ರೆನೋ ಕ್ವಿಡ್, ಡಸ್ಟರ್, ಕಿಗರ್, ಟ್ರೈಬರ್ ಕಾರು ಖರೀದಿ ಮೇಲೆ ಭರ್ಜರಿ ಜೂನ್ ಆಫರ್ಸ್!

By Suvarna News  |  First Published Jun 11, 2021, 10:45 AM IST

ರೆನೋ ಕಂಪನಿಯ ಕಾರುಗಳನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಇದು ಖರೀದಿಗೆ ಸೂಕ್ತ ಕಾಲ. ಕಂಪನಿಯ ಕ್ವಿಡ್, ಟ್ರೈಬರ್, ಕಿಗರ್ ಮತ್ತು ಡಸ್ಟರ್ ಖರೀದಿ ಮೇಲೆ ಜೂನ್ ತಿಂಗಳ ವಿಶೇಷ ಆಫರ್ ಘೋಷಿಸಲಾಗಿದೆ. ನೀವು 75 ಸಾವಿರ ರೂಪಾಯಿವರೆಗೂ ಲಾಭ ಮಾಡಿಕೊಳ್ಳಬಹುದಾಗಿದೆ.


ಫ್ರಾನ್ಸ್ ಮೂಲದ ಪ್ರಖ್ಯಾತ ಕಾರು ಉತ್ಪಾದಕ ಕಂಪನಿಯಾಗಿರುವ ರೆನೋ ಭಾರತದ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಕಂಪನಿಯು ಎಂಟ್ರಿ ಲೆವಲ್ ಕಾರ್ ಕ್ವಿಡ್ ಮೂಲಕ ಜಬರ್ದಸ್ತ್ ಮಾರುಕಟ್ಟೆ ಪಾಲನ್ನು ಪಡೆದುಕೊಂಡರೆ, ಇದೀಗ ಕಿಗರ್ ಮೂಲಕ ಮತ್ತೊಂದು ಹಂತಕ್ಕೆ ತಲುಪಿದೆ. ತನ್ನ ಕಾರುಗಳನ್ನು ಇನ್ನಷ್ಟ ಗ್ರಾಹಕರಿಗೆ ತಲುಪಿಸುವ ಹಿನ್ನೆಲೆಯಲ್ಲಿ ಅದು ಜೂನ್‌ ತಿಂಗಳಲ್ಲಿ ವಿಶೇಷ ಆಫರ್‌ಗಳನ್ನು ಘೋಷಿಸಿದೆ.

ರೆನೋ ಇಂಡಿಯಾ ಸದ್ಯಕ್ಕೆ ಭಾರತದಲ್ಲಿ ಕ್ವಿಡ್, ಟ್ರೈಬರ್, ಕಿಗರ್ ಮತ್ತು ಡಸ್ಟರ್ ಎಂಬ ನಾಲ್ಕು ಬ್ರ್ಯಾಂಡ್‌ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಜೂನ್‌ ತಿಂಗಳಲ್ಲಿ ಈ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ 75 ಸಾವಿರ ರೂಪಾಯಿವರೆಗೂ ಪ್ರಯೋಜನ ಒದಗಿಸಲಿದೆ.

Latest Videos

2030ರ ಹೊತ್ತಿಗೆ ಫಿಯೆಟ್‌ನಿಂದ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ

ನಿವೇನಾದರೂ ಕ್ವಿಡ್ ಕಾರ್ ಖರೀದಿಗೆ ಯೋಜನೆ ರೂಪಿಸಿದ್ದರೆ ಈಗ ಖರೀದಿಗೆ  ಸೂಕ್ತ ಸಮಯವಾಗಿದೆ. ಯಾಕೆಂದರೆ, ಕಂಪನಿಯು ಕ್ವಿಡ್ ಖರೀದಿ ಮೇಲೆ 52 ಸಾವಿರ ರೂಪಾಯಿವರೆಗೂ ಆಫರ್ ಘೋಷಿಸಿದೆ. ಇದರಲ್ಲಿ 10 ಸಾವಿರವರೆಗೂ ಕಾರ್ಪೊರೇಟ್ ಡಿಸ್ಕೌಂಟ್ ಅಥವಾ ಗ್ರಾಮೀಣ ಭಾಗದ ಗ್ರಾಹಕರಿಗೆ ವಿಶೇಷ ಆಫರ್ ಸಿಗಲಿದೆ. 

ಈ ಕ್ವಿಡ್ ಕಾರ್ 3,32,00 ರೂಪಾಯಿಯಿಂದ 5,48,000 ರೂ.ವರೆಗೂ(ದಿಲ್ಲಿ ಎಕ್ಸ್ ಶೋರೂಮ್) ಸಿಗಲಿದೆ. ಈ ಕಾರ್ 0.8 ಲೀ ಮತ್ತು 1 ಲೀ ಎಂಜಿನ್‌ಲ್ಲಿ ದೊರೆಯುತ್ತದೆ. 5 ಸ್ಪೀಡ್ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಗೇರ್ ಹೊಂದಿದೆ. ಭಾರತದ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಕಾರ್ ಸೆಗ್ಮೆಂಟ್‌ನಲ್ಲಿ ಈ ಕಾರ್ ಭಾರೀ ಸದ್ದು ಮಾಡಿದೆ.

