EV chargers 10 ಸಾವಿರ ಎಲೆಕ್ಟ್ರಿಕ್ ವಾಹನಕ್ಕೆ 5,000 EV ಚಾರ್ಜರ್ ಒದಗಿಸಲು EVRE ಹಾಗೂ ಜಿಂಗೊ ಒಪ್ಪಂದ!

By Suvarna News  |  First Published Dec 28, 2021, 5:20 PM IST
  • ಎಲೆಕ್ಟ್ರಿಕ್ ವಾಹನ ಮೂಲಸೌಕರ್ಯ ಒದಗಿಸಲು EVRE, ಜಿಂಗೊ ಪಾಲುದಾರಿಕೆ
  • ಭಾರತದಲ್ಲಿ 5,000 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ
  • ವರ್ಷಕ್ಕೆ 27 ದಶಲಕ್ಷ ಟನ್ ಹೊಗೆ ಹೊರಸೂಸುವಿಕೆ ಕಡಿತ
     

ಬೆಂಗಳೂರು(ಡಿ.28): ಭಾರತದಲ್ಲಿ ಎಲೆಕ್ಟ್ರಿಕ್(Electric Vehicle) ವಾಹನಗಳ (ಇವಿ) ಚಾರ್ಜಿಂಗ್(EV Charging) ಮೂಲಸೌಕರ್ಯ ಪ್ರಮುಖ ಕಂಪನಿಯಾಗಿರುವ EVRE ಹಾಗೂ  ಗ್ರಾಹಕರ ಮನೆ ಬಾಗಿಲಿಗೆ ಸರಕುಗಳನ್ನು ಒದಗಿಸುವ  ಭಾರತದ ಪರಿಸರ ಸ್ನೇಹಿ ಕಂಪನಿ ಜಿಂಗೊ (Zyngo) ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದೆ.  ಸದ್ಯಕ್ಕೆ ಜಿಂಗೊ 10 ನಗರಗಳಲ್ಲಿ 500 ಕ್ಕೂ ವಾಹನಗಳನ್ನು ನಿರ್ವಹಿಸುತ್ತಿದ್ದು, ವಿದ್ಯುತ್ ಚಾಲಿತ 10,000 ದಷ್ಟು ವಾಹನಗಳ ಸದೃಢ ಸಮೂಹ ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಪಾಲುದಾರಿಕೆಯ ಅಡಿಯಲ್ಲಿ, ‘EVRE’ ಮುಂದಿನ 24 ತಿಂಗಳೊಳಗೆ ಭಾರತದಾದ್ಯಂತ 5,000 ವಿದ್ಯುತ್‌ಚಾಲಿತ (EV) ಚಾರ್ಜಿಂಗ್ ಸ್ಟೇಷನ್‌ಗಳನ್ನು(Charging station) ಒದಗಿಸಲಿದೆ. ಇದನ್ನು ವಿದ್ಯುತ್ ಚಾಲಿತ ವಾಹನಗಳನ್ನು ಒದಗಿಸುವ ಜಿಂಗೊ ಮತ್ತು ಇತರ ‘ಇವಿ’ ವಾಹನಗಳ ಮಾಲೀಕರು ಬಳಸಿಕೊಳ್ಳಲಿದ್ದಾರೆ.

ಭೌಗೋಳಿಕ ವಿಸ್ತರಣೆಯ ಮೂಲಕ ಹೆಚ್ಚಿರುವ ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳಲು ಜಿಂಗೊ, ತನ್ನ ಗ್ರಾಹಕರ ಮನೆ ಬಾಗಿಲಿಗೆ ಸೇವೆ ವಿಸ್ತರಿಸಲು ಈ ಚಾರ್ಜರ್‌ಗಳನ್ನು ಬಳಸಿಕೊಳ್ಳಲಿದೆ. ಈ ವಿಸ್ತರಣೆ ಯೋಜನೆಯ ಭಾಗವಾಗಿ ‘EVRE’ ಚಾರ್ಜಿಂಗ್ ಮೂಲಸೌಕರ್ಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯಗತಗೊಳಿಸುವ ಹೊಣೆ ಹೊತ್ತುಕೊಳ್ಳಲಿದೆ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ಮತ್ತು ಮುಂದೆ ಸ್ಥಾಪಿಸಲಿರುವ ಚಾರ್ಜಿಂಗ್ ಸ್ಟೇಷನ್‌ಗಳಿಗಾಗಿ ಎಲ್ಲಾ ತಂತ್ರಜ್ಞಾನ ಅಗತ್ಯಗಳನ್ನು ‘EVRE’ ಸ್ವತಃ ನಿರ್ವಹಿಸಲಿದೆ. ಈ ಪಾಲುದಾರಿಕೆಯ ಭಾಗವಾಗಿ ಜಿಂಗೊ, ಬೇಡಿಕೆ ಒಟ್ಟುಗೂಡಿಸುವುದು, ಪೂರೈಕೆ ಸರಿಪಡಿಸುವಿಕೆ, ಚಾರ್ಜಿಂಗ್ ಮೂಲಸೌಕರ್ಯಕ್ಕೆ ಸಂಪರ್ಕ ಕಲ್ಪಿಸುವಿಕೆ ಮತ್ತು ಉತ್ತಮ ಬಳಕೆಗಾಗಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬುದನ್ನು ನಿರ್ಧರಿಸಲು ‘EVRE’ಗೆ ನೆರವಾಗಲಿದೆ.

