾದ ಪ್ರತಿ ವರ್ಷ 14,500 ಟನ್‌ಗಳಷ್ಟು ಕಾರ್ಬನ್ ಡೈಆಕ್ಸೈಡ್ (CO2) ಕಡಿತಗೊಳಿಸಲು ಈ ಬಸ್‌ಗಳು ನೆರವಾಗಲಿವೆ’ ಎಂದು ಹೇಳಿದ್ದಾರೆ.
500 ಕಿ.ಮೀ ಮೈಲೇಜ್, SWITCH EiV 12 ಎಲೆಕ್ಟ್ರಿಕ್ ಬಸ್ ಪರಿಚಯಿಸಿದ ಸ್ವಿಚ್ ಇಂಡಿಯಾ!
‘ಸ್ವಿಚ್ ಇಐವಿ 12 ಬಸ್’ಗಳ ವಿನ್ಯಾಸವನ್ನು ವಿಶಿಷ್ಟ ರೀತಿಯಲ್ಲಿ ರೂಪಿಸಿ ಅಭಿವೃದ್ಧಿಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಸಮಕಾಲೀನ ಮತ್ತು ಭವಿಷ್ಯದ ಅಗತ್ಯ ಅಳವಡಿಸಿಕೊಂಡಿರುವ ಈ ಬಸ್‌ಗಳು ಪ್ರಯಾಣಿಕರಿಗೆ ಸಂತಸದ ಅನುಭವ ಒದಗಿಸಲಿದ್ದು ಪ್ರಯಾಣದ ಸೌಕರ್ಯವನ್ನೂ ಹೆಚ್ಚಿಸಲಿವೆ. 2022ರ ಜೂನ್‌ನಲ್ಲಿ ಭಾರತದಲ್ಲಿ ಪರಿಚಯಿಸಿದ ‘ಸ್ವಿಚ್ ಇಐವಿ 12 ಬಸ್’ಗಳನ್ನು ಜಾಗತಿಕವಾಗಿ 50 ದಶಲಕ್ಷ ಎಲೆಕ್ಟ್ರಿಕ್ ಕಿ.ಮೀಗಳಷ್ಟು ದೂರ ಕ್ರಮಿಸಿದ ಅನುಭವ ಆಧರಿಸಿ ತಯಾರಿಸಲಾಗಿದೆ. ಉನ್ನತಮಟ್ಟದ ದಕ್ಷತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸಲು ಈ ಬಸ್‌ಗಳು ವಿಶಿಷ್ಟ ಬಗೆಯ, ಸುಧಾರಿತ ಮತ್ತು ವಿಶ್ವದರ್ಜೆಯ ವಿದ್ಯುತ್‌ಚಾಲಿತ ಬಸ್‌ಗಳ ವಿನ್ಯಾಸ ಹಾಗೂ ಪರಿಕಲ್ಪನೆ ಒಳಗೊಂಡಿವೆ. ‘ಸ್ವಿಚ್ ಇಐವಿ 12’ ಬಸ್‌ಗಳು ಅಸಾಧಾರಣ ಚಾಲನಾ ಕಾರ್ಯಕ್ಷಮತೆ ಮತ್ತು ದಕ್ಷತೆ ಒದಗಿಸುತ್ತವೆ. ಸ್ವಿಚ್ ಮೊಬಿಲಿಟಿಯ ಸ್ವಾಮ್ಯಕ್ಕೆ ಒಳಪಟ್ಟಿರುವ, ಸಂವಹನ ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಈ ಬಸ್‌ಗಳನ್ನು ತಯಾರಿಸಲಾಗಿದೆ. 'ಸ್ವಿಚ್ ಐಯಾನ್' ತಂತ್ರಜ್ಞಾನವು ವಾಸ್ತವ ಸಮಯದಲ್ಲಿ ದೂರದಿಂದಲೇ ದೋಷ ಪತ್ತೆ ಹಚ್ಚಲಿದ್ದು ನಿರ್ವಹಣೆ ಸೇವೆ ಸಕ್ರಿಯಗೊಳಿಸಲಿದೆ. ಜೊತೆಗೆ ವಿಶ್ವ ದರ್ಜೆಯ ಡಿಜಿಟಲ್ ಬ್ಯಾಟರಿ ನಿರ್ವಹಣಾ ಸಾಧನಗಳನ್ನು ನಿರ್ವಹಿಸಲಿದೆ.
