ವಾಹನದ ವಿಮೆ ನವೀಕರಿಸಿಲ್ಲವೇ? ದಂಡದ ಜೊತೆಗೆ ಮನೆಗೆ ಬರಲಿದೆ ನೋಟಿಸ್!

By Suvarna News  |  First Published Mar 7, 2023, 5:52 PM IST

ಸಮಯಕ್ಕೆ ಸರಿಯಾಗಿ ವಾಹನ ವಿಮೆ ನವೀಕರಣ ಮಾಡುವವ ಸಂಖ್ಯೆ ಕಡಿಮೆ. ಪೊಲೀಸರು ತಡೆದು ನಿಲ್ಲಿಸಿ ಕೇಳಿದಾಗ ವಿಮೆ ಇಲ್ಲದಿದ್ದರೆ ದಂಡ ಹಾಕಲಾಗುತ್ತದೆ. ಇಲ್ಲದಿದ್ದರೆ ಬಚಾವ್. ಆದರೆ ಇನ್ಮುಂದೆ ಹಾಗಾಗಲ್ಲ. ಇನ್ಶೂರೆನ್ಸ್ ನವೀಕರಣ ಮಾಡದಿದ್ದರೆ, ದುಬಾರಿ ದಂಡಕ್ಕೆ ಗುರಿಯಾಬೇಕಾಗುತ್ತದೆ. ಕಾರಣ ಇದೀಗ ವಿಮೆ ನವೀಕರಣ ಮಾಡದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.


ನವದೆಹಲಿ(ಮಾ.07):  ವಾಹನ  ವಿಮೆ ನವೀಕರಣ ದೇಶದಲ್ಲಿ ಅತೀ ದೊಡ್ಡ ಸಮಸ್ಯೆ. ಹೊಸ ವಾಹನ ಖರೀದಿಸುವಾಗ ವಿಮೆ ಮಾಡಿದ ಬಳಿಕ, ಮತ್ತೆ ನವೀಕರಿಸುವವರ ಸಂಖ್ಯೆ ತೀರಾ ಕಡಿಮೆ. ಇದೀಗ ವಿಮೆ ನವೀಕರಣದಲ್ಲಿ ಶೇಕಡಾ 100 ರಷ್ಟು ಪ್ರಗತಿ ಸಾಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ವಿಮೆ ನವೀಕರಣ ಕಡ್ಡಾಯವಾಗಿದೆ. ನೀವು ವಾಹನ ಓಡಿಸಿ, ನಿಲ್ಲಿಸಿ ಆದರೆ ವಿಮೆ ನವೀಕರಣ ಮಾಡಲೇಬೇಕು. ಒಂದು ವೇಳೆ ನಿಗಧಿತ ಸಮಯಕ್ಕೆ ವಾಹನ ವಿಮೆ ನವೀಕರಣ ಮಾಡಿದಿದ್ದರೆ, ಮನೆಗೆ ನೋಟಿಸ್ ಬರಲಿದೆ. ಇದರ ಜೊತೆಗೆ ದಂಡವನ್ನು ಪಾವತಿಸಬೇಕು.

ವಾಹನಗಳ ವಿಮೆ ಕುರಿತು ಸಂಪೂರ್ಣ ಮಾಹಿತಿ ರಾಜ್ಯ ಸಾರಿಗೆ ಸಂಸ್ಥೆ ಬಳಿ ಇದೆ. ಇದೀಗ ಇದರಲ್ಲಿ ಯಾರು ವಿಮೆ ನವೀಕರಣ ಮಾಡಿಲ್ಲ ಅವರ ವಿಳಾಸಕ್ಕೆ ಹಾಗೂ ಮೊಬೈಲ್‌ ನಂಬರ್‌ಗೆ ನೋಟಿಸ್ ಬರಲಿದೆ. ಈ ನೋಟಿಸ್ ದಂಡದ ನೋಟಿಸ್. ವಿಮೆ ನವೀಕರಣ ಮಾಡದ ಕಾರಣ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ವಿಮೆ ನವೀಕರಣ ಮಾಡಲೇಬೇಕು. 

Latest Videos

undefined

 

ವಾಹನ ವಿಮೆ ನವೀಕರಣಕ್ಕೆ ಪೊಲೀಸ್‌ ಎನ್‌ಒಸಿ ಕಡ್ಡಾಯ?: ಸರ್ಕಾರಕ್ಕೆ ಸಂಚಾರ ಪೊಲೀಸರಿಂದ ಮನವಿ ಸಲ್ಲಿಕೆ

ಭಾರತದಲ್ಲಿ ಶೇಕಡಾ 54 ರಷ್ಟು ವಾಹನಗಳ ವಿಮೆ ನವೀಕರಣಗೊಂಡಿಲ್ಲ. ಪ್ರತಿ ವರ್ಷ 4 ರಿಂದ 5 ಲಕ್ಷ ವಾಹನ ಅಪಘಾತಗಳ ಸಂಭವಿಸುತ್ತದೆ. ಇದರಲ್ಲಿ 1.3 ರಿಂದ 1.5 ಲಕ್ಷ ಮಂದಿ ಮೃತಪಡುತ್ತಿದ್ದಾರೆ. ವಾಹನ ಅಪಘಾತದ ವೇಳೆ ವಿಮೆ ಅತ್ಯಂತ ಸಹಕಾರಿ. ಹಲವು ಬಾರಿ ಅಪಘಾತದ ವೇಳೆ ವಿಮೆ ಇಲ್ಲದ ಕಾರಣ ತೀವ್ರ ಪರದಾಡಿದ ಊದಾಹರಣೆ ಸಾಕಷ್ಟಿವೆ. ವಿಮೆ ಇಲ್ಲದ ಕಾರಣ ಕೋರ್ಟ್ ಕೇಸು ಮಾತ್ರವಲ್ಲ, ಆರ್ಥಿಕವಾಗಿಯೂ ಸಂಕಷ್ಟ ಎದುರಿಸಿದ ಅದೆಷ್ಟೋ ಘಟನೆಗಳು ಕಣ್ಣ ಮುಂದಿದೆ. ಹೀಗಾಗಿ ವಾಹನ ವಿಮೆ ನವೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಇದೀಗ ಶೇಕಡಾ 100 ರಷ್ಟು ವಿಮೆ ನವೀಕರಣ ಗುರಿ ಸಾಧಿಸಲು ಮುಂದಾಗಿದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ಸಮಯಕ್ಕೆ ಸರಿಯಾಗಿ ವಿಮೆ ನವೀಕರಣ ಮಾಡದಿದ್ದರೆ, 2,000 ರೂಪಾಯಿ ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಹೊಸ ವಿಮೆ ಮಾಡಿಸಿಕೊಳ್ಳಬೇಕು. ಇದೀಗ ಹೊಸ ನಿಯಮದ ಪ್ರಕಾರ, ವಿಮೆ ನವೀಕರಣ ಮಾಡದ ಪ್ರತಿಯೊಬ್ಬ ವಾಹನ ಮಾಲೀಕರ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗೆ ನೋಟಿಸ್ ಕಳುಹಿಸಲಾಗುತ್ತದೆ. ನಿಗದಿತ ಸಮಯದೊಳಗೆ ವಿಮೆ ನವೀಕರಣ ಮಾಡಿಸಿಕೊಳ್ಳಬೇಕು. ಇದರ ಜೊತೆಗೆ ದಂಡವನ್ನು ಪಾವತಿಸಬೇಕು.

ಬೈಕ್‌ ಸುಟ್ಟು ಹೋದ ಪ್ರಕರಣ: ಕ್ಲೇಮು ತಿರಸ್ಕರಿಸಿದ್ದ ವಿಮಾ ಕಂಪನಿಗೆ ಬಿತ್ತು ಭಾರಿ ದಂಡ!

click me!