ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಹಾರುವ ಕಾರು, 30 ನಿಮಿಷದಲ್ಲಿ ಚಾರ್ಜ್ 400 ಕಿ.ಮಿ ಮೈಲೇಜ್!

Published : Jan 04, 2023, 03:57 PM IST
ಬಿಡುಗಡೆಗೆ ಸಜ್ಜಾದ ಮೇಡ್ ಇನ್ ಇಂಡಿಯಾ ಹಾರುವ ಕಾರು, 30 ನಿಮಿಷದಲ್ಲಿ ಚಾರ್ಜ್ 400 ಕಿ.ಮಿ ಮೈಲೇಜ್!

ಸಾರಾಂಶ

ಫ್ಲೈಯಿಂಗ್ ಕಾರು ತಂತ್ರಜ್ಞಾನ ವಿದೇಶಗಳಲ್ಲಿ ಹಚ್ಚು ಪ್ರಯೋಗಗಳು ನಡೆಯುತ್ತಿದೆ. ದುಬೈ ಸೇರಿದಂತೆ ಕೆಲ ದೇಶದಲ್ಲಿ ಈಗಾಗಲೇ ಹಾರುವ ಕಾರು ಟೆಸ್ಟಿಂಗ್ ಮುಗಿಸಿ ಬಳಕೆ ಸಿಗುವಂತಾಗಿದೆ. ಇದೀಗ ಭಾರತದಲ್ಲೇ ಉತ್ಪಾದನೆಯಾಗಿರುವ ಮೇಡ್ ಇನ್ ಇಂಡಿಯಾ ಫ್ಲೈಯಿಂಗ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಫ್ಲೈಯಿಂಗ್ ಕಾರಿನ ವಿಶೇಷತೆ, ಮೈಲೇಜ್, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.  

ನವದೆಹಲಿ(ಜ.04): ಆಟೋಮೊಬೈಲ್ ಕ್ಷೇತ್ರದಲ್ಲಿ ಪ್ರತಿ ದಿನ ಹೊಸ ಹೊಸ ತಂತ್ರಜ್ಞಾನಗಳ ಬಳಕೆಯಾಗುತ್ತಿದೆ. ಆವಿಷ್ಕಾರಗಳು ನಡೆಯತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದೇಶಗಳು ಈಗಾಗಲೇ ಫ್ಲೈಯಿಂಗ್ ಕಾರಿನ ಪ್ರಯೋಗ ನಡೆದು ಬಳಕಗೆ ಸಜ್ಜಾಗುತ್ತಿದೆ.  ಇದೀಗ ಭಾರತದಲ್ಲೇ ಉತ್ಪಾದನೆ ಮಾಡಿರುವ ಮೇಡ್ ಇನ್ ಇಂಡಿಯಾ ಫ್ಲೈಯಿಂಗ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ದೆಹಲಿ ಮೂಲದ ASKA ಕಂಪನಿ ಇದೀಗ ಹಾರುವ ಕಾರು ನಿರ್ಮಾಣದಲ್ಲಿ ತೊಡಗಿದೆ. ಮೊದಲ ಹಂತದಲ್ಲಿ ಪ್ರಾಕೃತಿಕ ವಿಕೋಪಗಳಿಗೆ ಈ ಫ್ಲೈಯಿಂಗ್ ಕಾರು ಬಳಕೆಗೆ ASKA ಕಂಪನಿ ನಿರ್ಧರಿಸಿದೆ. ಬಳಿಕ ವಾಣಿಜ್ಯ ಹಾಗೂ ಖಾಸಗಿ ಅಗತ್ಯಗಳಿಗೆ ಫ್ಲೈಯಿಂಗ್ ಕಾರು ಬಳಕೆಗೆ ಮುಕ್ತವಾಗಲಿದೆ ಎಂದು ASKA ಹೇಳಿದೆ.

ದೆಹಲಿಯ ASKA ಕಂಪನಿ ಪ್ರಾಕೃತಿಕ ವಿಕೋಪ ಮ್ಯಾನೇಜ್ಮೆಂಟ್ ಕಂಪನಿಯಾಗಿದೆ. ಅಗ್ನಿ ನಿರೋಧಕ ಸಲಕರಣೆ, ಅಗ್ನಿ ಸುರಕ್ಷತಾ ಸಲಕರಣೆ ಸೇರಿದಂತೆ ವಿಕೋಪಗಳಿಂದ ರಕ್ಷಣೆ ನೀಡಬಲ್ಲ ಹಲವು ಸಲಕರಣೆಗಳ ಉತ್ಪಾದನಾ ಕಂಪನಿಯಾಗಿದೆ. ಇದೀಗ ಇದೇ ಕಂಪನಿ ಫ್ಲೈಯಿಂಗ್ ಕಾರು ಅಭಿವೃದ್ಧಿ ಮಾಡುತ್ತಿದೆ. ಮಾಡೆಲ್ ಅಂತಿಮಗೊಳಿಸಿ ಸದ್ಯ ಟೆಸ್ಟಿಂಗ್ ಕಾರ್ಯಗಳು ನಡೆಯುತ್ತಿದೆ. ಎಲೆಕ್ಟ್ರಿಕಲ್ ಎಂಜಿನ್ ಮೋಟಾರ್ ಚಾಲಿತ ಈ ಫ್ಲೈಯಿಂಗ್ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ.

Flying Carಗಳ ಕನಸು ನನಸಾಗುವತ್ತ : ಸರ್ಕಾರದಿಂದ ಹಾರುವ ಕಾರಿಗೆ ಗ್ರೀನ್ ಸಿಗ್ನಲ್!

