ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿ.ಮೀ ಮೈಲೇಜ್ ನೀಡಬಲ್ಲ ಸಾಮರ್ಥ್ಯ, ಕೇವಲ 3 ಲಕ್ಷ ರೂಪಾಯಿ ಮೌಲ್ಯದ ಹೊಚ್ಚ ಹೊಸ ಮೊಂಟ್ರಾ ಎಲೆಕ್ಟ್ರಿಕ್ 3W ಆಟೋ ರಿಕ್ಷಾ ಬಿಡುಗಡೆಯಾಗಿದೆ. ನೂತನ ಆಟೋ ವಿವರ ಇಲ್ಲಿದೆ.
ಬೆಂಗಳೂರು(ಸೆ.06): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹಾಗೂ ಉತ್ಪಾದನೆ ಹೆಚ್ಚಾಗಿದೆ. ಕಾರು, ಸ್ಕೂಟರ್, ಬೈಕ್ ಹಾಗೂ ತ್ರಿಚಕ್ರ ವಾಹನಗಳು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗಿದೆ. ಇದೀಗ ಪ್ರತಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಇದೀಗ ಭಾರತದ ಟ್ಯೂಬ್ ಇನ್‌ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾ, ಎ ಮುರುಗಪ್ಪ ಗ್ರೂಪ್ ಕಂಪನಿ ಉಪಸಂಸ್ಥೆಯಾದ ಟಿಐ ಕ್ಲೀನ್ ಮೊಬಿಲಿಟಿ ಮೊಂಟ್ರಾ ಎಲೆಕ್ಟ್ರಿಕ್ 3W ಆಟೋ ಬಿಡುಗಡೆ ಮಾಡಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ ಮೀಟರ್‌ಗಳ ಅತ್ಯುತ್ತಮ ಮೈಲೇಜ್ ರೇಂಜ್ (ARI ಸರ್ಟಿಫೈಡ್) ಮತ್ತು 155+/-5 ಕಿಲೋ ಮೀಟರ್ (ಟಿಪಿಕಲ್ ರೇಂಜ್) ರೇಂಜ್ ಒದಗಿಸುತ್ತದೆ. ಈ ಉದ್ಯಮದಲ್ಲೇ ಅತ್ಯುತ್ತಮವಾದ 60 Nm ಅತ್ಯತ್ತಮ ಅಗ್ರ ಟಾರ್ಕ್ ಮತ್ತು ಗಂಟೆಗೆ 55 ಕಿಮೀ ಟಾಪ್ ಸ್ಪೀಡ್ ಸಾಮರ್ಥ್ಯ ಹೊಂದಿದೆ.
3ಡಬ್ಲ್ಯು ಆಟೋದ(Electric Auto) ಬಿಡುಗಡೆಯು ಇಲೆಕ್ಟ್ರಿಕ್ ಕ್ಷೇತ್ರಕ್ಕೆ ನಮ್ಮ ಬ್ರ್ಯಾಂಡ್‌ನ ಪ್ರವೇಶವನ್ನು ಸಂಕೇತಿಸುತ್ತದೆ. ವಿಶಿಷ್ಟ ಅಂದ, ಬಲಿಷ್ಠ ಪ್ರದರ್ಶನ ಮತ್ತು ಬಲಿಷ್ಠವಾದ ನಿರ್ಮಾಣ ಗುಣಮಟ್ಟ ಗಳಿಂದಾಗಿ ಭಾರತದಲ್ಲಿ ಕೊನೆ ಗಮ್ಯದವರೆಗಿನ ಸಾಗಾಟ ಪ್ರಕ್ರಿಯೆಯನ್ನು ಈ ವಾಹನವು ಕ್ರಾಂತಿಕಾರಕಗೊಳಿಸಲಿದೆ. ಮೊಂಟ್ರಾ ಇಲೆಕ್ಟ್ರಿಕ್(Montra Electric) 3ಡಬ್ಲ್ಯು ನಮಗೆ ಬೆಳವಣಿಗೆ ಹಾಗೂ ಆವಿಷ್ಕಾರದ ಹೊಸ ಘಟ್ಟವಾಗಿದೆʼ ಎಂದು ಟ್ಯೂಬ್ ಇನ್‌ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾದ ಕಾರ್ಯಕಾರಿ ಅಧ್ಯಕ್ಷ ಅರುಣ್ ಮುರುಗಪ್ಪನ್ ಹೇಳಿದ್ದಾರೆ.
115 ಕಿ.ಮೀ ಮೈಲೇಜ್, 3.6 ಲಕ್ಷ ರೂ, ಹೊಚ್ಚ ಹೊಸ ಮಹೀಂದ್ರ ಝೋರ್ ಎಲೆಕ್ಟ್ರಿಕ್ ಲಾಂಚ್!
