Chikkamagaluru; ಕರ್ಕಶ ಶಬ್ದದ ಬೈಕಿನ ಸೈಲೆನ್ಸರ್ ನಾಶ ಪಡಿಸಿದ ಕಡೂರು ಪೊಲೀಸ್

Published : May 26, 2022, 03:09 PM IST
Chikkamagaluru; ಕರ್ಕಶ ಶಬ್ದದ ಬೈಕಿನ  ಸೈಲೆನ್ಸರ್ ನಾಶ ಪಡಿಸಿದ ಕಡೂರು ಪೊಲೀಸ್

ಸಾರಾಂಶ

35 ಸೈಲೆನಸ್ಸರ್ ಮೇಲೆ ಬುಲ್ಡೋಜರ್ ಮೂಲಕ ನಾಶ ಕಡೂರು ಪಟ್ಟಣದಲ್ಲಿ ವಶಕ್ಕೆ ಪಡೆದ ಬೈಕ್ ಗಳ ಸೈಲೆನ್ಸ್ ರ್ ಗಳು ಕಡೂರು ಪಟ್ಟಣದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಕಾರ್ಯಚಾರಣೆ ಪೋಲೀಸರು ಪ್ರಕರಣ ದಾಖಲಿಸಿ ವಶಕ್ಕೆ ಪಡೆದಿದ್ದ ಸೈಲೆನ್ಸ್ ರ್ ಗಳು ಸಾರ್ವಜನಿಕರ ದೂರಿನ್ವಯ ಕಾರ್ಯಚಾರಣೆ ನಡೆಸಿದ್ದ ಪೊಲೀಸರು

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮೇ.26) : ಆಧುನಿಕತೆ ಭರಾಟೆಯಿಂದ ಶಬ್ದಮಾಲಿನ್ಯ ದೊಡ್ಡ ಸಮಸ್ಯೆಯಾಗಿ ಪರಿಣಾಮಸಿದೆ. ದಿನ ನಿತ್ಯ ಒಂದಲ್ಲ ಒಂದು ಶಬ್ದ ಮಾಲಿನ್ಯ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ . ಅದರಲ್ಲೂ ಕರ್ಕಶ ಶಬ್ದಕ್ಕೆ ವಯೋವೃದ್ದರು ಹಾದಿಯಾಗಿ ಜನರ ತೊಂದರೆ ಅನುಭವಿಸುತ್ತಿದ್ದಾರೆ.ಇದರಲ್ಲಿ ಪ್ರಮುಖವಾಗಿ ಬೈಕ್ (Bike) ಗಳಿಂದ ಹೊರಬರುವ ಕರ್ಕಶ ಶಬ್ದ ಜನರಿಗೆ ಕಿರಿಕಿರಿ ನೀಡುತ್ತದೆ. ಇಂತಹ ಬೈಕ್ ಗಳ ಸೈಲೆನ್ಸರ್  ಗೆ (Bike silencers) ಚಿಕ್ಕಮಗಳೂರಿನ (Chikkamagaluru) ಕಡೂರಿನ (Kadur) ಪೊಲೀಸರು (Police) ಬುಲ್ಡೋಜರ್ ಹತ್ತಿಸಿ ಮುಕ್ತಿ ಕಾಣಿಸಿದ್ದಾರೆ..

ಬುಲ್ಡೋಜರ್  ನಿಂದ ಸೈಲೆನ್ಸರ್ ಗಳ  ನಾಶ: ಕರ್ಕಶ ಶಬ್ದದ ಜತೆಗೆ ಮಾಲಿನ್ಯ ಉಂಟು ಮಾಡುತ್ತಿದ್ದ ಬೈಕ್  ಗಳ ಹೊಗೆ ಕೊಳವೆಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಮುಕ್ತಿ ಕಾಣಿಸಿದ್ದಾರೆ. ಕಳೆದ 2 ತಿಂಗಳಿನಿಂದ ಪಟ್ಟಣದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬೈಕ್ಗಳು ಕರ್ಕಶ ಶಬ್ದ ಹೊರಡಿಸುವ ಹೊಗೆ ಕೊಳವೆಗಳನ್ನು ಅಳವಡಿಸಿಕೊಂಡಿದ್ದರು. ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್ ಗಳ ಸೈಲೆನ್ಸರ್ ಗಳನ್ನು ಬಿಚ್ಚಿ ಮೋಟಾರ್ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನು ಮರಳಿ ಸಂಬಂಧಪಟ್ಟವರಿಗೆ ನೀಡಲಾಗಿತ್ತು. 

UDUPI ; ಕೊಲ್ಲೂರು ವ್ಯಾಪ್ತಿಯಲ್ಲಿ ಡೆಂಗ್ಯೂ ನಿರ್ಮೂಲನಕ್ಕೆ ಅವಿರತ ಶ್ರಮ

ಕಡೂರು ಪಟ್ಟಣದಲ್ಲಿ ನಿತ್ಯವೂ ಕೂಡ ಬೈಕ್ ಗಳ ಸೈಲೆನ್ಸರ್ ಗಳಿಂದ ಕರ್ಕಶ ಶಬ್ದ ಹೊರಬರುತ್ತಿತ್ತು, ಇದರಿಂದ ಜನರಿಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗುತ್ತಿತ್ತು. ಸಾರ್ವಜನಿಕರ ದೂರಿನನ್ವಯ ಕಡೂರಿನ  ಪೊಲೀಸರು ಆಯಕಟ್ಟಿನ ಜಾಗಗಳಲ್ಲಿ ನಿಂತು ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಬೈಕ್ ಗಳನ್ನು  ವಶಪಡಿಸಿಕೊಂಡು ಸೈಲೆನ್ಸರ್ ಗಳನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳುತ್ತಿದ್ದರು. ಈ ವಾಹನಗಳನ್ನು ವಶಪಡಿಸಿಕೊಂಡು ಕರ್ಕಶ ಶಬ್ದ ಮಾಡುತ್ತಿದ್ದ ಹೊಗೆ ಕೊಳವೆಗಳನ್ನು ಬಿಚ್ಚಿ ಮೋಟಾರು. ದಾಖಲಿಸಿಕೊಂಡು ಬೈಕ್ ಗಳನ್ನು ಮರಳ ಸಂಬಂಧಪಟ್ಟವರಿಗೆ ನೀಡಲಾಗಿದೆ.

 ಅತೀ ಹೆಚ್ಚು ಬೈಕ್ ಗಳು ಕಾಲೇಜ್ ವಿದ್ಯಾರ್ಥಿಗಳದ್ದು : ಕರ್ಕಶ ಶಬ್ಬ ಹೊರಬರುವ  ಬೈಕ್ ಗಳು ಬಹುತೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿವಿಧ ಕೆಲಸ ನಿರ್ವಹಿಸುವ ಕಾರ್ಮಿಕರು ಸೇರಿದಂತೆ ಎಲ್ಲರೂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಇವರ ವಾಹನಗಳು ವಿಶೇಷವಾಗಿ ಕಾಲೇಜು ಆವರಣ , ಮುಖ್ಯರಸ್ತೆಗಳಲ್ಲಿ ಕರ್ಕಶ ಶಬ್ದ ಮಾಡಿಕೊಂಡು ತಿರುಗಾಡುತ್ತಿದ್ದರು .

ಶಿಕ್ಷಣ ಸಂಸ್ಥೆಗಳ ಉನ್ನತೀಕರಣಕ್ಕೆ ಕೈಜೋಡಿಸುವಂತೆ ಆಕ್ಸಿಸ್ ಬ್ಯಾಂಕ್‌ಗೆ Basavaraj Bommai

ಈ ಬಗ್ಗೆ ವ್ಯಾಪಕ ದೂರಿನ ಹಿನ್ನೆಲೆಯಲ್ಲಿ ಕಡೂರು ಪೊಲೀಸ್ ಠಾಣೆಯ ಪಿ ಎಸ್ ಐ ರಮ್ಯ ನೇತೃತ್ವದಲ್ಲಿ ಪಟ್ಟಣದ ಗಣಪತಿ ಆಂಜನೇಯಸ್ವಾಮಿ ದೇವಾಲಯ ಬನಶಂಕರಿ ಸಮುದಾಯ ಭವನ, ತಂಗಲಿ ತಾಂಡ್ಯ ಸೇರಿದಂತೆ ಮುಂತಾದ ಕಡೆಗಳಲ್ಲಿ ಪೊಲೀಸ್ರು ತಪಾಸಣೆ ನಡೆಸಿ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಇಂದು  ಠಾಣೆಯ ಆವರಣದಲ್ಲಿ ಬುಲ್ಡೋಜರ್ ಮೂಲಕ 35 ಕರ್ಕಶ ಸೈಲೆನ್ಸರ್ ಗಳನ್ನು ಸಾಲಾಗಿ ನಾಶಗೊಳಿಸಲಾಯಿತು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಅಲ್ಲದೆ ಕಡೂರು ಪೊಲೀಸರ ಕಾರ್ಯಕ್ಕೆ  ಪಟ್ಟಣದ ಸಾರ್ವಜನಿಕರು ಹರ್ಷದಿಂದ ಸ್ವಾಗತಿಸಿದ್ದಾರೆ.

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು