Women Achievers 71ರ ಹರೆಯದಲ್ಲಿ ಜೆಸಿಬಿ ಕ್ರೇನ್ ಸೇರಿ 11 ವಾಹನಗಳ ಲೈಸೆನ್ಸ್, ಹೊಸ ದಾಖಲೆ ಬರೆದ ರಾಧಾಮಣಿ ಅಮ್ಮ!

By Chethan Kumar  |  First Published Apr 13, 2022, 9:23 PM IST
  • ವಯಸ್ಸು ಕೇವಲ ನಂಬರ್, 71 ಹರೆಯಲ್ಲಿ ಘನ ವಾಹನಗಳ ಡ್ರೈವಿಂಗ್
  • ಕ್ರೇನ್, ಜೆಸಿಬಿ ಸೇರಿದಂತೆ ಎಲ್ಲಾ ವಾಹನಗಳನ್ನು ಸಲೀಸಾಗಿ ನಿರ್ವಹಣೆ
  • ಸ್ಪೂರ್ತಿಯ ಚಿಲುಮೆಯಾಗಿರುವ ರಾಧಾಮಣಿ ಜೀವನಗಾಥೆ ಇಲ್ಲಿದೆ

ಕೇರಳ(ಏ.13): ಸಾಧನೆಗೆ ವಯಸ್ಸು ಅಡ್ಡಿಯಾಗಲ್ಲ, ಅಡೆತಡೆಗಳು ಪರಿಗಣನೆಗೆ ಬರುವುದಿಲ್ಲ ಅನ್ನೋದಕ್ಕೆ ಮತ್ತೊಂದು ಊದಾಹರಣೆ ಕೇರಳದ 71ರ ಹರೆಯದ ರಾಧಾಮಣಿ. ಈ ತಾಯಿ ಕ್ರೇನ್, ಬುಲ್ಡೋಜರ್, ರೋಡ್ ರೋಲರ್ ಸೇರಿದಂತೆ 11 ಘನ ವಾಹನಗಳ ಲೈಸೆನ್ಸ್ ಹೊಂದಿದ್ದಾರೆ. ಅಷ್ಟೇ ಸುಲಭವಾಗಿ ಈ ಎಲ್ಲಾ ವಾಹನಗಳನ್ನು ಚಲಾಯಿಸುತ್ತಾರೆ. ಇವರ ಸಾಧನೆಗೆ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ. ಇಷ್ಟೆಲ್ಲ ಸಾಧನೆ ಮಾಡಿರುವ ರಾಧಾಮಣಿ ಈಗಲೂ ವಿದ್ಯಾರ್ಥಿ ಅನ್ನೋದು ವಿಶೇಷ.

1971ರಲ್ಲಿ ರಾಧಾಮಣಿ ಅವರ ಪತಿ ಡ್ರೈವಿಂಗ್ ಸ್ಕೂಲ್ ಆರಂಭಿಸಿದ್ದರು. ಅಲ್ಲಿಂದ ರಾಧಾಮಣಿಯ ಡ್ರೈವಿಂಗ್ ಆಸಕ್ತಿ ಹೆಚ್ಚಾಯಿತು. 70ರ ದಶಕದಲ್ಲಿ ಮಹಿಳೆಯರು ಘನ ವಾಹನಗಳ ಡ್ರೈವಿಂಗ್ ಮಾಡುತ್ತಿರಲಿಲ್ಲ. ಅಂದು ಪತಿ ಆರಂಭಿಸಿದ ಡ್ರೈವಿಂಗ್ ಸ್ಕೂಲ್‌ನಿಂದ ಆರಂಭದಲ್ಲೇ ಬಸ್ ಹಾಗೂ ಲಾರಿ ಚಲಾಯಿಸಲು ಕಲಿತ ರಾಧಾಮಣಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

Tap to resize

Latest Videos

ಪ್ರವಾಸದಲ್ಲಿ ಡ್ರೈವರ್ ಆರೋಗ್ಯ ಏರುಪೇರು, 10 ಕಿ.ಮೀ ಬಸ್ ಚಲಾಯಿಸಿ ಚಾಲಕನ ಜೀವ ಉಳಿಸಿದ ಮಹಿಳೆ!

ಎಲ್ಲಾ  ಘನವಾಹನಗಳ ಡ್ರೈವಿಂಗ್ ಕಲಿತಿಕೊಂಡರು. ಇವೆಲ್ಲವೂ ರಾಧಾಮಣಿಯ ಆಸಕ್ತಿಯ ವಿಷಗಳಾಗಿತ್ತು.ಇಷ್ಟೇ ಅಲ್ಲ ಈ ಎಲ್ಲಾ ಘನ ವಾಹನಗಳ ಚಲಾಯಿಸಲು ಲೈಸೆನ್ಸ್ ಕೂಡ ಪಡೆದುಕೊಂಡರು. ಪತಿಯ ಬೆಂಬಲದಿಂದ ಎಲ್ಲಾ ಲೈಸೆನ್ಸ್ ಪಡೆಯಲು ಸಾಧ್ಯವಾಯಿತು ಎಂದು ರಾಧಾಮಣಿ ಹಳೆ ನೆನಪುಗಳನ್ನು ಬಿಚ್ಚಿಕೊಳ್ಳುತ್ತಾರೆ.

ಮಹಿಳೆ ಬೈಕ್ ರೈಡ್ ಮಾಡುವಾಗ, ಘನ ವಾಹನಗಳನ್ನು ಚಲಾಯಿಸುವಾಗ ಈ ಸಮಾಜ ಒಮ್ಮೆ ತಿರುಗಿ ನೋಡುತ್ತದೆ. ಅಂದಿನ ಕಾಲಘಟ್ಟದಲ್ಲಿ ವಾಹನಗಳನ್ನು ಡ್ರೈವ್ ಮಾಡುವ ಮಹಿಳೆಯರೇ ವಿರಳ. ಹಾಗಿರುವಾಗ ಘನ ವಾಹನಗಳ ಡ್ರೈವಿಂಗ್ ಮಾಡುತ್ತಿದ್ದೆ. ನೋಡಿದವರು ಅಚ್ಚರಿ ಪಡುತ್ತಿದ್ದರು. 

