ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಹೌದು ಏನು ಈ ಸ್ಮಾಟ್ ಎನ್ಫೋರ್ಸ್ಮೆಂಟ್ ಇಲ್ಲಿದೆ ನೋಡಿ ಉತ್ತರ.
ಬೆಂಗಳೂರು (Bangalore) ದೇಶದ ಅತಿಹೆಚ್ಚು ಸಂಚಾರ ದಟ್ಟಣೆ (Heavy Traffic)ಹೊಂದಿದ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿರುವುದು ಎಲ್ಲರಿಗೂ ತಿಳಿದಿದೆ. ಟ್ರಾಫಿಕ್ ನಿಯಂತ್ರಣ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಸೆನ್ಸಾರ್ ಕ್ಯಾಮೆರಾ (Traffic Sensor Camera) ಅಳವಡಿಸಲಾಗಿದೆ. ಆದರೂ ಟ್ರಾಫಿಕ್ ಕಂಟ್ರೋಲ್ ಆಗುತ್ತಿಲ್ಲ. ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಒದಗಿಸಲು ಇದೀಗ ರಾಜ್ಯ ಸಾರಿಗೆ ಇಲಾಖೆ ಬೆಂಗಳೂರಿನಲ್ಲಿ ಸ್ಮಾರ್ಟ್ ಎನ್ಫೋರ್ಸ್‌ಮೆಂಟ್ ಯೋಜನೆ ರೂಪಿಸಲು ಮುಂದಾಗಿದೆ.
ಸಾರಿಗೆ ಮತ್ತು ಸರಬರಾಜು ವೆಚ್ಚವನ್ನು ನಿಯಂತ್ರಿಸುವ ಉದ್ದೇಶದಿಂದ ಭಾರತ ಸರ್ಕಾರವು ಐಟಿ (IT) ಆಧಾರಿತ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ಇದು ದೇಶದ ಕೆಲ ರಾಜ್ಯಗಳಲ್ಲಿ ಜಾರಿಯಲ್ಲಿದ್ದು, ಇದೀಗ ಕರ್ನಾಟಕವು (Karnataka) ಕೂಡ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ಜಾರಿಗೊಳಿಸುತ್ತಿದೆ.
ಸಾರ್ವಜನಿಕರಿಗೆ ಹೊಸ ವರ್ಷದ ಶಾಕ್, ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!
ರಾಜ್ಯ ಸಾರಿಗೆ ಇಲಾಖೆಯು ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಮಾರ್ಚ್ ಅಂತ್ಯದೊಳಗೆ ಜಾರಿಗೊಳಿಸಲು ಮುಂದಾಗಿದೆ. ಅಪಘಾತವನ್ನು ನಿಯಂತ್ರಿಸುವುದು, ವಾಹನಗಳ ತೆರಿಗೆಯನ್ನು ಕಟ್ಟದೆ ಇರುವವರನ್ನು ಪತ್ತೆ ಹಚ್ಚುವುದು, ಪರವನಾಗಿ ಇಲ್ಲದೆ ಪ್ರಯಾಣ ಮಾಡುವವರ ಮೇಲೆ ನಿಗಾವಹಿಸಲು, ಆಕ್ರಮಗಳನ್ನು ತಡೆಯುವ ಉದ್ದೇಶದಿಂದ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ರೂಪಿಸಲಾಗಿದೆ.
undefined
ಆರಂಭದಲ್ಲಿ ಬೆಂಗಳೂರಿನ 20 ಮುಖ್ಯ ರಸ್ತೆಗಳಲ್ಲಿ ಉನ್ನತ ಮಟ್ಟದ ಸೆನ್ಸಾರ್ ಕ್ಯಾಮರಾಗಳ ಅಳವಡಿಸುವ ಮೂಲಕ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಅದು ಪೊಲೀಸ್ ಇಲಾಖೆಯ ಟ್ರಾಫಿಕ್ ಸೆನ್ಸಾರ್ ಕ್ಯಾಮರಾಗಳು ಇರುವ ಜಾಗವನ್ನು ಹೊರತುಪಡಿಸಿ ಅಳವಡಿಸಲಾಗುತ್ತದೆ. ನಂತರದ ದಿನಗಳಲ್ಲಿ ಕರ್ನಾಟಕದಾದ್ಯಂತ ಸ್ಮಾಟ್ ಎನ್ಫೋರ್ಸ್ಮೆಂಟ್ ಜಾರಿಗೊಳಿಸಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ. ಅದಕ್ಕೂ ಮುನ್ನ ಎಲ್ಲ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP) ಮಾಡಿಸುವುದು ಕಡ್ಡಾಯವಾಗಿದೆ.ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ಕ್ಯಾಮೆರಾಗಳು ವಾಹಗಳ HSRP ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಲಿದೆ.
ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯ ಉಪಯೋಗವೇನು ?
ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯಲ್ಲಿ ಅಳವಡಿಸಿರುವ ಉನ್ನತ ಗುಣಮಟ್ಟದ ಕ್ಯಾಮರಗಳು ರಸ್ತೆಯಲ್ಲಿ ಸಂಚಾರಿಸುವ ವಾಹನದ ಸಂಪೂರ್ಣ ಮಾಹಿತಿಯನ್ನು ಒದಗಿಸುತ್ತದೆ. ಅಂದರೆ ಟ್ರಾಫಿಕ್ ನಿಯಮದ ಪಾಲನೆ, ವಾಹನ ಎಲ್ಲಿದೆ ಎಂದು ಟ್ರಾಕಿಂಗ್ ಮಾಡುತ್ತದೆ ಜೊತೆಗೆ ವಾಹನ ತೆರಿಗೆಯ ಕುರಿತು ಮಾಹಿತಿ ಮತ್ತು ಪರವಾನಗಿಯ ಸಂಪೂರ್ಣ ವಿವರವನ್ನು ಒದಗಿಸುತ್ತದೆ. ಆ ಮೂಲಕ ಟ್ರಾಫಿಕ್ ನಿಯಮ ಪಾಲಿಸದೆ ಇರುವವರನ್ನೂ, ವಾರ್ಷಿಕ ತೆರಿಗೆಯನ್ನು ಕಟ್ಟದೆ ಬಾಕಿ ಇಟ್ಟುಕೊಂಡಿರುವವರನ್ನು ಮತ್ತು ಪರವನಾಗಿ ಸತ್ಯತೆಯನ್ನು ಪರಿಶೀಲಿಸಿ, ತಪ್ಪಿತ್ಥರ ವಿರುದ್ದ ಕ್ರಮ ತೆಗೆದುಕೊಳ್ಳಲು ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯು ಸಹಾಯ ಮಾಡುತ್ತದೆ.
ಸರ್ಕಾರ HSRP ಕಡ್ಡಾಯಗೊಳಿಸಲು ಕಾರಣ: HSRPಯನ್ನು ಕಡ್ಡಾಯಗೊಳಿಸಿರುವ ಪ್ರಮುಖ ಕಾರಣವೆಂದರೆ ಹಳೆಯ ನಂಬರ್ ಪ್ಲೇಟ್‌ಗಳನ್ನು ಟೆಂಪರ್ ಮಾಡಲು ತುಂಬಾ ಸುಲಭವಾಗಿದ್ದು, ಕಾರು ಕಳ್ಳರು ಅದನ್ನು ದುರುಪಯೋಗಪಡಿಸಿಕೊಳ್ಳಲು ಸುಲಭವಾಗಿತ್ತು ಆದರೆ, HSRP ಪ್ಲೇಟ್‌ಗಳು ತೆಗೆಯಲಾಗದ ಸ್ನ್ಯಾಪ್-ಆನ್ ಲಾಕ್‌ನೊಂದಿಗೆ ಬರುತ್ತವೆ ಮತ್ತು ಅದನ್ನು ಬದಲಾಯಿಸಲು ಕಷ್ಟವಾಗುತ್ತದೆ. HSRP ಗಳು ಕೇಂದ್ರೀಕೃತ ಡೇಟಾಬೇಸ್‌ನಲ್ಲಿ ಎಂಜಿನ್ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಯಂತಹ ವಿವರಗಳನ್ನು ಒಳಗೊಂಡಿದೆ. ಕದ್ದ ಕಾರನ್ನು ಗುರುತಿಸಲು ಡೇಟಾ ಸಹಾಯ ಮಾಡುತ್ತದೆ. 10 ಅಂಕಿಗಳ ಪಿನ್ ಜೊತೆಗೆ ಸಂಗ್ರಹಿಸಿದ ಡೇಟಾವು ಕದ್ದ ಕಾರನ್ನು ಗುರುತಿಸಲು ಸಹಾಯ ಮಾಡುವ ಜೊತೆಗೆ ವಾಹನ ಮಾಲೀಕರು ಎಂಜಿನ್ ಸಂಖ್ಯೆಯಂತಹ ಅಗತ್ಯ ವಿವರಗಳನ್ನು ರವಾನಿಸಿದ ನಂತರ ಮಾತ್ರ HSRP ಪ್ಲೇಟ್‌ಗಳನ್ನು ನೀಡಲಾಗುತ್ತದೆ.
ಪೊಲೀಸರ ಚಲನ್ ತಪ್ಪಿಸಲು ಗರ್ಲ್‌ಫ್ರೆಂಡ್‌ನನ್ನೇ ಕೆಳಕ್ಕೆ ಬೀಳಿಸಿ ಪರಾರಿಯಾದ ಬೈಕರ್, ವಿಡಿಯೋ ವೈರಲ್!
ಟ್ರಾಫಿಕ್ ನಿಯಮ ಮೀರುವವರನ್ನು ಶಿಕ್ಷಿಸಲು ಈ ಹಿಂದೆ ಪೊಲೀಸ್ ಇಲಾಖೆಯು ರಾಜ್ಯ ರಸ್ತೆಯ ಹಲವೆಡೆ ಟ್ರಾಫಿಕ್ ಸೆನ್ಸಾರ್ ಕ್ಯಾಮರಾಗಳನ್ನು ಆಳವಡಿಸಿದ್ದು, ಅದರ ಮೂಲಕ ಮಾಹಿತಿಯನ್ನು ಕಲೆ ಹಾಕಿ ತಪ್ಪು ಮಾಡುವವರಿಗೆ ನೋಟಿಸ್ ಕಳುಹಿಸುವ ಮೂಲಕ ದಂಡ ವಿಧಿಸುತ್ತಿತ್ತು. ಪ್ರಸುತ್ತ ಬೆಂಗಳೂರಿನ 50 ಜಂಕ್ಷನ್ ಗಳಲ್ಲಿ ಪೊಲೀಸ್ ಇಲಾಖೆಯು ಟ್ರಾಫಿಕ್ ಸೆನ್ಸಾರ್ ಕ್ಯಾಮರಾಗಳನ್ನು ಅಳವಡಿಸಿದೆ. ಇದರೊಂದಿಗೆ ಈಗ ಸಾರಿಗೆ ವ್ಯವಸ್ಥೆಯು ಸ್ಮಾಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು ವಾಹನ ಸವಾರರು ತಪ್ಪು ಮಾಡಿದರೆ, ಎರಡೆರದು ಬಾರಿ ದಂಡ ಮತ್ತು ಶಿಕ್ಷೆಗೆ ಪಾತ್ರವಾಗಬೇಕಗುತ್ತದೆ. ಹಾಗಾಗಿ ಎಚ್ಚರದಿಂದ ಇರುವುದು ಉತ್ತಮ.
ಸಿಂಧು ಕೆ ಟಿ, ಕುವೆಂಪು ವಿಶ್ವವಿದ್ಯಾಲಯ