ಬಿಎಸ್‌ಎ ಗೋಲ್ಡ್ ಸ್ಟಾರ್ 650 ಬೈಕ್ ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

ಬಿಎಸ್‌ಎ ಗೋಲ್ಡ್‌ ಸ್ಟಾರ್‌ 650 ಬೈಕ್ ಭಾರತದಲ್ಲಿ 2.99 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಈ ಬೈಕ್ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್‌ಗೆ ಪೈಪೋಟಿ ನೀಡಲಿದೆ. ಐದು ಬಣ್ಣಗಳಲ್ಲಿ ಲಭ್ಯವಿರುವ ಈ ಬೈಕ್ ವಿಂಟೇಜ್‌ ಲುಕ್ ಹೊಂದಿದೆ.


ನವದೆಹಲಿ (ಆ.15): ಬರ್ಮಿಂಗ್‌ಹ್ಯಾಂ ಸ್ಮಾಲ್‌ ಆರ್ಮ್ಸ್‌ ಕಂಪನಿ ಲಿಮಿಟೆಡ್‌ ಫೇಮಸ್‌ ಆಗಿ ಬಿಎಸ್‌ಎ ಎಂದು ಗುರುತಿಸಿಕೊಂಡಿರುವ ಮೋಟಾರ್‌ಸೈಕಲ್‌ ಬ್ರ್ಯಾಂಡ್‌ ಭಾರತದಲ್ಲಿ ರಾಯಲ್‌ ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ಗೆ ಟಕ್ಕರ್‌ ನೀಡುವಂಥ ಬೈಕ್‌ ಅನ್ನು ಅನಾವರಣ ಮಾಡಿದೆ. ಬಿಎಸ್‌ಎ ಗೋಲ್ಡ್‌ ಸ್ಟಾರ್‌ 650 ಅನ್ನು ಭಾರತೀಯ ಮಾರುಕಟ್ಟೆಗೆ 2.99 ಲಕ್ಷ ರೂಪಾಯಿ ಎಕ್ಸ್‌ ಶೋ ರೂಮ್‌ ಬೆಲೆಯಲ್ಲಿ ಅನಾವರಣ ಮಾಡಲಾಗಿದೆ. ಈ ಅನಾವರಣದೊಂದಿಗೆ ಬ್ರಿಟನ್‌ನ ಮೋಟಾರ್‌ಸೈಕಲ್‌ ಬ್ರ್ಯಾಂಡ್‌ ತನ್ನ ಆಧುನಿಕ ಮಾದರಿಯ ರೆಟ್ರೋ ಮೋಟಾರ್‌ಸೈಕಲ್‌ ವರ್ಗಕ್ಕೆ ಮರಳಿ ಎಂಟ್ರಿಯಾಗಿದೆ. ಇಡೀ ಬೈಕ್‌ ಭಾರತದಲ್ಲಿಯೇ ಜೋಡಣೆಯಾಗಿದ್ದು, ಐದು ಬಣ್ಣಗಳಲ್ಲಿ ಲಭ್ಯವಿದೆ. ಮೋಟಾರ್‌ಸೈಕಲ್‌ಅನ್ನು ಬಿಡುಗಡೆ ಮಾಡುವ ಸಮಯದಲ್ಲಿ ಮಾತನಾಡಿದ ಮಹೀಂದ್ರಾ & ಮಹೀಂದ್ರಾದ ಅಧ್ಯಕ್ಷ ಆನಂದ್‌ ಮಹೀಂದ್ರಾ, 'ಬಿಎಸ್‌ಎಯಂತ ಐಕಾನಿಕ್‌ ಬ್ರ್ಯಾಂಡ್‌ಗಳ ಪುನರುಜ್ಜೀವನಗೊಳಿಸುವುದು ನಮ್ಮ ಕೆಲಸವಾಗಿದೆ. ಬಿಎಸ್‌ಎ ಬೈಕ್‌ಗಳ ಸ್ಪಿರಿಟ್‌, ಹೊಸ ಮಾದರಿಯ ಗೋಲ್ಡ್‌ ಸ್ಟಾರ್‌ 650ಯಲ್ಲಿ ಅಚ್ಚಾಗಿದೆ' ಎಂದು ತಿಳಿಸಿದ್ದಾರೆ.