ಭಾರತದ ಮಾರುಕಟ್ಟೆ ಮತ್ತು ಹವಾಮಾನ ಪರಿಸ್ಥಿತಿಗೆ ಸರಿಹೊಂದುವ ರೀತಿಯಲ್ಲಿ ಈ ಬಸ್‌ಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ಈ ಬಸ್‌ಗಳು ಸುಧಾರಿತ ಲಿಥಿಯಂ-ಐಯಾನ್ ಎನ್‌ಎಂಸಿ ಕೆಮಿಸ್ಟ್ರಿಯೊಂದಿಗೆ ಹೊಸ ಪೀಳಿಗೆಯ ಹೆಚ್ಚು ದಕ್ಷತೆಯ ಮಾಡ್ಯುಲರ್ ಬ್ಯಾಟರಿಗಳನ್ನು ಒಳಗೊಂಡಿವೆ. ಈ ಮಾಡ್ಯುಲರ್ ಬ್ಯಾಟರಿಗಳು ಅದೇ ತೂಕದ ಪ್ರತಿ ಬ್ಯಾಟರಿ ಸೆಲ್‌ನ ಸಾಮರ್ಥ್ಯವನ್ನು ವೃದ್ಧಿಗೊಳಿಸಿ ಹೆಚ್ಚು ದೂರ ಕ್ರಮಿಸಲು ನೆರವಾಗುತ್ತವೆ. ಈ ಬಸ್‌ಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ, ಕಂಪನಿಯು ಶೇ 80 ಕ್ಕಿಂತ ಹೆಚ್ಚು ನವೀಕರಿಸಬಹುದಾದ ಶಕ್ತಿ ಬಳಸುವ ಚಾರ್ಜಿಂಗ್ ಸೌಲಭ್ಯಗಳನ್ನೂ ಸಹ ಸ್ಥಾಪಿಸಲಿದೆ.
ಭಾರತದಲ್ಲಿನ ಸ್ವಿಚ್ ಬಸ್‌ಗಳು ಸ್ಥಳೀಯ ರಸ್ತೆಗಳಲ್ಲಿ 9 ದಶಲಕ್ಷ ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದು, 5000 ಟನ್‌ಗಳಿಗಿಂತ ಹೆಚ್ಚು ಕಾರ್ಬನ್ ಡೈಆಕ್ಸೈಡ್ ಅನ್ನು ಉಳಿಸಿವೆ. ಇದು 30,000 ಕ್ಕಿಂತ ಹೆಚ್ಚು ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ, ಸ್ವಿಚ್ ಬ್ರ್ಯಾಂಡ್‌ನ ಉದ್ದೇಶಕ್ಕೆ ಪೂರಕವಾಗಿ ಹೊಸ ಮೈಲುಗಲ್ಲು ಸಾಧಿಸಲಾಗಿದೆ. ಎಲ್ಲರಿಗೂ ಶುದ್ಧ ಇಂಧನದ, ನೆಮ್ಮದಿಯ ಪ್ರಯಾಣ ಸೌಲಭ್ಯ ತಲುಪಿಸುವ ಪರಿಸರ ಸ್ನೇಹಿ ವಾಹನಗಳ ಮೂಲಕ ಬದುಕನ್ನು ಸಮೃದ್ಧಗೊಳಿಸುವುದು ಸ್ವಿಚ್ ಇಂಡಿಯಾದ ಉದ್ದೇಶವಾಗಿದೆ.