ಪೇಟಿಎಂ FASTag ಗ್ರಾಹಕರಿಗೂ ಸಂಕಷ್ಟ, ಫೆ.29ರ ಬಳಿಕ ದಂಡ ತಪ್ಪಿಸಲು ಹೀಗೆ ಮಾಡಿ!

By Suvarna NewsFirst Published Feb 1, 2024, 8:28 PM IST
Highlights

ಆರ್‌ಬಿಐ ನಿರ್ಬಂಧದಿಂದ ಪೇಟಿಂ ಗ್ರಾಹಕರು ಕಂಗಾಲಾಗಿದ್ದಾರೆ. ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ, ಕ್ರೆಡಿಟ್ ವಹಿವಾಟುಗಳನ್ನು ಫೆಬ್ರವರಿ 29ರ ಬಳಿಕ ನಿರ್ಬಂಧಿಸಿದೆ. ಇದರೊಂದಿಗೆ ಫಾಸ್ಟ್ಯಾಗ್ ಗ್ರಾಹಕರಿಗೂ ಸಂಕಷ್ಟ ಎದುರಾಗಿದೆ. ನಿಮ್ಮ ವಾಹನಗಳಲ್ಲಿ ಪೇಟಿಎಂ ಫಾಸ್ಟ್ಯಾಗ್ ಬಳಸುತ್ತಿದ್ದರೆ ಫೆಬ್ರವವರಿ 29ರ ಬಳಿಕ ಹೀಗೆ ಮಾಡಿದರೆ ದಂಡದಿಂದ ತಪ್ಪಿಸಿಕೊಳ್ಳಲು ಸಾಧ್ಯ.

ನವದೆಹಲಿ(ಫೆ.01) ಭಾರದಲ್ಲಿ ಯುಪಿಐ ಸೇರಿದಂತೆ ಹಲವು ಸೇವೆ ನೀಡುತ್ತಿರುವ ಪೇಟಿಎಂ ಆ್ಯಪ್ ಅತ್ಯಂತ ಜನಪ್ರಿಯವಾಗಿದೆ. ಜನರ ಪ್ರತಿನಿತ್ಯದ ಬದುಕಿನಲ್ಲಿ ಪೇಟಿಎಂ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ. ಆದರೆ ನಿಯಮ ಉಲ್ಲಂಘಟನೆಯಿಂದ ಆರ್‌ಬಿಐ ಹಾಕಿರುವ ನಿರ್ಬಂಧದಿಂದ ಪೇಟಿಎಂ ಗ್ರಾಹಕರು ಕಂಗಲಾಗಿದ್ದಾರೆ. ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಫೆ.29ರಿಂದ ಹೊಸ ಗ್ರಾಹಕರ ನೋಂದಣಿ, ಠೇವಣಿ ಸ್ವೀಕಾರ ಹಾಗೂ ಫಾಸ್ಟ್ಯಾಗ್‌ ಸೇವೆ ನೀಡಕೂಡದು ಎಂದು ಆರ್‌ಬಿಐನಿರ್ಬಂಧ ವಿಧಿಸಿದೆ. ಇದರಿಂದ ತಮ್ಮ ವಾಹನಗಳಲ್ಲಿ ಫಾಸ್ಟ್ಯಾಗ್ ಬಳಸುವ ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ. ಫೆಬ್ರವರಿ 29ರ ಬಳಿಕ ಟೋಲ್ ಗೇಟ್‌ಗಳಲ್ಲಿ ಪೇಟಿಎಂ ಫಾಸ್ಟ್ಯಾಗ್‌ ಕಾರ್ಯನಿರ್ವಹಿಸುವುದಿಲ್ಲ. 

ಆಡಿಟ್‌ನ ವೇಳೆ ನಿಯಮಗಳ ಉಲ್ಲಂಘನೆ ಕಂಡು ಬಂದಿರುವುದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನಿರ್ಬಂಧ ವಿಧಿಸಿದೆ. ವಾಹನಗಳಲ್ಲಿ ಪೇಟಿಎಂ FASTag ಬಳಕೆ ಮಾಡುವ ಗ್ರಾಹಕರು ಫೆಬ್ರವರಿ 29ರ ಬಳಿಕ ಅನಿವಾರ್ಯವಾಗಿ ಬೇರೆ ಬ್ಯಾಂಕ್‌ನ ಹೊಸ FASTag ಖರೀದಿಸಬೇಕಾಗಿದೆ. ಪೇಟಿಎಂ ಮೇಲಿನ ನಿರ್ಬಂಧ ತೆರವಾದರೆ ಈ ಸಾಧ್ಯತೆ ಇರುವುದಿಲ್ಲ. ಆದರೆ ಸದ್ಯಕ್ಕೆ ಈ ನಿರ್ಬಂಧ ತೆರವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಪ್ರಮುಖ ನಿರ್ಬಂಧ ವಿಧಿಸಿದ ಆರ್‌ಬಿಐ!

