10 ಸಾವಿರ ರೂಗೆ ಕಾರು ತಯಾರಿಸುತ್ತೀರಾ? ಪರ್ಫೆಕ್ಟ್ ಉತ್ತರ ನೀಡಿದ ಆನಂದ್ ಮಹೀಂದ್ರ!

By Suvarna News  |  First Published Dec 20, 2023, 4:59 PM IST

10 ಸಾವಿರ ರೂಪಾಯಿಗೆ ಮಹೀಂದ್ರ ಕಾರು ತಯಾರಿಸುತ್ತೀರಾ ಎಂದು ವ್ಯಕ್ತಿಯೊಬ್ಬರು ಆನಂದ್ ಮಹೀಂದ್ರಾಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಆನಂದ್ ಮಹೀಂದ್ರ ಕೂಡ ಅಷ್ಟೇ ಪರ್ಫೆಕ್ಟ್ ಉತ್ತರ ನೀಡಿದ್ದಾರೆ. ಅಷ್ಟಕ್ಕೂ ಆನಂದ್ ಮಹೀಂದ್ರ ನೀಡಿದ ಉತ್ತರವೇನು?


ಮುಂಬೈ(ಡಿ.20) ಉದ್ಯಮಿ ಆನಂದ್ ಮಹೀಂದ್ರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯ. ಕೆಲ ವಿಡಿಯೋಗಳನ್ನು, ಸೋಮವಾರದ ಮೋಟಿವೇಶನ್ ಸೇರಿದಂತೆ ಹಲವು ರೀತಿಯಲ್ಲಿ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಹೀಗಾಗಿ ಹಲವರು ಟ್ವೀಟ್ ಮೂಲಕ ಆನಂದ್ ಮಹೀಂದ್ರಗೆ ಚಿತ್ರ ವಿಚಿತ್ರ ಪ್ರಶ್ನೆಗಳು ಕೇಳಿ, ಅದಕ್ಕೆ ಅಷ್ಟೇ ತಕ್ಕ ಪ್ರತಿಕ್ರಿಯೆ ನೀಡಿದ ಉದಾಹರಣೆಗಳೂ ಇವೆ. ಇದೀಗ ವ್ಯಕ್ತಿಯೊಬ್ಬರು ಬಿಲೆನಿಯರ್ ಆನಂದ್ ಮಹೀಂದ್ರಾಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನೀವು 10,000 ರೂಪಾಯಿಗೆ ಮಹೀಂದ್ರ ಕಾರು ತಯಾರಿಸುತ್ತೀರಾ ಎಂದು ಕೇಳಿದ್ದಾರೆ. ವ್ಯಕ್ತಿಯ ಈ ಪ್ರಶ್ನೆಗೆ ಉತ್ತರಿಸಿದ ಆನಂದ್ ಮಹೀಂದ್ರ 10 ಸಾವಿರ ಯಾಕೆ. 1,500ಕ್ಕೆ ನಿಮ್ಮ ಕೈಸೇರಲಿದೆ ಎಂದು ಉತ್ತರಿಸಿದ್ದಾರೆ.

ಆನಂದ್ ಮಹೀಂದ್ರ ಶ್ರೀಮಂತ ಉದ್ಯಮಿಯಾದರೂ ಎಲ್ಲಾ ಸಂದರ್ಭವನ್ನು ಶಾಂತವಾಗಿ, ಹಾಸ್ಯವಾಗಿ ಎದುರಿಸುತ್ತಾರೆ. ಆನಂದ್ ಮಹೀಂದ್ರ ಅವರ ಹಾಸ್ಯಪ್ರಜ್ಞೆಗೆ ಅಪಾರ ಅಭಿಮಾನಿಗಳಿದ್ದಾರೆ. ಇನ್ನು ಹಲವರಿಗೆ ಆನಂದ್ ಮಹೀಂದ್ರ ಕಾರು ಉಡುಗೊರೆ ನೀಡಿಯೂ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಟ್ವೀಟರ್ ಮೂಲಕ ರಾಜ್ ಶ್ರೀವಾತ್ಸವ್ ಅನ್ನೋ ವ್ಯಕ್ತಿ, ನೀವು 10,000 ರೂಪಾಯಿಗೆ ಮಹೀಂದ್ರ ಕಾರು ತಯಾರಿಸುತ್ತೀರಾ ಎಂದು ಆನಂದ್ ಮಹೀಂದ್ರಾಗೆ ಪ್ರಶ್ನಿಸಿದ್ದಾರೆ.

