ಯಾವ ಸ್ಪೋರ್ಟ್ಸ್‌ ಕಾರಿಗೂ ಕಡಿಮೆ ಇಲ್ಲ ಮ್ಯಾಥ್ಸ್‌ ಟೀಚರ್‌ ನಿರ್ಮಿಸಿದ ಈ ಸೋಲಾರ್ ಕಾರು

By Anusha Kb  |  First Published Jun 23, 2022, 10:43 AM IST

ಕಾಶ್ಮೀರದ ಗಣಿತ ಶಿಕ್ಷಕರೊಬ್ಬರು ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರೊಂದನ್ನು ನಿರ್ಮಿಸಿದ್ದು, ಅದು ತನ್ನ ಲುಕ್‌ ಹಾಗೂ ಕಾರ್ಯಕ್ಷಮತೆಯಿಂದ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಐಷಾರಾಮಿ ಕಾರಿಗಿಂತ ಯಾವುದರಲ್ಲೂ ಕಡಿಮೆ ಇಲ್ಲದಂತೆ ಕಾಣುವ ಈ ಕಾರಿಗೆ ನೆಟ್ಟಿಗರು ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 


ಇಂಧನ ಬೆಲೆಗಳು ಗಗನಕ್ಕೇರಿರುವ ಇಂದಿನ ದಿನಗಳಲ್ಲಿ ಜನರು ಇದಕ್ಕೆ ಪರ್ಯಾಯ ಮಾರ್ಗ ಯಾವುದು ಎಂಬ ಯೋಚನೆ ಮಾಡುತ್ತಿದ್ದಾರೆ. ಈ ಮಧ್ಯೆ ಕಾಶ್ಮೀರದ ವ್ಯಕ್ತಿಯೊಬ್ಬರು ತಮ್ಮ ಸೃಜನಶೀಲತೆಯ ಮೂಲಕ ಇಂಧನ ಸಮಸ್ಯೆಗ ಹೊಸ ಪರಿಹಾರ ಹುಡುಕಿದ್ದಾರೆ. ಇವರು ನಿರ್ಮಿಸಿದ ಸೌರ ಶಕ್ತಿಯಿಂದ ಚಲಿಸುವ ಕಾರು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನೆಟ್ಟಿಗರು ಇವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಈ ಕಾರು ಕಂಡು ಹಿಡಿದವರು ಶ್ರೀನಗರ ಮೂಲದ ಬಿಲಾಲ್ ಅಹ್ಮದ್‌, ಮೂಲತಃ ಗಣಿತ ಶಿಕ್ಷಕರಾಗಿರುವ ಇವರು ಈಗ ಮೆಕಾನಿಕಲ್ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಐಷಾರಾಮಿ ಕಾರುಗಳಂತೆ ಬಾಗಿಲು ತೆರೆಯುವ ನಾಲ್ಕು ಬಾಗಿಲುಗಳ ಈ ಕಾರಿನ ಬಾನೆಟ್‌ನಿಂದ ಹಿಂದಿನ ವಿಂಡ್‌ಶೀಲ್ಡ್‌ವರೆಗೆ ಎಲ್ಲಾ ಫೋಟೋಗಳು ಇವರ ಸೃಜನಶೀಲತೆಯನ್ನು ತೋರಿಸುತ್ತಿವೆ.