Latest Videos

undefined

EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!

ಚಾರ್ಜಿಂಗ್ ಮೂಲಸೌಕರ್ಯ ಒದಗಿಸುವವರು ದಕ್ಷ ಮತ್ತು ತುರ್ತು ಮೂಲಸೌಕರ್ಯಗಳೊಂದಿಗೆ ವಿದ್ಯುತ್ ಚಾಲಿತ ವಾಹನಗಳ ಇಂಧನ ಅಗತ್ಯಗಳನ್ನು ಒದಗಿಸುವುದರಿಂದ, ಇಂತಹ ಪಾಲುದಾರಿಕೆಗಳು ವಿದ್ಯುತ್‌ಚಾಲಿತ ವಾಹನಗಳ ನಿರ್ವಾಹಕರರಿಗೆ ಹೆಚ್ಚು ಪ್ರಯೋಜನಕ್ಕೆ ಬರಲಿವೆ. ವಾಹನಗಳನ್ನು ಒದಗಿಸುವ ಕಂಪನಿಗಳು ತಮ್ಮ ಪ್ರಮುಖ ಕಾರ್ಯಗಳ ಮೇಲೆ ನಿಶ್ಚಿಂತೆಯಿಂದ ತಮ್ಮೆಲ್ಲ ಗಮನವನ್ನು ಕೇಂದ್ರೀಕರಿಸಬಹುದಾಗಿದೆ.

ಪಾಲುದಾರಿಕೆಯ ಮೊದಲ ಹಂತದಲ್ಲಿ, ‘EVRE’, ಜಿಂಗೊದ 500 ವಿದ್ಯುತ್‌ಚಾಲಿತ ವಾಹನಗಳಿಗೆ 500 ಚಾರ್ಜಿಂಗ್ ಸ್ಟೇಷನ್‌ಗಳೊಂದಿಗೆ ಸೇವೆ ಒದಗಿಸಲಿದೆ. ‘EVRE’ ಈ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಬೇಕಾದ ಭೂಮಿಯನ್ನು ಗುತ್ತಿಗೆಗೆ ನೀಡುತ್ತದೆ, ಪಾರ್ಕಿಂಗ್ ಮತ್ತು ಚಾರ್ಜಿಂಗ್ ಮೂಲಸೌಕರ್ಯ ಒದಗಿಸಲಿದೆ. ಚಾರ್ಜಿಂಗ್ ಸ್ಟೇಷನ್‌ಗಳನ್ನು ದಕ್ಷತೆಯಿಂದ ನಿರ್ವಹಿಸಲಿದೆ. ಈ ಕೇಂದ್ರಗಳ ವಿಮೆ, ಸುರಕ್ಷತೆ ಮತ್ತು ಭದ್ರತೆಯನ್ನೂ ನೋಡಿಕೊಳ್ಳುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಜಿಂಗೊ ಹೊಸ ನಗರಗಳಿಗೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದಂತೆ, ನಿರ್ದಿಷ್ಟ ಉದ್ದೇಶಕ್ಕೆ ಬಳಕೆಯಾಗುವ ವಿದ್ಯುತ್‌ಚಾಲಿತ ವಾಹನಗಳನ್ನು ತನ್ನ ಸದ್ಯಕ್ಕೆ ಅಸ್ತಿತ್ವದಲ್ಲಿ ಇರುವ ಮತ್ತು ಮುಂಬರುವ ದಿನಗಳಲ್ಲಿ ಕಾರ್ಯಾರಂಭ ಮಾಡಲಿರುವ ಮೂಲಸೌಕರ್ಯ ತಾಣಗಳಲ್ಲಿ  ನಿಲ್ಲಿಸಲು ಮತ್ತು ಚಾರ್ಜ್ ಮಾಡಲು ಅಗತ್ಯವಾದ ನೆರವನ್ನು ‘EVRE’ ಒದಗಿಸಲಿದೆ.