ಬಿಎಸ್‌ಎ ಗೋಲ್ಡ್‌ ಸ್ಟಾರ್‌ 650 ಬೈಕ್‌ನ ಬೆಲೆಗಳು ಬಣ್ಣಗಳ ಆಧಾರದಲ್ಲಿ ಬದಲಾಗುತ್ತವೆ. ಇನ್‌ಸಿಗ್ನಿಯಾ ರೆಡ್‌ ಮತ್ತು ಹೈಲ್ಯಾಂಡ್‌ ಗ್ರೀನ್‌ ಬಣ್ಣಗಳಲ್ಲಿ ಲಭ್ಯವಿರುವ ಬೈಕ್‌ಗಳಿಗೆ 2.99 ಲಕ್ಷ ರೂಪಾಯಿ ಆಗಿದ್ದರೆ, ಮಿಡ್‌ನೈಟ್‌ ಬ್ಲ್ಯಾಕ್‌ ಮತ್ತು ಡಾನ್‌ ಸಿಲ್ವರ್‌ ವೇರಿಯೆಂಟ್‌ನ ಬೈಕ್‌ಗೆ 3.12 ಲಕ್ಷ ರೂಪಾಯಿ ಆಗಿದೆ. ಶಾಡೋ ಬ್ಲ್ಯಾಕ್‌ ಬಣ್ಣದ ಬೈಕ್‌ಗೆ 3.15 ಲಕ್ಷ ರೂಪಾಯಿ ಆಗಿದೆ. ಈ ಎಲ್ಲವೂ ಎಕ್ಸ್ ಶೋರೂಮ್‌ ಬೆಲೆಗಳಾಗಿವೆ.

Latest Videos

ಗೋಲ್ಡ್ ಸ್ಟಾರ್ 650 ರ ವಿನ್ಯಾಸವು ಅದರ ರೆಟ್ರೊ ಸೌಂದರ್ಯವನ್ನು ಪುನರ್‌ನವೀಕರಿಸಿದೆ. ಇದು ಕ್ಲಾಸಿಕ್ ಮೋಟಾರ್‌ಸೈಕಲ್ ಸ್ಟೈಲ್‌ ಉತ್ಸಾಹಿಗಳಿಗೆ ಇದು ಇನ್ನಷ್ಟು ಆಕರ್ಷಕವಾಗುರಲಿದೆ. ಸಂಪೂರ್ಣ ವೃತ್ತಾಕಾರದ ಹೆಡ್‌ಲೈಟ್‌ಗಳು, ನೀರಹನಿಯ ಸ್ಟೈಲ್‌ ಇಂಧನ ಟ್ಯಾಂಕ್‌, ಬಾಗಿದ ಫೆಂಡರ್‌ಗಳು ಎಲ್ಲವೂ ಬೈಕ್‌ಗೆ ವಿಂಟೇಜ್‌ ಲುಕ್‌ ನೀಡಿದೆ.

