ದಾಳಿ ವೇಳೆ ಸೀಜ್ ಮಾಡಿದ ಖಾಸಗಿ ಜೆಟ್ ಹರಾಜು ಹಾಕಿದ ಇಡಿ, ಕೈಗೆಟುಕವ ದರದಲ್ಲಿ ವಿಮಾನ ಖರೀದಿಗೆ ಅವಕಾಶ

Published : Jul 03, 2026, 09:09 PM IST
ED Auctions Seized Private Jet at Affordable Price

ಸಾರಾಂಶ

ಐಡಿ ಅಧಿಕಾರಿಗಳು ದಾಳಿ ವೇಳೆ ದುಬಾರಿ ಮೌಲ್ಯದ ಖಾಸಗಿ ಜೆಟ್ ಜಪ್ತಿ ಮಾಡಿದ್ದರು. ಇದೀಗ ಈ ವಿಮಾನವನ್ನು ಇಡಿ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ. ಅತೀ ಕಡಿಮೆ ಬೆಲೆಯಲ್ಲಿ ವಿಮಾನ ಖರೀದಿಗೆ ಅವಕಾಶ ನೀಡಿದೆ. 

ಹೈದರಾಬಾದ್ (ಜು.03) ಅಕ್ರಮ ಹಣ ವರ್ಗಾವಣೆ ಪ್ರಕರಣ, ಅಕ್ರಮ ಹಣ ಸಂಪಾದನೆ ಸೇರಿದಂತೆ ಹಲವು ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ದೇಶಾದ್ಯಂತ ದಾಳಿ ಮಾಡುವುದು ಹೊಸದೇನಲ್ಲ. ದಾಳಿ ವೇಳೆ ಕೋಟಿ ಕೋಟಿ ರೂಪಾಯಿ ನಗದು, ಆಸ್ತಿಗಳನ್ನು ಜಪ್ತಿ ಮಾಡುತ್ತಾರೆ. ಹೀಗೆ ಜಪ್ತಿ ಮಾಡಿದ ಆಸ್ತಿಗಳ ಪೈಕಿ ಇಡಿ ಅಧಿಕಾರಿಗಳು ಇದೇ ಮೊದಲ ಬಾರಿಗೆ ಜೆಟ್ ವಿಮಾನವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಖಾಸಗಿ ಜೆಟ್ ಹರಾಜಿನ ಮೂಲಕ ಮಾರಾಟ ಮಾಡಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ದುಬಾರಿ ಮೌಲ್ಯದ ಜೆಟ್ ಇದೀಗ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ.

ಹಾಕರ್ 800 ಎ ಖಾಸಗಿ ಜೆಟ್

ಹೈದರಾಬಾದ್‌ನ ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಮರದೀಪ್ ಕುಮಾರ್ ಮಾಲೀಕತ್ವದ ಕಂಪನಿಯಲ್ಲಿ ನಡೆದಿರುವ ಅಕ್ರಮ ಹಣವರ್ಗಾವಣೆ ಪ್ರಕರಣ ಸಂಬಂಧ ದಾಳಿ ನಡೆದಿತ್ತು. ಇದು ಬರೋಬ್ಬರಿ 7892 ಕೋಟಿ ರೂಪಾಯಿ ಪ್ರಕರಣವಾಗಿತ್ತು.ದಾಳಿ ವೇಳೆ ಅಮರದೀಪ್ ಕುಮಾರ್ ಅವರ ಹಾಕರ್ 800ಎ ಖಾಸಗಿ ಜೆಟ್ ಕೂಡ ಜಪ್ತಿ ಮಾಡಲಾಗಿತ್ತು. ಇದೀಗ ಈ ವಿಮಾನವನ್ನು ಹರಾಜಿನ ಮೂಲಕ ಇಡಿ ಅಧಿಕಾರಿಗಳು ಮಾರಾಟ ಮಾಡುತ್ತಿದ್ದಾರೆ. ಹೈದರಾಬಾದ್ ಇಡಿ ಝೋನಲ್ ಕಚೇರಿ ಅಧಿಕಾರಿಗಳು ಹರಾಜು ಹಾಕಿದ್ದಾರೆ.

