ನವದೆಹಲಿ(ಡಿ.27): ಭಾರತದಲ್ಲಿ ಅತ್ಯುತ್ತಮ ಕಾರು ಸೇರಿದಂತೆ ಇತರ ವಾಹನಗಳನ್ನು ನೀಡುತ್ತಿರುವ ಮಹೀಂದ್ರ(Mahindra) ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ಹೆಚ್ಚಿನ ಗಮನಕೇಂದ್ರಿಕರಿಸಲು ನಿರ್ಧರಿಸಿದೆ. ಎಲೆಕ್ಟ್ರಿಕ್ ವಾಹನಗಳ(Mahindra Electric) ಉತ್ಪಾದನೆಯನ್ನು ಡಬಲ್ ಮಾಡಲು ಮಹತ್ವದ ಹೆಜ್ಜೆ ಇಟ್ಟಿದೆ. ಲಾಸ್ಟ್ ಮೈಲ್ ಕೆನೆಕ್ಟಿವಿಟಿಗಾಗಿ ಮಹೀಂದ್ರ 300 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, 2022ರಲ್ಲಿ 15, 000 ಎಲೆಕ್ಟ್ರಿಕ್ ವಾಹನ ಮಾರಾಟ ಗುರಿ ಇಟ್ಟುಕೊಂಡಿದೆ.
ಸದ್ಯ ಮಹೀಂದ್ರ ತ್ರಿಚಕ್ರವಾಹನಗಳಾದ ಆಟೋ ರಿಕ್ಷಾ, ಆಟೋ ಸರಕು ಸಾಗಾಣೆ ವಾಹನಗಳನ್ನು(Electric Vehilce) ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಹಳ್ಳಿ ಹಳ್ಳಿಗಳಲ್ಲೂ ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಕಾಣಿಸಿಗುತ್ತಿದೆ. ಈಗಾಗಲೇ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. ಇದೀಗ ಎಲೆಕ್ಟ್ರಿಕ್ ಆಟೋ ರಿಕ್ಷಾ ಜೊತೆ ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
undefined
ಇದರ ಮೊದಲ ಹಂತವಾಗಿ 2022ರ ಸಾಲಿನಲ್ಲಿ 6 ಹೊಸ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಯಾಗುತ್ತಿದೆ. ಇದರಲ್ಲಿ ಮೂರು ಚಕ್ರದ ಆಟೋ ರಿಕ್ಷಾ ಹಾಗೂ ಎಲೆಕ್ಟ್ರಿಕ್ ಕಾರು ಸೇರಿದೆ. ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಮಾರಾಟದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಂಖ್ಯೆಯನ್ನು ದ್ವಿಗುಣಗೊಳಿಸಲು ಮಹೀಂದ್ರ ನಿರ್ಧರಿಸಿದೆ. ಹೊಸ 6 ಎಲೆಕ್ಟ್ರಿಕ್ ವಾಹನಗಳು ಹಾಗೂ ಸದ್ಯ ಮಾರುಕಟ್ಟೆಯಲ್ಲಿ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಪ್ರಸಕ್ತ ವರ್ಷ 14,000 -15,000ಕ್ಕೆ ಏರಿಸಲು ನಿರ್ಧರಿಸಿದೆ.
ಮಹೀಂದ್ರ ಎಲೆಕ್ಟ್ರಿಕ್ ವಾಹನ ಘಟಕ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಈ ಘಟಕದಲ್ಲಿ ಪ್ರತಿ ವರ್ಷ 30,000 ವಾಹನ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಇದೀಗ ಈ ಘಟಕವನ್ನು ಮತ್ತಷ್ಚು ಮೇಲ್ದರ್ಜೆಗೆ ಏರಿಸಲು ಮಹೀಂದ್ರ ಎಲೆಕ್ಟ್ರಿಕ್ ಮುಂದಾಗಿದೆ. 2024-25ರ ವೇಳೆಗೆ ಭಾರತದಲ್ಲಿ ಪ್ರತಿ ವರ್ಷ 1 ಲಕ್ಷ ಆಟೋ ರಿಕ್ಷಾಗಳನ್ನು ಮಾರಾಟ ಮಾಡುವ ಗುರಿ ಇಟ್ಟುಕೊಂಡಿದೆ.
India safest cars ಕೈಗೆಟುಕುವ ದರದಲ್ಲಿ ಬಿಡುಗಡೆಯಾದ ವರ್ಷದ ಬೆಸ್ಟ್ ಸೇಫ್ಟಿ ಕಾರು ಲಿಸ್ಟ್!
ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೇಶ ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ವಾಲುತ್ತಿದೆ. ಜನರು ಕೈಗೆಟುಕುವ ದರದಲ್ಲಿ, ಅತ್ಯುತ್ತಮ ಎಲೆಕ್ಟ್ರಿಕ್ ವಾಹನ ಬಯಸುತ್ತಿದ್ದಾರೆ. ಸುರಕ್ಷತೆಗೂ ಅಷ್ಟೇ ಪ್ರಾಧಾನ್ಯ ನೀಡುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣುವಾಗಿ ಅತ್ಯುತ್ತಮ ಹಾಗೂ ಕಡಿಮೆ ಬೆಲೆ ಎಲೆಕ್ಟ್ರಿಕ್ ವಾಹನಗಳನ್ನು ಮಹೀಂದ್ರ ಎಲೆಕ್ಟ್ರಿಕ್ ಬಿಡುಗಡೆ ಮಾಡಲಿದೆ ಎಂದು ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ ಸಿಇಒ ಸುಮನ್ ಮಿಶ್ರಾ ಹೇಳಿದ್ದಾರೆ.
Low carbon solutions ಎಲೆಕ್ಟ್ರಿಕ್ ವಾಹನ, ಕಡಿಮೆ ಇಂಗಾಲ ಪರಿಹಾರಕ್ಕೆ ಜಿಯೋ-ಬಿಪಿ ಬ್ರಾಂಡ್ ಹಾಗೂ ಮಹೀಂದ್ರ ಒಪ್ಪಂದ!
ಮಹೀಂದ್ರ ಲಾಸ್ಟ್ ಮೈಲ್ ಮೊಬಿಲಿಟಿ ಅಡಿಯಲ್ಲಿ ಬಿಡುಗಡೆ ಮಾಡಿರುವ ಮಹೀಂದ್ರ ಮೂರು ಚಕ್ರ ವಾಹನ ಈಗಾಗಲೇ 7,000 ವಾಹನ ಮಾರಾಟವಾಗಿದೆ. ಈ ಮೂಲಕ ದಾಖಲೆ ಬರೆದಿದೆ. ಈ ಸಂಖ್ಯೆ ದ್ವಿಗುಣಗೊಳಿಸಲು ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ ನಿರ್ಧರಿಸಿದೆ.
ಫ್ಯೂಚರ್ ಮೊಬಿಲಿಟಿ ಅಡಿಯಲ್ಲಿ ಮಹೀಂದ್ರ ತನ್ನ ಇಂಧನ ಕಾರುಗಳನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿದೆ. ಇದರ ಭಾಗವಾಗಿರುವ ಮಹೀಂದ್ರ XUV300 ಎಲೆಕ್ಟ್ರಿಕ್ ಕಾರು ಈಗಾಗೇ ಅನಾವರಣ ಮಾಡಲಾಗಿದೆ. ಆದರೆ ಕೆಲ ಕಾರಣಗಳಿಂದ ಬಿಡುಗಡೆ ವಿಳಂಭವಾಗಿದೆ. ಇನ್ನು ಮಹೀಂದ್ರ KUV100, ಮಹೀಂದ್ರ XUV500 ಸೇರಿದಂತೆ ಇತರ ಕಾರುಗಳನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಿ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಇಷ್ಟೇ ಅಲ್ಲ ಮಹೀಂದ್ರ ಸಣ್ಣ ಟ್ರಕ್ ಕೂಡ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.