Anand Mahindra Offer ಕೈ-ಕಾಲಿಲ್ಲದ ಪರಿಶ್ರಮಿಗೆ ಆನಂದ್ ಮಹೀಂದ್ರ ಉದ್ಯೋಗ ಆಫರ್, ಮುಗ್ದ ಸಾಧಕನ ಹಿಂದಿಂದೆ ನೋವಿನ ಕತೆ!

By Suvarna News  |  First Published Dec 27, 2021, 7:57 PM IST
  • ಕೈಕಾಲಿಲ್ಲ ವಿಕಲಚೇತನನ ನೆರವಿಗೆ ಬಂದ ಉದ್ಯಮಿ ಆನಂದ್ ಮಹೀಂದ್ರ
  • ವಿಶೇಷ ವಿನ್ಯಾಸ ಸ್ಕೂಟರ್ ಮೂಲಕ ಪ್ರಯಾಣ, ಕುಟುಂಬ ನಿರ್ವಹಣೆ
  • ಉದ್ಯೋಗ ಆಫರ್ ನೀಡಿದ ಆನಂದ್ ಮಹೀಂದ್ರ

ನವದೆಹಲಿ(ಡಿ.27): ಉದ್ಯಮಿ ಆನಂದ್ ಮಹೀಂದ್ರ(Anand Mahindra) ಈಗಾಗಲೇ ಹಲವರಿಗೆ ನೆರವಾಗಿದ್ದಾರೆ.  ವೈರಲ್ ಆಗಿರುವ ವಿಡಿಯೋಗಳಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ನೆರವು ನೀಡಿದ್ದಾರೆ. ಇದೀಗ ಆನಂದ್ ಮಹೀಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಆನಂದ್ ಮಹೀಂದ್ರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಈ ವಿಡಿಯೋದಲ್ಲಿರುವ ಪರಿಶ್ರಮಿಗೆ ಉದ್ಯೋಗದ ಆಫರ್(Job Offer) ನೀಡಿದ್ದಾರೆ.

ಆನಂದ್ ಮಹೀಂದ್ರ ಒಂದು ವಿಶೇಷ ವಿಡಿಯೋ(Video) ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೈ ಕಾಲುಗಳಿಲ್ಲದ ವಿಕಲಚೇತನನ(No Limbs) ಕತೆ ಇದೆ. ತನಗಾಗಿ ವಿಶೇಷವಾಗಿ  ವಿನ್ಯಾಸ ಮಾಡಿದ ಬೈಕ್(Special Bike) ಮೂಲಕ ಈತನ ಪಯಣ. ಪ್ರತಿ ದಿನ ಕೆಲಸ, ಸಿಗುವ ಕೂಲಿಯಲ್ಲಿ ತನ್ನ ಇಡೀ ಕುಟುಂಬದ ನಿರ್ವಹಣೆ. ಆದರೆ ಇದು ಅಷ್ಟು ಸುಲಭದ ಮಾತಲ್ಲ. 

Tap to resize

Latest Videos

undefined

Vehicle Built from Scrap: ಗುಜುರಿ ವಸ್ತುಗಳಿಂದ ಹೊಸ ವಾಹನ ನಿರ್ಮಾಣ: ಆನಂದ್ ಮಹೀಂದ್ರಾ ಇಂಪ್ರೆಸ್!

ಬೈಕ್‌ನ್ನು ಮೂರು ಚಕ್ರದ ಸಣ್ಣ ಸರುಕ ವಾಹನವನ್ನಾಗಿ ಪರಿವರ್ತಿಸಲಾಗಿದೆ. ಎಕ್ಸಲರೇಟ್ ಹಾಗೂ ಬ್ರೇಕ್ ಈ ವಾಹನದ ಪ್ರಧಾನ ಫೀಚರ್ಸ್. ಕಾರಣ ಕೈ ಹಾಗೂ ಕಾಲುಗಳಿಲ್ಲದ ಕಾರಣ ರೈಡಿಂಗ್ ಕೂಡ ಅಷ್ಟು ಸುಲಭವಲ್ಲ. ಆದರೆ ಈತ ಯಾವುದೇ ಪ್ರಯಾಸವಿಲ್ಲದೆ, ನಿರಾಯಾಸವಾಗಿ ರೈಡ್ ಮಾಡುತ್ತಾನೆ. ಆನಂದ್ ಮಹೀಂದ್ರ ಹಂಚಿಕೊಂಡ ಸಣ್ಣ ವಿಡಿಯೋದಲ್ಲಿ ಈತನ ಜೀವನದ ಚಿತ್ರಣವಿದೆ.