ಇನ್ನೂ ರೆನೋ ಟ್ರೈಬರ್ ಖರೀದಿ ಮೇಲೂ ಗ್ರಾಹಕರಿಗೆ ಸುಮಾರು 45 ಸಾವಿರ ರೂಪಾಯಿವರೆಗೂ ಲಾಭ ಸಿಗಲಿದೆ. 10 ಸಾವಿರ ರೂ.ವರೆಗೆ ಕಾರ್ಪೊ    ರೇಟ್ ಟ್ಯಾಕ್ಸ್ ಅಥವಾ ಗ್ರಾಮೀಣ ಗ್ರಾಹಕರಿಗೆ ನೀಡುವ ವಿಶೇಷ ಆಫರ್ ಕೂಡ ಇದರಲ್ಲಿ ಸೇರಿದೆ. ಇತ್ತೀಚೆಗಷ್ಟೇ ಈ ಟ್ರೈಬರ್‌ಗೆ ನಾಲ್ಕು ಸೇಫ್ಟಿ ಕ್ರ್ಯಾಸಿಂಗ್ ಸ್ಟಾರ್ ದೊರೆತಿದೆ. ಸುರಕ್ಷತೆಯ ದೃಷ್ಟಿಯಿಂದ ಇದು ಉತ್ತಮ ಕಾರ್ ಆಗಿದೆ. ಆರ್ ಎಕ್ಸ್ ಇ ವೆರಿಯೆಂಟ್‌ಗೆ ಮಾತ್ರವೇ ಲಾಯಲ್ಟಿ ಬೆನೆಫಿಟ್ 10 ಸಾವಿರ ಕೂಡ ಈ ಆಫರ್‌ನಲ್ಲಿದೆ.

ಇದು ಜಗತ್ತಿನ ಅತ್ಯಂತ ದುಬಾರಿ ಪಾರ್ಕಿಂಗ್ ಲಾಟ್. ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ..!

ಹೊಸದಾಗಿ ಬಿಡುಗಡೆಯಾಗಿರುವ ರೆನೋ ಕಿಗರ್‌ಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಕಾರ್ ಖರೀದಿ ಮೇಲೆ ಗ್ರಾಹಕರಿಗೆ ಒಂದು ವರ್ಷದವರೆಗೆ ಲಾಯಲ್ಟಿ ಬೆನೆಫಿಟ್ ಅಥವಾ  1 ಲಕ್ಷ ಕಿ.ಮೀ. ವಿಸ್ತರಿತ ವಾರಂಟಿ ದೊರೆಯಲಿದೆ. ಇದರ ಜೊತೆಗೆ 10 ಸಾವಿರ ರೂಪಾಯಿವರೆಗೂ ಕಾರ್ಪೋರೆಟ್ ತೆರಿಗೆ ಲಾಭ ಸಿಗಲಿದೆ. 

ಗ್ರಾಮೀಣ ಭಾಗದ ಗ್ರಾಹಕರಿಗೆ 5000 ಆಫರ್ ಸಿಗಲಿದೆ.  ಅಂದರೆ, ರೈತರು, ಗ್ರಾಪಂ ಸದಸ್ಯರು, ಅಧ್ಯಕ್ಷರಿಗೆ ಮಾತ್ರವ ಈ ಆಫರ್ ಅನ್ವಯವಾಗಲಿದೆ. ರೆನೋ ಕೈಗರ್  ಬೆಲೆ 5,50,000 ರೂ.ನಿಂದ 7,95,200 ರೂ.ವರೆಗೂ ಇದೆ(ಎಕ್ಸ್ ದಿಲ್ಲಿ ಶೋರೂಮ್ ಬೆಲೆ).

ರೆನೋ ಕಂಪನಿಯ ಭಾರಿ ಜನಪ್ರಿಯವಾಗಿದ್ದ ಎಸ್‌ಯುವಿ ಡಸ್ಟರ್ ಖರೀದಿ ಮೇಲೂ ಆಫರ್ ಇದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಎಸ್‌ಯುವಿ ಖರೀದಿ ಮೇಲೆ 60 ಸಾವಿರ ಹಾಗೂ 1.3 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಖರೀದಿ ಮೇಲೆ 75 ಸಾವಿರ ರೂಪಾಯಿವರೆಗೂ ಲಾಭ ಸಿಗಲಿದೆ. ಈ ಎರಡೂ ಎಂಜಿನ್ ಮಾದರಿಯ ಕಾರು ಖರೀದಿಯ ಆಫರ್‌ನಲ್ಲಿ 30 ಸಾವಿರ ರೂ.ವರೆಗಿನ ಕಾರ್ಪೊರೇಟ್  ಡಿಸ್ಕೌಂಟ್ ಅಥವಾ ಗ್ರಾಮೀಣ ಭಾಗದ ಗ್ರಾಹಕರಿಗೆ ವಿಶೇಷ ಆಫರ್ ಸಿಗಲಿದೆ. 

ರೆನೋ ಟ್ರೈಬರ್‌ ಎಷ್ಟು ಸುರಕ್ಷಿತ? ಗ್ಲೋಬಲ್ ಎನ್‌ಸಿಎಪಿ ಎಷ್ಟು ಸೇಫ್ಟಿ ರೇಟಿಂಗ್ ನೀಡಿದೆ?

ಈ ಆಫರ್‌ನಲ್ಲಿ 15 ಸಾವಿರ ರೂ.ವರೆಗೆ ಲಾಯಲ್ಟಿ ಬೆನೆಫಿಟ್ಸ್ ಸೇರಿದೆ. ಡಸ್ಟರ್  ಎಸ್‌ಯುವಿ ಬೆಲೆ 9,86,050 ರೂ.ನಿಂದ ಆರಂಭವಾಗಿ 14,25,050 ರೂ.ವರೆಗೂ ಇದೆ. ಇದು ದಿಲ್ಲಿ ಎಕ್ಸ್ ಶೋರೂಮ್ ಬೆಲೆಯಾಗಿದೆ.

click me!