ಟ್ರಾಫಿಕ್ ಪೊಲೀಸರ ಜೊತೆ ಕಿರಿಕಿರಿ ಮಾಡಿ ಕೊಳ್ಳೋರ ಸಂಖ್ಯೆ ವರದಿಯಾಗುತ್ತಲೇ ಇದೆ. ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಲು ತೊಂದರೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇನ್ನು ಮುಂದೆ ಭಾರೀ ದಂಡ ತೆತ್ತಬೇಕಾಗುತ್ತದೆ.
ಇನ್ನು ಮುಂದೆ ನೀವು ವಾಹನದಲ್ಲಿ ಸಂಚರಿಸುವಾಗ ತಡೆದು ದಾಖಲೆಗಳನ್ನು ಪರಿಶೀಲಿಸುವ ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ 2 ಸಾವಿರ ರೂ. ದಂಡ (fine) ಪಾವತಿಸಬೇಕಾಗಬಹುದು. ಹೊಸ ಸಂಚಾರಿ ನಿಯಮಗಳ ಪ್ರಕಾರ, ನೀವು ವಾಹನದ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಹ, ನೀವು ದಂಡ ಪಾವತಿಸಬೇಕಾಗಬಹುದು ಮೋಟಾರು ವಾಹನ ಕಾಯ್ದೆಯ (Motor vehicle act) ಪ್ರಕಾರ, ವಾಹನದ ದಾಖಲೆಗಳನ್ನು ಪರಿಶೀಲಿಸುವಾಗ ಅಥವಾ ಯಾವುದೇ ರೀತಿಯಲ್ಲಿ ಜನರು ಟ್ರಾಫಿಕ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದರೆ, ನಿಯಮ 179 ಎಂವಿಎ (MVA) ಪ್ರಕಾರ, ನಿಮಗೆ 2000 ರೂ. ದಂಡ ವಿಧಿಸುವ ಅಧಿಕಾರ ಪೊಲೀಸರಿಗಿದೆ.
ಹಲವು ಬಾರಿ ಜನರು ಸಂಚಾರಿ ಪೊಲೀಸರೊಂದಿಗೆ ವಾದ ವಿವಾದಕ್ಕೆ ಇಳಿಯುತ್ತದೆ. ಕೆಲವೊಮ್ಮೆ ಅದು ಅತಿರೇಕಕ್ಕೆ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಪೊಲೀಸರು ಮೊದಲು ನಿಮಗೆ ಎಚ್ಚರಿಕೆ ನೀಡುತ್ತಾರೆ. ಆದರೂ, ನೀವು ನಿಮ್ಮ ವರ್ತನೆಯನ್ನು ಮುಂದುವರಿಸಿದರೆ, ದಂಡ ವಿಧಿಸಲಾಗುತ್ತದೆ. ಒಂದೊಮ್ಮೆ ಪೊಲೀಸರು ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರೆ ನೀವು ದೂರು ನೀಡುವ ಮತ್ತು ವಿಷಯವನ್ನು ನ್ಯಾಯಾಲಯಕ್ಕೆ ತೆಗೆದುಕೊಳ್ಳುವ ಆಯ್ಕೆ ನಿಮಗಿದೆ.
ಇನ್ನೊಂದು ವರ್ಷದಲ್ಲಿ ಪೆಟ್ರೋಲ್ ಗಾಡಿ ಬೆಲೆಗೆ ಎಲೆಕ್ಟ್ರಿಕ್ ವೆಹಿಕಲ್
ಇನ್ನೊಂದು ವಿಷಯ, ಹೊಸ ಸಂಚಾರ ನಿಯಮಗಳ ಪ್ರಕಾರ ಹೆಲ್ಮೆಟ್ ಧರಿಸಿದ್ದರೂ 2000 ರೂ.ಗಳ ದಂಡ ವಿಧಿಸಬಹುದಾಗಿದೆ. ಏಕೆಂದರೆ, ಹೆಲ್ಮೆಟ್ ಜೊತೆಗೆ, ಅದರ ಪಟ್ಟಿಯನ್ನು ಸರಿಯಾಗಿ ಧರಿಸುವುದು ಕೂಡ ಕಡ್ಡಾಯ.ಹೊಸ ಮೋಟಾರು ವಾಹನ ಕಾಯಿದೆಯ ಪ್ರಕಾರ, ಮೋಟಾರ್ ಸೈಕಲ್ (Motor Cycle), ಸ್ಕೂಟರ್ ಚಾಲನೆ ಮಾಡುವಾಗ ಹೆಲ್ಮೆಟ್ ಸ್ಟ್ರಿಪ್ ಧರಿಸದೇ ಇದ್ದರೆ, ನಿಯಮ 194 ಡಿ ಎಂವಿಎ (194D MVA) 1000 ರೂ. ದಂಡ ಮತ್ತು ದೋಷಯುಕ್ತ ಹೆಲ್ಮೆಟ್ ಧರಿಸಿದ್ದರೆ (ಬಿಐಎಸ್ ಇಲ್ಲದೆ) 1000 ರೂ. ದಂಡ ವಿಧಿಸಬಹುದು.