Tap to resize

Latest Videos

undefined

ಈ ಕಾರು ಆನ್‌ಲೈನ್‌ನಲ್ಲಿ ಕುತೂಹಲ ಕೆರಳಿಸಿದೆ. ಅದರಲ್ಲೂ ಪೆಟ್ರೋಲ್‌ ಡಿಸೇಲ್ ದರ ಏರಿಕೆಯಿಂದಾಗಿ ವಿಶೇಷವಾಗಿ ಎಲೆಕ್ಟ್ರಿಕ್ ಕಾರ್ ಕೊಳ್ಳಲು ಬಯಸಿದ್ದವರು, ಎಲೋನ್ ಮಸ್ಕ್ ಭಾರತದಲ್ಲಿ ಟೆಸ್ಲಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಿ ಎಂದು ಬಯಸಿದವರು ಈ ಕಾರಿನ ಬಗ್ಗೆ ತೀವ್ರ ಕುತೂಹಲದಿಂದ ಕೇಳುತ್ತಿದ್ದಾರೆ. ಈ ಕಾರಿಗೆ ಹೊಸತನದ ಶೈಲಿಯನ್ನು ಬೆರೆಸಿ ಒಂದು ದಶಕಕ್ಕೂ ಹೆಚ್ಚು ಕಾಲ ಈ ಯೋಜನೆಯಲ್ಲಿ ಕೆಲಸ ಮಾಡಿದ ಬಿಲಾಲ್‌ ಅಹ್ಮದ್ ಇದನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಆವೃತ್ತಿಯನ್ನಾಗಿ ಮಾಡಲು ಬಯಸಿದ್ದಾರೆ.

Bilal Ahmed, a maths teacher from Srinagar, has developed a solar car. Bilal has been working on this project for last 11 years pic.twitter.com/Co0eq9X44h

— Basit Zargar (باسط) (@basiitzargar)

Valleys first Solar car

A Kashmiri mathematician teacher Bilal Ahmed innovated a solar car pic.twitter.com/F6BAx2JVFN

— Basit Zargar (باسط) (@basiitzargar)

 

ಮರ್ಸಿಡಿಸ್ (Mercedes), ಫೆರಾರಿ (Ferrari), ಬಿಎಂಡಬ್ಲ್ಯು (BMW) ಮುಂತಾದ ಕಾರುಗಳು ಜನ ಸಾಮಾನ್ಯರಿಗೆ ಕೇವಲ ಕನಸು. ಕೆಲವೇ ಕೆಲವರು ಮಾತ್ರ ಅಂತಹ ಕಾರುಗಳನ್ನು ಕೊಳ್ಳಲು ಶಸಕ್ತರಾಗಿರುತ್ತಾರೆ. ಹೀಗಾಗಿ ನಾನು ಹೀಗೆ ಐಷಾರಾಮಿ ಕಾರು ಕೊಳ್ಳಬೇಕು ಎಂದು ಬಯಸುವ ಜನ ಸಾಮಾನ್ಯರಿಗೆ ಏನಾದರೂ ಐಷಾರಾಮಿಯದುದ್ದನ್ನು ನೀಡಬೇಕು ಎಂದು ಯೋಚಿಸಿದೆ ಎಂದು ಬಿಲಾಲ್ ಅಹ್ಮದ್ (Bilal Ahmed) ಅವರು 'ರೈಸಿಂಗ್ ಕಾಶ್ಮೀರ'ಕ್ಕೆ ತಿಳಿಸಿದರು.

ಆರಂಭದಲ್ಲಿ, ಅವರು ವಿಶೇಷ ಚೇತನರಿಗೆ ವಾಹನವನ್ನು ನಿರ್ಮಿಸುವ ಗುರಿ ಹೊಂದಿದ್ದರು. ಆದರೆ ಹಣದ ಕೊರತೆಯಿಂದಾಗಿ ಅವರ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಆದಾಗ್ಯೂ, ಇಂಧನ ಬೆಲೆ ಏರಿಕೆಯ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಅವರು ಸೌರಶಕ್ತಿಯಿಂದ ಚಲಿಸುವ ಕಾರನ್ನು ನಿರ್ಮಿಸುವ ಯೋಜನೆ ರೂಪಿಸಿದರು.

ಸೋಲಾರ್ ಮರ ಅಭಿವೃದ್ಧಿಪಡಿಸಿದ ಐಐಟಿ ವಿದ್ಯಾರ್ಥಿಗಳು, ಏನೀದರ ವಿಶೇಷ?

