ಏಷ್ಯಾದ ಅತೀ ದೊಡ್ಡ EXCON 2022ನಲ್ಲಿ ಟಾಟಾ ಮೋಟರ್ಸ್ ವಾಣಿಜ್ಯ ವಾಹನ ಪ್ರದರ್ಶನ!

By Suvarna News  |  First Published May 18, 2022, 4:37 PM IST
  • ಮೂರು ವಿಶಿಷ್ಟ ವಲಯಗಳನ್ನು ಪ್ರದರ್ಶಿಸಿದ ಟಾಟಾ ಮೋಟಾರ್ಸ್
  • 76 ಕ್ಕೂ ಹೆಚ್ಚು ವರ್ಷಗಳಿಂದ ರಾಷ್ಟ್ರ ನಿರ್ಮಾಣದಲ್ಲಿ ಟಾಟಾ
  • ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನದಲ್ಲಿ ಟಾಟಾ ಮಿಂಚು
     

ಬೆಂಗಳೂರು(ಮೇ.18): ಭಾರತದ ಅತಿ ದೊಡ್ಡ ವಾಣಿಜ್ಯ ವಾಹನಗಳ ತಯಾರಕ ಆಗಿರುವ ಟಾಟಾ ಮೋಟರ್ಸ್, ಆಗ್ನೇಯ ಏಷ್ಯಾದ ಅತಿದೊಡ್ಡ ನಿರ್ಮಾಣ ಯಂತ್ರೋಪಕರಣ ವಸ್ತುಪ್ರದರ್ಶನ EXCON 2022 ನಲ್ಲಿ ಅತ್ಯಾಧುನಿಕ ಅತ್ಯುತ್ತಮ ಕಾರ್ಯದಕ್ಷತೆಯುಳ್ಳ ಟ್ರಕ್‍ಗಳನ್ನು ಪ್ರದರ್ಶಿಸಿದೆ. ಉತ್ಪಾದನೀಯತೆ ಹೆಚ್ಚಿಸುವಲ್ಲಿ ಮತ್ತು ಫ್ಲೀಟ್ ಮಾಲಿಕರ ಲಾಭದಾಯಕತೆ ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಕಾರ್ಯದಕ್ಷತೆ ತುಂಬಿದ ಟಾಟಾ ಮೋಟರ್ಸ್ ಉತ್ಪನ್ನಗಳು ವೈವಿಧ್ಯ ಕಾರ್ಯಗಳಿಗೆ ವಿನೂತನ ಚಲನಶೀಲ ಪರಿಹಾರಗಳನ್ನು ಹೊಂದಿವೆ. ಐದು ದಿನಗಳ ಈ ವಸ್ತುಪ್ರದರ್ಶನದಲ್ಲಿ ಒಂಭತ್ತು ಅಧಿಕ ಕಾರ್ಯಕ್ಷಮತೆಯ (ಮಧ್ಯಮ ಮತ್ತು ಭಾರಿವಾಣಿಜ್ಯ ವಾಹನಗಳು) ಪ್ರದರ್ಶನಕ್ಕಿವೆ. 

76 ಕ್ಕೂ ಹೆಚ್ಚು ವರ್ಷಗಳಿಂದ ಟಾಟಾ ಮೋಟರ್ಸ್ ರಾಷ್ಟನಿರ್ಮಾಣ ಕಾರ್ಯದಲ್ಲಿಮುಂಚೂಣಿಯಲ್ಲಿದ್ದು, ಲಾಜಿಸ್ಟಿಕ್ಸ್, ನಿರ್ಮಾಣ, ಮೂಲಭೂತ ಸೌಕರ್ಯ ಹಾಗೂ ಗಣಿಗಾರಿಕೆ ಕ್ಷೇತ್ರಗಳಿಗೆ ಅಭಿವೃದ್ಧಿಗೆ ಅನುವು ಮಾಡಿಕೊಡುತ್ತ ಬಂದಿದೆ. ಗ್ರಾಹಕರಿಗೆ ಅಧಿಕ ಉತ್ಪಾದನೀಯತೆ ಮತ್ತು ಕಡಿಮೆ ಟಿಸಿಒ( ಮಾಲಿಕತ್ವದ ಒಟ್ಟಾರೆ ವೆಚ್ಚ) ಖಚಿತಪಡಿಸುವ ರೀತಿಯಲ್ಲಿ ವ್ಯಾಪಕ ಉತ್ಪನ್ನಗಳ ಶ್ರೇಣಿಯನ್ನು ಹೊಂದಿದೆ ಟಾಟಾ ಮೋಟರ್ಸ್. ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ ಈ ವಾಹನಗಳುಕಾರ್ಯದಕ್ಷತೆಯನ್ನು ಹೆಚ್ಚಿಸುವುದರೊಂದಿಗೆ ಅತ್ಯುತ್ತಮ ಸುರಕ್ಷತೆ ಅಂಶಗಳನ್ನು ಒಳಗೊಂಡು ವಾಹನದ ಜೀವನಚಕ್ರದುದ್ದಕ್ಕೂ ಮೌಲ್ಯವರ್ಧಿತ ವಿನೂತನ ಸೇವೆಗಳಿಂದಾಗಿ ಮತ್ತಷ್ಟು ಬಲ ಪಡೆದಿವೆ. M&HCV ನ BS6  ಶ್ರೇಣಿ ವಾಹನಗಳಿಗೆ 1.50 ಲಕ್ಷಕ್ಕೂ ಮೀರಿ ಸಂತೃಪ್ತ ಗ್ರಾಹಕರಿದ್ದು, 200 ದಶಲಕ್ಷಕ್ಕೂ ಹೆಚ್ಚು ಕಿಲೋಮೀಟರ್‍ಗಳನ್ನು ಕ್ರಮಿಸಿವೆ.

Tap to resize

Latest Videos

ದೇಶದಲ್ಲಿ ಟಾಟಾ ಮೋಟಾರ್ಸ್ ಹೊಸ ಕ್ರಾಂತಿ, ಹೊಚ್ಚ ಹೊಸ Ace ಎಲೆಕ್ಟ್ರಿಕ್ ವಾಹನ ಬಿಡುಗಡೆ!

EXCON 2022 ನಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಟಾಟಾ ಮೋಟರ್ಸ್‍ನ ಅತ್ಯಂತ ಶ್ರೇಷ್ಟ ಹಾಗೂ ವ್ಯಾಪಕವಾದ ವಾಣಿಜ್ಯ ವಾಹನ ಶ್ರೇಣಿಗಳನ್ನುಪ್ರದರ್ಶಿಸಲು ನಮಗೆ ಹರ್ಷವಾಗಿದೆ. ನಿರ್ಮಾಣ ಮತ್ತು ಮೂಲಭೂತಸೌಕರ್ಯ ಕ್ಷೇತ್ರಗಳು ಭಾರತದಲ್ಲಿ ಶರವೇಗದಿಂದ ಬೆಲೆಯುತ್ತಿದ್ದು, ನಾಲಿನ ಅವಶ್ಯಕತೆಗಳನ್ನು ಇಂದೇ ಪೂರೈಸಲು ಟಾಟಾ ಮೋಟರ್ಸ್ ಶ್ರಮಿಸುತ್ತದೆ. ಚಲನೆಗೆ ಪರಿಹಾರ ನೀಡುವ ಒದಗಣೆದಾರನಾಗಿ ನಮ್ಮ ವಾಹನಗಳು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡು ಗರಿಷ್ಟ ಸೇವೆ ಮತ್ತು ಫ್ಲೀಟ್ ಮಾಲಿಕರಿಗೆ ಗರಿಷ್ಟ ಮಾಲಿಕತ್ವ ವೆಚ್ಚದೊಂದಿಗೆ ಅಧಿಕ ಲಾಭದಾಯಕತೆ ತಂದುಕೊಡುತ್ತವೆ. ದೇಶದ ಉದ್ದಗಲದಲ್ಲಿ ಟಾಟಾ ಮೋಟರ್ಸ್‍ನ ವ್ಯಾಪಕ ಮಾರಾಟ ಮತ್ತು ಸೇವೆ ಕಾರ್ಯಜಲದ ಬೆಂಬಲದೊಮ್ದಿಗೆ ನಮ್ಮ ಸಮಗ್ರ ವಾಹನ ನಿರ್ವಹನೆ ಮತ್ತು ಫ್ಲೀಟ್ ನಿರ್ವಹಣೆ ಪರಿಹಾರಗಳನ್ನು ಪ್ರಸ್ತುತಪಡಿಸಲು EXCON 2022, ನಮಗೆ ಅತ್ಯುತ್ತಮ ವೇದಿಕೆ ಕಲ್ಪಿಸಿದೆ ಎಂದು  ಟಾಟಾ ಮೋಟರ್ಸ್ M&HCV ಉತ್ಪನ್ನ ವಿಭಾಗದ ಉಪಾಧ್ಯಕ್ಷ ವಿ. ಸೀತಾಪತಿ ಹೇಳಿದರು.

