Electric Bicycles ನಗರ ಹಾಗೂ ಆಫ್‌ರೋಡ್‌ಗಾಗಿ ಹೀರೋ F2i, F3i ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ!

Published : Dec 27, 2021, 06:45 PM ISTUpdated : Dec 27, 2021, 06:52 PM IST
Electric Bicycles ನಗರ ಹಾಗೂ ಆಫ್‌ರೋಡ್‌ಗಾಗಿ ಹೀರೋ  F2i, F3i ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ!

ಸಾರಾಂಶ

ಹೀರೋ ಎಲೆಕ್ಟ್ರಿಕ್ ವಾಹನ ವಿಭಾಗಕ್ಕೆ ಮತ್ತೊಂದು ಸೇರ್ಪಡೆ ಮೌಂಟೈನ್ ಬೈಸಿಕಲ್ ಬಿಡುಗಡೆ ಮಾಡಿದ ಹೀರೋ F2i, F3i ವೇರಿಯೆಂಟ್ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ

ನವದೆಹಲಿ(ಡಿ.27):  ಹೀರೋ ಸೈಕಲ್‌ನ(Hero Cycle) ಹೀರೋ ಲೆಕ್ಟ್ರೋ(Hero Lectro) ವಿಭಾಗ ಇದೀಗ ಹೊಸ ಬೈಸಿಕಲ್ ಬಿಡುಗಡೆ ಮಾಡಿದೆ. ನಗರ, ಹಳ್ಳಿ ರಸ್ತೆಗಳು ಹಾಗೂ ಆಫ್ ರೋಡ್ ಪಯಣಕ್ಕೂ ಸರಿಹೊಂದುವ ಎರಡು ವೇರಿಯೆಂಟ್ ಎಲೆಕ್ಟ್ರಿಕ್ ಬೈಸಿಕಲ್(electric mountain bicycles) ಬಿಡುಗಡೆ ಮಾಡಿದೆ. ಇದು F2i ಹಾಗೂ F3i ಹೆಸರಿನ ಎಲೆಕ್ಟ್ರಿಕ್ ಮೌಂಟೈನ್ ಬೈಸಿಕಲ್. ಹಲವು ಪ್ರಯೋಗಗಳ ಬಳಿಕ ನೂತನ ಎಲೆಕ್ಟ್ರಿಕ್ ಬೈಸಿಕಲ್ ಮಾರುಕಟ್ಟೆ ಪ್ರವೇಶಿಸಿದೆ.

F2i ಬೈಸಿಕಲ್ ಬೆಲೆ 39,999 ರೂಪಾಯಿ ಹಾಗೂ F3i ಬೈಸಿಕಲ್ ಬೆಲೆ 40,999 ರೂಪಾಯಿ. ವಿಶೇಷ ಅಂದರೆ ಇದು ಮೊದಲ ಕನೆಕ್ಟೆಡ್ ಇ ಬೈಸಿಕಲ್. ಕಾರಣ ಬ್ಲೂಟೂಥ್(Bluetooth) ಕನೆಕ್ಟಿವಿಟಿ ಹಾಗೂ ಸ್ಮಾರ್ಟ್‌ಫೋನ್ ಆ್ಯಪ್ ಕೆನೆಕ್ಟಿವಿಟಿ ಫೀಚರ್ಸ್(smartphone app connectivity) ಈ ಬೈಸಿಕಲ್‌ನಲ್ಲಿದೆ. ಈ ಫೀಚರ್ಸ್‌ನಿಂದ RFID ಮೂಲಕ ಇ ಬೈಸಿಕಲ್ ಲಾಕ್ ಮಾಡಬಹುದು. ಇದರಿಂದ ಒಂದು ವೇಳೆ ಬೈಸಿಕಲ್ ಕಳುವಾದರೆ ಆ್ಯಪ್ ಮೂಲಕ ಬೈಸಿಕಲ್ ಲಾಕ್ ಮಾಡಲು ಸಾಧ್ಯವಿದೆ.

Electric 2 Wheeler ಬೈಕ್, ಸ್ಕೂಟರ್ ಸೇರಿ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನ ಅನಾವರಣ, ಜಿಟಿ ಫೋರ್ಸ್‌ಗೆ ಉತ್ತಮ ಸ್ಪಂದನೆ!

ಹೀರೋ  F2i ಹಾಗೂ F3i ಬೈಸಿಕಲ್ ಎರಡೂ ವೇರಿಯೆಂಟ್ ಒಂದು ಬಾರಿ ಚಾರ್ಜ್(Charging) ಮಾಡಿದರೆ 35 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. 7 ಸ್ಪೀಡ್ ಗೇರ್ ಹೊಂದಿದೆ. 100mm ಸಸ್ಪೆನ್ಶನ್, 27.5" ಹಾಗೂ 29 ಡಬಲ್ ಆಲೋಯ್ ರಿಮ್, ಡ್ಯುಯೆಲ್ ಡಿಸ್ಕ್ ಬ್ರೇಕ್ ಹೊಂದಿದೆ. ರೈಡಿಂಗ್ ಅನುಕೂಲಕ್ಕಾಗಿ ಎಲ್ಲಾ ಫೀಚರ್ಸ್ ನೀಡಲಾಗಿದೆ.  ಬೈಸಿಕಲ್ ಪ್ರಯಾಣಕ್ಕೂ ಅರಾಮದಾಯಕ ಹಾಗೂ ಆರೋಗ್ಯಕಾರಿ ರೈಡಿಂಗ್ ಅನುಭವ ನೀಡಲಿದೆ.

ಹೀರೋ ಮೌಂಟೈನ್ ಎಲೆಕ್ಟ್ರಿಕ್ ಬೈಸಿಕಲ್ 6.4Ah IP67 ರೇಟೆಡ್ ನೀರು, ಧೂಳು ನಿರೋಧಕ ಶಕ್ತಿ ಹೊಂದಿದೆ. ನೂತನ ಮೌಂಟೈನ್ ಬೈಸಿಕಲ್ 250W BLDC ಮೋಟಾರ್ ಹೊಂದಿದೆ. ವಿಶೇಷ ಅಂದರೆ ನಾಲ್ಕು ಮಾಡೆಲ್ ಬೈಸಿಕಲ್ ಲಭ್ಯವಿದೆ. 35 ಕಿಲೋಮೀಟರ್ ಮೈಲೇಜ್ ರೇಂಜ್, 27 ಕಿಲೋಮೀಟರ್ ಮೈಲೇಜ್ ರೇಂಜ್, ಕ್ರ್ಯೂಸ್ ಕಂಟ್ರೋಲ್ ಹಾಗೂ ಮ್ಯಾನ್ಯುಯೆಲ್ ವೇರಿಯೆಂಟ್ ಸೈಕಲ್ ಲಭ್ಯವಿದೆ.

Switch To Electric Vehicles : ಓಲಾ, ಉಬರ್, ಜೊಮೊಟೊಗೆ ದೆಹಲಿ ಸರ್ಕಾರ ನೀಡಲಿದೆ ಖಡಕ್ ಸೂಚನೆ!

ರೈಡಿಂಗ್ ಮೊಡ್ ಸುಲಭವಾಗಿ ಬದಲಾಯಿಸಬಹುದು. LED ಡಿಸ್‌ಪ್ಲೆ ಮೂಲಕ ರೈಡ್ ಮೂಡ್ ಬದಲಾಯಿಸಬಹುದು. ಹೀರೋ ಎಲೆಕ್ಟ್ರಿಕ್ ಬೈಸಿಕಲ್ ದೇಶದಲ್ಲಿ 600 ಡೀಲರ್‌ಶಿಪ್ ಬಳಿ ಲಭ್ಯವಿದೆ. ಇನ್ನು ಆನ್‌ಲೈನ್ ಮೂಲಕವೂ ಇ ಬೈಸಿಕಲ್ ಬುಕ್ ಮಾಡಬಹುದು.

ದೇಶದ ರೈಡಿಂಗ್ ಪ್ರಿಯರ ಬೇಡಿಕೆಯಂತೆ ಹೀರೋ ನೂತನ ಎರಡು ಇ ಬೈಸಿಕಲ್ ಬಿಡುಗಡೆ ಮಾಡಿದೆ. ಇ ಬೈಸಿಕಲ್  ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಕೆಲ ಫೀಚರ್ಸ್ ಬೈಸಿಕಲ್‌ನಲ್ಲದೆ. ಕ್ರಿಯಾತ್ಮಕ ಹಾಗೂ ಪ್ರಯೋಗಾತ್ಮಕ ಬೈಸಿಕಲ್ ಇದಾಗಿದ್ದು, ರೈಡರ್‌ಗಳಿಗೆ ಮತ್ತಷ್ಟು ಉತ್ತೇಜನ ಹಾಗೂ ಉಲ್ಲಾಸ ನೀಡಲಿದೆ ಎಂದು ಹೀರೋ ಲೆಕ್ಟ್ರೋ ಸಿಇಒ ಆದಿತ್ಯ ಮುಂಜಾಲ್ ಹೇಳಿದ್ದಾರೆ.

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

ಹೀರೋ ಬೈಸಿಕಲ್
ಹೀರೋ ಲೆಕ್ಟ್ರೋ  ಹೀರೋ ಬೈಸಿಕಲ್‌ನ ಎಲೆಕ್ಟ್ರಿಕ್ ವಿಭಾಗ. ಹೀರೋ ಬೈಸಿಕಲ್ 1965ರಲ್ಲಿ ಸ್ಥಾಪನೆಯಾದ ಬೈಸಿಕಲ್ ಕಂಪನಿ. ಪಂಜಾಬ್‌ನ ಲೂಧಿಯಾನದಲ್ಲಿ ಆರಂಭಗೊಂಡ ಹೀರೋ ಬೈಸಿಕಲ್ ಇದೀಗ ಭಾರತದ ಅತೀ ದೊಡ್ಡ ಬೈಸಿಕಲ್ ಕಂಪನಿಯಾಗಿದೆ 

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು