ಗಾಂಧಿನಗರ(ಜೂ.13); ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, 115 ಆ್ಯಂಬುಲೆನ್ಸ್ ಆರ್ಡರ್ ಪಡೆದುಕೊಂಡಿದೆ. ಗುಜರಾತ್ ಸರ್ಕಾರ 115 ಆ್ಯಂಬುಲೆನ್ಸ್ ಪೂರೈಸುವಂತೆ ಟಾಟಾಗೆ ಮನವಿ ಮಾಡಿದೆ. ತಕ್ಷಣ ಸ್ಪಂದಿಸಿದ ಟಾಟಾ ಮೋಟಾರ್ಸ್ 22 ಟಾಟಾಂ ವಿಂಗರ್ ಆ್ಯಂಬುಲೆನ್ಸ್ ಗುಜರಾತ್ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಮುಸ್ಲಿಂ ಯುವಕನ ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕರಾದ ರೇಣು
25 ಟಾಟಾ ವಿಂಗರ್ ಆಂಬ್ಯುಲೆನ್ಸ್‍ಗಳನ್ನು ಬೇಸಿಕ್ ಲೈಫ್ ಸಪೋರ್ಟ್‌ನೊಂದಿಗೆ ಸಜ್ಜುಗೊಳಿಸಲಾಗಿದೆ. ರೋಗಿಗಳ ಸಹಾಯಕ್ಕಾಗಿ ನಗರದಲ್ಲಿ ನಿಯೋಜಿಸಲಾಗುವುದು. ಟಾಟಾ ಮೋಟಾರ್ಸ್ ಸರ್ಕಾರಿ ಇ-ಮಾರ್ಕೆಟ್‍ಪ್ಲೇಸ್ ಅಡಿಯಲ್ಲಿ ಆದೇಶಕ್ಕಾಗಿ ಬಿಡ್ ಗೆದ್ದಿದೆ, ಒಪ್ಪಂದದ ಪ್ರಕಾರ ಟಾಟಾ ಮೋಟಾರ್ಸ್ ಉಳಿದ 90 ಆಂಬುಲೆನ್ಸ್ ಶೆಲ್‍ಗಳನ್ನು ಹಂತ ಹಂತವಾಗಿ ಪೂರೈಸಲಿದೆ.
ಟಾಟಾ ವಿಂಗರ್ ಆಂಬ್ಯುಲೆನ್ಸ್ ಅನ್ನು ರೋಗಿಯ ಅಗತ್ಯತೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ವಿಂಗರ್ ಆಂಬ್ಯುಲೆನ್ಸ್ ಆರೋಗ್ಯ ಸಂಸ್ಥೆಗಳಿಗೆ ವಿಶ್ವಾಸಾರ್ಹ ಪಾಲುದಾರ ಎಂದು ಸಾಬೀತಾಗಿದೆ ಮತ್ತು ಅದರ ದಕ್ಷತೆ, ಪರಿಣಾಮಕಾರಿ ವಿನ್ಯಾಸ ಮತ್ತು ಕಾರ್ಯಕ್ಷಮತೆಯ ಪರಿಣಾಮವಾಗಿ ಅಸಂಖ್ಯಾತ ಜೀವಗಳನ್ನು ಉಳಿಸಿದೆ. ಟಾಟಾ ಮೋಟಾರ್ಸ್‍ನ ವಿಭಿನ್ನ ಉಪಯೋಗಗಳಿಗೆ ಗ್ರಾಹಕರ ಅವಶ್ಯಕತೆಗಳ ಸಂಪೂರ್ಣ ತಿಳುವಳಿಕೆ ಮತ್ತು ಈ ಅವಶ್ಯಕತೆಗಳ ಆಧಾರದ ಮೇಲೆ ವಾಹನವನ್ನು ವಿನ್ಯಾಸಗೊಳಿಸುವ ಸಾಮಥ್ರ್ಯಗಳು ಬ್ರಾಂಡ್ ಅನ್ನು ಅದರ ಪ್ರತಿಸ್ಪರ್ಧಿಗಳಿಂದ ಪ್ರತ್ಯೇಕಿಸುತ್ತದೆ. ಟಾಟಾ ಮೋಟಾರ್ಸ್ ದೇಶದ ಆಸ್ಪತ್ರೆಗಳು ಮತ್ತು ಆರೋಗ್ಯ ಸೌಲಭ್ಯಗಳಿಗೆ ಉನ್ನತ ದರ್ಜೆಯ ಆರೋಗ್ಯ ಚಲನಶೀಲತೆ ಪರಿಹಾರಗಳನ್ನು ತರಲು ದೃಢವಾಗಿ ಬದ್ಧವಾಗಿದೆ ಮತ್ತು ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸರ್ಕಾರಗಳನ್ನು ಬೆಂಬಲಿಸುತ್ತದೆ ಎಂದು ಟಾಟಾ ಮೋಟಾರ್ಸ್‍ನ ಎಸ್‍ಸಿವಿ ಪ್ರೊಡಕ್ಟ್ ಲೈನ್‍ನ ಉಪಾಧ್ಯಕ್ಷ ವಿನಯ್ ಪಾಠಕ್ ಹೇಳಿದರು.
ಆ್ಯಂಬುಲೆನ್ಸ್ ಚಾಲಾಯಿಸಿದ ಶಾಸಕಿ ಅಂಜಲಿ
ಟಾಟಾ ಮೋಟಾರ್ಸ್ ವಿಂಗರ್ ಆಂಬ್ಯುಲೆನ್ಸ್ ಅನ್ನು ಬೇಸಿಕ್ ಲೈಫ್ ಸಪೋರ್ಟ್ ಮತ್ತು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಪ್ರಕಾರಗಳು ಸೇರಿದಂತೆ ಎಲ್ಲಾ ರೀತಿಯ ರೋಗಿಗಳನ್ನು ಸಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅಳವಡಿಸಿಕೊಳ್ಳಬಹುದಾಗಿದೆ. ಚಾಲಕನಿಗಾಗಿ ವಿಭಜಕವಿದ್ದು, ಆಂಬ್ಯುಲೆನ್ಸ್ ಅನ್ನು ಕೋವಿಡ್-19ರ ರೋಗಿಗಳ ಸಾಗಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸ್ವತಂತ್ರ ಸಸ್ಪೆನ್ಷನ್‍ನ ಜೊತೆಗೆ, ಇದರ ಮಾಡ್ಯುಲರ್ ಅಂಡರ್‍ಪಿನ್ನಿಂಗ್‍ಗಳು ಮತ್ತು ಮೊನೊಕೊಕ್ ಚಾಸಿಸ್ ಗಳು ಸುಗಮ ಚಾಲನಾ ಅನುಭವವನ್ನು ನೀಡುತ್ತದೆ, ಇದು ರೋಗಿಗಳ ತ್ವರಿತ ಸಾಗಣೆಗೆ ಅತ್ಯಂತ ನಿರ್ಣಾಯಕವಾಗಿದೆ. ಟಾಟಾ ಮೋಟಾರ್ಸ್ ಮ್ಯಾಜಿಕ್ ಎಕ್ಸ್‍ಪ್ರೆಸ್ ಆಂಬ್ಯುಲೆನ್ಸ್, ವಿಂಗರ್ ಆಂಬ್ಯುಲೆನ್ಸ್ ಮತ್ತು ಐP410 ಆಂಬ್ಯುಲೆನ್ಸ್ ನಂತಹ ಡಬಲ್ ಸ್ಟ್ರೆಚರ್ ಸಹಿತ ಆಂಬ್ಯುಲೆನ್ಸ್‍ಗಳನ್ನು ಒದಗಿಸುತ್ತದೆ