ಗೆಳೆತಿಯನ್ನು ಸಮಯಕ್ಕೆ ಸರಿಯಾಗಿ ಹೊಸ ಉದ್ಯೋಗದ ಸಂದರ್ಶನಕ್ಕೆ ತಲುಪಿಸುವ ಪ್ರಯತ್ನ ಮಾಡಿದ್ದಾನೆ. ಇಷ್ಟೇ ನೋಡಿ, ಈತನ ನೆರವು ಪೊಲೀಸರಿಗೆ ಇಷ್ಟವಾಗಿಲ್ಲ. ನೇರವಾಗಿ ಜೈಲಿಗೆ ಕಳುಹಿಸಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ ವಿವರ.
ಫ್ಲೋರಿಡಾ(ಮಾ.25): ಗರ್ಲ್‌ಫ್ರೆಂಡ್‌ಗೆ ಹೊಸ ಉದ್ಯೋಗದ ಸಂದರ್ಶನ. ಸಂದರ್ಶನದಲ್ಲಿ ತಕ್ಕ ಸಮಯಕ್ಕೆ ಹಾಜರಿರುವುದು ಅತೀ ಮುಖ್ಯ. ಆದರೆ ಗೆಳತಿ ರೆಡಿಯಾಗಿ ಬರುವಷ್ಟರಲ್ಲೇ ಕೊಂಚ ವಿಳಂಬವಾಗಿದೆ. ಇರುವ ಅಲ್ಪ ಕಾಲದಲ್ಲಿ ಗೆಳೆಯತಿನ್ನು ಸಂದರ್ಶನದ ಸ್ಥಳಕ್ಕೆ ತಲುಪಿಸಲು ಗೆಳೆಯ ನೆರವಾಗಿದ್ದಾನೆ. ಆದರೆ ಈ ನೆರವು ಪೊಲೀಸರ ಕಣ್ಣು ಕೆಂಪಾಗಿಸಿದೆ. ಪರಿಣಾಮ ನೇರವಾಗಿ ಜೈಲು ಸೇರಿದ್ದಾನೆ. ಗೆಳತಿಗೆ ಸಹಾಯ ಮಾಡಲು ಹೋದ ಫ್ಲೋರಿಡಾದ ಜೆವೋನ್ ಪಿಯೆರ್ರೆ ಜಾಕ್ಸನ್ ಅನ್ನೋ ವ್ಯಕ್ತಿ ಇದೀಗ ಕಂಬಿ ಎಣಿಸುತ್ತಿದ್ದಾನೆ.
ಜಾಕ್ಸನ್ ಗರ್ಲ್‌ಫ್ರೆಂಡ್‌ಗೆ ಪ್ರತಿಷ್ಠಿತ ಕಂಪನಿಯಿಂದ ಕೆಲಸಕ್ಕೆ ಆಫರ್ ಬಂದಿದೆ. ಸಂದರ್ಶನಕ್ಕೆ ಲೇಟಾಗಿ ಹೋದರೆ, ಕೆಲಸಕ್ಕೆ ಹೇಗೆ ಬರುತ್ತಾರೆ ಅನ್ನೋ ಅನುಮಾನ ಸೃಷ್ಟಿಯಾಗುತ್ತೆ. ಹೀಗಾಗಿ ಸಂದರ್ಶನ ಸಮಯದಲ್ಲಿ ತಕ್ಕ ಸಮಯಕ್ಕೆ ಹಾಜರಿರುವುದು ಅಗತ್ಯ. ಆದರೆ ಸಂದರ್ಶನ ದಿನ ಗೆಳತಿ ಕೊಂಚ ವಿಳಂಬ ಮಾಡಿದ್ದಾಳೆ. ಹೀಗಾಗಿ ಜಾಕ್ಸನ್ ಫಾಲ್ಸ್ ಚರ್ಚ್ ರೋಡ್‌ನಲ್ಲಿ ತನ್ನ ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಗೆಳೆತಿಯನ್ನು ಕೂರಿಸಿಕೊಂಡು ವೇಗವಾಗಿ ತೆರಳಿದ್ದಾನೆ.
undefined
ಗರಿಷ್ಠ 70 ಕಿ.ಮೀ. ವೇಗದ ಮಿತಿ ಮೀರಿದ್ರೆ ಬೀಳುತ್ತೆ ಫೈನ್!