ಈ ಉತ್ಪನ್ನದ ಅಭಿವೃದ್ಧಿಗೆ ನಾವು ನಮ್ಮ ಉತ್ತಮ ಸಂಪನ್ಮೂಲಗಳನ್ನು ಹಾಗೂ ಸಮಯವನ್ನು ಹೂಡಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ನೋಡಿ ನಮಗೆ ರೋಮಾಂಚನವಾಗಿದೆ. ಟಿಐ ಕ್ಲೀನ್ ಮೊಬಿಲಿಟಿಯ ನಾವು, ಗ್ರಾಹಕರು ಮತ್ತು ನಮಗೂ ವ್ಯಾಪಾರ-ವ್ಯವಹಾರಕ್ಕೆ ಮಹತ್ವದ್ದಾದ ಉತ್ಪನ್ನಗಳು ಮತ್ತು ಪರಿಹಾರಗಳನ್ನು ಒದಗಿಸಲು ಪ್ರಯತ್ನಿಸುತ್ತೇವೆ. ಮೊಂಟ್ರಾ ಇಲೆಕ್ಟ್ರಿಕ್‌ನೊಂದಿಗೆ ಕಾರ್ಬನ್ ನ್ಯೂಟ್ರಾಲಿಟಿ ಸಾಗುತ್ತಿದೆ. ಇಲೆಕ್ಟ್ರಿಕ್ 3ಡಬ್ಲ್ಯು(Electric 3 Wheeler) ಅತಿ ದೊಡ್ಡ ಬೆಳವಣಿಗೆಯ ಸಾಮರ್ಥ್ಯವಿರುವ ಇವಿಯ (ಇಲೆಕ್ಟ್ರಾನಿಕ್ ವಾಹನ) ಒಂದು ವಲಯವಾಗಿದೆ. 2070ರೊಳಗೆ ಭಾರತದ ನಿವ್ವಳ ಶೂನ್ಯ ಇಂಗಾಲ(Zero Carbon) ಹೊರಸೂಸುವಿಕೆ ಗುರಿ ಸಾಧನೆಯ ಪ್ರಯತ್ನದ ಮೇಲೆ ಈ ವಲಯವು ಗಣನೀಯ ಪರಿಣಾಮ ಬೀರಲಿದೆ. ಶುದ್ಧ ಸಾಗಾಟದ ನೇತಾರ ಹಾಗೂ ಸ್ವದೇಶಿ ಉದ್ಯಮ ಸಂಸ್ಥೆಯಾಗಿ ಸುಸ್ಥಿರ ಭವಿಷ್ಯದ ಗುರಿಯ ಸಾಕಾರಕ್ಕೆ ನೆರವಾಗಲು ಭಾರತ ಸರಕಾರದೊಂದಿಗೆ ಕೈಜೋಡಿಸುವುದು ನಮ್ಮ ಕರ್ತವ್ಯವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ ಎಂದರು.
ಈ ವಿಭಾಗದ ಅತ್ಯುತ್ತಮವಾದ 10 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಹೊಂದಿದೆ. 197 ಕಿಲೋ ಮೀಟರ್‌ಗಳ(Mileage Range) ಅತ್ಯುತ್ತಮ ರೇಂಜ್ (ಎಆರ್‌ಎಐ ಸರ್ಟಿಫೈಡ್) ಮತ್ತು 155+/-5 ಕಿಲೋ ಮೀಟರ್ (ಟಿಪಿಕಲ್ ರೇಂಜ್) ರೇಂಜ್ ಒದಗಿಸುತ್ತದೆ. ಈ ಉದ್ಯಮದಲ್ಲೇ ಅತ್ಯುತ್ತಮವಾದ 60ಎನ್‌ಎಂ ಅತ್ಯತ್ತಮ ಅಗ್ರ ಟಾರ್ಕ್ ಮತ್ತು ಗಂಟೆಗೆ 55 ಕಿಮೀ ಟಾಪ್ ಸ್ಪೀಡ್ ಒದಗಿಸುತ್ತದೆ. ಆರ್ಥಿಕವಾಗಿ ಕೈಗೆಟುಕಲು ಕೈಗಾರಿಕೆಯ ಪ್ರಥಮ ಮಲ್ಟಿ ಡ್ರೈವ್ ಮೋಡ್‌ಗಳು ಹಾಗೂ ನಗರ ಟ್ರಾಫಿಕ್‌ಗಳಲ್ಲಿ(City Traffic) ಸರಾಗವಾಗಿ ಉತ್ತಮ ಚಾಲನೆಗೆ ಸಹಾಯವಾಗುವ ಪಾರ್ಕ್ ಅಸಿಸ್ಟ್ ಮೋಡ್‌ಗಳನ್ನು ಅಳವಡಿಸಲಾಗಿದೆ. ಸುರಕ್ಷತೆ ಮತ್ತು ತಾಳಿಕೆ ನಮ್ಮ ಅಗ್ರ ಆದ್ಯತೆಯಾಗಿವೆ. ಮೊಂಟ್ರಾ ಇಲೆಕ್ಟ್ರಿಕ್ 3ಡಬ್ಲ್ಯುಅನ್ನು ಉತ್ತಮ ಸಾಮಗ್ರಿಗಳಿಂದ ತಯಾರಿಸಲಾಗಿದ್ದು ಸಂಪೂರ್ಣ ಮನಃಶಾಂತಿ ನೀಡುತ್ತದೆ. ಈ ವಿಭಾಗ-ಮುಂಚೂಣಿಯ ಪ್ರದರ್ಶನವು ಡಬಲ್ ಫೋರ್ಕ್ ಫ್ರಂಟ್ ಸಸ್ಪೆನ್ಶನ್ ಬಳಸಿ ಉತ್ತಮ ಆರಾಮದಾಯಕತೆಗೆ ಪೂರಕವಾಗಿದೆ, ಕಾರ್‌ನಂಥ ಚಾಲಕ ಆಸನ ಮತ್ತು ಉತ್ತಮ ಕುಷನಿಂಗ್ ಇದೆ. ಮೊಂಟ್ರಾ ಇಲೆಕ್ಟ್ರಿಕ್ 3ಡಬ್ಲ್ಯು ಚಾಲಕ ಮತ್ತು ಪ್ರಯಾಣಿಕರಿಗೆ ಅಗತ್ಯವಾದ ಎಲ್ಲ ಸ್ಥಳಾವಕಾಶವನ್ನು ಹೊಂದಿದೆ. ಲಗೇಜ್‌ಗೆ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿರುವುದು ಈ ವಿಭಾಗದ ವಿಶೇಷವಾಗಿದೆ. ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಅನುಕೂಲವಾಗುವಂತೆ ಟೆಲಿಮ್ಯಾಟಿಕ್ಸ್ ಮತ್ತು ಆಧುನಿಕ ಆಪ್‌ಗಳನ್ನು ಅಳವಡಿಸಲಾಗಿದ್ದು ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಗಳಲ್ಲಿ ಲಭ್ಯಗೊಳಿಸಲಾಗಿದೆ. ಡಿಜಿಟಲ್ ಫೈನಾನ್ಸಿಂಗ್, 24x7 ರಸ್ತೆ ಬದಿ ನೆರವು, ಎರಡು ವರ್ಷದ ವಿಸ್ತರಿತ ವಾರಂಟಿ ಆಯ್ಕೆ ಮತ್ತು 3 ವರ್ಷದ ಎಎಂಸಿಗಳು ಇರುವುದರಿಂದ ಇದನ್ನು ಹೊಂದುವುದು ಸುಲಭವಾಗಿದೆ ಎಂದು ಟಿಐಸಿಎಂಪಿಎಲ್ ಎಂ ಕೆ.ಕೆ. ಪೌಲ್ ಹೇಳಿದ್ದಾರೆ.
ಮಹೀಂದ್ರಾ ಬೊಲೆರೋ ಎಲೆಕ್ಟ್ರಿಕ್ ಪಿಕ್ಅಪ್ ಟೀಸರ್ ಬಿಡುಗಡೆ
ಚೆನ್ನೈನ ಅಂಬತ್ತೂರಿನಲ್ಲಿರುವ ಟಿಐ ಕ್ಲೀನ್ ಮೊಬಿಲಿಟಿ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗಿರುವ ಮೊಂಟ್ರಾ ಇಲೆಕ್ಟ್ರಿಕ್ 3ಡಬ್ಲ್ಯುಅನ್ನು ದಕ್ಷಿಣ ಭಾರತದಿಂದ ಆರಂಭಿಸಿ ಹಂತಹಂತವಾಗಿ ದೇಶಾದ್ಯಂತ ಲಭ್ಯಗೊಳಿಸಲಾಗುತ್ತದೆ. ಮೊಂಟ್ರಾ ಇಲೆಕ್ಟ್ರಿಕ್ 3ಡಬ್ಲ್ಯು ಬೆಲೆ 3.07 ಲಕ್ಷ ರೂಪಾಯಿಯೊಂದಿಗೆ (ಎಕ್ಸ್-ಶೋರೂಂ ಪೋಸ್ಟ್-ಸಬ್ಸಿಡಿ, 7.66 ಕೆಡಬ್ಲ್ಯುಎಚ್) ಆರಂಭವಾಗುತ್ತದೆ. ದೇಶದಾದ್ಯಂತ 100+ ಡೀಲರ್‌ಗಳಲ್ಲಿ ಈ ವಾಹನ ಲಭ್ಯವಾಗಲಿದೆ.