ಮೋಟಾರ್‌ಸೈಕಲ್ ಅನ್ನು ಕ್ರಾಡೆಲ್‌ ಫ್ರೇಮ್‌ನಲ್ಲಿ ನಿರ್ಮಿಸಲಾಗಿದೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್‌ ಶಾಕ್‌ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಇದು ಟ್ಯೂಬ್ ಮಾದರಿಯ ಟೈರ್‌ಗಳೊಂದಿಗೆ ವೈರ್-ಸ್ಪೋಕ್ ವೀಲ್‌ಗಳನ್ನು ಹೊಂದಿದೆ. ಇದು ಬೈಕ್‌ಗೆ ಟ್ರೇಡಿಷನಲ್‌ ಫೀಲ್‌ ನೀಡುತ್ತದೆ.  ಬ್ರೇಕಿಂಗ್ ವ್ಯವಸ್ಥೆಯು ಮುಂಭಾಗ ಮತ್ತು ಹಿಂಭಾಗದಲ್ಲಿ ಒಂದೇ ಡಿಸ್ಕ್ ಅನ್ನು ಒಳಗೊಂಡಿದೆ, ಡ್ಯುಯಲ್-ಚಾನೆಲ್ ABS ಅನ್ನು ಹೆಚ್ಚಿನ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಗೋಲ್ಡ್ ಸ್ಟಾರ್ 650ಗೆ ಪವರ್‌ ಎಂಜಿನ್ 652cc, 4-ವಾಲ್ವ್, DOHC, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಯುನಿಟ್ ಆಗಿದೆ. ಈ ಎಂಜಿನ್ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 45 bhp ಮತ್ತು 55 Nm ಟಾರ್ಕ್ ಅನ್ನು ನೀಡುತ್ತದೆ. ಮೋಟಾರ್‌ಸೈಕಲ್ ಗಂಟೆಗೆ 160 ಕಿಲೋಮೀಟರ್‌ ವೇಗ ಸಾಧಿಸುತ್ತದೆ ಎಂದು ಬಿಎಸ್‌ಎ ಹೇಳಿದೆ. ಬೈಕ್‌ನಲ್ಲಿ ಟ್ವಿನ್-ಪಾಡ್ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಚಾರ್ಜರ್ ಅನ್ನು ಅಳವಡಿಸಲಾಗಿದ್ದು, ಅದರ ರೆಟ್ರೊ ವಿನ್ಯಾಸಕ್ಕೆ ಆಧುನಿಕ ಸ್ಪರ್ಶವನ್ನು ನೀಡುತ್ತದೆ.

Royal Enfield ಮಿಟಿಯೋರ್‌ 350ಯಲ್ಲಿ ಬೆಂಗಳೂರಿಂದ ಯೇರ್ಕಾಡ್‌ಗೆ ರೈಡ್‌: ಒಂದು ಅಪೂರ್ವ ಕಾಫಿ ಪ್ರವಾಸ

ಮಹೀಂದ್ರಾ & ಮಹೀಂದ್ರಾದ ಅಂಗಸಂಸ್ಥೆಯಾಗಿರುವ ಕ್ಲಾಸಿಕ್‌ ಲಜೆಂಡ್ಸ್‌ನ ಮಾಲೀಕತ್ವದಲ್ಲಿ 2021ರಲ್ಲಿ ಬಿಎಸ್‌ಎ ಮೋಟಾರ್‌ಸೈಕಲ್‌ಅನ್ನು ಮರುಪರಿಚಯಿಸುವ ನಿರ್ಧಾರ ಮಾಡಲಾಗಿತ್ತು. ಇಂದು ಈ ಬ್ರ್ಯಾಂಡ್‌ 23 ದೇಶಗಳಲ್ಲಿ ಪ್ರಸ್ತುತವಾಗಿದೆ. BSA ಗೋಲ್ಡ್ ಸ್ಟಾರ್ 650 ಭಾರತದಾದ್ಯಂತ ಅಧಿಕೃತ ಡೀಲರ್‌ಗಳಲ್ಲಿ ಖರೀದಿಗೆ ಲಭ್ಯವಿದೆ, ಪ್ರಸ್ತುತ ಬುಕಿಂಗ್‌ಗಳು ತೆರೆದಿರುತ್ತವೆ. ಇದು ₹ 3.03 ಲಕ್ಷದಿಂದ ಪ್ರಾರಂಭವಾಗುವ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ರೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ, 650 ಸಿಸಿ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿ ಸ್ಥಾನ ಪಡೆದಿದೆ.

ರಾಯಲ್ ಎನ್‌ಫೀಲ್ಡ್ ಪ್ರಿಯರಿಗೆ ಗುಡ್‌ ನ್ಯೂಸ್‌: ಹಿಮಾಲಯನ್ 450 ಜತೆಗೆ ಮತ್ತೊಂದು ಸ್ಪೆಷಲ್‌ ಎಡಿಷನ್‌ ಬೈಕ್‌ ರಿಲೀಸ್‌

BSA Gold Star 650 Launched At Rs 2,99,900 (ex-showroom)
.
.
. pic.twitter.com/oL4Mo6WRwY

— 91Wheels.com (@91wheels)
click me!