ಬೆಂಗಳೂರು ಸೇರಿ 13 ನಗರಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಆರಂಭಿಸಲಿದೆ ಜಿಯೋ-ಬಿಪಿ!

By Suvarna News  |  First Published Jun 22, 2022, 11:15 PM IST
  • ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆ
  • ಎಲೆಕ್ಟ್ರಿಕ್ ವಾಹನಗಳ ಬ್ಯಾಟಿಂಗ್ ಬದಲಿಸುವ ಕೇಂದ್ರ
  • ಜಿಯೋ ಬಿಪಿಯಿಂದ ಮಹತ್ವದ ನಿರ್ಧಾರ
     

ಮುಂಬೈ(ಜೂ.22): ರಿಲಾಯನ್ಸ್‌ ಮತ್ತು ಬಿಪಿ ಜಂಟಿ ಸಂಸ್ಥೆಯಾಗಿರುವ ಜಿಯೋ-ಬಿಪಿ ಅಡಿಯಲ್ಲಿ ನೆಕ್ಸಸ್‌ ಮಾಲ್‌ಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ. 13 ನಗರಗಳಲ್ಲಿ ನೆಕ್ಸಸ್‌ನ 17 ಮಾಲ್‌ಗಳು ಇದ್ದು, ಇದರಲ್ಲಿ ಅತ್ಯಾಧುನಿಕ ಚಾರ್ಜಿಂಗ್‌ ಸ್ಟೇಷನ್‌ಗಳು ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುತ್ತದೆ.

ಎಲೆಕ್ಟ್ರಾನಿಕ್ ವಾಹನಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಜಿಯೋ-ಬಿಪಿ ಶ್ರಮಿಸುತ್ತಿದೆ. ಕಳೆದ ವರ್ಷ ಭಾರತದಲ್ಲೇ ಎರಡು ಅತಿದೊಡ್ಡ ಇವಿ ಚಾರ್ಜಿಂಗ್‌ ಹಬ್‌ಗಳನ್ನು ಕಂಪನಿ ಸ್ಥಾಪಿಸಿದೆ. ನೆಕ್ಸಸ್‌ ಮಾಲ್‌ಗಳ ಜೊತೆಗಿನ ಈ ಸಹಭಾಗಿತ್ವದ ಅಡಿಯಲ್ಲಿ ದಿನವಿಡೀ ಕೆಲಸ ಮಾಡುವ ಚಾರ್ಜಿಂಗ್‌ ಮೂಲಸೌಕರ್ಯವನ್ನು ಸ್ಥಾಪಿಸಲಾಗುತ್ತದೆ. ಇದು ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಚಾರ್ಜಿಂಗ್‌ ಮತ್ತು ಬ್ಯಾಟರಿ ಸ್ವ್ಯಾಪಿಂಗ್‌ ವ್ಯವಸ್ಥೆ ಇರಲಿದೆ. ಮೊದಲ ಹಂತದಲ್ಲಿ, ನವಿ ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್‌ನಲ್ಲಿರುವ ನೆಕ್ಸಸ್‌ ಮಾಲ್‌ಗಳಲ್ಲಿ ಜೂನ್ 2022 ರಿಂದ ಚಾರ್ಜಿಂಗ್‌ ಸ್ಟೇಷನ್‌ಗಳು ಲಭ್ಯವಾಗಿರಲಿವೆ.

Tap to resize

Latest Videos

ಸಿದ್ಧವಾಗುತ್ತಿದೆ ಓಲಾ ಎಲೆಕ್ಟ್ರಿಕ್ ಕಾರು: ವಿಡಿಯೋ ಟೀಸರ್ ಬಿಡುಗಡೆ

ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಹೆಚ್ಚು ಜನರು ಬಳಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ತಮ್ಮ ಮಾಲ್‌ಗಳಲ್ಲಿ ವಾಹನಗಳನ್ನು ಚಾರ್ಜ್‌ ಮಾಡಿಸಿಕೊಳ್ಳುವಂತೆ ತಮ್ಮ ಗ್ರಾಹಕರಿಗೆ ನೆಕ್ಸಸ್‌ ಪ್ರೋತ್ಸಾಹಿಸಲಿದೆ. 13 ನಗರಗಳಲ್ಲಿ 17 ಮಾಲ್‌ಗಳನ್ನು ಹೊಂದಿರುವ ನೆಕ್ಸಸ್‌ ಮಾಲ್‌ಗಳು ಸದ್ಯ ದೇಶದ ಅತಿದೊಡ್ಡ ಮಾಲ್‌ಗಳಲ್ಲಿ ಒಂದಾಗಿದೆ. ಇದು ಈಗಾಗಲೇ 100% ವಹಿವಾಟು ಚೇತರಿಕೆಯನ್ನು ಗಳಿಸಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ನೆಕ್ಸಸ್‌ ಮಾಲ್‌ಗಳು ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇದರಿಂದಾಗಿ ಮಾಲ್‌ಗಳಲ್ಲಿ ವಹಿವಾಟು ಅತ್ಯಂತ ಬೇಗ ಚೇತರಿಸಿಕೊಂಡಿದೆ.