ನಿಮ್ಮ ವಿರುದ್ಧ ಪೊಲೀಸರು ಚಲನ್ ಬರೆದಿದ್ದಾರೆ ಎಂದು ಪರಿಶೀಲಿಸಲು ಜನರು https://echallan.parivahan.gov.in ವೆಬ್‌ಸೈಟ್‌ಗೆ ಹೋಗಿ. ಚಲನ್ ಸ್ಥಿತಿಯನ್ನು ಪರಿಶೀಲಿಸಬಹುದು. ಆಗ ನಿವು ಚಲನ್ ಸಂಖ್ಯೆ, ವಾಹನ ಸಂಖ್ಯೆ ಮತ್ತು ಚಾಲನಾ ಪರವಾನಗಿ ಸಂಖ್ಯೆ (DL) ಆಯ್ಕೆಯನ್ನು ಪಡೆಯುತ್ತೀರಿ. ವಾಹನ ಸಂಖ್ಯೆಯ ಆಯ್ಕೆಯನ್ನು ಆರಿಸಿ. ಕೇಳಲಾದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕ್ಲಿಕ್ ಮಾಡದರೆ ಚಲನ್ ಸ್ಟೇಟಸ್ ಕಾಣಿಸುತ್ತದೆ.
ಟ್ರಾಫಿಕ್ ಚಲನ್ ಅನ್ನು ಆನ್‌ಲೈನ್‌ನಲ್ಲಿ ಕೂಡ ಪಾವತಿಬಹುದು. https://echallan.parivahan.gov.in/ ಗೆ ಹೋಗಿ. ಚಲನ್‌ಗೆ ಸಂಬಂಧಿಸಿದ ಅಗತ್ಯವಿರುವ ವಿವರಗಳು ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ ಮತ್ತು ವಿವರಗಳನ್ನು ಪಡೆಯಿರಿ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ, ಅದರಲ್ಲಿ ಚಲನ್ ವಿವರಗಳನ್ನು ನೀಡಲಾಗುತ್ತದೆ. ನೀವು ಪಾವತಿಸಲು ಬಯಸುವ ಚಲನ್ ಅನ್ನು ಹುಡುಕಿದಾಘ ಚಲನ್ ಜೊತೆಗೆ, ಆನ್‌ಲೈನ್ ಪಾವತಿಯ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ಪಾವತಿ ಸಂಬಂಧಿತ ಮಾಹಿತಿಯನ್ನು ಭರ್ತಿ ಮಾಡಿ. ಪಾವತಿಯನ್ನು ದೃಢೀಕರಿಸಿದರೆ ದಂಡ ಪಾವತಿಯಾಗುತ್ತದೆ.
ಶುಲ್ಕ ಕಟ್ಟಲ ಅಮ್ಮನ ಮಂಗಳ ಸೂತ್ರ ಮಾರಿದ ಯುವಕ, ಮಾನವೀಯತೆ ಮೆರೆದ ಆರ್ಟಿಒ ಪೋಲೀಸರು
ಇತ್ತೀಚಿನ ಕೆಲವು ತಿಂಗಳಲ್ಲಿ ಕೇಂದ್ರ ಸರ್ಕಾರ ಹಲವು ಸಂಚಾರಿ ಕಾಯ್ದೆಗಳಲ್ಲಿ ಬದಲಾವಣೆಗಳನ್ನು ತಂದಿದೆ. ಹೊಸ ಕಾಯ್ದೆಗಳ ಪ್ರಕಾರ, ಚಾಲನೆ ವೇಳೆ ದೂರವಾಣಿಯಲ್ಲಿ ಮಾತನಾಡುವುದು, ಬ್ಲೂಟೂತ್ ಬಳಕೆ ಮಾಡುವುದು ಕೂಡ ದಂಡ ವಿಧಿಸಬಹುದಾದ ಅಪರಾಧವಾಗಿದೆ. ಜೊತೆಗೆ, ದಂಡದ ಮೊತ್ತವನ್ನು ಕೂಡ ಗಣನೀಯವಾಗಿ ಏರಿಸಿದ್ದು, ಕೆಲವರಿಂದ ಪ್ರತಿಭಟನೆಯನ್ನು ಕೂಡ ಎದುರಿಸಿದೆ. ಸಂಚಾರಿ ನಿಯಮದ ಜೊತೆಗೆ, ಕೇಂದ್ರ ಸರ್ಕಾರ ಕಾರುಗಳ ನಿರ್ಮಾಣ, ವಿನ್ಯಾಸ ಹಾಗೂ ಸುರಕ್ಷತಾ ವಿಧಾನಗಳಲ್ಲಿ ಕೂಡ ಹೊಸ ಮಾರ್ಪಾಡುಗಳನ್ನು ಮಾಡುವಂತೆ ನಿಯಮ ಜಾರಿಗೊಳಿಸಿದೆ.