Traffic Rules ದ್ವಿಚಕ್ರ ವಾಹನಕ್ಕೆ 2 ಮಿರರ್, ಇಂಡಿಕೇಟರ್ ಕಡ್ಡಾಯ, ಉಲ್ಲಂಘಿಸಿದರೆ ಬೀಳುತ್ತೆ ದಂಡ!

By Suvarna News  |  First Published Apr 13, 2022, 10:02 PM IST
  • ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ರೈಡ್‌ನಿಂದ ಅಪಘಾತ ಹೆಚ್ಚಳ
  • ಅಪಘಾತ ನಿಯಂತ್ರಿಸಲು ಕಟ್ಟು ನಿಟ್ಟಿನ ಟ್ರಾಫಿಕ್ ನಿಯಮ
  • ಮಿರರ್, ಇಂಡಿಕೇಟರ್ ಇಲ್ಲದಿದ್ದರೆ 500 ರೂಪಾಯಿ ದಂಡ

ಬೆಂಗಳೂರು(ಏ.13): ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಪ್ರಮಾಣ ಹೆ್ಚ್ಚಾಗುತ್ತಿದೆ. ಹೀಗಾಗಿ ಮುನ್ನಚ್ಚೆರಿಕಾ ಕ್ರಮವಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಮತ್ತಷ್ಟು ಕಠಿಣ ಮಾಡಲಾಗಿದೆ. ಪರಿಣಾಮ ದ್ವಿಚಕ್ರ ವಾಹನಕ್ಕೆ ಎರಡು ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ದರೆ 500 ರೂಪಾಯಿ ದಂಡ ವಿಧಿಸಲಾಗುತ್ತದೆ.

ಈ ನಿಯಮ ಹೊಸದಲ್ಲ. ಆದರೆ ಬೆಂಗಳೂರಿನಲ್ಲಿ ಈ ಮೋಟಾರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಟ್ರಾಫಿಕ್ ಪೊಲೀಸರು ನಿರ್ಧರಿಸಿದ್ದಾರೆ. ಈ ಮೂಲಕ ದ್ವಿಚಕ್ರ ವಾಹನಗಳ ಸವಾರರು ಎಡಗಡೆ, ಬಲಗಡೆ ಸೇರಿದಂತೆ ಯಾವುದೇ ಕಡೆಗೆ ಹೋಗಲು ಇಂಡಿಕೇಟರ್ ಬಳಕೆ, ಮಿರರ್ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಇದರಿಂದ ಅಪಘಾತದ ಪ್ರಮಾಣ ಕಡಿಮೆ ಮಾಡಲು ಪೊಲೀಸರು ಮುಂದಾಗಿದ್ದಾರೆ.

Tap to resize

Latest Videos

ಹೈದರಾಬಾದ್‌ನಲ್ಲಿ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್‌ಗೆ ದಂಡ

ನಗದಲ್ಲಿ ಸಂಭವಿಸುತ್ತಿರುವ ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಇಂಡಿಕೇಟರ್ ಹಾಕದೆ ಮುನ್ನುಗ್ಗುವ ವೇಳೆ, ಮಿರರ್ ನೋಡದೆ ಏಕಾಏಕಿ ಬಲಕ್ಕೆ ಎಡಕ್ಕೆ ತಿರುಗಿಸುವ ವೇಳೆ ಸಂಭವಿಸಿದ ಅಪಘಾತ ಪ್ರಮಾಣಗಳು ಹೆಚ್ಚಾಗಿದೆ. ಹೀಗಾಗಿ ದ್ವಿಚಕ್ರ ವಾಹನಗಳಿಗೆ ಎರಡು ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯ ಮಾಡಲಾಗಿದೆ.

ಹಳೇ ನಿಯಮವನ್ನೇ ಕಟ್ಟು ನಿಟ್ಟಾಗಿ ಜಾರಿಗೆ ತರಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕಾಗಿ ಹಳೇ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. 

ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!