ಜಿಯೋ-ಬಿಪಿ ಪಲ್ಸ್‌ ಅಡಿಯಲ್ಲಿ ಭಾರತೀಯ ಗ್ರಾಹಕರಿಗೆ ಚಾರ್ಜಿಂಗ್‌ ಮೂಲಸೌಕರ್ಯವನ್ನು ಜಿಯೋ-ಬಿಪಿ ಜಂಟಿ ಸಂಸ್ಥೆಯು ಒದಗಿಸುತ್ತಿದೆ. ಜಿಯೋ-ಬಿಪಿ ಪಲ್ಸ್‌ ಮೊಬೈಲ್‌ ಆಪ್‌ ಬಳಸಿಕೊಂಡು ಗ್ರಾಹಕರು ತಮ್ಮ ಸಮೀಪದಲ್ಲಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಹುಡುಕಬಹುದು ಮತ್ತು ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಸುಲಭವಾಗಿ ಚಾರ್ಜ್‌ ಮಾಡಿಕೊಳ್ಳಬಹುದು.

ಚಾರ್ಜಿಂಗ್‌ ಕೇಂದ್ರಕ್ಕೆ ಜಾಗ ನೀಡಿದರೆ ಆದಾಯದಲ್ಲಿ ಷೇರು
ರಾಜ್ಯದಲ್ಲಿ ಸ್ಥಾಪಿಸಲುದ್ದೇಶಿಸಿರುವ ಸಾವಿರಾರು ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳಿಗೆ ಸ್ಥಳ ಒದಗಿಸುವ ಸರ್ಕಾರಿ ಇಲಾಖೆಗಳಿಗೆ ಚಾರ್ಜಿಂಗ್‌ ಕೇಂದ್ರಗಳಲ್ಲಿ ದಾಖಲಾಗುವ ಪ್ರತಿ ಯೂನಿಟ್‌ ಮೇಲೆ 1 ರು. ಆದಾಯ ಹಂಚಿಕೆ ಮಾಡಲು ಸರ್ಕಾರ ಅನುಮೋದನೆ ನೀಡಿದೆ.

ಇನ್ನೊಂದೇ ವರ್ಷದಲ್ಲಿ ಪೆಟ್ರೋಲ್ ವಾಹನದ ಬೆಲೆಯಲ್ಲಿ ಸಿಗಲಿದೆ ಎಲೆಕ್ಟ್ರಿಕ್ ಕಾರು!

ಅಲ್ಲದೆ, ಈ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ತೆರೆಯಲಾಗುವ ಟೆಂಡರ್‌ನಲ್ಲೂ ಕನಿಷ್ಠ ಪ್ರತಿ ಯೂನಿಟ್‌ಗೆ 1 ರು. ಮಿತಿಯಲ್ಲಿ ಆದಾಯ ಹಂಚಿಕೆ ನಿಗದಿಪಡಿಸಲು ಕೂಡ ಸರ್ಕಾರ ಒಪ್ಪಿಗೆ ನೀಡಿ ಇಂಧನ ಇಲಾಖೆಯು ಆದೇಶ ಮಾಡಿದೆ. ಇದರಿಂದ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಭೂಮಿ ನೀಡುವ ಸರ್ಕಾರಿ ಸಂಸ್ಥೆ/ಸಾರ್ವಜನಿಕ ವಲಯದ ಉದ್ಯಮಗಳಿಗೆ ಆಯಾ ಕೇಂದ್ರದಲ್ಲಿ ದಾಖಲಾಗುವ ಒಟ್ಟು ಒಟ್ಟು ಚಾರ್ಜಿಂಗ್‌ ಯೂನಿಟ್‌ನಲ್ಲಿ ಪ್ರತಿ ಯೂನಿಟ್‌ಗೆ 1 ರು. ನಷ್ಟುನೆಲ ಬಾಡಿಗೆ ರೂಪದ ಆದಾಯ ದೊರೆಯಲಿದೆ.

ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿಯನ್ನು ನೋಡಲ್‌ ಸಂಸ್ಥೆಯನ್ನಾಗಿ ಸರ್ಕಾರ ನೇಮಿಸಿದೆ. ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಗೆ ಸ್ಥಳಾವಕಾಶ ಕೊರತೆ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳು ಸ್ಥಳ ನೀಡಲು ಮುಂದೆ ಬಂದರೆ ಪ್ರತಿ ಯೂನಿಟ್‌ಗೆ 1 ರು. ನೆಲಬಾಡಿಗೆ ನೀಡಲು ಅನುಮತಿ ಕೋರಿ ಬೆಸ್ಕಾಂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ಒಪ್ಪಿ ಸರ್ಕಾರ ಈ ಆದೇಶ ಮಾಡಿದೆ.
 

click me!