Solar Battery ಕಡಿಮೆ ಬೆಲೆಯಲ್ಲಿ ಐಯಾನ್ ಬ್ಯಾಟರಿ ಒದಗಿಸಲಿದೆ ರಿಲಯನ್ಸ್, 1,020 ಕೋಟಿ ರೂಗೆ ಪ್ಯಾರಡಿಯನ್ ಕಂಪನಿ ಸ್ವಾಧೀನ!

By Suvarna NewsFirst Published Dec 31, 2021, 11:16 PM IST
Highlights
  • ಕಡಮೆ ವೆಚ್ಚದಲ್ಲಿ ಸುಸ್ಥಿರ, ಸುರಕ್ಷಿತ ಸೋಡಿಯಂ ಇಯಾನ್ ಬ್ಯಾಟರಿ ಒದಗಿಸುವ ಗುರಿ
  • 1020 ಕೋಟಿ ರುಪಾಯಿಗೆ ಫ್ಯಾರಡಿಯನ್ ಸ್ವಾಧೀನ ಪಡಿಸಿಕೊಂಡ ರಿಲಯನ್ಸ್
  • ಖರೀದಿ ಬೆನ್ನಲ್ಲೇ 250 ಕೋಟಿ ರೂಪಾಯಿ ಹೂಡಿಕೆ ಮಾಡಿದ ರಿಲಯನ್ಸ್
     

ಮುಂಬೈ(ಡಿ.31):  ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಲಿಥಿಯಂ ಐಯಾನ್ ಬ್ಯಾಟರಿ ಬೇಡಿಕೆ ಹೆಚ್ಚಾಗಿದೆ. ಇದರ ನಡುವೆ ಸೋಲಾರ್ ನೆರವಿನ ಸೋಡಿಯಂ ಐಯಾನ್ ಬ್ಯಾಟರಿ ಬೇಡಿಕೆಯೂ ಹೆಚ್ಚಾಗಿದೆ. ಸೌರಶಕ್ತಿ ಬಳಕೆ ಮಾಡುವ ಐಯಾನ್ ಬ್ಯಾಟರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ರಿಲಯನ್ಸ್ ಇಂಡಸ್ಟ್ರೀ ಮಹತ್ವದ ಹೆಜ್ಜೆ ಇಟ್ಟಿದೆ.  ಮುಖೇಶ್ ಅಂಬಾನಿ ಅವರ ಒಡೆತನದ  ರಿಲಯನ್ಸ್(Reliance) ಇಂಡಸ್ಟ್ರೀಸ್ ಅಂಗಸಂಸ್ಥೆಯಾದ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್(Solar) ಲಿಮಿಟೆಡ್ (ಆರ್‌ಎನ್‌ಇಎಸ್‌ಎಲ್), ಮುಂಚೂಣಿಯಲ್ಲಿರುವ ಜಾಗತಿಕ ಸೋಡಿಯಂ ಇಯಾನ್ ಬ್ಯಾಟರಿ ತಂತ್ರಜ್ಞಾನ ಕಂಪನಿ ಫ್ಯಾರಡಿಯನ್ ಅನ್ನು ಪೂರ್ಣ ಪ್ರಮಾಣದಲ್ಲಿ ಸ್ವಾಧೀನ ಪಡಿಸಿಕೊಂಡಿದೆ. 

1,020 ಕೋಟಿ ರುಪಾಯಿ ನೀಡಿ  ಮೌಲ್ಯದ ಸ್ವಾಧೀನ ಒಪ್ಪಂದಕ್ಕೆ ಉಭಯ ಕಂಪನಿಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಇದಲ್ಲದೇ  ಆರ್‌ಎನ್‌ಇಎಸ್‌ಎಲ್ 250 ಕೋಟಿ ರೂಪಾಯಿಗಳನ್ನು ಉದ್ಯಮದ ಉನ್ನತೀಕರಣಕ್ಕಾಗಿ, ತ್ವರಿತ ಉತ್ಪಾದನೆ ವಿಸ್ತರಣೆಗಾಗಿ ಹೂಡಿಕೆ ಮಾಡಲಿದೆ. ಯುನೈಟೆಡ್ ಕಿಂಗ್ಡಮ್ ನ ಶೆಫೀಲ್ಡ್ ಮತ್ತು ಆಕ್ಸ್‌ಫರ್ಡ್‌ನಿಂದ ಹೊರಭಾಗದಲ್ಲಿರುವ,  ಸೋಡಿಯಂ-ಐಯಾನ್ ಬ್ಯಾಟರಿ(sodium ion battery) ತಂತ್ರಜ್ಞಾನದ ಪೇಟೆಂಡ್ ಹೊಂದಿರುವ ಫ್ಯಾರಡಿಯನ್ ಕಂಪನಿಯು ಪ್ರಮುಖ ಜಾಗತಿಕ ಬ್ಯಾಟರಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದಾಗಿದೆ. 

Leadership Transition: ರಿಲಯನ್ಸ್‌ಗೆ ಶೀಘ್ರ ಉತ್ತರಾಧಿಕಾರಿ: ಖುದ್ದು ಅಂಬಾನಿ ಸುಳಿವು

 ಫ್ಯಾರಡಿಯನ್ ಸ್ಪರ್ಧಾತ್ಮಕವಾಗಿ ಉತ್ತಮವಾದ, ವ್ಯಾಪಕ ಕಾರ್ಯತಂತ್ರದ, ಮತ್ತು ವಿಸೃತವಾದ ಬೌದ್ಧಿಕ ಹಕ್ಕುಸ್ವಾಮ್ಯ ಹೊಂದಿರುವ ಕಂಪನಿಯಾಗಿದೆ. ಜಗತ್ತಿನಲ್ಲಿ ಈಗ ಬಳಕೆಯಲ್ಲಿರುವ ಲಿಥಿಯಂ-ಐಯಾನ್ ಮತ್ತು ಲೀಡ್ ಆಸಿಡ್ ಸೇರಿದಂತೆ ಪರ್ಯಾಯ ಬ್ಯಾಟರಿ ತಂತ್ರಜ್ಞಾನಗಳಿಗೆ ಹೋಲಿಸಿದರೆ  ಫ್ಯಾರಡಿಯನ್ ಸೋಡಿಯಂ-ಐಯಾನ್ ತಂತ್ರಜ್ಞಾನವು ಆರು ಗಮನಾರ್ಹ  ಪ್ರಯೋಜನಗಳನ್ನು ಹೊಂದಿದೆ.

 ಅವುಗಳೆಂದರೆ, ಸೋಡಿಯಂ-ಐಯಾನ್ ತಂತ್ರಜ್ಞಾನವು  ಸುಸ್ಥಿರವಾಗಿದ್ದು, ಇತರ ಲೋಹಗಳ ಮೇಲೆ ಅವಲಂಬನೆಯಾಗಬೇಕಿಲ್ಲ. ಹಕ್ಕು ಸ್ವಾಮ್ಯ ಪಡೆದಿರುವುದರಿಂದ ಸುರಕ್ಷಿತ ಸಾಗಣೆ ಮತ್ತು ಸಂಗ್ರಹಣೆ ಸಾಧ್ಯ, ಲೀಡ್ ಆಸಿಡ್ ಗೆ ಹೋಲಿಸಿದರೆ ಅತ್ಯಂತ ಕಡಮೆ ವೆಚ್ಚ, ಲಭ್ಯತೆ ವ್ಯಾಪಕವಾಗಿದ್ದು ಲಭ್ಯವಿರುವ ಲಿಥಿಯಂ ಇಯಾನ್ ಮೂಲಭೂತಸೌಲಭ್ಯವನ್ನೇ ಬಳಸಬಹುದಾಗಿದೆ,  ಕಾರ್ಯಕ್ಷಮತೆಯು ಹೆಚ್ಚಿದ್ದು ಲಿಥಿಯಂ ಇಯಾನ್ ಫಾಸ್ಪೆಟ್ ಗೆ ಸರಿಸಮನಾಗಿದೆ ಮತ್ತು ತ್ವರಿತ ವೇಗದಲ್ಲಿ ಚಾರ್ಜ್ ಮತ್ತು ಡಿಸ್ಚಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

Global Environment Impact ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ!

ಜಾಮ್ ನಗರದಲ್ಲಿ ಸ್ಥಾಪಿಸಲುದ್ದೇಶಿಸಿರುವ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನ ಇಂಧನ ಸಂಗ್ರಹದಲ್ಲಿ ಫ್ಯಾರಡಿಯನ್‌ನ ಅತ್ಯಾಧುನಿಕ ತಂತ್ರಜ್ಞಾನವನ್ನು ರಿಲಯನ್ಸ್  ಬಳಸಲಿದೆ.