ದಂಡ ವಿಧಿಸದೆ ಬೈಕ್‌ ಸವಾರರಿಗೆ ಗುಲಾಬಿ ಕೊಟ್ಟಪಿಎಸ್‌ಐ
ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ಪಿಎಸ್‌ಐ ತಾಜುದ್ದೀನ್‌ ನೇತೃತ್ವದಲ್ಲಿ ಇಂದು ಟ್ರಾಫಿಕ್‌ ನಿಯಮ ಉಲ್ಲಂಘಿಸಿದ ಸವಾರರಿಂದ ದಂಡ ಕಟ್ಟಿಸಿಕೊಳ್ಳುವ ಬದಲು ಗುಲಾಬಿ ಹೂಗಳನ್ನು ನೀಡಲಾಗಿದೆ. ಪೊಲೀಸರು ಬೈಕ್‌ ಅಡ್ಡಹಾಕಿದ ಕೂಡಲೇ ಜೇಬಿಗೆ ಕತ್ತರಿ ಬಿತ್ತು ಎಂದುಕೊಳ್ಳುತ್ತಿದ್ದವರಿಗೆ ಆಶ್ಚರ್ಯ ಉಂಟಾಗಿದೆ. ಏಕೆಂದರೆ ಪೊಲೀಸರು ಹಣ ಮಾತ್ರ ಕಟ್ಟಿಸಿಕೊಳ್ಳದೇ ಪ್ರೇಮಿಗಳ ದಿನಾಚರಣೆ ನಾಳೆ ಬರುತ್ತಿದೆ. ಬೈಕ್‌ ಸವಾರರು ಎಂದಿಗೂ ಹೆಲ್ಮೆಟ್‌ ಪ್ರೀತಿಸಬೇಕು, ಧರಿಸಬೇಕು ಎಂದು ಶಿರಸ್ತ್ರಾಣದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಹೆಲ್ಮೆಟ್‌ ಧರಿಸದ 50ಕ್ಕೂ ಹೆಚ್ಚು ಬೈಕ್‌ ಸವಾರರಿಗೆ ಠಾಣೆಯ ಕೈತೋಟದಲ್ಲೇ ಬೆಳೆದ ಹೂಗಳನ್ನು ಕೊಟ್ಟು ದಂಡದಿಂದ ಮಾಫಿ ಮಾಡಿ ಹೆಲ್ಮೆಟ್‌ ಧಾರಣೆಯಿಂದ ಅಪಘಾತಗಳಲ್ಲಿ ತಲೆಗೆ ತೀವ್ರಹಾನಿಯಾಗಿ ಮೃತಪಡುವುದನ್ನು ತಪ್ಪಿಸಬಹುದಾಗಿದೆ, ಹೆಲ್ಮೆಟ್‌ ಪ್ರೀತಿಸಿ- ಹೆಲ್ಮೆಟ್‌ ಧರಿಸಿ ಎಂದು ಸವಾರರಿಗೆ ಅರಿವು ಮೂಡಿಸಿ ಗಮನ ಸೆಳೆದಿದ್ದಾರೆ.

ಸಂಚಾರ ನಿಯಮಗಳ ಅರಿವು
ಮಕ್ಕಳಲ್ಲಿ ಟ್ರಾಫಿಕ್‌ ನಿಯಮಗಳ ಬಗ್ಗೆ ಅರಿವು ಇರಲೇಬೇಕು, ವಾಹನ ಚಲಾಹಿಸುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹಾಗೂ ದ್ವಿ ಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೇಟ್‌ ಧರಿಸಿ ಪ್ರಾಣಾಪಾಯದಿಂದ ಪಾರಾಗುವ, ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್‌ ಬೆಲ್ಟ್‌ ಹಾಕುವ ಬಗ್ಗೆ, ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಬಾರದು, ಒಂದು ವೇಳೆ ಮೊಬೈಲ್‌ ಬಳಸಿದರೆ ಆಗುವ ಅನಾಹುತಗಳ ಕುರಿತು ಮಾಹಿತಿ ಹೊಂದಿರಬೇಕು ಎಂದು ಕಲಬುರಗಿ ಸಂಚಾರ ಠಾಣೆ ಪಿಐ ಶಾಂತಿನಾಥ ಹೇಳಿದರು. ಇಲ್ಲಿನ ಮದರ್‌ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರೌಢ ಶಾಲಾ ಮಕ್ಕಳಿಗೆ ಸಂಚಾರ ಕಾನೂನು ಅರಿವು ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಅತಿವೇಗ ಚಲಿಸುವುದರಿಂದ ಆಗುವ ಅಪಾಯ ಹಾಗೂ ಅವಸರವೇ ಅಪಘಾತಕ್ಕೆ ಕಾರಣವೆಂದು ಅರಿವು ಮೂಡಿಸುತ್ತ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ತಿಳುವಳಿಕೆ ಹೇಳಿದರು. ಸಂಚಾರ ಉಪ ವಿಭಾಗ ಪೊಲೀಸ್‌ ಠಾಣೆ-01ರ ಸಿಬ್ಬಂದಿ ನರಸಿಂಹಚಾರಿ, ಪೇದೆ ಸಿದ್ದು ಪಾಟೀಲ್‌, ಶಶಿಕಾಂತ ಪಾಟೀಲ್‌, ಕಾರ್ಯದರ್ಶಿ ಶಿವಪುತ್ರಪ್ಪಾ ಡೆಂಕಿ, ಪ್ರಾಚಾರ್ಯರಾದ ನಾಗೇಂದ್ರ ಬಡಿಗೇರ್‌, ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
 

click me!