ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿಗೆ ಇದೆ 12 ಶುಭ ಘಳಿಗೆ, ಮಿಸ್ ಮಾಡಬೇಡಿ ಈ ಸಮಯ!

By Suvarna NewsFirst Published Dec 27, 2023, 12:54 PM IST
Highlights

ಹೊಸ ವರ್ಷದಲ್ಲಿ ಹೊಸತು ಖರೀದಿ ವರ್ಷವಿಡೀ ಹೊಸತನ ನೀಡಲಿದೆ ಅನ್ನೋ ನಂಬಿಕೆ. ಹೀಗಾಗಿ ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿಸಿ ಡೆಲವರಿ ಪಡೆದುಕೊಳ್ಳುವುದು ಸಾಮಾನ್ಯ. ಈ ಬಾರಿ ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿಗೆ 12 ಶುಭ ಘಳಿಗೆಗಳಿವೆ. ಈ ಸಮಯವನ್ನು ಮಿಸ್ ಮಾಡಿಕೊಳ್ಳಬೇಡಿ.
 

ಬೆಂಗಳೂರು(ಡಿ.27) ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವಾಹನ, ಉದ್ಯಮ ಸೇರಿದಂತೆ ಯಾವುದೇ ಶುಭ ಕಾರ್ಯಕ್ಕೆ ಶುಭ ಮೂಹೂರ್ತವೂ ಅಷ್ಟೇ ಮುಖ್ಯ. ಶುಭ ಮೂಹೂರ್ತದಲ್ಲಿ ಆರಂಭಿಸಿದ ಯಾವುದೇ ಕಾರ್ಯಗಳಿಗೆ ವಿಘ್ನಗಳು ಎದುರಾಗುವುದಿಲ್ಲ, ಜೊತೆಗೆ ಯಶಸ್ಸಿನ ಮೆಟ್ಟಿಲುಗಳು ತೆರೆಯಲಿದೆ ಅನ್ನೋದು ನಂಬಿಕೆ. ಭಾರತದಲ್ಲಿ ಹೊಸ ವರ್ಷವನ್ನು ಹೊಸತನದಿಂದ ಆರಂಭಿಸುವುದ ಸಾಮಾನ್ಯ. ಹೀಗಾಗಿ ಹೆಚ್ಚಿನವರು ಹೊಸ ವರ್ಷದಲ್ಲಿ ಹೊಸ ವಾಹನ ಖರೀದಿ ಸೇರಿದಂತೆ ಇತರ ಹೊಸ ವಸ್ತುಗಳ, ಚಿನ್ನ ಖರೀದಿ ಮಾಡುತ್ತಾರೆ. 2024ರ ಹೊಸ ವರ್ಷದ ಮೊದಲ ತಿಂಗಳಲ್ಲಿ 12 ಶುಭಮುಹೂರ್ತ ವಾಹನ ಖರೀದಿಗೆ ಉತ್ತಮ ಸಮಯ. ಆದರೆ ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1 ಕ್ಕಿಂತ ಇತರ ದಿನಗಳಲ್ಲಿನ ಶುಭ ಮುಹೂರ್ತ ಉತ್ತಮವಾಗಿದೆ.ಟ

ಶುಭ ಮುಹೂರ್ತ ಕೇವ ಹಿಂದೂ ಸಂಪ್ರದಾಯ, ಆಚರಣೆ ನಂಬಿಕೆಗೆ ಮಾತ್ರ ಸೀಮಿತವಾಗಿಲ್ಲ, ವಿಜ್ಞಾನಕ್ಕೂ ಶುಭ ಮುಹೂರ್ತ ಅನ್ವಯಿಸಲಾಗುತ್ತದೆ. ಉಪಗ್ರಹ ಉಡಾವಣೆ ವೇಳೆಯೂ ಶುಭ ಮುಹೂರ್ತವನ್ನು ನಿಗಧಿಪಡಿಸಲಾಗುತ್ತದೆ. ಕಾರು, ಸ್ಕೂಟರ್, ಬೈಕ್ ಸೇರಿದಂತೆ ಯಾವುದೇ ವಾಹನ ಖರೀದಿಸಲು 2024ರ ಜನವರಿ ತಿಂಗಳಲ್ಲಿ 12 ಶುಭ ಮುಹೂರ್ತಗಳಿವೆ. ಈ ಶುಭ ಮೂಹೂರ್ತಗಳ ಸಮಯ, ನಕ್ಷತ್ರ, ತಿಥಿ ವಿವರ ಇಲ್ಲಿದೆ.

10 ವರ್ಷಗಳ ನಂತರ 'ಪರಿವರ್ತನ ರಾಜಯೋಗ' ಈ 3 ರಾಶಿಗೆ ಲಾಟರಿ..? ಯಾವ ರಾಶಿಗೆ 'ಇಂತಹ' ರಾಜಯೋಗದ ಭಾಗ್ಯ

ಜನವರಿ 3, 2024:
ವಾಹನ ಖರೀದಿಯ ಶುಭ ಸಮಯ: ಸಂಜೆ 07:48ರಿಂದ ಜನವರಿ 04ರ ಬೆಳಗ್ಗೆ 07:15ರ ವರೆಗೆ
ನಕ್ಷತ್ರ: ಹಸ್ತ, ತಿಥಿ:ಅಷ್ಟಮಿ

ಜನರಿ 4, 2024
ವಾಹನ ಖರೀದಿಯ ಶುಭ ಸಮಯ: ಬೆಳಗ್ಗೆ 7.15ರಿಂದ ರಾತ್ರಿ 10.05ರ ವರೆಗೆ
ನಕ್ಷತ್ರ: ಹಸ್ತ, ಚಿತ್ರ,  ತಿಥಿ: ಅಷ್ಟಮಿ

ಜನರಿ 7, 2024
ವಾಹನ ಖರೀದಿಯ ಶುಭ ಸಮಯ: ರಾತ್ರಿ 10.08ರಿಂದ ಜನವರಿ 8ರ ಮಧ್ಯಾಹ್ನ 12.46ರ ವರೆಗೆ
ನಕ್ಷತ್ರ: ಅನುರಾಧ, ತಿಥಿ: ಏಕಾದಶಿ

ಜನರಿ 14, 2024
ವಾಹನ ಖರೀದಿಯ ಶುಭ ಸಮಯ: ಬೆಳಗ್ಗೆ 7.15 ರಿಂದ 7.59ರ ವರಗೆ
ನಕ್ಷತ್ರ: ಧನಿಷ್ಠ, ತಿಥಿ:  ಚತುರ್ಥಿ, ತತೀಯಾ

ಶ್ರದ್ಧಾ ಕಪೂರ್ To ಆಲಿಯಾ ಭಟ್; ಈ ವರ್ಷ ದುಬಾರಿ ಕಾರು ಖದೀಸಿದಿದ ಬಾಲಿವುಡ್ ನಟಿಯರು!

ಜನರಿ 15, 2024
ವಾಹನ ಖರೀದಿಯ ಶುಭ ಸಮಯ: ಬೆಳಗ್ಗ 7.15ರಿಂದ 8.07ರ ವರೆಗೆ
ನಕ್ಷತ್ರ: ಪೂರ್ವ ಭಾದ್ರಪದ, ಶತಾಬಿಷ್ಠ , ತಿಥಿ:   ಪಂಚಮಿ

ಜನರಿ 17, 2024
ವಾಹನ ಖರೀದಿಯ ಶುಭ ಸಮಯ: ರಾತ್ರಿ 10.06ರಿಂದ ಜನವರಿ 18ರ ಮಧ್ಯಾಹ್ನ 3.33ರ ವರೆಗೆ 
ನಕ್ಷತ್ರ: ರೇವತಿ , ತಿಥಿ: ಅಷ್ಠಮಿ  

ಜನರಿ 21, 2024
ವಾಹನ ಖರೀದಿಯ ಶುಭ ಸಮಯ: ಸಂಜೆ 7.41ರಿಂದ, ಜನವರಿ 22 ಬೆಳಗ್ಗೆ 7.26ರ ವರೆಗೆ
ನಕ್ಷತ್ರ: ರೋಹಣಿ , ತಿಥಿ:  ಏಕಾದಶಿ  

ಜನರಿ 22, 2024
ವಾಹನ ಖರೀದಿಯ ಶುಭ ಸಮಯ: ಸಂಜೆ 7.51ರಿಂದ ಜನವರಿ 23ರ ಬೆಳಗ್ಗೆ 4.58ರ ವರೆಗೆ
ನಕ್ಷತ್ರ: ಮೃಗಶೀರಾ , ತಿಥಿ: ತ್ರಯೋದಶಿ

ಜನರಿ 24, 2024
ವಾಹನ ಖರೀದಿಯ ಶುಭ ಸಮಯ: ರಾತ್ರಿ 9.49 ರಿಂದ ಜನವರಿ 24ರ ಬೆಳಗ್ಗೆ 7.13ರ ವರೆಗೆ 
ನಕ್ಷತ್ರ:ಪುನರ್ವಸು , ತಿಥಿ:  ಪೂರ್ಣಿಮಾ ಪುನರ್ವಸು 

ಜನರಿ 25, 2024
ವಾಹನ ಖರೀದಿಯ ಶುಭ ಸಮಯ: ಸಂಜೆ 7.13 ರಿಂದ ಜನವರಿ 26ರ ಬೆಳಗ್ಗೆ 7.11ರ ವರೆಗೆ 
ನಕ್ಷತ್ರ:ಪುನರ್ವಸು , ತಿಥಿ:  ಪೂರ್ಣಿಮಾ ಪುನರ್ವಸು 
 
ಜನರಿ 26, 2024
ವಾಹನ ಖರೀದಿಯ ಶುಭ ಸಮಯ: ಸಂಜೆ 7.12 ರಿಂದ ಜನವರಿ 27ರ ಬೆಳಗ್ಗೆ 10.28ರ ವರೆಗೆ 
ನಕ್ಷತ್ರ: ಪುಷ್ಯ , ತಿಥಿ: ಪ್ರತಿಪಾದ

ಜನರಿ 31, 2024
ವಾಹನ ಖರೀದಿಯ ಶುಭ ಸಮಯ: ಬೆಳಗ್ಗೆ 7.10 ರಿಂದ ಫೆಬ್ರವರಿ 1ರ  ಬೆಳಗ್ಗೆ 07.10ರ ವರೆಗೆ 
ನಕ್ಷತ್ರ: ಹಸ್ತ, ಚಿತ್ರ , ತಿಥಿ: ಪಂಚಮಿ, ಷಷ್ಠಿ 

click me!