M&HCV ಶ್ರೇಣಿಯು ಫ್ಲೀಟ್ ಅಡ್ಜ್‍ನ ಪ್ರಮಾಣಿತ ಜೋಡಣೆಗಳೊಂದಿಗೆ ಬರುತ್ತದೆ-ಅದುವೇ, ಗರಿಷ್ಟ ಫ್ಲೀಟ್ ನಿರ್ವಹಣೆಗೆ  ಟಾಟಾ ಮೋಟರ್ಸ್‍ನ ಮುಂದಿನ ಪೀಳಿಗೆ ಡಿಜಿಟಲ್ ಪರಿಹಾರ. ಫ್ಲೀಟ್ ನಿರ್ವಹಣೆ, ಕಾರ್ಯ ಮಾಡುತ್ತಿರುವ ಸ್ಥಳದಲ್ಲಿ ಬೆಂಬಲ, ವಾಹನ ಕೆಟ್ಟಾಗ ನೆರವು, ವಿಮೆ ಮತ್ತು ಅಪಘಾತ ದುರಸ್ತಿ, ವಿಸ್ತರಿಸಿದ ವಾರಂಟಿ ಮತ್ತು ವಾಹನ ನಿರ್ವಹಣೆಗೆಹಾಗೂ ವಾಹನದ ಜೀವನಚಕ್ರದ ನಿರ್ವಹಣೆಗೆ ಇತರ ಹೆಚ್ಚುವರಿ ಸೇವೆಗಳು ಸೇರಿದಂತೆ ಸಮಗ್ರ ಸೇವೆಗಳ ಹೂಗುಚ್ಛ ‘ಸಂಪುರ್ಣ ಸೇವೆ’ ಯನ್ನೂ ಟಾಟಾ ಮೋಟ್ಟರ್ಸ್ ಒದಗಿಸುತ್ತದೆ.

5000 ಕೋಟಿ ರೂ. ಮೌಲ್ಯದ ಇವಿ ಬಸ್ ಟೆಂಡರ್ ಪಡೆದುಕೊಂಡ ಟಾಟಾ ಮೋಟಾರ್ಸ್

ವಿವಿಧ ಕಾರ್ಯಗಳಿಗೆ ಅಭಿವೃದ್ಧಿಪಡಿಸಲಾದ ಕೆಳಗಿನ ವಾಹನಗಳನ್ನು ಟಾಟಾ ಮೋಟರ್ಸ್ ಪ್ರದರ್ಶಿಸುತ್ತಿದೆ:
ಸರ್ಫೇಸ್ ಟಿಪ್ಪರ್ ವಲಯ    ಗಣಿಗಾರಿಕೆ ಮತ್ತು ಕ್ವಾರಿ ವಲಯ    ಸಿದ್ಧಕಾಂಕ್ರೀಟ್ ಮಿಶ್ರಣ ವಲಯ
ಕ್ಷಿಪ್ರ ಕೆಲಸ, ಕಡಿಮೆ ಮಾಲಿಕತ್ವ ವೆಚ್ಚ, ಚಾಲಕನಿಗೆ ಅಧಿಕ ಆರಾಮದಾಯಕತೆ ಮತ್ತು ಸುರಕ್ಷತೆ
•    Signa 4825.TK 
•    Signa 3525.TK
•    Prima 2825.K
•    Signa 5530.S     ಅಧಿಕ ಕಾರ್ಯದಕ್ಷತೆ, ವಿವಿಧೋಪಯೋಗಿ ಮತ್ತು ಭಾರಿ ಕೆಲಸಗಳಿಗೆ ಬಳಕೆಯಾಗುವ ಸಂಪೂರ್ಣ ಸುಸಜ್ಜಿತ ವಾಹನಗಳು 
•    Prima 3530.K
•    Prima 2830.K with ATD (Articulated Tail Door)    REPTO ( ಅಧಿಕ ಕಾರ್ಯದಕ್ಷತೆ, ವಿವಿಧೋಪಯೋಗಿ ಮತ್ತು ಭಾರಿ ಕೆಲಸಗಳಿಗೆ ಬಳಕೆಯಾಗುವ ಸಂಪೂರ್ಣ ಸುಸಜ್ಜಿತ ವಾಹನಗಳು
•    Prima 3530.K REPTO
•    Prima 2830.K REPTO
•    Signa 2825.K REPTO

ವೈವಿಧ್ಯ ಉಪಯೋಗಗಳಿಗೆ ಸುಲಭವಾಗಿ ಬಳಸಿಕೊಳ್ಳಬಹುದಾದ ಟಾಟಾ ಯೋಧ ಮತ್ತು ಟಾಟಾ ಏಸ್ HT+ ಗಳನ್ನೂ ಸಹ ಟಾಟಾ ಮೋಟರ್ಸ್ ಪ್ರದರ್ಶಿಸುತ್ತಿದೆ.

click me!