ಭಾರತದ ಸಾರಿಗೆಯಲ್ಲಿ ಕ್ರಾಂತಿ, ಮೊಟ್ಟ ಮೊದಲ ಹೈಡ್ರೋಜನ್ ಬಸ್ ಅನಾವರಣ!

By Suvarna News  |  First Published Aug 22, 2022, 4:14 PM IST

ಹೈಡ್ರೋಜನ್ ಚಾಲಿತ ಕಾರು ಪ್ರಯೋಗ ದೇಶದಲ್ಲಿ ನಡೆಯುತ್ತಿದೆ. ಇದರ ನಡುವೆ ಹೈಡ್ರೋಜನ್ ಚಾಲಿತ ಬಸ್ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಹೈಡ್ರೋಡನ್ ಫ್ಯೂಯೆಲ್ ಬಸ್ ಅನಾವರಣ ಮಾಡಲಾಗಿದೆ. ಈ ಬಸ್ ವಿಶೇಷತೆ ಏನೂ? ಏನಿದು ಹೈಡ್ರೋಜನ್ ಇಂಧನ ? 


ಪುಣೆ(ಆ.22):  ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಟೋಯೋಟಾ ಮಿರಾಯ್ ಕಾರು ಅನಾವರಣ ಮಾಡಿದ್ದರು. ಇದು ಭಾರತದ ಮೊದಲ ಹೈಡ್ರೋಜನ್ ಇಂಧನ ಕಾರಾಗಿದೆ. ಇದೀಗ ಪುಣೆಯ KPIT-CSIR ಕಂಪನಿ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ ಮಾಡಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅತ್ಯಾಧುನಿಕ ತಂತ್ರಜ್ಞಾನದ ಹಾಗೂ ಶೂನ್ಯ ಕಾರ್ಬನ್ ಹೂರಸೂಸುವ ಬಸ್ ಅನಾವರಣ ಮಾಡಿದ್ದಾರೆ. ಹೈಡ್ರೋಜನ್ ಚಾಲಿತ ವಾಹನಗಳು ಹೆಚ್ಚು ಕಡಿಮೆ ಎಲೆಕ್ಟ್ರಿಕ್ ವಾಹನವೆ. ಆದರೆ ಇದಕ್ಕೆ ಚಾರ್ಜ್ ಮಾಡಬೇಕಿಲ್ಲ. ಇದು ಹೈಡ್ರೋಜನ್ ಇಂಧನದಿಂದ ಕಾರ್ಯನಿರ್ವಹಸಲಿದೆ. ಹೈಡ್ರೋಜನ್ ಹಾಗೂ ಗಾಳಿಯನ್ನು ಬಳಸಿಕೊಂಡು ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಿದೆ. ಇದೇ ಶಕ್ತಿಯಿಂದ ವಾಹನದ ಮೋಟಾರು ಕಾರ್ಯಾರಂಭಗೊಳ್ಳಲಿದೆ. 

KPIT-CSIR ಬಿಡುಗಡೆ ಮಾಡಿರುವ ಹೈಡ್ರೋಜನ್ ಫ್ಯುಯೆಲ್ ಬಸ್ ಹೈಡ್ರೋಜನ್ ಹಾಗೂ ಆಮ್ಲಜನಕ ಆಟೋಮ್ಸ್ ಸಂಯೋಜಿತಗೊಳಿಸಿ ಶಕ್ತಿಯನ್ನು ಉತ್ಪಾದಿಸಲಿದೆ.  ಹೈಡ್ರೋಜನ್ ಹಾಗೂ ಆಕ್ಸಿಜನ್ ಅನಿಲಗಳು ಸಂಯೋಜಿತಗೊಂಡಾಗ ಎಲೆಕ್ಟ್ರೋಕೆಮಿಕಲ್ ಉತ್ಪಾದನೆಯಾಗಲಿದೆ. ಇದಕ್ಕಾಗಿ ನೀರು ಹಾಗೂ ಸಣ್ಣ ಪ್ರಮಾಣದ ಶಾಖವನ್ನು ಬಳಸಿಕೊಳ್ಳುತ್ತದೆ. ಇದರಿಂದ ಉತ್ಪತ್ತಿಯಾಗುವ ವಿದ್ಯುತ್‌ನಿಂದ ವಾಹನದ ಮೋಟಾರು ಚಲಿಸಲಿದೆ.

Latest Videos

undefined

 

ಇನ್ನು 5 ವರ್ಷದಲ್ಲಿ ದೇಶದಲ್ಲಿ ಪೆಟ್ರೋಲ್‌ ನಿಷೇಧ: ಸಚಿವ Nitin Gadkari

ಹೈಡ್ರೋಜನ್ ಫ್ಯುಯೆಲ್ ಸೆಲ್ ವಾಹನಗಳು ಯಾವುದೇ ಕಾರ್ಬನ್ ಅಥವ ಇತರ ಮಾರಕ ಹೊಗೆಗಳನ್ನು ಉಗುಳುವುದಿಲ್ಲ. ಇದರಿಂದ ಕೇವಲ ಸಣ್ಣ ಪ್ರಮಾಣದ ಶಾಖ ಗಾಳಿಯೂ ಹೊರಸೂಸುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಅಪಾಯ ಇಲ್ಲ. ಶಾಖಾಗಾಳಿಯಿಂದ ವಾತಾವರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಇಂಟರ್ನಲ್ ಕಂಬಶನ್ ಎಂಜಿನ್‌ಗಿಂತ ದಕ್ಷ ಹಾಗೂ ಪರಿಣಾಮಕಾರಿಯಾಗಿದೆ.

ಹೈಡ್ರೋಜನ್ ವಾಹನದ ಮತ್ತೊಂದು ವಿಶೇಷತೆ ಎಂದರೆ ಇಂಧನ. ಎಲೆಕ್ಟ್ರಿಕ್ ವಾಹನಗಳಾದರೆ ಅದೆಷ್ಟೇ ತಂತ್ರಜ್ಞಾನ ಮುಂದುವರಿದರೂ ಬ್ಯಾಟರಿ ಚಾರ್ಜ್ ಆಗಲು ಕನಿಷ್ಟ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೈಡ್ರೋಜನ್ ಕೆಲವೆ ನಿಮಿಷಗಳಲ್ಲಿ ಅಂದರೆ ಪೆಟ್ರೋಲ್ ಫಿಲ್ ಮಾಡುವ ರೀತಿಯಲ್ಲಿ ತುಂಬಿಸಿಕೊಳ್ಳಲುಸಾಧ್ಯವಿದೆ. ಹೈಡ್ರೋಜನ್ ಖಾಲಿಯಾಗಿದೆ ಎಂದರೆ ಅಷ್ಟೇ ಸುಲಭವಾಗಿ ತುಂಬಿಸಿಕೊಂಡು ಪ್ರಯಾಣ ಮುಂದುವರಿಸಬಹುದು.

click me!