battery swapping ಭಾರತದಲ್ಲಿ ಬ್ಯಾಟರಿ ವಿನಿಮಯ ಕೇಂದ್ರ ಸ್ಥಾಪಿಸಲು ಹೋಂಡಾ, HPCL ಒಪ್ಪಂದ!

By Suvarna News  |  First Published Mar 1, 2022, 7:39 PM IST
  • ದೇಶಾದ್ಯಂತ ಬ್ಯಾಟರಿ ಸ್ವಾಪ್ ಕೇಂದ್ರ ಸ್ಥಾಪನೆ
  • ಬ್ಯಾಟರಿ ವಿನಿಮಯ ಸೇವೆಯ ಜಾಗತಿಕ ಮೊದಲ ವಹಿವಾಟು
  • ಎಲೆಕ್ಟ್ರಿಕ್ ವಾಹನ ಗ್ರಾಹಕರಿಗೆ ಸುಲಭ ಚಾರ್ಜಿಂಗ್ ವ್ಯವಸ್ಥೆ
     

ಬೆಂಗಳೂರು(ಮಾ.01): ಕೇಂದ್ರ ಬಜೆಟ್‌ನಲ್ಲಿ ಬ್ಯಾಟರಿ ಸ್ವ್ಯಾಪಿಂಗ್ ಕೇಂದ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ದೇಶದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ವಿನಿಮಯ ಕೇಂದ್ರಗಳು ಹೆಚ್ಚಾಗಿ ಸ್ಥಾಪನೆಯಾಗುತ್ತಿದೆ. ಇದರ ಬೆನ್ನಲ್ಲೇ ಹೋಂಡಾ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆ ಮೂಲಕ ದೇಶಾದ್ಯಂತ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ ಮಾಡಲಿದೆ. ಇದು ಹೋಂಡಾದ ಬ್ಯಾಟರಿ ವಿನಿಮಯ ಸೇವೆಯ ಜಾಗತಿಕ ಮೊದಲ ವಹಿವಾಟು ಆಗಿದ್ದು, ಈ ಉದ್ದೇಶಕ್ಕೆ ಎಚ್‌ಪಿಸಿಎಲ್ ಅನ್ನು ಆದ್ಯತೆಯ ಪಾಲುದಾರನಾಗಿ ಆಯ್ಕೆ ಮಾಡಲಾಗಿದೆ.

2021 ಅಕ್ಟೋಬರ್‌ನಲ್ಲಿ, ಹೋಂಡಾ ಮೋಟರ್ ಕಂಪನಿ ಲಿಮಿಟೆಡ್ ಜಪಾನ್, ತನ್ನ ಹೊಸದಾಗಿ ಸ್ಥಾಪಿಸಲಾದ ಅಂಗಸಂಸ್ಥೆಯಾದ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾ ಮೂಲಕ ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳಿಗೆ ಭಾರತದಲ್ಲಿ ಬ್ಯಾಟರಿ ವಿನಿಮಯ ಸೇವೆ ಪ್ರಾರಂಭಿಸುವ ಯೋಜನೆಯನ್ನು ಪ್ರಕಟಿಸಿತ್ತು. ಹೋಂಡಾದ ಈ ಬ್ಯಾಟರಿ ವಿನಿಮಯ ಸೇವೆಯು ಆಯ್ದ ನಗರಗಳಾದ್ಯಂತ ಸ್ಥಾಪಿಸಲಾಗುತ್ತಿರುವ  ಬ್ಯಾಟರಿ ವಿನಿಮಯ ಕೇಂದ್ರಗಳಲ್ಲಿ ಡಿಸ್ಚಾರ್ಜ್ ಮಾಡಲಾದ ಬ್ಯಾಟರಿಗಳನ್ನು (ಹೋಂಡಾ ಮೊಬೈಲ್ ಪವರ್ ಪ್ಯಾಕ್ ಇ :) ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬ್ಯಾಟರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ರಿಕ್ಷಾ ಚಾಲಕರಿಗೆ ಅನುವು ಮಾಡಿಕೊಡುತ್ತದೆ. ಈ ಸೌಲಭ್ಯವನ್ನು ಬಳಸುವುದರಿಂದ ವಿದ್ಯುತ್‌ಚಾಲಿತ ವಾಹನ (ಇವಿ) ಖರೀದಿಸುವುದಕ್ಕೆ ಚಾಲಕರ ಆರಂಭಿಕ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಬ್ಯಾಟರಿಗಳು ಮಾರ್ಗ ಮಧ್ಯೆಯೇ ಖಾಲಿಯಾಗುವ ಆತಂಕವನ್ನು ಕಡಿಮೆ ಮಾಡುತ್ತದೆ. ಬ್ಯಾಟರಿಗಳು ಚಾರ್ಜ್ ಆಗಲು ಕಾಯುತ್ತಿರುವಾಗ ಚಾಲಕರು ದುಡಿಯುವ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಯನ್ನೂ ಇದು ಕಡಿಮೆ ಮಾಡುತ್ತದೆ.

Tap to resize

Latest Videos

Union Budget 2022 ಆಟೋ ಕ್ಷೇತ್ರಕ್ಕೆ ಬ್ಯಾಟರಿ ಸ್ವ್ಯಾಪ್ ನೀತಿ, ಎಲೆಕ್ಟ್ರಿಕ್ ವಾಹನ ನಿರ್ವಹಣೆ ಮತ್ತಷ್ಟು ಅಗ್ಗ!

ಹೋಂಡಾ, 2022ರ ಮೊದಲಾರ್ಧದಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಆಧಾರದ ಮೇಲೆ ತನ್ನ ಸೇವಾ ರೂಪದಲ್ಲಿ ಬ್ಯಾಟರಿ ಸೌಲಭ್ಯವನ್ನು (ಬಿಎಎಎಸ್) ಪ್ರಾರಂಭಿಸಲು ಯೋಜಿಸಿದೆ. ಈ ಉದ್ದೇಶಕ್ಕೆ ಎಚ್‌ಪಿಸಿಎಲ್‌ನ ರಿಟೇಲ್ ಮಾರಾಟ ಮಳಿಗೆಗಳಂತಹ ಸ್ಥಳಗಳಲ್ಲಿ ಹೋಂಡಾ ಬ್ಯಾಟರಿ ವಿನಿಮಯ ಕೇಂದ್ರಗಳ ವ್ಯಾಪಕ ಜಾಲವನ್ನು ಸ್ಥಾಪಿಸಲಿದೆ. ಈ ಸೌಲಭ್ಯವನ್ನು ಹಂತ ಹಂತವಾಗಿ ಇತರ ಪ್ರಮುಖ ನಗರಗಳಿಗೆ ವಿಸ್ತರಿಸುವ ಉದ್ದೇಶದಿಂದ ಆರಂಭದಲ್ಲಿ ಬೆಂಗಳೂರು ನಗರದಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಗುವುದು. ಆರಂಭಿಕ ಹಂತದಲ್ಲಿ ತ್ರಿಚಕ್ರ ವಾಹನಗಳಿಗೆ ಮಾತ್ರ ಗಮನ ಕೇಂದ್ರಿಕರಿಸಲಾಗುವುದು. ನಂತರ ದ್ವಿಚಕ್ರ ವಾಹನಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು. ಈ ಉದ್ದೇಶಕ್ಕೆ ಹೋಂಡಾ ಒಂದಕ್ಕಿAತ ಹೆಚ್ಚು ವಾಹನ ತಯಾರಿಕಾ ಕಂಪನಿಗಳ (ಒಇಎಂ) ಜೊತೆ ಪಾಲುದಾರಿಕೆ ಮಾಡಿಕೊಳ್ಳಲಿದೆ.

ಒಪ್ಪಂದಕ್ಕೆ ಆನ್‌ಲೈನ್‌ನಲ್ಲಿ ಸಹಿ ಮಾಡುವ ಸಮಾರಂಭವು 2022ರ ಫೆಬ್ರುವರಿ 7ರಂದು ನಡೆಯಿತು. ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸುವ ಮೂಲಕ ಮತ್ತು  ಭಾರತದ ಹಸಿರು ಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇ ೨೦ರಷ್ಟು ಪಾಲು ಹೊಂದಿರುವ ಸಾರಿಗೆ ಕ್ಷೇತ್ರದ ವಿದ್ಯುದ್ದೀಕರಣವನ್ನು ಮುಂದುವರಿಸುವ ಮೂಲಕ ಇಂಗಾಲ ಡೈಆಕ್ಸೆೈಡ್ ಹೊರಸೂಸುವ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸಲು, ಭಾರತದ ಮತ್ತು ಜಾಗತಿಕ ಪರಿಸರ ಸಂರಕ್ಷಣೆಯ ಗುರಿ ಸಾಧಿಸಲು ತಮ್ಮ ಬದ್ಧತೆಯನ್ನು ಎರಡೂ ಕಂಪನಿಗಳು ಪುನರುಚ್ಚರಿಸಿವೆ. 

Battery Swapping ಬಜೆಟ್‌ನ ಸ್ಯ್ವಾಪ್ ನೀತಿ ಬೆನ್ನಲ್ಲೇ ಬೌನ್ಸ್ ಹೊಸ ದಾಖಲೆ, 10 ಲಕ್ಷ ಬ್ಯಾಟರಿ ಸ್ವ್ಯಾಪ್ ರಿಜಿಸ್ಟ್ರೇಶನ್!

ವಿಶ್ವಾಸಾರ್ಹ ಮತ್ತು ಗ್ರಾಹಕ ಕೇಂದ್ರಿತ ಬ್ಯಾಟರಿ ವಿನಿಮಯ ಸೇವೆ ಆರಂಭಿಸಲು ಹೋಂಡಾ ಮತ್ತು ಎಚ್‌ಪಿಸಿಎಲ್ ನಡುವೆ ದೀರ್ಘಾವಧಿಯ ಪಾಲುದಾರಿಕೆ ಮತ್ತು ಸ್ನೇಹವನ್ನು ತಾವು ಎದುರು ನೋಡುತ್ತಿರುವುದಾಗಿ ಹೇಳಿದರು. ಭಾರತದ ಪರಿಸರ ಸ್ನೇಹಿ ಭವಿಷ್ಯ ಖಚಿತಪಡಿಸಿಕೊಳ್ಳಲು, ಎಚ್‌ಪಿಸಿಎಲ್ ಜೊತೆಗಿನ  ಹೋಂಡಾದ ಸಂಬAಧವನ್ನು ಉಲ್ಲೇಖಿಸಿದ ಅವರು, ಹೋಂಡಾಗೆ ಇದು ಸರಿಯಾದ ಸಮಯದಲ್ಲಿ ಸರಿಯಾದ ಪಾಲುದಾರರ ಜೊತೆ ಒಪ್ಪಂದ ಮಾಡಿಕೊಂಡಿರುವ  ಸಂದರ್ಭ ಇದಾಗಿದೆ ಹೋಂಡಾ ಪವರ್ ಪ್ಯಾಕ್ ಎನರ್ಜಿ ಇಂಡಿಯಾದ ಅಧ್ಯಕ್ಷ  ಕಿಯೋಶಿ ಇಟೊ ಹೇಳಿದ್ದಾರೆ.

click me!