ನವದೆಹಲಿ(ಫೆ.27): ಉಕ್ರೇನ್ ಹಾಗೂ ರಷ್ಯಾ(Ukraine Russia War) ನಡುವಿನ ಯುದ್ಧದ ಪರಿಣಾಮ ಹಲವು ದೇಶಗಳಲ್ಲಿ ಪರಿಣಾಮ ಗೋಚರಿಸುತ್ತಿದೆ. ವಿಶ್ವದಲ್ಲಿ ಅತೀ ಹೆಚ್ಚು ತೈಲ ರಫ್ತು ಮಾಡುವ ರಷ್ಯಾ ಇದೀಗ ತನ್ನ ಎಲ್ಲಾ ಗಮನವನ್ನು ಉಕ್ರೇನ್ ದಾಳಿಗೆ ವಿನಿಯೋಗಿಸುತ್ತಿದೆ. ಇತ್ತ ಪೆಟ್ರೋಲ್, ಡೀಸೆಲ್(Petrol Diesel) ಸೇರಿದಂತೆ ತೈಲ ಬೆಲೆ ಹೆಚ್ಚಾಗಿದೆ. ಇದರ ನಡುವೆ ಭಾರತದ ಆಟೋಮೊಬೈಲ್(Indian Automobile Sector) ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಚರ್ಚೆಗಳು ಶುರುವಾಗಿದೆ. ಯುದ್ಧದಿಂದ ಭಾರತದ ಆಟೋಮೊಬೈಲ್ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತ ಕಡಿಮೆ. ಆದರೆ ಒಂದು ಹಂತಕ್ಕೆ ಹಿನ್ನಡೆಯಾಗುವುದು ಸ್ಪಷ್ಟ.
ಹೌದು, ಭಾರತದ ಆಟೋಮೊಬೈಲ್ ಕ್ಷೇತ್ರಕ್ಕೆ ಯುದ್ಧದ ನೇರ ಪರಿಣಾಮ ತಟ್ಟುವುದಿಲ್ಲ. ಆದರೆ ಪರೋಕ್ಷ ಪರಿಣಾಮ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಲಿದೆ. ರಷ್ಯಾ ಹಾಗೂ ಉಕ್ರೇನ್ ಯುದ್ಧದಿಂದ ತೈಲ ಪೂರೈಕೆ ಕಡಿತಗೊಳ್ಳಲಿದೆ. ಇದರಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಲಿದೆ. ಪರಿಣಾಣ ಪೆಟ್ರೋಲ್ ಹಾಗೂ ಇಂಧನ ವಾಹನಗಳ ಬೇಡಿಕೆ ಕುಸಿಯಲಿದೆ. ಇದರಿಂದ ಭಾರತದ ಆಟೋ ಕಂಪನಿಗಳು ಮಾರಾಟದಲ್ಲಿ ಹಿನ್ನಡೆ ಅನುಭವಿಸಲಿದೆ.
Traffic Violation ಎರಡು ಕೈಯಲ್ಲಿ ಎರಡು ಫೋನ್, ಬೈಕ್‌ನಲ್ಲಿ ಸಾಹಸಕ್ಕೆ ಬಿತ್ತು ದುಬಾರಿ ಫೈನ್!
undefined
ವಾಹನ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳ ಪೈಕಿ ಮೆಟಲ್‌ನ್ನು ಭಾರತ ಪ್ರಮುಖವಾಗಿ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಉಕ್ರೇನ್ ಮೇಲಿನ ಯುದ್ದದಿಂದ ರಷ್ಯಾದಿಂದ ಪೂರೈಕೆಯಾಗುತ್ತಿದ್ದ ಮೆಟಲ್ ಸೇರಿದಂತೆ ಕಚ್ಚಾ ವಸ್ತುಗಳ ಆಮದು ವಿಳಂಬವಾಗುತ್ತಿದೆ. ಇನ್ನು ರಷ್ಯಾದಲ್ಲಿ ಟೊಯೋಟಾ, ವೋಕ್ಸ್‌ವ್ಯಾಗನ್, ಸ್ಟೆಲ್ಲಾಂಟಿಸ್ ಸೇರಿದಂತೆ ಪ್ರಮುಖ ಕಾರುಗಳ ಉತ್ಪಾದನೆ ರಷ್ಯಾದಲ್ಲೇ ಆಗುತ್ತಿದೆ. ರಷ್ಯಾದಿಂದ ಉತ್ಪಾದನೆಯಾಗಿ ಇತರ ದೇಶಕ್ಕೆ ರಫ್ತಾಗುತ್ತಿದ್ದ ಕಾರುಗಳ ಸಂಖ್ಯೆ ಕುಸಿದಿದೆ.
