ಬೆಂಗಳೂರು(ಮೇ.22): ಮೋಟಾರು ವಾಹನ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರದ ನಿರ್ಧರಿಸಿದೆ. ನಂಬರ್ ಪ್ಲೇಟ್ ಮೇಲೆ ಯಾವುದೇ ಹೆಸರು, ಸರ್ಕಾರಿ ಲಾಂಛನ, ಇತರ ಲೋಗೋ ಸೇರಿದಂತೆ ಯಾವುದು ಇರಬಾರದು. ಕೇವಲ ವಾಹನ ನೋಂದಣಿ ಸಂಖ್ಯೆ ಮಾತ್ರ ಇರಬೇಕು. ಈ ಕುರಿತು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಮೋಟಾರು ವಾಹನ ನಿಯಮದಲ್ಲಿರುವ ಮಾನದಂಡಗಳನ್ನು ಎಲ್ಲರು ಅನುಸರಿಸಬೇಕು. ಇದಕ್ಕೆ ಸರ್ಕಾರಿ ನೌಕರರು, ನಿಗಮ ಮಂಡಳಿ, ಸಹಕಾರಿ ಸಂಘದ ಅಧ್ಯಕ್ಷರು ಹೊರತಲ್ಲ. ನಂಬರ್ ಪ್ಲೇಟ್ ಮೇಲೆ ಸಂಘ ಸಂಸ್ಥೆಗಳ ಹೆಸರು, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಯಾವುದೇ ಲೋಗೋ ಕೂಡ ಇರಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ.
70 ಸಾವಿರ ರೂ ಆ್ಯಕ್ಟಿವಾ ಸ್ಕೂಟರ್ ಫ್ಯಾನ್ಸಿ ನಂಬರ್‌ಗಾಗಿ ಮಾಲೀಕನಿಂದ 15.14 ಲಕ್ಷ ರೂ ಖರ್ಚು!
ನಂಬರ್ ಪ್ಲೇಟ್ ಕಳೆಭಾಗದಲ್ಲಿ ಅಥವಾ ಮೇಲ್ಬಾಗದಲ್ಲಿ ಸರ್ಕಾರಿ ಲೋಗೋ, ಸರ್ಕಾರಿ ಸಂಸ್ಥೆಗಳ ಹೆಸರು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ. ರಾಜ್ಯದಲ್ಲಿ ಸರ್ಕಾರಿ ಹಾಗೂ ಖಾಸಗಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಯಾವುದೇ ಬರಹ, ಸ್ಟಿಕ್ಕರ್ ಇರಬಾರದು ಎಂದಿದೆ
ಟ್ರಾಫಿಕ್ ಬ್ರೇಕ್ ಮಾಡಿದರೆ ಕ್ಷಣಾರ್ಧದಲ್ಲಿ ಮೆಸೇಜ್
ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಕ್ಷಣಾರ್ಧದಲ್ಲಿ ಆ ವಾಹನಗಳ ಮಾಲೀಕರ ಮೊಬೈಲ್‌ಗೆ ಸಂಚಾರ ಉಲ್ಲಂಘನೆ ಸ್ವರೂಪ ಹಾಗೂ ದಂಡದ ವಿವರಗಳನ್ನು ಎಸ್‌ಎಂಎಸ್ ಮೂಲಕ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನು ನಗರ ಸಂಚಾರ ವಿಭಾಗದ ಪೊಲೀಸರು ಆರಂಭಿಸಿದ್ದಾರೆ.
ಈ ವ್ಯವಸ್ಥೆಯಿಂದ ಕಾನೂನು ಮೀರಿದವರನ್ನು ಹುಡುಕಿಕೊಂಡು ಮನೆಗಳಿಗೆ ಹೋಗುವ ಪೊಲೀಸರ ಶ್ರಮ ಮತ್ತು ಸಮಯ ಹಾಗೂ ಅಂಚೆ ವೆಚ್ಚ ಉಳಿಯಲಿದೆ. ಅಲ್ಲದೆ ತ್ವರಿತವಾಗಿ ನಿಯಮ ಉಲ್ಲಂಘನೆ ಮಾಹಿತಿಯನ್ನು ವಾಹನ ಮಾಲೀಕರಿಗೆ ತಿಳಿಸಲು ನೆರವಾಗಲಿದೆ.
