ಜಗತ್ತಿನ ಫೈನಾನ್ಷಿಯಲ್ ಹಬ್ ಎನಿಸಿಕೊಂಡಿರುವ ಹಾಂಕಾಂಗ್ ನಗರದಲ್ಲಿ ಮನೆಯನ್ನಾಗಲೀ, ಪಾರ್ಕಿಂಗ್ ಜಾಗವನ್ನಾಗಲೀ ಖರೀದಿಸುವುದು ದುಬಾರಿ ಕೆಲಸವೇ ಸರಿ. ಪಾರ್ಕಿಂಗ್ ಲಾಟ್ ಅನ್ನು ಸರಿ ಸುಮಾರು 9.50 ಕೋಟಿ ರೂ.(1.3 ಮಿಲಿಯನ್ ಡಾಲರ್) ಕೊಟ್ಟು ಖರೀದಿಸಲಾಗಿದೆ ಎಂದರೆ ನಂಬುತ್ತೀರಾ? ಇಷ್ಟು ಮೊತ್ತದಲ್ಲಿ ಏನೇನು ಖರೀದಿಸಬಹುದಿತ್ತು ಯೋಚನೆ ಮಾಡಿ!
ಯಾವುದೇ ನಗರದ ರೆಸಿಡೆನ್ಷಿಯಲ್ ಪ್ರದೇಶದಲ್ಲಿ, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಕಾರ್ ಪಾರ್ಕಿಂಗ್ ಜಾಗವನ್ನು ಎಷ್ಟು ದೊಡ್ಡು ಕೊಟ್ಟು ಖರೀದಿಸಬಹುದು? ಭಾರತದಲ್ಲಾದರೆ ಒಂದು ಲಕ್ಷದಿಂದ ಎರಡ್ಮೂರು ಲಕ್ಷ ರೂಪಾಯಿವರೆಗೂ ಕೊಡಬಹುದೇನೋ, ವಿದೇಶಗಳಲ್ಲಾದರೆ ಇನ್ನೂ ಒಂದಿಷ್ಟು ತುಟ್ಟಿಯಾಗಬಹುದು!
ಆದರೆ, 1.3 ಮಿಲಿಯನ್ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 9,50,91,165 ರೂಪಾಯಿ(9.50 ಕೋಟಿ ರೂ.) ಪಾರ್ಕಿಂಗ್ ಲಾಟ್ ಮಾರಾಟ ಮಾಡಲಾಗಿದೆ! ಕೇವಲ ಪಾರ್ಕಿಂಗ್ ಲಾಟ್ ಜಾಗಕ್ಕೆ ಯಾರಾದರೂ ಇಷ್ಟೊಂದು ದುಡ್ಡುಕೊಟ್ಟು ಖರೀದಿಸುತ್ತಾರೆ ಎಂಬುದು ನಿಮ್ಮ ಪ್ರಶ್ನೆಯಾಗಿರಬಹುದು. ಆದರೆ, ಇದು ಕೇಳಲು ವಿಚಿತ್ರ ಎನಿಸಿದರೂ ನಿಜ. ಈ ಬಗ್ಗೆ ಬಿಬಿಸಿ ನ್ಯೂಸ್ ಸೇರಿದಂತೆ ಅನೇಕ ಸುದ್ದಿತಾಣಗಳು ವರದಿ ಮಾಡಿವೆ.
ಮಹಾರಾಷ್ಟ್ರ ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ರಾಜ್ಯವಾಗುತ್ತಾ?
ಜಗತ್ತಿನ ಫೈನಾನ್ಷಿಯಲ್ ಹಬ್ ಎನಿಸಿಕೊಂಡಿರುವ ಹಾಂಕಾಂಗ್‌ನಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಪಾರ್ಕಿಂಗ್ ಲಾಟ್ ಅನ್ನು ಮಾರಾಟ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ್‌ಗೆ ಲಾಟ್ ಪಡೆಯುವುದು ಕಷ್ಟಕರ ನಿಜವೇ ಆದರೂ ಇಷ್ಟೊಂದು ದುಬಾರಿಯಾದ ಪಾರ್ಕಿಂಗ್ ಜಾಗ ಇರಲು ಸಾಧ್ಯವೇ? ಯೋಚನೆ ಮಾಡಿ, ಹಾಂಕಾಂಗ್‌ನಲ್ಲಿರುವ ಈ ಪಾರ್ಕಿಂಗ್ ಲಾಟ್‌ಗೆ ನೀಡಿದ ಮೊತ್ತದಲ್ಲಿ ನಮ್ಮ ಬೆಂಗಳೂರಲ್ಲಿ ಎಷ್ಟು ಲಾಟ್‌ಗಳನ್ನು ಖರೀದಿಸಬಹುದಿತ್ತು?!
ಹಾಂಕಾಂಗ್‌ನ ಅಲ್ಟ್ರಾ ಲಕ್ಷುರಿ ಪ್ರದೇಶವಾಗಿರುವ ದಿ ಪೀಕ್ ರೆಸಿಡೆನ್ಷಿಯಲ್ ಜಾಗದಲ್ಲಿನ ಪಾರ್ಕಿಂಗ್ ಲಾಟ್ ಇಷ್ಟೊಂದು ದುಬಾರಿ ಪಾರ್ಕಿಂಗ್ ಜಾಗ ಎನಿಸಿಕೊಂಡಿದೆ. ಈ ಪ್ರದೇಶದಲ್ಲಿ ಪಾರ್ಕಿಂಗ್ ಜಾಗವನ್ನು 1.3 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿ ಇಡೀ ವಿಶ್ವದ ಗಮನ ಸೆಳೆದಿದೆ.
ಇಂಟರೆಸ್ಟಿಂಗ್ ವಿಷಯ ಏನೆಂದರೆ, ಹಾಂಕಾಂಗ್‌ನ ಪಾರ್ಕಿಂಗ್ ಲಾಟ್ ಖರೀದಿಗೆ ವಿನಿಯೋಗಿಸಲಾದ ಮೊತ್ತದಲ್ಲಿ ಎಷ್ಟೆಲ್ಲ ಸೂಪರ್ ಕಾರುಗಳನ್ನು ಖರೀದಿಸಬಹುದು? ಅತ್ಯಾಧುನಿಕ ಮತ್ತು ಐಷಾರಾಮಿ ಕಾರ್‌ಗಳು ಎನಿಸಿಕೊಂಡಿರುವ ಪಗಾನಿ ಹುಯೆರಾ, 2022 ಪೋರ್ಷೆ 911 ಜಿಟಿ 3, ಪೋರ್ಷೆ 918 ಸ್ಪೈಡರ್‌ನಂಥ ವಾಹನಗಳನ್ನು ಪಾರ್ಕಿಂಗ್ ಖರೀದಿಗೆ ನೀಡಲಾದ ಮೊತ್ತದಲ್ಲಿ ಅಥವಾ ಅದಕ್ಕಿಂತ ಕಡಿಮೆ ಮೊತ್ತದಲ್ಲಿ ಖರೀದಿಸಬುಹದು. ‘ಮೂಗಿಗಿಂತ ಮೂಗುತಿ ಭಾರ’ ಎನ್ನುತ್ತಾರಲ್ಲ, ಅದು ಇದಕ್ಕೆ ಇರಬಹುದು!
5 ಡೋರ್ ಮಹಿಂದ್ರಾ ಥಾರ್ ಪಕ್ಕಾ, ಆದರೆ ಯಾವಾಗ ಬಿಡುಗಡೆ?