ವಿಶ್ವದಲ್ಲೇ ಅತೀ ಹೆಚ್ಚು ಲಿಥಿಯಂ ಐಯಾನ್ ಬ್ಯಾಟರಿ ಪೂರೈಕೆ ಮಾಡುವ 3ನೇ ಅತೀ ದೊಡ್ಡ ದೇಶ ರಷ್ಯಾ. ಎಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಹಿನ್ನಡೆಯಾಗಲಿದೆ. ಭಾರತದ ಕೆಲ ಆಟೋಮೊಬೈಲ್ ಕಂಪನಿಗಳು ರಷ್ಯಾದಿಂದ ಲಿಥಿಯಂ ಐಯಾನ್ ಬ್ಯಾಟರಿ ಆಮದು ಮಾಡಿಕೊಳ್ಳುತ್ತಿದೆ. ಇದು ಕೂಡ ನೇರವಾಗಿ ಪೂರೈಕೆಯಾಗುವ ಸಾಧ್ಯತೆ ಕಡಿಮೆಯಾಗಿದೆ. ಯುದ್ಧದಿಂದ ರಷ್ಯಾದಲ್ಲಿರುವ ಹಲವು ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನೆ ನಿಲ್ಲಿಸಿದೆ.
ರಷ್ಯಾ ಉಕ್ರೇನ್ ಯುದ್ಧ:
ರಷ್ಯಾ ನಡೆಸಿದ ವೈಮಾನಿಕ, ಕ್ಷಿಪಣಿ ದಾಳಿಗಳಲ್ಲಿ ರಷ್ಯಾದ 10ಕ್ಕೂ ಹೆಚ್ಚು ಪ್ರಮುಖ ನಗರಗಳು ಭಾರೀ ಹಾನಿಗೆ ತುತ್ತಾಗಿವೆ. ಈ ನಗರಗಳನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಮೂಲಕ, ಅವುಗಳ ಮೇಲೆ ರಷ್ಯಾ ಹಿಡಿತ ಸಾಧಿಸಿದೆ.
ಮಾಸ್ಕೋ: ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ, ಇದೀಗ ಉಕ್ರೇನ್‌ನ ಹಲವು ನಗರಗಳಿಗೆ ದಾಂಗುಡಿ ಇಟ್ಟಿದೆ. ಆಗಸ, ಭೂಮಿ, ಸಮುದ್ರದ ಮೂಲಕ ದಾಳಿ ನಡೆಸುತ್ತಿರುವ ರಷ್ಯಾ ನೆರೆ ದೇಶದ ಹಲವು ನಗರಗಳಿಗೆ ಯೋಧರನ್ನು ರವಾನಿಸಿದೆ.
ಕೀವ್
ಉಕ್ರೇನ್ ರಾಜಧಾನಿ. 29.6 ಲಕ್ಷ ಜನಸಂಖ್ಯೆ ಇದೆ. ಕೈಗಾರಿಕೆ, ವೈಜ್ಞಾನಿಕ, ಶೈಕ್ಷಣಿಕ, ಸಾಂಸ್ಕೃತಿಕತೆಯಲ್ಲಿ ಪೂರ್ವ ಯುರೋಪ್‌ನಲ್ಲೇ ಪ್ರಮುಖ ತಾಣ.
ಕೀವ್ ನಂತರ ಉಕ್ರೇನ್‌ನ 2ನೇ ದೊಡ್ಡ ನಗರ. ಈಶಾನ್ಯ ಭಾಗದಲ್ಲಿದೆ. ವೈಜ್ಞಾನಿಕ, ಶೈಕ್ಷಣಿಕ, ಸಾರಿಗೆ, ಕೈಗಾರಿಕಾ ಕೇಂದ್ರ. 14.33 ಲಕ್ಷ ಜನಸಂಖ್ಯೆ ಇದೆ. ಉಕ್ರೇನ್‌ನ 3ನೇ ಅತಿದೊಡ್ಡ ನಗರ. ಪ್ರಮುಖ ಪ್ರವಾಸಿ ತಾಣ. ಸಾರಿಗೆ ಕೇಂದ್ರ. ಉಕ್ರೇನ್‌ನ ಆಗ್ನೇಯ ದಿಕ್ಕಿನಲ್ಲಿದೆ. ಸುಮಾರು 10 ಲಕ್ಷ ಜನರು ವಾಸಿಸುತ್ತಿರುವ ಉಕ್ರೇನ್‌ನ ದೊಡ್ಡ ನಗರಗಳಲ್ಲಿ ಒಂದು. ಪೂರ್ವ ಭಾಗದಲ್ಲಿದೆ. ಅಣ್ವಸ್ತ್ರ, ಶಸ್ತ್ರಾಸ್ತ್ರ, ಬಾಹ್ಯಾಕಾಶ ಕ್ಷೇತ್ರದ ಚಟುವಟಿಕೆಗಳ ನಗರ ಕೂಡ ರಷ್ಯಾ ವಶವಾಗಿದೆ.