ASKA ಹಾರು ಕಾರು ವರ್ಟಿಕಲ್ ಟೇಕ್ ಆಫ್ ಹಾಗೂ ಲ್ಯಾಂಡಿಂಗ್(VTOL) ತಂತ್ರಜ್ಞಾನ ಹೊಂದಿದೆ. ಅಂದರೆ ಯಾವುದೇ ರನ್ ವೇ ಇಲ್ಲದೆ ನಿಂತಲ್ಲಿಂದಲೇ ಟೇಕ್ ಆಫ್ ಆಗುವ ಹಾಗೂ ಲ್ಯಾಂಡಿಂಗ್ ಆಗುವ ತಂತ್ರಜ್ಞಾನ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನದ ಯುದ್ಧವಿಮಾನಗಳು ಈ ತಂತ್ರಜ್ಞಾನ ಹೊಂದಿದೆ. ಇದರ ಜೊತೆಗೆ ಶಾರ್ಟ್ ಟೇಕ್ ಆಫ್ ಲ್ಯಾಂಡಿಂಗ್ ಟೆಕ್ನಾಲಜಿಯನ್ನು ಹೊಂದಿದೆ.

ASKA ಫ್ಲೈಯಿಂಗ್ ಕಾರಿನಲ್ಲಿ 4 ಮಂದಿ ಆರಾಮಾಗಿ ಪ್ರಯಾಣಿಸಲು ಸಾಧ್ಯವಿದೆ. ಇದರ ಜೊತೆಗೆ ಕೆಲ ಸಲಕರಣಗಳು, ಲಗೇಜ್ ಒಯ್ಯಲು ಸ್ಥಳಾವಕಾಶ ಹಾಗೂ ಸಾಮರ್ಥ್ಯಹೊಂದಿದೆ.  ASKA ಫ್ಲೈಯಿಂಗ್ ಕಾರಿನಲ್ಲಿ ಲಿಯಥಿಂಯ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 400 ಕಿಲೋಮೀಟರ್ ಮೈಲೇಜ್ ನೀಡಲಿದೆ. ಮತ್ತೊಂದು ವಿಶೇಷತೆ ಅಂದರೆ ಸೂಪರ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. ಕೇವಲ 30 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. 0-100 ವೇಗವನ್ನ ಕೇವಲ 3 ನಿಮಿಷದಲ್ಲಿ ಪಡೆದುಕೊಳ್ಳಲಿದೆ. ಇನ್ನು ಗರಿಷ್ಠ ವೇಗ 200 ಕಿಲೋಮೀಟರ್ ಪ್ರತಿ ಗಂಟಗೆ. 

 

ಕೇವಲ 3 ನಿಮಿಷದಲ್ಲಿ ಕಾರು ವಿಮಾನವಾಗಿ ಬದಲಾಗುತ್ತೆ; ಕ್ಲೈನ್ ವಿಷನ್ ಆವಿಷ್ಕಾರ 

ಭಾರತದಲ್ಲಿ ನೆದರ್ಲೆಂಡ್ ಹಾರುವ ಕಾರು ಟೆಸ್ಟಿಂಗ್
ನೆದರ್‌ಲೆಂಡ್‌ ಮೂಲದ ಹಾರುವ ಕಾರು ಉತ್ಪಾದಕ ಕಂಪನಿ ಪಿಎಎಲ್‌-ವಿ(ಪರ್ಸನಲ್‌ ಏರ್‌ ಲ್ಯಾಂಡ್‌ ವೆಹಿಕಲ್‌) ಗುಜರಾತ್‌ನಲ್ಲಿ ತನ್ನ ಘಟಕ ತೆರೆಯಲು ಸಿದ್ಧತೆ ನಡೆಸಿದೆ. ಈ ಘಟಕದಿಂದ, ಮೇಡ್‌ ಇನ್‌ ಇಂಡಿಯಾ ಹಾರುವ ಕಾರು ತಯಾರಾಗಿ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಅವಳಿ ಇಂಜಿನ್‌ಗಳನ್ನು ಹೊಂದಲಿರುವ ಈ ಕಾರು ರಸ್ತೆ ಮಾರ್ಗದಲ್ಲಿ ಪ್ರತೀ ಗಂಟೆಗೆ 160 ಕಿ.ಮೀ ಸಂಚರಿಸಲಿದೆ. ಇನ್ನು ಆಕಾಶದಲ್ಲಿ ಪ್ರತೀ ಗಂಟೆಗೆ 180 ಕಿ.ಮೀ ಸಂಚರಿಸಲಿದೆ. ಅಲ್ಲದೆ, ಕೇವಲ 3 ನಿಮಿಷಗಳಲ್ಲಿ ರಸ್ತೆಯಿಂದ ಆಕಾಶದತ್ತ ಚಿಮ್ಮುವ ಸಾಮರ್ಥ್ಯ ಹೊಂದಿದೆ. ಇಂಧನ ಟ್ಯಾಂಕ್‌ ಒಮ್ಮಗೆ ಪೂರ್ಣವಾಗಿ ತುಂಬಿಸಿದರೆ 500 ಕಿ.ಮೀ ದೂರ ಸಂಚರಿಸಬಹುದಾಗಿದೆ. ಮತ್ತೊಂದೆಡೆ, ಈ ಕಾರಿನ ಘಟಕ ಆರಂಭಕ್ಕೂ ಮುನ್ನವೇ ವಿದೇಶಗಳಿಂದ 110 ಕಾರುಗಳಿಗಾಗಿ ಬೇಡಿಕೆ ಬಂದಿದೆ ಎನ್ನಲಾಗಿದೆ.

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು