ಪೇಟಿಎಂ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಕೆಲವು ಸೇವೆಗಳು ಸ್ಥಗಿತಗೊಂಡಿದೆ. ಈ ಪೈಕಿ ಪೇಟಿಎಂ ಫಾಸ್ಟಾಗ್ ಕೂಡ ಒಂದು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ್ನು ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಹೀಗಾಗಿ ವಾಹನಗಳಲ್ಲಿ ಪೇಟಿಎಂ ಫಾಸ್ಟ್ಯಾಗ್ ಬಳಸುವ ಗ್ರಾಹಕರು ತಕ್ಷಣವೇ ಬೇರೆ ಬ್ಯಾಂಕ್ ಫಾಸ್ಟ್ಯಾಗ್ ಖರೀದಿಸಬೇಕಾದ ಅನಿವಾರ್ಯತೆ ಇದೆ.
ನವದೆಹಲಿ(ಫೆ.16) ಡಿಜಿಟಲ್ ಹಣಕಾಸು ಸಂಸ್ಥೆಯಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿದೆ. ನಿಯಮ ಪಾಲಿಸದ ಪೇಟಿಎಂ ಮೇಲೆ ಕಠಿಣ ಕ್ರಮವನ್ನು ಜರುಗಿಸಲಾಗಿದೆ. ಪೇಟಿಎಂ ಪೇಮೆಂಟ್ ಬ್ಯಾಂಕ್‌ನಲ್ಲಿ ಹಲವು ಲೋಪದೋಷಗಳಿವೆ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ನಿರ್ಬಂಧದಿಂದ ಪೇಟಿಎಂನ ಕೆಲ ಸೇವೆಗಳು ಸ್ಥಗಿತಗೊಂಡಿದೆ. ಈ ಪೈಕಿ ವಾಹನಗಳಲ್ಲಿ ಬಳಸುವ ಫಾಸ್ಟ್ಯಾಗ್ ಕೂಡ ಒಂದಾಗಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ್ನು ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಹೀಗಾಗಿ ಫೆಬ್ರವರಿ 29 ರಿಂದ ಪೇಟಿಎಂ ಫಾಸ್ಟ್ಯಾಗ್ ಭಾರತದ ಯಾವುದೇ ಟೋಲ್ ಗೇಟ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ಪೇಟಿಎಂ ಫಾಸ್ಟ್ಯಾಗ್ ಮಾನ್ಯವಲ್ಲ ಅನ್ನೋದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಸ್ಪಷ್ಟಪಡಿಸಿದೆ. ಹೆದ್ದಾರಿ, ಟೋಲ್ ಗೇಟ್, ಫಾಸ್ಟಾಗ್‌ನ್ನು ನಿರ್ವಹಣೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI) ಇದೀಗ ಪರಿಷ್ಕೃತ ಬ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಯಾವ ಬ್ಯಾಂಕ್‌ಗಳ ಫಾಸ್ಟ್ಯಾಗ್ ಸೇವೆಯನ್ನು ಬಳಸಿಕೊಳ್ಳಬಹುದು ಅನ್ನೋದನ್ನು NHAI ಪಟ್ಟಿ ನೀಡಿದೆ.
ಪೇಟಿಎಂ FASTag ಗ್ರಾಹಕರಿಗೂ ಸಂಕಷ್ಟ, ಫೆ.29ರ ಬಳಿಕ ದಂಡ ತಪ್ಪಿಸಲು ಹೀಗೆ ಮಾಡಿ!
ಈ ಕುರಿತು ಟ್ವೀಟ್ ಮಾಡಿರುವ NHAI ಅಧಿಕೃತ 32 ಬ್ಯಾಂಕ್‌ಗಳಿಂದ ವಾಹನ ಮಾಲೀಕರು, ಸವಾರರು ಫಾಸ್ಟ್ಯಾಗ್ ಸೇವೆ ಪಡೆಯಬಹುದು ಎಂದಿದೆ. ಈ ಪಟ್ಟಿಯಲ್ಲಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ್ನು ತೆಗೆದುಹಾಕಿದೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಹೆಚ್‌ಡಿಎಫ್‌ಸಿ, ಐಸಿಐಸಿಐ, ಐಡಿಬಿಐ, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಆ್ಯಕಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಸೇರಿದಂತೆ 32 ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಸೇವೆಯನ್ನು ಪಡೆಯಬಹುದು ಎಂದು NHAI ಹೇಳಿದೆ.
Travel hassle-free with FASTag! Buy your FASTag today from authorised banks. pic.twitter.com/Nh798YJ5Wz
— FASTagOfficial (@fastagofficial)
ಫೆಬ್ರವರಿ 29 ರಿಂದ ಪೇಟಿಎಂ ಫಾಸ್ಟ್ಯಾಗ್ ನಿಷ್ಕ್ರೀಯಗೊಳ್ಳಲಿದೆ. ಇದಕ್ಕೂ ಮೊದಲು ವಾಹನ ಮಾಲೀಕರು ಹೆದ್ದಾರಿ ಪ್ರಾಧಿಕಾರಿ ಸೂಚಿಸಿರುವ ಅಧಿಕೃತ ಬ್ಯಾಂಕ್‌ಗಳಿಂದ ಹೊಸ ಫಾಸ್ಟ್ಯಾಗ್ ಪಡೆದುಕೊಂಡು ನಿರಾಂತವಾಗಿ ಪ್ರಯಾಣ ಮುಂದುವರಿಸಬುದು. ಈಗಾಗಲೇ ಪೇಟಿಎಂ ಫಾಸ್ಟ್ಯಾಗ್‌ಗೆ ರೀಚಾರ್ಜ್ ಮಾಡಿದ್ದರೆ, ಹಣ ಖಾಲಿ ಆಗುವ ವರೆಗೆ ಬಳಕೆ ಮಾಡಬಹುದು. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿರವು ಹಣವನ್ನು ಕ್ಯಾಶ್‌ಬ್ಯಾಕ್, ರೀಫಂಡ್‌ಗಳನ್ನು ಖಾತೆಗೆ ಮಾಡಿಸಿಕೊಳ್ಳಬಹುದು.
ನಾಳೆಯಿಂದ FASTag ನಿಷ್ಕ್ರೀಯ ಆದೀತು ಎಚ್ಚರ, KYC ಪೂರ್ಣಗೊಳಿಸಲು ಇಂದೇ ಕೊನೆಯ ದಿನ!
ಹೊಸ ಫಾಸ್ಟ್ಯಾಗ್ ಖರೀದಿ ವೇಳೆ ಕವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಹೀಗಾಗಿ ಪೇಟಿಎಂ ಫಾಸ್ಟ್ಯಾಗ್‌ನಿಂದ ಹೊಸ ಬ್ಯಾಂಕ್ ಫಾಸ್ಟ್ಯಾಗ್ ಖರೀದಿ ವೇಳೆ ಗ್ರಾಹಕರು ಸಂಪೂರ್ಣ ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಹೊಸ ಫಾಸ್ಟ್ಯಾಗ್ ಕೂಡ ಕಾರ್ಯನಿರ್ವಹಿಸುವುದಿಲ್ಲ.