Tap to resize

Latest Videos

undefined

ಚೆಸ್‌ ಸೂಪರ್‌ಸ್ಟಾರ್‌ ಪ್ರಜ್ಞಾನಂದನ ತಂದೆ-ತಾಯಿಗೆ ಎಲೆಕ್ಟ್ರಿಕ್‌ ಕಾರ್‌ ಗಿಫ್ಟ್‌ ನೀಡಿದ ಆನಂದ್‌ ಮಹೀಂದ್ರಾ!

ಈ ಪ್ರಶ್ನಗೆ ಉತ್ತರಿಸಿದ ಮಹೀಂದ್ರ, ನಾವು ಒಂದೂವರೆ ಸಾವಿರ ರೂಪಾಯಿಗೆ ಅದಕ್ಕಿಂತ ಉತ್ತಮ ಕಾರು ತಯಾರಿಸಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟೇ ಅಲ್ಲ, ಅಮೇಜಾನ್ ಮೂಲಕ ಮಾರಾಟವಾಗುತ್ತಿರುವ ಮಹೀಂದ್ರ ಕಾರುಗಳ ಮಾಡೆಲ್ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಆನಂದ್ ಮಹೀಂದ್ರ ನೀಡಿದ ಉತ್ತರ ಇದೀಗ ಭಾರಿ ವೈರಲ್ ಆಗಿದೆ. 

 

We’ve done even better; made one for under 1.5K 😊 https://t.co/6ccHGYxTYB pic.twitter.com/wmf9sNpWqR

— anand mahindra (@anandmahindra)

 

ಆನಂದ್ ಮಹೀಂದ್ರ ಯುವ ಪ್ರತಿಭೆಗಳು, ಕ್ರೀಡಾ ಪ್ರತಿಭೆಗಳು ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಬಡತನ ಸೇರಿದಂತೆ ಹಲವು ಸಂಕಷ್ಟದ ನಡುವೆ ಸಾಧನೆ ಮಾಡುವ ಯುವ ಸಮೂಹಕ್ಕೆ ಆನಂದ್ ಮಹೀಂದ್ರ ಸದಾ ಬೆಂಬಲ ನೀಡುತ್ತಾರೆ. ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲ ಕ್ರಿಕೆಟಿಗರಿಗೆ ಮಹೀಂದ್ರ ಥಾರ್, ಇತ್ತೀಚೆಗೆ ಚೆಸ್ ಸೂಪರ್ ಸ್ಟಾರ್ ಪ್ರಜ್ಞಾನಂದನ ತಂದೆ ತಾಯಿಗೆ ಎಲೆಕ್ಟ್ರಿಕ್ ಕಾರು ಸೇರಿದಂತೆ ಹಲವರಿಗೆ ಕಾರು ಉಡುಗೊರೆ ನೀಡಿದ್ದಾರೆ. ಹೀಗಾಗಿ ಹಲವರು  ಹುಟ್ಟು ಹಬ್ಬ ಸೇರಿ ಹಲವು ಕಾರಣಗಳನ್ನು ನಮಗೆ ಕಾರು ಉಡುಗೊರೆ ನೀಡಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ಎಲ್ಲಾ ಪ್ರಶ್ನೆ ಮನವಿಗೆ ಆನಂದ್ ಮಹೀಂದ್ರ ಉತ್ತರಿಸಿದ್ದಾರೆ.

ಭಾರತದಲ್ಲಿ ಮಂಚದ ಗಾಡಿ ಸಂಚಲನ, ಕ್ರಿಯಾತ್ಮಕ ಐಡಿಯಾಗೆ ಆನಂದ್ ಮಹೀಂದ್ರ ಕ್ಲೀನ್ ಬೋಲ್ಡ್!
 

click me!