2025ರ ಹೊತ್ತಿಗೆ ರಾಜ್ಯದ ಒಟ್ಟು ವಾಹನಗಳ ಪೈಕಿ ಶೇ.10ರಷ್ಟು ಎಲೆಕ್ಟ್ರಿಕ್ ವಾಹನಗಳು ನೋಂದಣಿ ಮಾಡುವ ಗುರಿಯನ್ನು ಹಾಕಿಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ದೇಶದ ಪ್ರಮುಖ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ರಾಜ್ಯವಾಗುವ ಉದ್ದೇಶವನ್ನು ಹೊಂದಿದೆ. ಈ ಬಗ್ಗೆ ಇವಿ ನೀತಿಯನ್ನು ಮರುರೂಪಿಸುತ್ತಿದೆ ಮಹಾರಾಷ್ಟ್ರ ಸರ್ಕಾರ.
ಮುಂದಿನ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಹೊಸದಾಗಿ ನೋಂದಣಿಯಾಗುವ ಒಟ್ಟು ವಾಹನಗಳ ಪೈಕಿ ಕನಿಷ್ಠ ಶೇ.10ರಷ್ಟಾದರೂ ಎಲೆಕ್ಟ್ರಿಕ್ ವಾಹನಗಳು ಇರುವಂತೆ ನೋಡಿಕೊಳ್ಳುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ.
ಇತ್ತೀಚೆಗೆ ಕ್ಲೈಮೆಟ್ ವಾಯ್ಸಸ್ ವರ್ಚುವಲ್ ಆಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯ ಸಾರಿಗೆ ಕಾರ್ಯದರ್ಶಿ ಆಶೀಷ್ ಕುಮಾರ್ ಸಿಂಗ್ ಈ ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.
ಲಾಭ ದಾಖಲಿಸಿದ ಮಹಿಂದ್ರಾ, 2026ರ ಹೊತ್ತಿಗೆ 23 ಹೊಸ ವಾಹನ
ಈಗ ಚಾಲ್ತಿಯಲ್ಲಿರುವ ಎಲೆಕ್ಟ್ರಿಕ್ ವೆಹಿಕಲ್(ಇವಿ) ನೀತಿಯನ್ನು ಮರು ರೂಪಿಸುವ ಸಂಬಂಧ ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮಹಾರಾಷ್ಟ್ರವು ದೇಶದ ಪ್ರಮುಖ ಬ್ಯಾಟರಿ ಚಾಲಿತ ವಾಹನಗಳ ಉತ್ಪಾದಕ ರಾಜ್ಯವಾಗಲು ಉದ್ದೇಶಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿದ್ಯುನ್ಮಾನ ವಾಹನ ನೀತಿ(ಇವಿ) ಮರು ರೂಪಿಸುವ ಕೆಲಸದ ಅಂತಿಮ ಹಂತದಲ್ಲಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲರ ಜೊತೆಗೆ ಸಾರಿಗೆ ಇಲಾಖೆಯು ಚರ್ಚೆ ನಡೆಸಿದೆ. ಹಾಗಿದ್ದಾಗ್ಯೂ ನಾವು ಈಗಲೂ ಹೊಸ ಹೊಸ ಸಲಹೆ ಸೂಚನೆಗಳನ್ನು ಈ ಸಂಬಂಧ ಪಡೆಯಲು ಮುಕ್ತರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇವಿ ಪಾಲಿಸಿ-2021 ಕರಡಿನ ಮಾಹಿತಿ ನೀಡಿದ ಟ್ರಾನ್ಸ್‌ಪೋರ್ಟ್ ಕಮಿಷನರ್ ಅವಿನಾಶ್ ಧಾಕಣೆ, ಮುಂಬೈ, ಪುಣೆ, ನಾಗ್ಪುರ, ನಾಸಿಕ್ ಮತ್ತು ಔರಂಗಾಬಾದ್ ನರಗಳನ್ನು ಅಂತರ್-ನಗರ ಸಾರ್ವಜನಿಕ ಸಾರಿಗೆಯ 25 ಪ್ರತಿಶತದಷ್ಟು ಎಲೆಕ್ಟ್ರಿಕ್ ವಾಹನಗಳ ಇರುವಂತೆ ನೋಡಿಕೊಳ್ಳುವ ಗುರಿ ಇದೆ ಮತ್ತು 2025ರ ಹೊತ್ತಿಗೆ ಈ ಗುರಿಯನ್ನು ಸಾಧಿಸುವ ಯೋಜನೆಯನ್ನು ಸರ್ಕಾರ ಹಾಕಿಕೊಂಡಿದೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸ್ಟೇಟ್ ರೋಡ್ ಟ್ರಾನ್ಸ್‌ಫೋರ್ಟ್ ಕಾರ್ಪೊರೇಷನ್‌ನಲ್ಲಿರುವ ಒಟ್ಟು ಬಸ್‌ಗಳ ಪೈಕಿ ಶೇ.15ರಷ್ಟು ಬಸ್‌ಗಳನ್ನು ವಿದ್ಯುನ್ಮಾನ ಅಂತರ್-ನಗರೀಯ ಬಸ್‌ಗಳನ್ನಾಗಿ ಪರಿವರ್ತಿಸಲಿದೆ. ಸದ್ಯ ರಾಜ್ಯದಲ್ಲಿ 15,000 ಬಸ್‌ಗಳಿವೆ ಎಂದು ಕಮಿಷನರ್ ತಿಳಿಸಿದರು. ರಾಜ್ಯದಲ್ಲಿ ಈಗ ನೋಂದಣಿಯಾಗಿರುವ ವಾಹನಗಳ ಪೈಕಿ 32 ಸಾವಿರ ವಾಹನಗಳು ಎಲೆಕ್ಟ್ರಿಕ್ ವಾಹನಗಳಾಗಿದ್ದು, ಇವುದ ಬೇರೆ ಬೇರೆ ವಿಭಾಗದಲ್ಲಿ ನೋಂದಣಿಯಾಗಿವೆ ಎಂದು ತಿಳಿಸಿದರು.
ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ
ನಿರ್ಮಾಣ ಹಂತದಲ್ಲಿರುವ ಮುಂಬೈ-ನಾಗ್ಪುರ್ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇ, ಮುಂಬೈ-ನಾಸಿಕ್ ಮತ್ತು ನಾಸಿಕ್-ಪುಣೆ ಹೈವೇಗಳನ್ನು 2025ರ ಹೊತ್ತಿಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಅನುಕೂಲಕರವಾಗಿರುವ ರೀತಿಯಲ್ಲಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರದ ಸರ್ಕಾರವು ಈ ವಿದ್ಯುನ್ಮಾನ ವಾಹನಗಳ ನೀತಿಯ ಜತೆಗೆ, ಐಯಾನ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ವೇಸ್ಟೇಜ್ ಅನ್ನು ಮರು ಬಳಸುವ ಬಗೆಗಿನ ನಿಯಮಗಳನ್ನು ರೂಪಿಸಲು ಮುಂದಾಗಿದೆ ಎಂದು ಮಹಾರಾಷ್ಟ್ರ ಪಲೂಷನ್ ಕಂಟ್ರೋಲ್ ಬೋರ್ಡ್‌ನ ಮುಖ್ಯಸ್ಥ ಸುಧೀರ್ ಶ್ರೀವತ್ಸ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಬಳಕೆಗೆ ಹಲವು ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಜೊತೆಗೆ ತಮ್ಮ ರಾಜ್ಯಗಳಿಗೆ ಸಂಬಂಧಿಸಿದಂತೆ ಎಲೆಕ್ಟ್ರಿಕ್ ವೆಹಿಕಲ್ ನೀತಿಯನ್ನು ಜಾರಿಗೊಳಿಸುತ್ತಿವೆ.
ತಿಂಗಳ ಹಿಂದೆ ಒಡಿಶಾ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳ ಖರೀದಿ ಮೇಲೆ ಒಂದು ಲಕ್ಷ ರೂಪಾಯಿ ಸಬ್ಸಿಡಿ ನೀಡುವ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಡಿಶಾ ಸರ್ಕಾರವು ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿದ್ದು, ಎಲೆಕ್ಟ್ರಿಕ್ ವಾಹನ ನೀತಿಯ ಪ್ರಕಾರ, ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ಶೇ.15ರಷ್ಟು ಆಫರ್‌ಗಳು ದೊರೆಯಲಿವೆ. ಇದರ ಜೊತೆಗೆ 2025ರ ಹೊತ್ತಿಗೆ ಸರ್ಕಾರದ ಮಟ್ಟದಲ್ಲಿ ಶೇ.20ರಷ್ಟು ಬ್ಯಾಟರಿ ಚಾಲಿತ ವಾಹನಗಳನ್ನು ಅಳವಡಿಸಿಕೊಳ್ಳುವ ಗುರಿಯನ್ನು ಹಾಕಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!
ಒಡಿಶಾ ಸರ್ಕಾರ ರೂಪಿಸಿರುವ ನೀತಿಯ ಪ್ರಕಾರ, ಬ್ಯಾಟರಿ ಚಾಲಿತ ತ್ರಿಚಕ್ರವಾಹನಗಳ ಖರೀದಿ ಮೇಲೆ ಗರಿಷ್ಠ 12,000 ರೂಪ. ದ್ವಿಚಕ್ರ ವಾಹನಗಳ ಖರೀದಿ ಮೇಲೆ 5 ಸಾವಿರ ರೂ. ಮತ್ತು ನಾಲ್ಕು ಚಕ್ರವಾಹನಗಳ ಖರೀದಿ ಮೇಲೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೂ ಸಬ್ಸಿಡಿ ದೊರೆಯಲಿದೆ.