ಇಷ್ಟೆಲ್ಲ ಓದಿದ ಮೇಲೆ ಹಾಂಕಾಂಗ್‍ನಲ್ಲಿ ಪಾರ್ಕಿಂಗ್ ಲಾಟ್ ಇಷ್ಟೆಕೆ ದುಬಾರಿ ಎಂಬ ಪ್ರಶ್ನೆ ಏಳುತ್ತದೆ. ಹಾಂಕಾಂಗ್ ಅತ್ಯಂತ ಜನನಿಬಿಡ ನಗರವಾಗಿದೆ. ಈ ನಗರದಲ್ಲಿ ಖಾಲಿ ಜಾಗವನ್ನು ಪಡೆಯುವುದು ಎಂದರೆ ಭಾರಿ ದುಸ್ತರ. ಇನ್ನು ಅತ್ಯಾಧುನಿಕ ರೆಸಿಡೆನ್ಷಿಯಲ್ ಪ್ರದೇಶಗಳಲ್ಲಿ ಮನೆಗೆ ಜಾಗ ಅಥವಾ ಕಾರ್ ಪಾರ್ಕಿಂಗ್ ಲಾಟ್ ಕೊಂಡುಕೊಳ್ಳುವುದು ಭಾರೀ ದುಸ್ತರ ಎನಿಸಿಕೊಳ್ಳುತ್ತದೆ. ಹಾಂಕಾಂಗ್ ನಗರದ ವಿಕ್ಟೋರಿಯಾ ಬಂದರಿನ ಮೇಲಿರುವ ಮೌಂಟ್ ನಿಕೋಲ್ಸನ್ ಡೆವಲಪ್ಮೆಂಟ್, ಏಷ್ಯಾದ ಕೆಲವು ಅಮೂಲ್ಯವಾದ ಮನೆಗಳನ್ನು ಹೊಂದಿದೆ ಎಂಬುದನ್ನು ಗಮನಿಸಬಹುದು.
ಹಾಂಕಾಂಗ್ ಅತ್ಯಂತ ಜನನಿಬಿಡ ನಗರ ಮಾತ್ರವಲ್ಲದೇ ಅತ್ಯಂತ ದುಬಾರಿ ನಗರವೂ ಹೌದು. ಇಲ್ಲಿನ ಜೀವನ ಮಟ್ಟ ತುಂಬ ಕಾಸ್ಟ್ಲೀಯೂ ಆಗಿದೆ. ನಗರದಲ್ಲಿ ವಾಸಿಸಲು ಮನೆ ಅಥವಾ ಕಾರ್ ಪಾರ್ಕಿಂಗ್‌ಗೆ ಜಾಗ ಪಡೆಯುಲು ದೊಡ್ಡ ಮೊತ್ತದ ಹಣವನ್ನು ತೆರಲೇಬೇಕಾಗುತ್ತದೆ. ಹಾಗಾಗಿ, ಇಷ್ಟೊಂದು ದೊಡ್ಡ ಮೊತ್ತಕ್ಕೆ ಪಾರ್ಕಿಂಗ್ ಲಾಟ್ ಮಾರಾಟವಾಗಿರುವುದು ಅಲ್ಲಿಯವರೆಗೆ ವಿಶೇಷ ಏನೂ ಅನಿಸಲಾರದು.
ಮತ್ತೊಂದ ಸಂಗತಿ ಏನೆಂದರೆ, ಇದೇ ಹಾಂಕಾಂಗ್‌ನಲ್ಲಿ 2019ರಲ್ಲೂ 980,000 ಡಾಲರ್‌ಗೆ ಪಾರ್ಕಿಂಗ್ ಜಾಗ ಮಾರಾಟವಾಗಿತ್ತು. ಆಗಲೂ ಭಾರೀ ದೊಡ್ಡ ಸುದ್ದಿಯಾಗಿತ್ತು. ಹಾಂಕಾಂಗ್‌ನಲ್ಲಿ ಪಾರ್ಕಿಂಗ್ ಜಾಗ ಖರೀದಿಸುವ ಮೊತ್ತದಲ್ಲಿ ಭಾರತದಲ್ಲಿ ಹತ್ತಾರು ಮನೆಗಳನ್ನು ಕಟ್ಟಬಹುದು. ಇಲ್ಲವೇ ಐಷಾರಾಮಿ ನಾಲ್ಕೈದು ಫ್ಲ್ಯಾಟ್‌ಗಳನ್ನೇ ಖರೀದಿಸಬದಿತ್ತು. ಗಂಟೆಗೆ ನೂರೋ, ಇನ್ನೋರೋ ಪಾರ್ಕಿಂಗ್ ಶುಲ್ಕ ಕಟ್ಟುವ ನಮಗೆ ಹಾಂಕಾಂಗ್ ಪಾರ್ಕಿಂಗ್ ಜಾಗದ ಬೆಲೆ ನೆನಪಿಸಿಕೊಂಡರೆ ನಿದ್ದೆನೇ ಬರಲಿಕ್ಕಿಲ್ಲ ಅಲ್ಲವೇ?
ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