ಈಗ, 11 ವರ್ಷಗಳ ಕಠಿಣ ಪರಿಶ್ರಮ ಮತ್ತು ಸಂಶೋಧನೆಯ ನಂತರ, ಅವರು ಅಂತಿಮವಾಗಿ ತಮ್ಮ ಕನಸನ್ನು ಸಾಧಿಸಿದ್ದಾರೆ. ಈ ಬಗ್ಗೆ ಡೈಲಿ ಎಕ್ಸೆಲ್ಸಿಯರ್‌ನೊಂದಿಗೆ ಮಾತನಾಡಿದ ಅಹ್ಮದ್ ಅವರು ತಮ್ಮ ವಾಹನಕ್ಕೆ ಕಡಿಮೆ ಸೌರಶಕ್ತಿಯಿಂದ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಮೊನೊಕ್ರಿಸ್ಟಲಿನ್ ಸೌರ ಫಲಕಗಳನ್ನು (monocrystalline solar panels) ಅಳವಡಿಸಿರುವುದಾಗಿ ಹೇಳಿದರು. ಇವುಗಳು ಹೆಚ್ಚು ಪರಿಣಾಮಕಾರಿ ಮತ್ತು ಕಡಿಮೆ ಮೇಲ್ಮೈ ಪ್ರದೇಶವನ್ನು ಆಕ್ರಮಿಸುತ್ತವೆ ಎಂದು ಅವರು ವಿವರಿಸಿದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಸೋಲಾರ್,ಪವನ ಶಕ್ತಿ ವಿದ್ಯುತ್, ದೇಶದಲ್ಲೇ ಮೊದಲ ಹೈಬ್ರಿಡ್ ಯೋಜನೆ!

ಹೆಚ್ಚಿನ ಸ್ಪೋರ್ಟ್ಸ್ ಕಾರುಗಳು (sports cars) ಕೇವಲ ಎರಡು ಆಸನಗಳನ್ನು ಹೊಂದಿವೆ. ಆದರೆ ವೆಚ್ಚದ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು, ಅವರು ನಾಲ್ಕು ಜನರು ಕುಳಿತುಕೊಳ್ಳಲು ಸಾಧ್ಯವಾಗುವಂತೆ ತಮ್ಮ ವಾಹನವನ್ನು ರೂಪಿಸಿದರು. ಯಾವುದೇ ವಲಯದಿಂದ ಯಾವುದೇ ಆರ್ಥಿಕ ಸಹಾಯವಿಲ್ಲದೆ ಸಂಪೂರ್ಣ ಸ್ವಯಂಚಾಲಿತವಾದ ಈ ಕಾರನ್ನು (fully-automatic car) ತಯಾರಿಸಲು ಇದುವರೆಗೆ ಒಟ್ಟು 15 ಲಕ್ಷ ರೂ. ವೆಚ್ಚವಾಗಿದೆ ಎಂದು ಬಿಲಾಲ್ ಹೇಳಿದರು. 

ನಾನು ಯೋಜನೆಯನ್ನು ಪ್ರಾರಂಭಿಸಿದಾಗ ಮತ್ತು ನಾನು ಅದನ್ನು ಪೂರ್ಣಗೊಳಿಸಿದ ನಂತರವೂ ಯಾರೂ ನನಗೆ ಯಾವುದೇ ಹಣಕಾಸಿನ ನೆರವು ನೀಡಲಿಲ್ಲ. ನನಗೆ ಅಗತ್ಯವಾದ ಬೆಂಬಲ ಸಿಕ್ಕಿದ್ದರೆ ಬಹುಶಃ ನಾನು ಭಾರತದ ಎಲೋನ್ ಮಸ್ಕ್ (Elon Musk)ಆಗುತ್ತಿದ್ದೆ ಎಂದು ಅವರು ಹೇಳಿದರು.

ಈಗ ಅಹ್ಮದ್ ಅವರು ನಿರ್ಮಿಸಿದ ಕಾರುಗಳ ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜಕಾರಣಿಗಳು ಸೇರಿದಂತೆ ಅನೇಕರು ಅವರಿಗೆ ಮೆಚ್ಚಗೆ ಹಾಗೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಕಾರಿನ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಲು ಕೆಲವು ರೀತಿಯ ಆರ್ಥಿಕ ಬೆಂಬಲವನ್ನು ಪಡೆಯುವುದು ಅವರ ಆಶಯವಾಗಿದೆ, ಇದು ಕಣಿವೆಯಲ್ಲಿ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದು ಅವರ ಮಾತು.

click me!