ಒಮ್ಮೆ ಚಾರ್ಜ್ ಮಾಡಿದರೆ 1,200 ಕಿಮೀ ಮೈಲೇಜ್ ನೀಡುವ ₹3 ಲಕ್ಷ ಬೆಲೆಯ ಹೊಸ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಬರುತ್ತಿದೆ. ಏಪ್ರಿಲ್‌ನಲ್ಲಿ ಚೀನಾದಲ್ಲಿ ಬಿಡುಗಡೆಯಾದ Bestune Xiaoma ಕಾರು ಭಾರತಕ್ಕೂ ಬರುವ ನಿರೀಕ್ಷೆಯಿದೆ.
ನವದೆಹಲಿ: ಇಲೆಕ್ಟ್ರಿಕಲ್ ವೆಹಿಕಲ್ (EV) ವಾಹನಗಳ ಬಳಕೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಈ ಬೆಳವಣಿಗೆ ನಡುವೆ ಚಿಕ್ಕ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಎಲ್ಲಾ ಸಾಧ್ಯತೆಗಳಿವೆ. ಈ ಕಾರ್ (New Electric Car) ವಿಶೇಷತೆ ಅಂದ್ರೆ ಇದು ಒಮ್ಮೆ ಚಾರ್ಜ್ ಮಾಡಿದರೆ 1,200 ಕಿಮೀ ದೂರದವರೆಗೆ ಚಲಿಸುತ್ತದೆ. ಈ ಕಾರ್ ಬೆಲೆ ಕೇವಲ 30,000 ರಿಂದ 50,000 ಯಾನ್ ಆಗುತ್ತದೆ. (ಭಾರತ ಬೆಲೆಯಲ್ಲಿ 3.47 ಲಕ್ಷದಿಂದ 5.78 ಲಕ್ಷ ರೂಪಾಯಿ ಆಗುತ್ತದೆ. ಏಪ್ರಿಲ್ 2023ರಲ್ಲಿ Bestune Xiaoma ಚೀನಾದ ಶಾಂಘೈನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಕಾರಿನ ಹಾರ್ಟ್‌ಟಾಪ್ ಮತ್ತು ಕನ್ವರ್ಟಿಬಲ್ ಎರಡೂ ವೇರಿಯಂಟ್ ಪರಿಚಯಿಸಲಾಗಿದೆ.
ಈ ಕಾರ್‌ನೊಳಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಿದೆ. ಡ್ಯಾಶ್‌ಬೋರ್ಡ್ ಮೇಲೆ ಸುಂದರವಾದ ಡ್ಯುಯಲ್-ಟೋನ್ ಥೀಮ್ ನೀಡಲಾಗಿದೆ. ಈ ಎಲೆಕ್ಟ್ರಿಕ್ ಕಾರ್‌ಗೆ ಏರೋಡೈನಾಮಿಕ್ ಚಕ್ರ ಬಳಕೆ ಮಾಡಲಾಗಿದ್ದು, ಇದು ವಾಹನದ ರೇಂಜ್ ಹೆಚ್ಚಳ ಮಾಡುವಲ್ಲಿ ಸಹಾಯ ಮಾಡುತ್ತದೆ.
Bestune Xiaoma ಕಾರ್ FME ಆಧಾರಿತವಾಗಿದ್ದು, ಹೆವಿ ಮತ್ತು ರೇಂಜ್ ಎಕ್ಸಟೆಂಡರ್ ಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೂ ಮೊದಲು NAT ಹೆಸರಿನ ರೈಡ್-ಹೇಲಿಂಗ್ ಇವಿಯನ್ನು ಸಹ ಇದೇ ಪ್ಲಾಟ್‌ಫಾರಂನಲ್ಲಿ ನಿರ್ಮಿಸಲಾಗಿತ್ತು. FME ಪ್ಲಾಟ್‌ಫಾರ್ಮ್ ನಲ್ಲಿ A1 ಮತ್ತು A2 ಹೆಸರಿನ ಎರಡು ಸಬ್-ಪ್ಲಾಟ್‌ಫಾರ್ಮ್‌ಗಳಿವೆ. A1 ಸಬ್-ಪ್ಲಾಟ್‌ಫಾರ್ಮ್ 2700-2850 mm ವ್ಹೀಲ್‌ಬೇಸ್ ಹೊಂದಿರುವ ಕಾರುಗಳಿಗೆ, A2 ಸಬ್-ಪ್ಲಾಟ್‌ಫಾರ್ಮ್ಅನ್ನು 2700-3000 mm ವೀಲ್‌ಬೇಸ್ ಹೊಂದಿರುವ ಕಾರುಗಳಿಗೆ ಬಳಸಲಾಗುತ್ತದೆ. ಈ ಪ್ಲಾಟ್‌ಫಾರ್ಮ್‌ನ 800 V ಆರ್ಕಿಟೆಕ್ಚರ್ ಶ್ರೇಣಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಟಕ್ಕರ್ ಅಂದ್ರೆ ಇದಪ್ಪಾ...! ಎಲ್ಲದಕ್ಕಿಂತ 40 ಪರ್ಸೆಂಟ್ ಕಡಿಮೆ ಬೆಲೆ.. ಒಂದು ತಿಂಗಳಲ್ಲಿ BSNLಗೆ ಬಂದವರೆಷ್ಟು?