ಕೇವಲ 3 ಕೋಟಿ ರೂಪಾಯಿಗೆ ಜೆಟ್

2025ರ ಮಾರ್ಚ್ 7 ರಂದು ಈ ಹಾಕರ್ 800ಎ ಖಾಸಗಿ ಜೆಟ್ ವಶಕ್ಕೆ ಪಡೆಯಲಾಗಿತ್ತು. ಇದೀಗ ಈ ವಿಮಾನವನ್ನು ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತಿದೆ. ಜೆಟ್ ಖರೀದಿದಾರರಿಗೆ ಇದು ಕೈಗೆಟುಕುವ ದರವಾಗಿದೆ. ಕಾರಣ ಹಾಕರ್ 800 ಜೆಟ್ ಬೆಲೆ ದುಬಾರಿ. ಕೆಲ ಬಾಲಿವುಡ್ ನಟರ ಬಳಿಕ ಇದೇ ಕಂಪನಿಯ 800ಎ ಜೆಟ್ ಇದೆ. ಇದರ ಬೆಲೆ ಸರಿಸುಮಾರು 84 ಕೋಟಿ ರೂಪಾಯಿ. ಹಾಕರ್ 800 ಜೆಟ್ ಬೆಲೆ 18 ಕೋಟಿ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಈ ಬೆಲೆಗೆ ಹೋಲಿಸಿದರೆ ಸದ್ಯ 3 ಕೋಟಿ ರೂಪಾಯಿಗೆ ಹಾಕರ್ 800ಎ ಜೆಟ್ ಲಭ್ಯವಾಗುತ್ತಿದೆ. 3 ಕೋಟಿ ರೂಪಾಯಿಯಿಂದ ಹಾಕರ್ 800ಎ ಜೆಟ್ ಹರಾಜು ಆರಂಭಗೊಳ್ಳಲಿದೆ.

ಫಾಲ್ಕಮ್ ಗ್ರೂಪ್ ಅಮರದೀಪ್ ಕುಮಾರ್ ಅವರ ಹಲವು ಕಂಪನಿಗಳ ಪೈಕಿ ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಕಂಪನಿ ಕೂಡ ಒಂದು. ಈ ಕಂಪನಿಯಲ್ಲಿ ಬರೋಬ್ಬರಿ 792 ಕೋಟಿ ರೂಪಾಯಿ ಅವ್ಯಹಾರ ನಡೆದಿತ್ತು. ಸೆಪ್ಟೆಂಬರ್ 2025ರಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಭಾರಿ ಅವ್ಯವಹಾರ ಪತ್ತೆಯಾಗುತ್ತಿದ್ದಂತೆ ಇಡಿ ತನಿಖೆ ಚುರುಕುಗೊಳಿಸಿತ್ತು. ಹಲವೆಡೆ ದಾಳಿ ನಡೆಸಿ ಕೋಟಿ ಕೋಟಿ ರೂಪಾಯಿ ಹಣ, ಆಸ್ತಿಗಳನ್ನು ಜಪ್ತಿ ಮಾಡಿತ್ತು. ಇದೇ ವೇಳೆ ಜೆಟ್ ವಿಮಾನ ಕೂಡ ಜಪ್ತಿಯಾಗಿತ್ತು.

ವಿಮಾನದ ಹರಾಜಿನಿಂದ ಬರುವ ಮೊತ್ತವನ್ನು ಕ್ಯಾಪಿಟಲ್ ಪ್ರೊಟೆಕ್ಷನ್ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ನೀಡಲಾಗುತ್ತದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

PREV
Read more Articles on
click me!

Recommended Stories

ಡ್ರೈವಿಂಗ್‌ನಲ್ಲಿ ಪುರುಷರಿಗಿಂತ ಮಹಿಳೆಯರು ಬೆಟರ್, ರಾತ್ರಿ 9 ರಿಂದ 10 ರಿಸ್ಕಿ ಟೈಮ್, ಸಮೀಕ್ಷಾ ವರದಿ ಅಚ್ಚರಿ
1 ಲಕ್ಷ ರೂ ಸಬ್ಸಿಡಿ, ರಿಜಿಸ್ಟ್ರೇಶನ್ ಉಚಿತ, ಹೊಸ ಎಲೆಕ್ಟ್ರಿಕ್ ವಾಹನ ಪಾಲಿಸಿಗೆ ಸರ್ಕಾರದಿಂದ ಅನುಮೋದನೆ