ದೆಹಲಿ ನಗರದಲ್ಲಿ ಸಾಗುತ್ತಿದ್ದ ಈ ವಿಶೇಷ ರೈಡರ್ ಕುರಿತು ವಿಡಿಯೋ ಮಾಡಿದ ವ್ಯಕ್ತಿಗಳು ಮಾತನಾಡಿಸಿದ್ದಾರೆ. ಈ ವೇಳೆ ತನ್ನ ಜೀವನ ಚರಿತ್ರೆ ಹೇಳಿದ್ದಾನೆ. ನನಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಜೊತಗೆ ವಯಸ್ಸಾದ ತಂದೆ ಇದ್ದಾರೆ. ಕುಟುಂಬ ನಿರ್ವಹಣೆ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ಕೆಲಸ ಅನಿವಾರ್ಯ. ಈ ಸರಕು ಬೈಕ್‌ನಲ್ಲಿ ತನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿ ಕೂಲಿ ಪಡೆಯುವ ಈತ ವೇತನವನ್ನು ಮನೆಯ ನಿರ್ವಹಣೆಗೆ ಮೀಸಲಿಡುತ್ತಾನೆ. ಕಳೆದ 5 ವರ್ಷಗಳಿಂದ ಈ ವಿಶೇಷ ವಾಹನ ಓಡಿಸುತ್ತಾ ಬದುಕು ಸಾಗಿಸುತ್ತಿದ್ದೇನೆ ಎಂದು ಈ ಪರಿಶ್ರಮಿ ಹೇಳಿದ್ದಾನೆ. ಈ ವಿಡಿಯೋ ಆನಂದ್ ಮಹೀಂದ್ರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರ, ಈತನಿಗೆ ಉದ್ಯೋಗದ ಆಫರ್ ನೀಡಿದ್ದಾರೆ.

 

Received this on my timeline today. Don’t know how old it is or where it’s from, but I’m awestruck by this gentleman who’s not just faced his disabilities but is GRATEFUL for what he has. Ram, can make him a Business Associate for last mile delivery? pic.twitter.com/w3d63wEtvk

— anand mahindra (@anandmahindra)

ಚಿನ್ನ ಗೆದ್ದ ನೀರಜ್‌ಗೆ ಮಹೀಂದ್ರಾದಿಂದ XUV 700 ಗಿಫ್ಟ್!

ಈ ವ್ಯಕ್ತಿ ಯಾರು, ಎಲ್ಲಿ ಅನ್ನೋದು ಗೊತ್ತಿಲ್ಲ. ಹಲವು ಅಡೆ ತಡೆಗಳನ್ನು ದಾಟಿದ ಈತ ಪರಿಶ್ರಮ, ಛಲದ ಮೂಲಕ ಸಾಧನೆ ಮಾಡಿದ್ದಾನೆ. ಇದೇ ವೇಳೆ ಆನಂದ್ ಮಹೀಂದ್ರ ಈತನಿಗೆ ಮಹೀಂದ್ರ ಲಾಜಿಸ್ಟಿಕ್ ಸಂಸ್ಥೆಯಲ್ಲಿ ಬ್ಯುಸಿನೆಸ್ ಅಸೋಸಿಯೇಟ್ ಮಾಡಿ ಎಂದು ಸೂಚನೆ ನೀಡಿದ್ದಾರೆ. ಈ ಮೂಲಕ ಅತೀ ದೊಡ್ಡ ಉದ್ಯೋಗ ಆಫರ್ ನೀಡಿದ್ದಾರೆ. ಆನಂದ್ ಮಹೀಂದ್ರ ಹಂಚಿಕೊಂಡ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ಹಲವರು ಪ್ರತ್ರಿಕ್ರಿಯೆ ನೀಡಿದ್ದಾರೆ. ಎರಡೂ ಕೈ ಕಾಲಿಲ್ಲದಿದ್ದರೂ ಎಲ್ಲರಂತೆ ಗೌರವಯುತ ಜೀವನ ನಡೆಸುತ್ತಿರುವ  ಈತನಿಗೆ ಸಲಾಂ ಹೇಳಿದ್ದಾರೆ. ಇದೇ ವೇಳೆ ಉದ್ಯೋಗ ಆಫರ್ ನೀಡಿದ ಆನಂದ್ ಮಹೀಂದ್ರ ಕಾರ್ಯವನ್ನು ಶ್ಲಾಘಿಸಿದ್ದಾರೆ. 

ಆನಂದ್ ಮಹೀಂದ್ರ ಈ ರೀತಿ ಹಲವರಿಗೆ ನೆರವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಆನಂದ್ ಮಹೀಂದ್ರ ವಿಶೇಷ ವ್ಯಕ್ತಿಗಳನ್ನು ಸಾಮಾಜಿಕ ತಾಲತಾಣದ ಮೂಲಕ ಪರಿಚಯಿಸಿದ್ದಾರೆ. ಅವರ ಮಾನವೀಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಇನ್ನು ತಿರುಗೇಟು ನೀಡಬೇಕಾದ ಅನಿವಾರ್ಯತೆ ಇದ್ದಲ್ಲಿ ತಕ್ಕ ಉತ್ತರ ನೀಡಿ ಎಲ್ಲಾ ಟೀಕಾಕಾರ ಬಾಯಿ ಮುಚ್ಚಿಸುವಲ್ಲೂ ಆನಂದ್ ಮಹೀಂದ್ರ ಸೈ ಎನಿಸಿಕೊಂಡಿದ್ದಾರೆ. 

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

ಸಾಮಾಜಿಕ ಜಾಲತಾಣದಲ್ಲಿ ಕಾಣುವ ಕೌತುಕದ ವಿಚಾರಗಳನ್ನು ಪೋಸ್ಟ್ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಆನಂದ್ ಮಹೀಂದ್ರ ಉದ್ಯಮದಲ್ಲಿ ಅದೆಷ್ಟು ಸಕ್ರಿಯರಾಗಿದ್ದಾರೋ, ಅಷ್ಟೇಯಾಗಿ ಸಾಮಾಜಿಕ ಜಾಲತಾಣದ ಅದರಲ್ಲೂ ಟ್ವಿಟರ್‌ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆನಂದ್ ಮಹೀಂದ್ರಾಗೆ ಟ್ವಿಟರ್‌ನಲ್ಲಿ 8.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.
 

click me!