ಪವರ್ ಮತ್ತು ಸೇಫ್ಟಿ
Xiaoma ಪವರ್‌ಗಾಗಿ 20kW ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ. ಈ ಮೋಟಾರ್‌ನ್ನು ರಿಯರ್‌ನಲ್ಲಿ ಶಿಫ್ಟ್ ಮಾಡಲಾಗಿದೆ. ಈ ಮೋಟಾರ್‌ನಲ್ಲಿರುವ ಬ್ಯಾಟರಿಯು ಲಿಥಿಯಂ-ಐರನ್ ಫಾಸ್ಫೇಟ್ (LFP) ಘಟಕವಾಗಿದ್ದು, ಇದನ್ನು ಗೋಶನ್ ಮತ್ತು REPT ನಿಂದ ಪೂರೈಸಲಾಗಿದೆ. ಇನ್ನು ಸುರಕ್ಷತೆ ವಿಷಯ ಗಮನಿಸೋದಾದ್ರೆ ಬೆಸ್ಟೂನ್ ಶಾಮಾದಲ್ಲಿ ಡ್ರೈವರ್ ಸೈಡ್ ಏರ್‌ಬ್ಯಾಗ್ ನೀಡಲಾಗಿದೆ. ಈ ಕಾರು 3-ಬಾಗಿಲುಗಳನ್ನು ಹೊಂದಿದ್ದು, ಉದ್ದ 3000mm, ಅಗಲ 1510mm ಮತ್ತು ಎತ್ತರ 1630mm ಆಗಿದೆ. ಇದರ ವ್ಹೀಲ್ ಬೇಸ್ 1953 ಎಂಎಂ ಆಗಿದೆ.
ಭಾರತಕ್ಕೆ ಬರುತ್ತಾ ಈ ಕಾರ್?
Bestune Xiaoma ಕಾರ್ ಭಾರತದ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಗಳಿವೆ. ಟಾಟಾ ಟಿಯೊಗ ಇವಿ (TATA Tiago EV) ಮತ್ತು ಎಂಜಿ ಕಾಮೆಟ್ ಇವಿ ( MG Comet EV) ಎಲೆಕ್ಟ್ರಿಕ್ ಕಾರ್‌ಗಳು ಭಾರತದ ಮಾರುಕಟ್ಟೆಯಲ್ಲಿದ್ದು, ಈ ಎರಡೂ ದೈತ್ಯ ಕಂಪನಿಗಳನ್ನು Bestune Xiaoma ಎದುರಿಸಬೇಕಾಗುತ್ತದೆ. ಚೀನಾದಲ್ಲಿ ಮೈಕ್ರೋ ಇವಿ ಕಾರ್‌ಗಳ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ Bestune Xiaoma ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. ಈ ಇಲೆಕ್ಟ್ರಿಕ್ ಕಾರ್‌ಗಾಗಿ ಭಾರತದ ಮಾರುಕಟ್ಟೆ ಕಾಯುತ್ತಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಕಾರಣ ಕಾರ್ ಪ್ರಿಯರು ಹಾಗೂ ಮಧ್ಯಮ ವರ್ಗದ ಜನರು Bestune Xiaomaನ ನಿರೀಕ್ಷೆಯಲ್ಲಿದ್ದಾರೆ.
ಮುಂದಿನ ವರ್ಷದಿಂದಲೇ ಈ ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಕಾರ್‌ಗಳ ಮಾರಾಟ ಬಂದ್ - ಭಾರತಕ್ಕೆ ಬೇಕಿನ್ನು 16 ವರ್ಷ!