ಫೆಬ್ರವರಿ 29ರ ಬಳಿಕ ಪೇಟಿಎಂ ವಹಿವಾಟಿಗೆ ನಿರ್ಬಂಧ ವಿಧಿಸಿರುವ ಕಾರಣ ವಾಹನಗಳಲ್ಲಿರುವ ಪೇಟಿಎಂ FASTag ಕಾರ್ಯನಿರ್ವಹಿಸುವುದಿಲ್ಲ. ಹೀಗಾದಲ್ಲಿ ಟೋಲ್ ಗೇಟ್‌ಗಳಲ್ಲಿ ದುಪಟ್ಟು ಹಣ ಪಾವತಿಸಿ ಸಾಗಬೇಕಾದ ಸಂಕಷ್ಟ ಎದುರಾಗಲಿದೆ. ಎಲ್ಲಾ ಟೋಲ್ ಗೇಟ್‌ಗಳಲ್ಲಿ ನಗದು ಪಾವತಿ ನಿರ್ಬಂಧಿಸಲಾಗಿದೆ. ಕೇವಲ FASTag ಮೂಲಕ ಮಾತ್ರ ಪಾವತಿ ವ್ಯವಸ್ಥೆ ಜಾರಿ ಮಾಡಲಾಗಿದೆ. ಹೀಗಾಗಿ FASTag ಇಲ್ಲದಿದ್ದರೆ, 50 ರೂಪಾಯಿ ಇದ್ದಲ್ಲಿ 100 ರೂಪಾಯಿ ಪಾವತಿಸಬೇಕಾಗುತ್ತದೆ. 

ಸದ್ಯದ ಆರ್‌ಬಿಐ ಆದೇಶನುಸಾರ ಫೆಬ್ರವರಿ 29ರ ವರೆಗೆ ಪೇಟಿಎಂ FASTag ಕಾರ್ಯನಿರ್ವಹಿಸಲಿದೆ. ಫೆ.29ರ ಬಳಿಕ ಪೇಟಿಎಂ FASTag ಖಾತೆಯಲ್ಲಿ ಸಾಕಷ್ಟು ಹಣವಿದ್ದರೂ ಕಾರ್ಯನಿರ್ವಹಿಸುವುದಿಲ್ಲ. 

600 ಕೋಟಿ ರೂಪಾಯಿ ನಷ್ಟದೊಂದಿಗೆ ಪೇಟಿಎಂನಿಂದ ಹೊರನಡೆದ ವಾರನ್‌ ಬಫೆಟ್‌!

ಆರ್‌ಬಿಐ ಆದೇಶ:
ಪೇಟಿಎಂನಲ್ಲಿ ಯಾವುದೇ ಠೇವಣಿ ಅಥವಾ ಸಾಲ ನೀಡುವಿಕೆ, ಯಾವುದೇ ಗ್ರಾಹಕರಿಗೆ ಟಾಪ್‌ಅಪ್‌ ನೀಡುವಿಕೆ ಅಥವಾ ಪೂರ್ವಪಾವತಿ ಸಾಧನ, ವ್ಯಾಲೆಟ್‌, ಫಾಸ್ಟ್‌ಟ್ಯಾಗ್‌, ಎನ್‌ಸಿಎಂಸಿ ಕಾರ್ಡ್‌ ಹಾಗೂ ಇತರ ಸೇವೆಗಳನ್ನು ನೀಡುವುದರಿಂದ ಫೆ.29ರಿಂದ ನಿರ್ಬಂಧಿಸಲಾಗಿದೆ ಎಂದು ಆರ್‌ಬಿಐ ಆದೇಶಿಸಿದೆ. ‘ಆದರೆ ವ್ಯಾಲೆಟ್‌ನಲ್ಲಿ ಇದ್ದ ಬಾಕಿ ಹಣವನ್ನು ಹಿಂಪಡೆತ ಅಥವಾ ಬಳಕೆಗೆ ಯಾವುದೇ ನಿರ್ಬಂಧವಿಲ್ಲ. ಯಾವುದೇ ಬಡ್ಡಿ ಪಾವತಿ, ಕ್ಯಾಷ್‌ಬ್ಯಾಕ್‌ ಅಥವಾ ಮರುಪಾವತಿಗಳನ್ನು ಯಾವಾಗ ಬೇಕಾದರೂ ಮಾಡಬಹುದು’ ಎಂದು ಆರ್‌ಬಿಐ ಹೇಳಿದೆ.

click me!