2004ರಲ್ಲಿ ನಡೆದ ಅಪಘಾತದಲ್ಲಿ ರಾಧಾಮಣಿ ಪತಿಯನ್ನು ಕಳೆದುಕೊಂಡರು. ಈ ಸಂಕಷ್ಟದ ಸಂದರ್ಭದಲ್ಲಿ ರಾಧಾಮಣಿ ಪತಿಯ ಡ್ರೈವಿಂಗ್ ಸ್ಕೂಲ್ ಮುನ್ನಡೆಸಲು ಮುಂದಾದರು. ಎಲ್ಲಾ ಡ್ರೈವಿಂಗ್ ತಿಳಿದಿದ್ದ ರಾಧಾಮಣಿಗೆ ಡ್ರೈವಿಂಗ್ ಸ್ಕೂಲ್ ಮುನ್ನಡೆಸುವುದು ಕಷ್ಟದ ವಿಚಾರ ಆಗಿರಲಿಲ್ಲ.

ರಾಧಾಮಣಿಯವರ ಡ್ರೈವಿಂಗ್ ಸ್ಕೂಲ್‌ನಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಘನ ವಾಹನಗಳ ಡ್ರೈವಿಂಗ್ ಪಡೆದುಕೊಂಡಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ಮಹಿಳೆಯರು ಡ್ರೈವಿಂಗ್ ಮೂಲಕ ಹೊಸ ಬದುಕು ಕಟ್ಟಿಕೊಂಡವರ ಸಂಖ್ಯೆಯೂ ಬಹಳಷ್ಟಿದೆ. ಮಹಿಳೆಯರಿ ಸ್ಪೂರ್ತಿಯಾಗಿರುವ ರಾಧಾಮಣಿಯಮ್ಮ ಕೇರಳದಲ್ಲಿ ಮನೆ ಮಾತಾಗಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನ: ಮಹೀಂದ್ರ ಟ್ರಾಕ್ಟರ್ ಜಾಹೀರಾತಿಗೆ ದೇಶವೇ ಸಲಾಂ!

ರೋಡ್ ರೋಲರ್, ಬುಲ್ಡೋಜರ್, ಕ್ರೇನ್ ಸೇರಿದಂತೆ 11 ಘನ ವಾಹನಗಳ ಲೈಸೆನ್ಸ್ ಹೊಂದಿರುವ ಭಾರತದ ಏಕೈಕ ಮಹಿಳೆ ಅನ್ನೋ ಹೆಗ್ಗಳಿಕೆಗೆ ರಾಧಾಮಣಿ ಪಾತ್ರರಾಗಿದ್ದಾರೆ. ಈ ಮೂಲಕ ದಾಖಲೆಯನ್ನು ಬರೆದಿದ್ದಾರೆ. ಆದರೆ ಇಷ್ಟಕ್ಕೆ ರಾಧಾಮಣಿಯವರ ಸಾಧನೆ ಮುಗಿದಿಲ್ಲ. ಸಾಧಿಸಿದ್ದು ಹಲವು, ಸಾಧಿಸಬೇಕಾಗಿದ್ದು ಇನ್ನೂ ಹಲವು ಅನ್ನೋ ಮಾತಿನಂತೆ ರಾಧಾಮಣಿ ಈಗ ವಿದ್ಯಾರ್ಥಿ ಕೂಡ ಹೌದು. 

71ರ ಹರೆಯಲ್ಲಿ ರಾಧಾಮಣಿ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದಾರೆ.ಕಲಾಮಸರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ  ಮೆಕಾನಿಕಲ್ ಎಂಜಿನಿಯರಿಂಗ್‌ ಮಾಡುತ್ತಿರುವ ರಾಧಾಮಣಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಇನ್ನು ಹಲವು ಮಹಿಳೆಯರಿಗೆ ಶಿಕ್ಷಕಿಯಾಗಿ, ಮಾರ್ಗದರ್ಶಿಯಾಗಿ, ತಾಯಿಯಾಗಿ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. 

ಇಷ್ಟಕ್ಕೇ ರಾಧಾಮಣಿಯವರ ಕನಸುಗಳು ಮುಗಿದಿಲ್ಲ. ಟವರ್ ಕ್ರೇನ್ ಅತೀ ಘನವಾಹನ ಚಲಾಯಿಸಬೇಕು ಅನ್ನೋದು ರಾಧಾಮಣಿಯವರ ಕನಸು. ಕಾಮಾಗಾರಿಗಳಲ್ಲಿ ಬಳಕೆಯಾಗುವ ಅತ್ಯಂತ ಘನವಾಹನ ಇದಾಗಿದೆ. ಭಾರತದಲ್ಲಿ ಈ ವಾಹನ ಬಳಕೆ ಅತೀ ವಿರಳವಾಗಿದೆ. ಹಲವು ಮಹಿಳೆಯರ ಬದುಕಿಗೆ ಆಸರೆಯಾಗಿರುವ, ಹವರಿಗೆ ಸ್ಪೂರ್ತಿಯಾಗಿರುವ  ರಾಧಾಮಣಿ ಸೇವೆ ಹಾಗೂ ಅನುಭವ ಯುುವ ಜನಾಂಗಕ್ಕೆ ಮತ್ತಷ್ಟು ಸಿಗುವಂತಾಗಲಿ.

click me!