ರೈಡ್ ಸ್ವೀಕರಿಸಿ ಬಳಿಕ ಕ್ಯಾನ್ಸಲ್ ಮಾಡುವುದೇಕೆ? ಒಲಾ ಡ್ರೈವರ್ ವರ್ತನೆ ಕುರಿತು ಸಿಇಒ ಸ್ಪಷ್ಟನೆ!

By Suvarna NewsFirst Published Dec 27, 2022, 3:38 PM IST
Highlights

ಆ್ಯಪ್ ಮೂಲಧಾರಿತ ಕ್ಯಾಬ್ ಜನರ ಜೀವನಗ ಅವಿಭಾಜ್ಯ ಅಂಗವಾಗಿದೆ. ಮಹಾನಗರಗಳಲ್ಲಿ ಕ್ಯಾಬ್ ಸೇವೆ ಅತೀ ಅಗತ್ಯವಾಗಿದೆ. ಆದರೆ ಇತ್ತೀಚೆಗೆ ಒಲಾ ಕ್ಯಾಬ್ ವಿರುದ್ಧ ಗ್ರಾಹಕರ ಆಕ್ರೋಶ ಹೆಚ್ಚಾಗಿದೆ. ಒಲಾ ಡ್ರೈವರ್ಸ್ ಬುಕಿಂಗ್ ಸ್ವೀಕರಿಸಿ ಬಳಿಕ ರದ್ದು ಮಾಡುವ ಪರಿಪಾಠ ಹೆಚ್ಚಾಗಿದೆ. ಈಗಾಗಲೇ ಹಲವು ದೂರುಗಳು ದಾಖಲಾಗಿದೆ. ಈ ಕುರಿತು ಒಲಾ ಸಿಎಒ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು(ಡಿ.27): ಒಲಾ ವಿರುದ್ಧ ಬಳಕೆದಾರರ ಆಕ್ರೋಶ ಹೆಚ್ಚಾಗಿದೆ. ಕ್ಯಾಬ್ ಬುಕಿಂಗ್ ಮಾಡಿದ ಬಳಿಕ ಡ್ರೈವರ್ಸ್ ಕ್ಯಾನ್ಸಲ್ ಮಾಡುವ ಪರಿಪಾಠ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರು ಹಲವು ಬಾರಿ ಕ್ಯಾಬ್ ಬುಕ್ ಮಾಡಿ ಕ್ಯಾನ್ಸಲ್ ಆಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಈ ಕುರಿತು ಸಾಮಾಜಿಕಲ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ದೂರು, ಆಕ್ರೋಶ ಹೆಚ್ಚಾಗುತ್ತಿದ್ದಂತೆ ಒಲಾ ಸಿಇಒ ಭವಿಷ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ. ಇಷ್ಟೇ ಅಲ್ಲ ಒಲಾ ಡ್ರೈವರ್ ರೈಡಿಂಗ್ ಕ್ಯಾನ್ಸಲ್ ಕುರಿತು ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡ್ರಾಪ್ ಲೊಕೇಶನ್ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ.

ಡ್ರೈವರ್ ದಿಢೀರ್ ರೈಡ್ ಕ್ಯಾನ್ಸಲ್ ಮಾಡುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಕುರಿತು ಪಾರ್ಟ್ನರ್ ಕ್ಯಾಬ್ ಹಾಗೂ ಚಾಲಕರ ಜೊತೆ ಸಭೆ ನಡೆಸಿ ಕ್ಯಾನ್ಸಲ್ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದಾರೆ. ಕ್ಯಾಬ್ ಚಾಲಕರು ರೈಡ್ ಸ್ವೀಕರಿಸಿ ಬಳಿಕ ಕ್ಯಾನ್ಸಲ್ ಮಾಡುತ್ತಿರುವ ಕುರಿತು ಹಲವು ದೂರುಗಳು ದಾಖಲಾಗಿದೆ. ಪ್ರಮುಖವಾಗಿ ಗ್ರಾಹಕರು  ತಲುಪಬೇಕಾದ ಸ್ಥಳದ ಕುರಿತ ಮಾಹಿತಿ ತಿಳಿದ ಬೆನ್ನಲ್ಲೇ ಕ್ಯಾನ್ಸಲ್ ಮಾಡುತ್ತಿದ್ದಾರೆ. ಇನ್ನು ಹಣ ಪಾವತಿ ವಿಧಾನ ಚೆಕ್ ಮಾಡಿ ಡ್ರೈವರ್ಸ್ ಕ್ಯಾನ್ಸಲ್ ಮಾಡುತ್ತಿದ್ದಾರೆ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ.

Ola-Uber Fare: ಓಲಾ, ಉಬರ್‌ಗೆ ದರ ಫಿಕ್ಸ್‌ ಮಾಡಿದ ಸಾರಿಗೆ ಇಲಾಖೆ!

ಡ್ರೈವರ್ ಕ್ಯಾನ್ಸಲ್ ಮಾಡುತ್ತಿರುವ ಘಟನೆ ತಪ್ಪಿಸಲು ಈಗಾಗಲೇ ಡ್ರೈವರ್ ರೈಡ್ ಸ್ವೀಕರಿಸುವ ಮುನ್ನವೇ ಗ್ರಾಹಕರು ತಲುಪಬೇಕಾದ ಸ್ಥಳದ ಮಾಹಿತಿ ಚಾಲಕರಿಗೆ ಸಿಗುವಂತೆ ಮಾಡಲಾಗಿದೆ. ಹಣ ಪಾವತಿ ವಿಧಾನ ಸೇರಿದಂತೆ ಇತರ ಕೆಲ ಮಾಹಿತಿಗಳನ್ನು ಚಾಲಕರಿಗೆ ರೈಡ್ ಸ್ವೀಕರಿಸುವ ಮನ್ನವೇ ಸಿಗುವಂತೆ ಮಾಡಲಾಗುತ್ತಿದೆ. ಇದರಿಂದ ಚಾಲಕರು ಕ್ಯಾನ್ಸಲ್ ಮಾಡುವ ಪರಿಪಾಠ ತಪ್ಪಲಿದೆ ಎಂದಿದ್ದಾರೆ.

ಚಾಲಕರ ಜೊತೆ ಸಭೆ ನಡೆಸಿ ಈ ಕುರಿತು ಮಾಹಿತಿಗಳನ್ನು ನೀಡಲಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ಆಗಿರುವ ಸಮಸ್ಯೆ ಕುರಿತು ಶೀಘ್ರದಲ್ಲೇ ಸಂಪೂರ್ಣ ಪರಿಹಾರ ನೀಡಲಾಗುತ್ತದೆ ಎಂದು ಭವಿಷ್ ಅಗರ್ವಾಲ್ ಭರವಸೆ ನೀಡಿದ್ದಾರೆ. 

ಒಲಾ ಡ್ರೈವರ್ ರೈಡ್ ಕ್ಯಾನ್ಸಲ್ ಮಾಡುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ನಾನು ಒಲಾ ಸೇವೆಯಿಂದ ಸಮಸ್ಯೆ ಅನುಭವಿಸಿ ತೀವ್ರ ನೊಂದಿದ್ದೇನೆ. ಹೀಗಾಗಿ ನನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದೇನೆ. ಕಚೇರಿಯಿಂದ ಮನೆಗೆ ತೆರಲು ಒಲಾ ಮಿನಿ ಕ್ಯಾಬ್ ಬುಕ್ ಮಾಡಿದೆ. ರೈಡ್ ಬುಕಿಂಗ್ ಆದ ಬೆನ್ನಲ್ಲೇ ಒಲಾ ಡ್ರೈವರ್ ಕರೆ ಮಾಡಿ ಡ್ರಾಪ್ ಲೋಕೇಶನ್ ಮಾಹಿತಿ ಪಡೆದಿದ್ದಾರೆ. ಬಳಿಕ ಕ್ಯಾನ್ಸಲ್ ಮಾಡಿದ್ದಾರೆ. ಬಳಿಕ ಬೇರೆ ಕ್ಯಾಬ್ ಬುಕ್ ಮಾಡಿದ್ದೇನೆ. ಫಲಿತಾಂಶ ಇದಕ್ಕಿಂತ ಭಿನ್ನವಾಗಿಲ್ಲ. 4 ಬಾರಿ ಒಲಾ ರೈಡ್ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಿಶನ್ ಸಿಂಗ್ ಆಕ್ರೋಶ ಹೊರಹಾಕಿದ್ದಾರೆ.

Ola Scooty Scam: ಓಲಾ ಸ್ಕೂಟಿ ಹೆಸರಲ್ಲಿ ಆನ್‌ಲೈನ್ ವಂಚನೆ: ಬೆಂಗಳೂರು ಸೇರಿ ದೇಶಾದ್ಯಂತ 20 ಮಂದಿ ಬಂಧನ

ಒಲಾ ಕ್ಯಾಬ್ ಚಾಲಕ ಕರೆ ಮಾಡಿ ಡ್ರಾಪ್ ಲೊಕೇಶನ್ ಮಾಹಿತಿ ಪಡೆದು ರದ್ದು ಮಾಡಿದ್ದಾರೆ. ನನ್ನ ಸಮಯ ವ್ಯರ್ಥ, ಮತ್ತೆ ಕ್ಯಾಬ್ ಬುಕ್ ಮಾಡಿದರೂ ಇದೇ ಸಮಸ್ಯೆ. ಇದರಿಂದ ಓಲಾ ಬ್ಯಾನ್ ಮಾಡಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ. ಒಲಾ ಬ್ಯಾನ್ ಮಾಡಿದರೆ ಇತರ ಕಂಪನಿಗಳು ಉತ್ತಮ ಕ್ಯಾಬ್ ಸೇವೆ ನೀಡಲಿದೆ. ಹೀಗಾಗಿ ಗ್ರಾಹಕರಿಗೆ ಸಮಸ್ಯೆ ನೀಡುತ್ತಿರುವ ಓಲಾ ನಿಷೇಧಿಸುವುದೇ ಒಳಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
 

click me!