ಸಿಎಂ ಭಗವಂತ್ ಮಾನ್‌ಗೆ ತೀವ್ರ ಮುಖಭಂಗ, ಪಂಜಾಬ್‌ನಲ್ಲಿ ಹೂಡಿಕೆ ವರದಿ ಸುಳ್ಳು BMW ಸ್ಪಷ್ಟನೆ!

By Suvarna News  |  First Published Sep 14, 2022, 9:57 PM IST

ಆಮ್ ಆದ್ಮಿ ಸರ್ಕಾರದ ಆಡಳಿತಿಂದ  ಬಹುರಾಷ್ಟ್ರೀಯ ಕಂಪನಿಗಳು ಪಂಜಾಬ್‌ನತ್ತ ಮುಖಮಾಡಿದೆ. ಇದೀಗ  BMW ಪಂಜಾಬ್‌ನಲ್ಲಿ ಕಾರು ಉತ್ಪಾದನಾ ಘಟಕ ಆರಂಭಿಸುತ್ತಿದೆ. ಇದಕ್ಕಾಗಿ ಹೂಡಿಕೆ ಮಾಡುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಸಿಎಂ ಭಗವಂತ್ ಮಾನ್ ಘೋಷಿಸಿದ್ದರು. ಆದರೆ ಈ ಎಲ್ಲಾ ವರದಿ ಸುಳ್ಳು ಎಂದು ಸ್ವತಃ BMW ಸ್ಪಷ್ಟಪಡಿಸಿದೆ. 


ನವದೆಹಲಿ(ಸೆ.14):  ಆಮ್ ಆದ್ಮಿ ಪಂಜಾಬ್ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಆಪ್ ಸರ್ಕಾರದ ಆಡಳಿತದಿಂದ ಪಂಜಾಬ್‌ನಲ್ಲಿ  BMW ಉತ್ಪಾದನಾ ಘಟಕ ಆರಂಭಿಸುತ್ತಿದೆ. ಇದಕ್ಕೆ ಹೂಡಿಕೆ ಮಾಡಲಾಗುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಸಿಎಂ ಭಗವಂತ್ ಮಾನ್ ಘೋಷಿಸಿದ್ದರು. ಈ ವರದಿ ಭಾರಿ ಸಂಚಲನ ಸೃಷ್ಟಿಯಾಗುತ್ತಿದೆ. ಇದರ ಬೆನ್ನಲ್ಲೇ  BMW ಕಂಪನಿ ಸ್ಪಷ್ಟನೆ ನೀಡುತ್ತಿದೆ. ಭಾರತದ ಮಾರುಕಟ್ಟೆ ನಮಗೆ ಮುಖ್ಯವಾಗಿದೆ. ಆದರೆ ಪಂಜಾಬ್‌ನಲ್ಲಿ  BMW ಯಾವುದೇ ಘಟಕ ಆರಂಭಿಸುತ್ತಿಲ್ಲ, ಹೂಡಿಕೆ ಮಾಡುತ್ತಿಲ್ಲ ಎಂದು  BMW ಸ್ಪಷ್ಟಪಡಿಸಿದೆ.  BMW ಸ್ಪಷ್ಟನೆ ಭಗವಂತ್ ಮಾನ್‌ಗೆ ತೀವ್ರ ಹಿನ್ನಡೆ ತಂದಿದೆ. 

ಪಂಜಾಬ್‌ನಲ್ಲಿ ಹೂಡಿಕೆ ಸುಳ್ಳು ವರದಿಗಳಿಗೆ  BMW ಸ್ಪಷ್ಟನೆ ನೀಡುವ ಮೂಲಕ ಪಂಜಾಬ್ ಆಪ್ ಸರ್ಕಾರದ ಘೋಷಣೆಯ ಅಸಲಿಯತ್ತು ಬಹಿರಂಗವಾಗಿದೆ. ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ  BMW, ಮಿನಿ ಹಾಗೂ  BMW ಮೋಟಾರ್ಡ್ ಪ್ರಿಮೀಯಂ ವಾಹನಗಳ ತಯಾರಕ ಕಂಪನಿಯಾಗಿದೆ.  BMW ಇಂಡಿಯಾ ಹಾಗೂ  BMW ಫಿನಾಶ್ಶಿಯಲ್ ಸಂಪೂರ್ಣವಾಗಿ  BMW ಗ್ರೂಪ್ ಅಧೀನದ ಕಂಪನಿಯಾಗಿದೆ. ಭಾರತದಲ್ಲಿ ಮುಖ್ಯ ಕಚೇರಿ ಗುರುಗಾಂವನಲ್ಲಿದೆ. ಭಾರತದಲ್ಲಿ  BMW ಕಂಪನಿ ಚೆನ್ನೈನಲ್ಲಿ ವಾಹನ ಉತ್ಪಾದನಾ ಘಟಕ ಹೊಂದಿದೆ. ಬಿಡಿಭಾಗಗಳ ಘಟಕ ಪುಣೆಯಲ್ಲಿದೆ. ಇನ್ನು ತರಬೇತಿ ಕೇಂದ್ರ ಗುರುಗಾಂವನಲ್ಲಿದೆ. ಭಾರತದ ಎಲ್ಲಾ ಮೆಟ್ರೋ ನಗರಗಳಲ್ಲಿ ಡೀಲರ್ ಹಾಗೂ ಸಂಪರ್ಕ ಹೊಂದಿದೆ.  BMW ಪಂಜಾಬ್‌ನಲ್ಲಿ ಮತ್ತೊಂದು ಉತ್ಪಾದನಾ ಘಟಕ ಆರಂಭಿಸುವ ಯಾವುದೇ ಯೋಜನೆ ನಮ್ಮ ಮುಂದಿಲ್ಲ. ಪಂಜಾಬ್‌ನಲ್ಲಿ ಯಾವುದೇ ಹೂಡಿಕೆ ಮಾಡುತ್ತಿಲ್ಲ ಎಂದು  BMW ಕಂಪನಿ ಸ್ಪಷ್ಟನೆ ನೀಡಿದೆ.

Tap to resize

Latest Videos

 

Punjab AAP ಶಾಸಕರ ಖರೀದಿಗೆ ಆಪರೇಷನ್ ಕಮಲ , ಬಿಜೆಪಿ ವಿರುದ್ಧ ಕೇಜ್ರಿವಾಲ್ ಕಿಡಿ!

ಕಾರು ಕಂಪನಿಯ ಸ್ಪಷ್ಟನೆ ಇದೀಗ ವೈರಲ್ ಆಗಿದೆ. ಭಗವಂತ್ ಮಾನ್ ಯಾವುದೇ ಆಧಾರವಿಲ್ಲದೆ ಈ ರೀತಿಯ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಅನ್ನೋ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಈ ರೀತಿ ಸುಳ್ಳು ಘೋಷಣೆಗಳನ್ನು, ಭರವಸೆಗಳನ್ನು ನೀಡಿ ಅಧಿಕಾರ ಹಿಡಿದಿದ್ದಾರೆ. ಇದೀಗ ಅಸಲಿಯತ್ತು ಬಹಿರಂಗವಾಗುತ್ತಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. 

ಪಂಜಾಬ್‌ ಶಾಸಕರ ಸೆಳೆಯಲು ಬಿಜೆಪಿ 25 ಕೋಟಿ ರು. ಆಮಿಷ: ಆಪ್‌ ಸಚಿವ
 ದೆಹಲಿಯಲ್ಲಿ ಸರ್ಕಾರ ಬೀಳಿಸಲು ವಿಫಲವಾದ ಬಿಜೆಪಿ ತನ್ನ ‘ಆಪರೇಶನ್‌ ಕಮಲ’ ಕಾರ್ಯವನ್ನು ಪಂಜಾಬ್‌ನಲ್ಲಿ ಆರಂಭಿಸಿದೆ. ಆಪ್‌ ಶಾಸಕರನ್ನು ತಮ್ಮತ್ತ ಸೆಳೆಯಲು ಬಿಜೆಪಿ 25 ಕೋಟಿ ರು.ಗಳ ಆಮಿಶವನ್ನು ಒಡ್ಡಿದೆ ಎಂದು ಪಂಜಾಬ್‌ ವಿತ್ತ ಸಚಿವ ಹರ್ಪಾಲ್‌ ಚೀಮಾ ಆರೋಪ ಮಾಡಿದ್ದಾರೆ. 
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಯಶಸ್ವಿಯಾದ ಆಪರೇಶನ್‌ ಕಮಲವನ್ನು ಪಂಜಾಬ್‌ನಲ್ಲೂ ಆರಂಭಿಸಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಶಾಸಕರನ್ನು ಖರೀದಿಸುವ ಸಲುವಾಗಿ ಆಪ್‌ನ 7ರಿಂದ 10 ಶಾಸಕರನ್ನು ಪತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬಿಜೆಪಿ ಭೇಟಿ ಮಾಡಿದ್ದು, ದೆಹಲಿಗೆ ಬಂದು ಬಿಜೆಪಿಯ ಹಿರಿಯ ನಾಯಕರನ್ನು ಭೇಟಿ ಮಾಡುವಂತೆ ಆಫರ್‌ ನೀಡಿದ್ದಾರೆ. ಬಿಜೆಪಿಗೆ ಸೇರ್ಪಡೆಯಾಗುವುದಾದರೆ ತಲಾ 25 ಕೋಟಿ ರು. ನೀಡುವುದಾಗಿ ಹೇಳಿದ್ದಾರೆ. ಇನ್ನೂ 3-4 ಶಾಸಕರನ್ನು ನಿಮ್ಮ ಜತೆ ಕರೆತಂದರೆ 60-70 ಕೋಟಿ ರು. ನೀಡುವುದಾಗಿ ಹೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

click me!