ಸಾರ್ವಜನಿಕರಿಗೆ ಹೊಸ ವರ್ಷದ ಶಾಕ್, ಕರ್ನಾಟಕದಲ್ಲಿ ಡ್ರೈವಿಂಗ್ ಲೈಸೆನ್ಸ್ ಮತ್ತಷ್ಟು ದುಬಾರಿ!

By Suvarna News  |  First Published Dec 14, 2023, 1:32 PM IST

ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದೀರಾ? ಹೊಸ ವರ್ಷದಲ್ಲಿ ಡ್ರೈವಿಗ್ ಕಲಿಯಲು ನಿರ್ಧರಿಸಿದ್ದೀರಾ? ಈ ಬಾರಿ ಹೊಸ ವರ್ಷದಲ್ಲಿ ಹಲವು ಹೊಸ ರೂಲ್ಸ್ ಜಾರಿಗೆ ಬರುತ್ತಿದೆ.  ಈ ಪೈಕಿ ಡ್ರೈವಿಂಗ್ ಲೆಸೆನ್ಸ್ ಪಡೆಯುವುದು ಇನ್ಮುಂದೆ ದುಬಾರಿಯಾಗಿದೆ.


ಬೆಂಗಳೂರು(ಡಿ.14) ಹೊಸ ವರ್ಷದಲ್ಲಿ ಹಲವರು ಕೆಲ ನಿರ್ಣಯ ತೆಗೆದುಕೊಳ್ಳುತ್ತಾರೆ. ಈ ಪೈಕಿ ಹೊಸ ವರ್ಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು ಅನ್ನೋ ನಿರ್ಧಾರ ನಿಮ್ಮದಾಗಿದ್ದರೆ, ಜೇಬಿಗೆ ಹೊರೆಯಾಗುವುದು ಖಚಿತ. 2024ರ ಹೊಸ ವರ್ಷದಿಂದ ಡ್ರೈವಿಂಗ್ ಸ್ಕೂಲ್ಗಳಲ್ಲಿ ತರಬೇತಿ (Driving Training) ಶುಲ್ಕವನ್ನು ಹೆಚ್ಚಳ ಮಾಡುವ ಮೂಲಕ  ರಾಜ್ಯ ಸಾರಿಗೆ ಇಲಾಖೆಯು (Transport Department)  ಸಾರ್ವಜನಿಕರಿಗೆ ಶಾಕ್ ನೀಡಿದೆ. ಲಘು ಮೋಟಾರು ವಾಹನ, ಮೋಟಾರು ಸೈಕಲ್, ಆಟೋ ರಿಕ್ಷಾ ಹಾಗೂ ಬೃಹತ್ ಸಾರಿಗೆ ವಾಹನಗಳೆಂದು 4 ವರ್ಗಗಳಾಗಿ  ಮಾಡಲಾಗಿದ್ದು, ಅವುಗಳಿಗೆ ಪ್ರತ್ಯೇಕ ದರವನ್ನು ನಿಗದಿಪಡಿಸಲಾಗಿದೆ. ಹೊಸ ವರ್ಷದಿಂದಲೇ ವಾಹನ ಚಾಲನಾ ತರಬೇತಿ ದರ ಪರಿಷ್ಕರಣೆಯಾಗಲಿದೆ.

10 ವರ್ಷಗಳ ನಂತರ ಬೆಲೆ ಪರಿಷ್ಕರಣೆ:  ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಹೋರಾಟದ ಫಲವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.10 ವರ್ಷಗಳ ನಂತರ ದರ ಹೆಚ್ಚಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ಹಿಂದೆ 2002 ಮತ್ತು 2013 ರಲ್ಲಿ  ಎರಡು ಬಾರಿ ವಾಹನ ಚಾಲನಾ ತರಬೇತಿ ದರ ಪರಿಷ್ಕರಿಸಲಾಗಿತ್ತು .

Tap to resize

Latest Videos

undefined

ವಾಹನ ಸವಾರರೇ ಎಚ್ಚರ, 1.5 ವರ್ಷದಿಂದ ಕೋಟಿ ಕೋಟಿ ಬಾಚಿದ ನಕಲಿ ಟೋಲ್ ಪ್ಲಾಜಾ!

ಶುಲ್ಕ ಪರಿಷ್ಕರಣೆ: ಈ ಹಿಂದೆ 4 ಸಾವಿರ ಇದ್ದ  ಲಘು ಮೋಟಾರು ವಾಹನಗಳ ಚಾಲನಾ ತರಬೇತಿ ದರವು ಈಗ 7 ಸಾವಿರ ರೂ.  ಹೆಚ್ಚಿಸಲಾಗಿದೆ. ಮೂರು ಸಾವಿರ ಇದ್ದ ಆಟೋ ರಿಕ್ಷಾ ತರಬೇತಿ ಈಗ ನಾಲ್ಕು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಅಲ್ಲದೆ, ಮೋಟಾರು ಸೈಕಲ್ ತರಬೇತಿ ಬೆಲೆ 2,200 ರಿಂದ 3000. ಆರು ಸಾವಿರವಿದ್ದ ಬೃಹತ್ ಸಾರಿಗೆ ವಾಹನಗಳ ಬೆಲೆ 9000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಶುಲ್ಕ ಪರಿಷ್ಕರಣೆಗೆ ಕಾರಣ: ದಿನೇ ದಿನೇ ಹೆಚ್ಚುತ್ತಿರುವ ಇಂಧನ ಬೆಲೆ , ಡ್ರೈವಿಂಗ್ ಸ್ಕೂಲ್ (Driving school)  ಗಳ ನಿರ್ವಹಣೆ, ತರಬೇತಿ ಸಮಯದಲ್ಲಿ ವಾಹನಗಳ ಡ್ಯಾಮೇಜ್, ವಾಹನಗಳ ಇನ್ಶುರೆನ್ಸ್, ಚಾಲಕರ ದಿನಗೂಲಿ ಇನ್ನಿತರ ಸಮಸ್ಯೆಗಳಿದ್ದು, ಕಳೆದ ಒಂದು ದಶಕದಿಂದ ಒಂದೇ ರೀತಿಯ ದರವನ್ನು ನಿಗದಿ ಮಾಡಿರುವುದರ ವಿರುದ್ಧ ಡ್ರೈವಿಂಗ್‌ಸ್ಕೂಲ್‌ಗಳ ಮಾಲೀಕರು ಸಾರಿಗೆ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರು. ಇದನ್ನು ಪರಿಹರಿಸಲು ಸಾರಿಗೆ ಇಲಾಖೆಯು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಆರ್ಟಿಒಗಳ ನೇತೃತ್ವದಲ್ಲಿ ಸಮಿತಿಯೊಂದನ್ನು  ರಚನೆ ಮಾಡಿತ್ತು. ಆ ಸಮಿತಿ  ಅಧ್ಯಯನ ಮಾಡಿ 2 ವರ್ಷಗಳ ಹಿಂದೆಯೇ ವರದಿಯನ್ನು ಸಾರಿಗೆ ಇಲಾಖೆಗೆ  ನೀಡಿತ್ತು. ಸಾರಿಗೆ ಇಲಾಖೆಗೆ  ಪ್ರಸ್ತುತ ವರದಿಯನ್ನು ಅಂಗೀಕಾರ ಮಾಡಿದೆ.

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಿಸಿದ ಸರ್ಕಾರ, ಏನಿದು ಹೊಸ ಫಲಕ?

ಕಾರು ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂ :
ಒಬ್ಬ ವ್ಯಕ್ತಿ  ಡ್ರೈವಿಂಗ್ ಕಲಿತು ಲೈಸೆನ್ಸ್ ಪಡೆಯಲು ಒಟ್ಟು 8350 ರೂಪಾಯಿ ಖರ್ಚು ಮಾಡಬೇಕು. ಜನವರಿಯಿಂದ ಕಾರು ಚಾಲನೆ ಕಲಿಯುವವರಿಗೆ 7 ಸಾವಿರ ರೂಪಾಯಿ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದಲ್ಲದೆ ಎಲ್ಎಲ್ಗೆ 350 ರೂ. ಹಾಗೂ ಡಿಎಲ್ಗೆ 1,000 ರೂ. ಪ್ರತ್ಯೇಕವಾಗಿ ಆರ್ಟಿಒ ಕಚೇರಿಗೆ ಪಾವತಿಸಬೇಕೆಂದು ಸಾರಿಗೆ ಇಳಾಖೆ ತಿಳಿಸಿದೆ. 

ಈ ಹಿಂದೆ ವಾಹನ ಚಾಲನಾ ತರಬೇತಿಗೆ ನಿಗದಿ ಪಡಿಸಿದ್ದ ಹಣಕ್ಕಿಂತ ಡ್ರೈವಿಂಗ್ ಸ್ಕೂಲ್‌ಗಳು ಹೆಚ್ಚು ಹಣ ವಸೂಲಿ ಮಾಡುತ್ತಿವೆ ಎಂಬ ಆರೋಪಗಳಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣ ತಿಳಿದುಬಂದರೆ, ಅಂತಹ ಡ್ರೈವಿಂಗ್ ಸ್ಕೂಲ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ವಾಹನ ಚಾಲನಾ ತರಬೇತಿಯಲ್ಲಿ ಕಡ್ಡಾಯ 25 ರಿಂದ 30 ತರಗತಿಗಳನ್ನು ತೆಗೆದುಕೊಳ್ಳಬೇಕೆಂದು ಬೆಂಗಳೂರು ದಕ್ಷಿಣ ಅಪರ  ಸಾರಿಗೆ ಆಯುಕ್ತರಾದ (Additional commissioner of transport department) ಸಿ. ಮಲ್ಲಿಕಾರ್ಜುನ್ (C Mallikarjuna)ತಿಳಿಸಿದ್ದಾರೆ.

-ಸಿಂಧು ಕೆ ಟಿ 
ಕುವೆಂಪು ವಿಶ್ವವಿದ್ಯಾಲಯ 

click me!