ಗೆಳತಿಯನ್ನು ಟ್ಯಾಕೂ ಬೆಲ್‌ಗೆ ತಕ್ಕ ಸಮಯಕ್ಕೆ ತಲುಪಿಸಬೇಕಿತ್ತು. ಹೀಗಾಗಿ 100 ಕಿ.ಮೀ ವೇಗದಲ್ಲಿ ಸಾಗಿದ್ದಾನೆ. ಆದರೆ ಫಾಲ್ಸ್ ಚರ್ಚ್ ರೋಡ್‌ನಲ್ಲಿ ಗರಿಷ್ಠ ವೇಗದ ಮಿತಿ ಗಂಟೆಗೆ 64 ಕಿ.ಮೀ ಮಾತ್ರ. ದೂರದಲ್ಲಿ ಪೊಲೀಸರು ನಿಂತಿರುವುದು ಗಮನಿಸಿದ ಜಾಕ್ಸನ್ ಕಾರಿನ ವೇಗ ಮತ್ತಷ್ಟು ಹೆಚ್ಚಿಸಿದ್ದಾನೆ. ಇದರಿಂದ ಕೂದಲೆಳೆಯುವ ಅಂತರದಲ್ಲಿ ಅಪಘಾತದಿಂದಲೂ ಪಾರಾಗಿದ್ದಾನೆ.
ಜಾಕ್ಸನ್ ಡ್ರೈವಿಂಗ್ ಗಮನಿಸಿದ ಪೊಲೀಸರು ಚೆಕ್ ಪೋಸ್ಟ್‌ಗೆ ಮಾಹಿತಿ ನೀಡಿದ್ದಾರೆ. ಅತೀ ವೇಗವಾಗಿ ಚಲಿಸುತ್ತಿದ್ದ ಜಾಕ್ಸನ್ ಗೆಳತಿಯನ್ನು ಸಂದರ್ಶನದ ಸ್ಥಳಕ್ಕೆ ತಲುಪಿಸಿದ್ದಾನೆ. 5 ನಿಮಿಷ ಹೆಚ್ಚು ಕಡಿಮೆಯಾದರೂ ತಾನು ಗೆಳತಿಯನ್ನು ತಕ್ಕ ಸಮಯಕ್ಕೆ ತಲುಪಿಸಿದ್ದೇನೆ ಎಂದು ಹೆಮ್ಮೆ ಪಟ್ಟುಕೊಂಡಿದ್ದಾನೆ. ಅಷ್ಟರಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ವಾಹನ ಸವಾರರೇ ಗಮನಿಸಿ : ಇನ್ಮುಂದೆ ವಾಹನ ವೇಗಮಿತಿ 40 ಕಿ.ಮೀ ಗೆ ನಿಗದಿ
ಲೈಸೆನ್ಸ್ ಸೇರಿದಂತೆ ಎಲ್ಲಾ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ಕಾರಿನ ಹಿಂಬದಿಲ್ಲಿ ಮೂವರು ಮಕ್ಕಳು ಇದ್ದರು. ಮಕ್ಕಳನ್ನು ಕಾರಿನಲ್ಲಿ ಕೂರಿಸಿ ಈ ರೀತಿ ಅತೀ ವೇಗದ ಡ್ರೈವಿಂಗ್ ಮಾಡಿದ ಜಾಕ್ಸನ್ ವಿರುದ್ಧ ಪೊಲೀಸರು ಗರಂ ಆಗಿದ್ದಾರೆ. ಇತ್ತ ಲೈಸೆನ್ಸ್ ದಾಖಲೆ ನೋಡಿದರೆ ಹತ್ತು ಹಲವು ಟ್ರಾಫಿಕ್ ನಿಯಮ ಉಲ್ಲಂಘನೆ ದಾಖಲಾಗಿದೆ. ಮಕ್ಕಳ ಸುರಕ್ಷತೆಯ ನಿರ್ಲಕ್ಷ್ಯ, ಅತೀವೇಗದ ಚಾಲನೆ, ಅಪಾಯಕಾರಿ ಚಾಲನೆ ಹಾಗೂ ಇತರ ಟ್ರಾಫಿಕ್ ಉಲ್ಲಂಘನೆ ಕಾರಣಕ್ಕೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದಾರೆ.
ಎಪ್ರಿಲ್ 18ರ ವರೆಗೆ ಇದೀಗ ಜೈಲು ವಾಸ ಅನುಭವಿಸಬೇಕಿದೆ. ಎಪ್ರಿಲ್ 18ಕ್ಕೆ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯಲಿದೆ. ಅಲ್ಲೀವರೆಗ ಕಂಬಿ ಎಣಿಸಬೇಕಾಗಿದೆ.