"ನಾವು ಫ್ಯಾರಡಿಯನ್ ಮತ್ತು ಅದರ ಅನುಭವಿ ತಂಡವನ್ನು ರಿಲಯನ್ಸ್ ಕುಟುಂಬಕ್ಕೆ ಸ್ವಾಗತಿಸುತ್ತೇವೆ. ಇದು ಅತ್ಯಾಧುನಿಕ ಮತ್ತು ಸಂಯೋಜಿತ ಹೊಸ ಶಕ್ತಿ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಪ್ರಮುಖ ಬ್ಯಾಟರಿ ತಂತ್ರಜ್ಞಾನಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸಲು ನಮ್ಮ ಮಹತ್ವಾಕಾಂಕ್ಷೆಯನ್ನು ಇನ್ನಷ್ಟು ಬಲಪಡಿಸುತ್ತದೆ" ಎಂದು ಫ್ಯಾರಡಿಯನ್‌ ಕಂಪನಿ ಸ್ವಾಧೀನ ಪಡಿಸಿಕೊಂಡ ಬ ಮುಖೇಶ್ ಅಂಬಾನಿ  ಸಂತಸ ವ್ಯಕ್ತಪಡಿಸಿದ್ದಾರೆ. 

 ಫ್ಯಾರಡಿಯನ್ ಅಭಿವೃದ್ಧಿಪಡಿಸಿದ ಸೋಡಿಯಂ-ಐಯಾನ್ ತಂತ್ರಜ್ಞಾನವು ಜಾಗತಿಕವಾಗಿ ಪ್ರಮುಖ ಶಕ್ತಿ ಸಂಗ್ರಹಣೆ ಮತ್ತು ಬ್ಯಾಟರಿ ಪರಿಹಾರವನ್ನು ಒದಗಿಸುತ್ತದೆ, ಇದು ಸುರಕ್ಷಿತ, ಸಮರ್ಥನೀಯ, ಹೆಚ್ಚಿನ ಶಕ್ತಿಯ ಸಾಂದ್ರತೆಯನ್ನು ಒದಗಿಸುತ್ತದೆ ಮತ್ತು ಗಮನಾರ್ಹವಾಗಿ  ಕಡಮೆ ವೆಚ್ಚದಾಯಕವಾಗಿದೆ. ಇದು ಗ್ರಿಡ್ ಸ್ಕೇಲ್ ಸಂಗ್ರಹಣೆ ಮತ್ತು ಬ್ಯಾಕ್-ಅಪ್ ಪವರ್‌ಗೆ ವ್ಯಾಪಕ ಬಳಕೆಯ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಅತ್ಯಂತ ಮುಖ್ಯವಾಗಿ, ಇದು ಸೋಡಿಯಂ ಅನ್ನು ಬಳಸಿಕೊಳ್ಳುತ್ತದೆ, ಇದು ತನ್ನ ದೊಡ್ಡ ನವೀಕರಿಸಬಹುದಾದ ಶಕ್ತಿ ಮತ್ತು ವೇಗವಾಗಿ ಬೆಳೆಯುತ್ತಿರುವ ಇವಿ(ಎಲೆಕ್ಟ್ರಿಕ್ ವೆಹಿಕಲ್) ಚಾರ್ಜಿಂಗ್ ಮಾರುಕಟ್ಟೆಗಾಗಿ ಭಾರತದ ಶಕ್ತಿಯ ಶೇಖರಣಾ ಅವಶ್ಯಕತೆಗಳನ್ನು ಸುರಕ್ಷಿತಗೊಳಿಸುತ್ತದೆ. ನಾವು ಫ್ಯಾರಡಿಯನ್ ನಿರ್ವಹಣೆಯೊಂದಿಗೆ ಕೆಲಸ ಮಾಡುತ್ತೇವೆ ಮತ್ತು ತಂತ್ರಜ್ಞಾನವನ್ನು ವಾಣಿಜ್ಯೀಕರಿಸುವ ಅದರ ಯೋಜನೆಗಳನ್ನು ತ್ವರಿತಗೊಳಿಸುತ್ತೆ ಎಂದು ತಿಳಿಸಿದ್ದಾರೆ.

click me!