ಬೆಂಗಳೂರಲ್ಲಿ HSRP ನಂಬರ್ ಪ್ಲೇಟ್ ಇಲ್ಲ ಎಂದು ದಂಡ, ನಿಯಮ ಹೇಳುವುದೇನು?
ಮೊದಲು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಜಂಕ್ಷನ್‌ಗಳಲ್ಲಿ ಮುದ್ರಿತ ಫೀಲ್ಡ್ ಟ್ರಾಫಿಕ್ ವೈಲೇಷನ್ ಪುಸ್ತಕವನ್ನು ಸಂಚಾರ ವಿಭಾಗದ ಕಾನ್‌ಸ್ಟೇಬಲ್‌ಗಳು ಮತ್ತು ಹೆಡ್ ಕಾನ್‌ಸ್ಟೇಬಲ್‌ಗಳು ಬಳಸುತ್ತಿದ್ದರು. ಆಗ ಜಂಕ್ಷನ್‌ಗಳಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ನೋಂದಣಿ ಸಂಖ್ಯೆ, ಸಮಯ, ಸ್ಥಳ ಹಾಗೂ ಇತರೆ ವಿವರಗಳನ್ನು ಎಫ್‌ಟಿವಿಆರ್‌ಗಳಲ್ಲಿ ಭರ್ತಿ ಮಾಡಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿತ್ತು.
ಪಾವತಿ ವಿಧಾನದ ಲಿಂಕ್
ವಾಹನಗಳ ನೋಂದಣಿ ವೇಳೆ ಮಾಲೀಕರ ಮೊಬೈಲ್ ಸಂಖ್ಯೆಗಳನ್ನು ನೀಡುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ಹೀಗಾಗಿ ವಾಹನಗಳ ನೋಂದಣಿ ಸಂಖ್ಯೆ ಹಾಗೂ ಸಂಬಂಧಿತ ವಾಹನಗಳ ಮಾಲಿಕರ ಮೊಬೈಲ್ ಸಂಖ್ಯೆಗಳನ್ನು ಸಾರಿಗೆ ಇಲಾಖೆಯು ಬೆಂಗಳೂರು ಸಂಚಾರ ಪೊಲೀಸರ ಜೊತೆ ಹಂಚಿಕೊಳ್ಳುತ್ತಿದೆ. ವಾಹನಗಳು ಯಾವುದೇ ಸಂಚಾರ ನಿಯಮ ಉಲ್ಲಂಘನೆ ಎಸಗಿದಲ್ಲಿ ಉಲ್ಲಂಘನೆ ವಿವರಗಳು ಹಾಗೂ ದಂಡ ಮೊತ್ತವನ್ನು ಒಳಗೊಂಡ ಮಾಹಿತಿ ಹಾಗೂ ದಂಡವನ್ನು ಪಾವತಿಸುವ ವಿಧಾನದ ಲಿಂಕನ್ನು ಎಸ್‌ಎಂಎಸ್ ಮುಖಾಂತರ ಕೆಲವೇ ಕ್ಷಣಗಳಲ್ಲಿ ವಾಹನಗಳ ಮಾಲೀಕರ ಮೊಬೈಲ್‌ಗಳಿಗೆ ಮಾಹಿತಿ ಬರಲಿದೆ ಎಂದು ಜಂಟಿ ಆಯುಕ್ತ (ಸಂಚಾರ) ಡಾ ಬಿ.ಆರ್.ರವಿಂಕಾತೇಗೌಡ ತಿಳಿಸಿದ್ದಾರೆ.