ಟಾಟಾ ಪವರ್‌ನಿಂದ ದೇಶಾದ್ಯಂತ 1000 EV ಚಾರ್ಚಿಂಗ್ ಕೇಂದ್ರಗಳು

ನಾವು ಇ-ಕಾಮರ್ಸ್ ವಹಿವಾಟಿನಾದ್ಯಂತ  ಸ್ಥಳೀಯ ಅಗತ್ಯಗಳಿಗಾಗಿ ವಿತರಣಾ ಸೇವೆಗಳನ್ನು ತ್ವರಿತವಾಗಿ ಒದಗಿಸುತ್ತಿದ್ದೇವೆ. ಗ್ರಾಹಕರ ಮನೆ ಬಾಗಿಲಲ್ಲಿ ಸರಕುಗಳನ್ನು ಒದಗಿಸಲು ವಿದ್ಯುತ್ ಚಾಲಿತ ವಾಹನಗಳ ಪೂರ್ಣ ಪ್ರಮಾಣದ ಪ್ರಯೋಜನ ಪಡೆದುಕೊಳ್ಳಲು ಇಂತಹ ಸಹಯೋಗಗಳ ಅಗತ್ಯವಿದೆ. ‘ಇವಿಆರ್‌ಇ’ನ ಸುಧಾರಿತ ಚಾರ್ಜಿಂಗ್ ಮೂಲಸೌಕರ್ಯ ಜಿಂಗೊದÀ ಸಂಪೂರ್ಣ ಸಮರ್ಥ ಮತ್ತು ಸುಧಾರಿತ ಸರಕು ಸಾಗಣೆಯ ತಂತ್ರಜ್ಞಾನ ಸೌಲಭ್ಯ  ಮತ್ತು ವಾಹನಗಳ ನಿರ್ವಹಣೆ ಜೊತೆಗೆ ವಿದ್ಯುತ್‌ಚಾಲಿತ ವ್ಯವಸ್ಥೆಯನ್ನು ಒದಗಿಸಲು ಮತ್ತು ವೇಗವಾಗಿ ಅಳವಡಿಸಿಕೊಳ್ಳುವುದಕ್ಕೆ ಬೆಂಬಲ ನೀಡುತ್ತದೆ’ ಎಂದು ಜಿಂಗೊದ ಸಂಸ್ಥಾಪಕ ಮತ್ತು ಸಿಇಒ ಪ್ರತೀಕ್ ರಾವ್ ಹೇಳಿದ್ದಾರೆ.

ಬರುತ್ತಿದೆ ಸೋಲಾರ್ ಎಲೆಕ್ಟ್ರಿಕ್ ಕಾರು , ಚಾರ್ಜಿಂಗ್ ಇಲ್ಲದೆ ಪ್ರತಿ ದಿನ 1,600 ಕಿ.ಮಿ ಮೈಲೇಜ್!
 
ಕಂಪ್ಯೂಟರ್ ವಿಷನ್ ತಂತ್ರಜ್ಞಾನದ ಬೆಳವಣಿಗೆಯ ಸೇವೆಗಳು ಮತ್ತು ವ್ಯವಹಾರಗಳನ್ನು ಜೊತೆಯಾಗಿ ಸೃಷ್ಟಿ ಮಾಡುವ ಮೂಲಕ ಹೊಸ ವ್ಯಾಪಾರ ಮೌಲ್ಯವನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇಂತಹ ಪಾಲುದಾರಿಕೆಗಳ ಮೂಲಕ, ವಿದ್ಯುತ್ ಚಾಲಿತ ವಾಹನಗಳ ಮಾಲೀಕರು ಮತ್ತು ದೇಶದಾದ್ಯಂತ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರಿಗಾಗಿ ಸಮಗ್ರ ಮೂಲಸೌಕರ್ಯ ವ್ಯವಸ್ಥೆ ಅಭಿವೃದ್ಧಿಪಡಿಸುವುದನ್ನು ನಾವು ಎದುರು ನೋಡುತ್ತಿದ್ದೇವೆ. ಜಿಂಗೊ, ಅದರ ವಿಶಿಷ್ಟ ಸೌಲಭ್ಯಗಳ ಮೂಲಕ ಸೂಕ್ತವಾದ ಪಾಲುದಾರ ಕಂಪನಿಯಾಗಿದೆ. ಎರಡೂ ಕಂಪನಿಗಳು ವಿದ್ಯುತ್ ಚಾಲಿತ (ಇವಿ) ಪರಿಸರ ವ್ಯವಸ್ಥೆಯಲ್ಲಿನ ಸಂಪನ್ಮೂಲಗಳ ಪರಸ್ಪರ ಬಳಕೆಯಿಂದ ಪರಸ್ಪರ ಪ್ರಯೋಜನ ಪಡೆಯಲಿವೆ’ ಎಂದು  EVRE  ಸಹ-ಸಂಸ್ಥಾಪಕ ಮತ್ತು ಸಿಇಒ ಕೃಷ್ಣ ಕೆ ಜಸ್ತಿ ಹೇಳಿದ್ದಾರೆ.

5,000 ಚಾರ್ಜರ್‌ಗಳನ್ನು EVRE ಅಪ್ಲಿಕೇಷನ್ (App) ಮೂಲಕ ದೇಶದಾದ್ಯಂತ ಇರುವ ವಿದ್ಯುತ್ ಚಾಲಿತ ಮೂಲಸೌಕರ್ಯ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗುತ್ತದೆ. 
 

click me!